ಅಣಬೆ ಬೇಸಾಯದಿಂದ ಕೈತುಂಬಾ ವರಮಾನ.

by | Apr 30, 2020 | Mushroom Culture (ಅಣಬೆ ಬೇಸಾಯ), Self-employment (ಸ್ವ ಉದ್ಯೊಗ) | 0 comments

ತಿನ್ನುವ ಅಣಬೆಗೆ ಉತ್ತಮ ಬೇಡಿಕೆ. ಪಟ್ಟಣಗಳಲ್ಲದೆ, ಹಳ್ಳಿಗಳಲ್ಲೂ ಸಹ ಅಣಬೆಯ ಉಪಯೋಗ ಪ್ರಾರಂಭವಾಗಿದೆ.    ಕಡಿಮೆ ಬಂಡವಾಳದಲ್ಲಿ  ಕಡಿಮೆ ಸ್ಥಳಾವಕಾಶದಲ್ಲಿ ಮಾಡಬಹುದಾದ ಕೃಷಿ ಪೂರಕ ವೃತ್ತಿ.

 •  ಬೆಂಗಳೂರಿನ ಗ್ರಾಮಾಂತರ ಭಾಗಗಳಲ್ಲಿ ಹಲವರು ಜನ ಅಣಬೆ ಬೇಸಾಯ ಮಾಡುತ್ತಾರೆ. ಇದೇ ವೃತ್ತಿಯಲ್ಲಿ ಮೇಲೆ ಬಂದವರಿದ್ದಾರೆ.
 • ಗೋವಾದಲ್ಲಿ  ಇದು ಅತೀ ಹೆಚ್ಚಿನ ಪ್ರಮಾಣದಲ್ಲಿ  ಇದೆ. ಹೆಚ್ಚಿನ ಕಡೆಗೆ ಗೋವಾದಿಂದ ಅಣಬೆ  ಸರಬರಾಜು ಆಗುತ್ತದೆ.
 • ಇತರ ಕಡೆಗಳಲ್ಲಿ ಬೆಳೆಸುವವರ ಸಂಖ್ಯೆ  ತುಂಬಾ  ಕಡಿಮೆ.

ಹೇಗೆ ಪ್ರಾರಂಭಿಸಬೇಕು:

 • ಅಣಬೆ ಬೇಸಾಯ ಮಾಡುವ ಮುನ್ನ ತರಬೇತಿಯನ್ನು ಪಡೆಯಬೇಕು.
 • ಅನಂತರ ಮೊದಲು ಸ್ವಲ್ಪ ಪ್ರಮಾಣದಲ್ಲಿ ಮಾಡುತ್ತಾ ತೊಂದರೆಗಳನ್ನು ಗಮನಿಸಿ ಅದನ್ನು ಹೇಗೆ ನಿವಾರಿಸಬೇಕೆಂದೆ ತಜ್ಞರ ಸಲಹೆಯ ಪಡೆಯುತ್ತಾ ಬೆಳೆಸುತ್ತಾ ಬರಬೇಕು.
 •   ಹೀಗೆ ಮಾಡಿದರೆ  ಮಾತ್ರ ಇದರಲ್ಲಿ ಯಶಸ್ವಿಯಾಗಬಹುದು.

ಹಾಲಣಬೆಗೆ ಮಾರುಕಟ್ಟೆಯಲ್ಲಿ  ಹೆಚ್ಚಿನ ಬೇಡಿಕೆ. ಇದನ್ನು ಬೆಳೆಸುವುದು ಸುಲಭ ಸಹ. ಸ್ಥಳೀಯವಾಗಿ ಲಭ್ಯವಾಗುವ ಸಾಮಾಗ್ರಿಗಳಿಂದ ಹಾಲಣಬೆ ಉತ್ಪಾದಿಸಬಹುದು.

ಹಾಲಣಬೆ ಏನು:

 • ಇದು ಪಶ್ಚಿಮ ಬಂಗಾಲದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.
 • ಇದಕ್ಕೆ ಕ್ಯಾಲೋಸೈಬ್ ಇಂಡಿಕಾ ಎಂಬುದು ಹೆಸರು.
 • ಇದನ್ನು ಅರಣ್ಯಗಳಿಂದ ಸಂಗ್ರಹಿಸಿ ಬಳಸಲಾಗುತ್ತಿತ್ತು.
 • ಈಗ ಅದರ ವಾಣಿಜ್ಯಿಕ ಬೇಸಾಯವನ್ನು  ನಾವೇ ಮಾಡುವ ವಿಧಾನವು ಪ್ರಚಲಿತದಲ್ಲಿದೆ.

ಬೀಜ ಹಾಕುವುದು

ಇದಕ್ಕೆ ಸಮಶೀತೋಷ್ಣ ವಲಯದ ವಾತಾವರಣ ಹೊಂದಿಕೆಯಾಗುವ ಕಾರಣ ನಮ್ಮಲ್ಲಿ ಎಲ್ಲಾ ಭಾಗಗಳಲ್ಲೂ ಬೆಳೆಯಬಹುದು. ಇದಕ್ಕೆ ಭತ್ತದ ಹೊಟ್ಟಿನ, ಹಾಗೂ ಬಟನ್ ಮಶ್ರೂಮ್ ಗಿಂತ ಹೆಚ್ಚಿನ ಬಾಳ್ವಿಕೆ ಇರುತ್ತದೆ. 

 • ಹಾಲಣಬೆಯನ್ನು ಹಲವಾರು ರೀತಿಯ ರೀತಿಯ ಸಾವಯವ ಮತ್ತು ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿ ಬೆಳೆಯಬಹುದು.
 • ಉದಾಹರಣೆಗೆ ಭತ್ತ, ರಾಗಿ, ಗೋಧಿ ಹುಲ್ಲು, ಹತ್ತಿ ಸಜ್ಜೆ  ಮತ್ತು ಮೆಕೇ ಜೋಳದ  ಎಲೆಯುಳ್ಳ ಕಡ್ಡಿಗಳ ಮೂಲಕ ಬೆಳೆಯಬಹುದು.
 • ಗಡ್ಡೆ ತೆಗೆದು  ಉಪಯೋಗವಿಲ್ಲದೆ  ಬಿಸಾಡುವ ಮೂಲಂಗಿ ಸಸ್ಯದಲ್ಲೂ ಇದನ್ನು ಬೆಳೆಯಬಹುದು.
 • ಇವುಗಳೆಲ್ಲದರ  ಲಭ್ಯತೆಯು ತುಂಬಾ ಕಡಿಮೆಯಾದ ಕಾರಣ ಭತ್ತದ ಹೊಟ್ಟಿನಲ್ಲೇ ಬೆಳೆಯಬಹುದು.

ಅಣಬೆ ಬೀಜ

ವಿಧಾನ:

 • ಹುಲ್ಲನ್ನು 2-3 ಇಂಚು ಉದ್ದಕ್ಕೆ ಕತ್ತರಿಸಬೇಕು.
 • ಅದನ್ನು ಗೋಣಿ ಚೀಲದಲ್ಲಿ ತುಂಬಿ ಶುದ್ಧ ನೀರಿನಲ್ಲಿ 6-8  ಗಂಟೆಗಳ ಕಾಲ ನೆನೆಸುವುದರಿಂದ ಹುಲ್ಲು ಮೃದುವಾಗುತ್ತದೆ.
 • ಇದನ್ನು ನಂತರ ಕ್ರಿಮಿ ಕೀಟಗಳಿಲ್ಲದಂತೆ ಪ್ಯಾಶ್ಚರೀಕರಿಸಬೇಕು.
 • ಪ್ಯಾಶ್ಚರೀಕರಿಸಲು ಒಂದು ಕುದಿ ಬಿಸಿ ನೀರಿನಲ್ಲಿ 40-60  ನಿಮಿಷಗಳ ತನಕ ಅದ್ದುವುದು, ಮತ್ತೊಂದು ಹಬೆಯ ಮೂಲಕ 5-6 ಗಂಟೆಗಳ ತನಕ ಉಪಚರಿಸುವುದು.
 • ಪ್ಯಾಶ್ಚರೀಕರಿಸಿದ ಹುಲ್ಲನ್ನು ಶುದ್ಧ  ಜಾಲರಿಯಲ್ಲಿ ತೆಳುವಾಗಿ ಹರಡಿ 1  ರಾತ್ರೆ  ಇಟ್ಟರೆ ಅದರ ಆರ್ಧ್ರತೆ  ಕಡಿಮೆಯಾಗುತ್ತದೆ.
 • ಆರ್ಧ್ರತೆಯನ್ನು  ತಿಳಿಯಲು ಒಂದು ಹಿಡಿ ಹುಲ್ಲನ್ನು ಹಿಡಿದು ಹಿಂದಿದರೆ ನೀರು ತೊಟ್ಟೂ ಬೀಳಬಾರದು.ಅದರಲ್ಲಿ  60-65 %  ನೀರಿನ ಅಂಶ ಇದೆ ಎಂದರ್ಥ.
 • ನಂತರ 35X45 ಸೆಂ ಮೀ. ಅಳತೆಯ ಪಾಲಿಥೀನ್ ಚೀಲದಕ್ಕೆ ಮೃದುವಾಗಿ  ಹಂತ ಹಂತವಾಗಿ ತುಂಬಬೇಕು.
 • ಪ್ರತೀ ಹಂತದಲ್ಲೂ  ಹುಲ್ಲಿನ ಮಧ್ಯಭಾಗಕ್ಕೆ ಸಮನಾಗಿ  ಹಾಲಣಬೆ  ಬೀಜಗಳನ್ನು ಹರಡಿ ಒಂದು ಚೀಲಕ್ಕೆ  ಸುಮಾರು 2.5 ರಿಂದ 3 ಕೆ ಜಿ ಹುಲ್ಲು ಮತ್ತು 125 -150 ಗ್ರಾಂ ಬೀಜವನ್ನು ತುಂಬಬಹುದು.
 • ಚೀಲದ ತುದಿಗೆ 5  ಮತ್ತು  1.5 ಸೆಂ ಮೀ ಎತ್ತರದ ಪಿ ವಿ ಸಿ ಪೈಪುಗಳನ್ನು ಇಟ್ಟು ನೀರನ್ನು ಹೀರಿಕೊಳ್ಳದ ಹತ್ತಿಯಿಂದ ಮುಚ್ಚಿ ಚೀಲದ ಬಾಯಿಯನ್ನು ಕಟ್ಟಬೇಕು.

 • ನಂತರ ಅದನ್ನು ತಂಪಿನ ಕೊಠಡಿಗೆ ವರ್ಗಾಯಿಸಬೇಕು.
 • ಚೀಲಕ್ಕೆ ತೂತು ಮಾಡಬಾರದು, ಮಾಡಿದರೆ  ಅಣಬೆ ಹಾಳಾಗುತ್ತದೆ.
 • ಸಂಗ್ರಹಣಾ ಮನೆಯಲ್ಲಿ ಯಾವಾಗಲೂ 28-35 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಕಾಪಾಡಿಕೊಳ್ಳಬೇಕು.
 • ಕೋಣೆಯಲ್ಲಿ ಇದನ್ನು ನಿರಂತರ ಪರಿವೀಕ್ಷಿಸುತ್ತಿರಬೇಕು.
 • 20-25 ದಿನದಲ್ಲಿ ಅಣಬೆ ತಂತುಗಳು ಹುಟ್ಟಿಕೊಳ್ಳುತ್ತದೆ . ಚೀಲ ಬಿಳಿಯಾಗಿ ಕಾಣುತ್ತದೆ.
 • ಅದನ್ನು ನಂತರ ಬೆಳೆ ತೆಗೆಯುವ ಕೊಠಡಿಯಲ್ಲಿ ಹರಡಿ ಸಮ ಮಾಡಬೇಕು.
 • ಅದರ ಮೇಲೆ 2-3 ಸೆಂ ಮೀ ದಪ್ಪಕ್ಕೆ  ಭಾಗದಲ್ಲಿ ಕೇಸಿಂಗ್ ಮಣ್ಣನ್ನು ಹರಡ ಬೇಕು.
 • ಕೇಸಿಂಗ್ ಮಣ್ಣು ಪ್ಯಾಶ್ಚರೀಕರಿಸಿದ ತಟಸ್ಥ ಮಣ್ಣಾಗಿರಬೇಕು.
 • ತಕ್ಷಣವೇ ಪ್ಲಾಸ್ಟಿಕ್ ತೊಟ್ಟೆಯನ್ನು ಶಿಲೀಂದ್ರ ನಾಶಕದಲ್ಲಿ ಅದ್ದಿ ಸ್ವಚ್ಚ ಮಾಡಬೇಕು.
 • ಮೂರನೇ ದಿನದಿಂದ ನೀರು ಹಾಕಲು ಆರಂಭಿಸಬೇಕು.
 • 15-20 ದಿನಗಳ ನಂತರ ಮೊಳಕೆ ಕಾಣಿಸುತ್ತದೆ.
 • 1 ಕಿಲೋ ಹುಲ್ಲಿಗೆ 1 ಕಿಲೋ ಅಣಬೆ ಉತ್ಪಾದನೆಯಾಗುತ್ತದೆ.
 • ಬೆಳೆದ ಅಣಬೆಯನ್ನು ಶೈತ್ಯಾಗಾರದಲ್ಲಿ  20-25 ದಿನ ಸಂಗ್ರಹಿಸಿಡಬಹುದು.

ಮೊಳಕೆ ಒಡೆಯುತ್ತಿರುವ ಅಣಬೆ ಬೀಜ

ಸರಿಯಾಗಿ ಶುದ್ಧ ಗಾಳಿ ಬೆಳಕು ಕೋಣೆಯೊಳಗೆ ಸಂಚಾರವಾದರೆ,  ನಂತರದ   8-10 ದಿನದಲ್ಲಿ ಅಣಬೆ ಪೂರ್ತಿ ಬೆಳೆಯುತ್ತದೆ.

ತರಬೇತಿ:

 • ಅಣಬೆಬೆಳೆಯುವ ಆಸಕ್ತರಿಗೆ ಬೆಂಗಳೂರಿನ  ಹೇಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ತರಬೇತಿ ನೀಡುತ್ತದೆ.
 • ಇಲ್ಲಿನ ಸೂಕ್ಷ್ಮಾಣು ಜೀವಿ  ವಿಭಾಗವನ್ನು ಇದಕ್ಕೆ  ಸಂಪರ್ಕಿಸಬೇಕು.
 • ಆಗಾಗ ತರಬೇತಿ ಕಾರ್ಯಕ್ರಮಗಳು ಇರುತ್ತದೆ. ಆ ಸಮಯದಲ್ಲಿ ನೊಂದಣೆ ಮಾಡಿಕೊಳ್ಳಬೇಕು.

ಅತೀ ಕಡಿಮೆ ಸ್ಥಳಾವಕಾಶದಲ್ಲಿ ಶ್ರದ್ಧೆ ಇಟ್ಟು ಮಾಡಬಹುದಾದ ವೃತ್ತಿ ಇದು. ಇದರಲ್ಲಿ ಸಂಪಾದನೆಗೆ ಹೇರಳ ಅವಕಾಅಶ ಇದೆ. ಆದರೆ ಯಾವುದೇ  ರೀತಿಯಲ್ಲಿ  ಮಲಿನವಾಗದಂತೆ ಜಾಗರೂಕತೆ ವಹಿಸಬೇಕು.

 
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!