ಅನನಾಸು ತಿಂದವರಿಗೆ ರೋಗ ಇಲ್ಲ.

ನಾವು ಏನೇನೂ ಹಣ್ಣುಗಳನ್ನು ಆರೋಗ್ಯಕ್ಕೆ ಉತ್ತಮ ಎಂದು ದುಬಾರಿ ಬೆಲೆ ಕೊಟ್ಟು ಖರೀದಿಸಿ ತಿನ್ನುತ್ತೇವೆ. ಆದರೆ ಕಾಲಬುಡದಲ್ಲೇ ಇರುವ ಎಲ್ಲಕ್ಕಿಂತ ಶ್ರೇಷ್ಟ ಹಣ್ಣನ್ನು ಮಾತ್ರ ತಾತ್ಸರದಿಂದ ಕಾಣುತ್ತೇವೆ. ನಿಜವಾಗಿ ಹುಳಿ ಸಿಹಿ ಮಿಶ್ರ ಅರೋಗ್ಯಕರ ಹಣ್ಣು ಎಂದರೆ ಅನನಾಸು. ಇದಕ್ಕೆ  ಸಾಟಿಯಾದ ಬೇರೆ ಹಣ್ಣು ಇಲ್ಲ ಎನ್ನುತ್ತಾರೆ ಅಮೇರಿಕನ್ನರು.


 

ವಿಷೇಶ ಗುಣಗಳು:

 • ಅನನಾಸಿನಲ್ಲಿ ಸಿ ಅನ್ನಾಂಗ ಹೇರಳವಾಗಿದ್ದು ಅದನ್ನು ಸೇವಿಸುವುದು ಎಲ್ಲಾ ವಯೋಮಾನದವರಿಗೂ ಒಳ್ಳೆಯದು.
 • ಬೀಡಿ ಸೇದುವವರು ಕೆಮ್ಮು ಕಡಿಮೆಯಾಗಲು ಅನನಾಸು ಒಳ್ಳೆಯದೆಂದು  ಹೇಳುತ್ತಾರೆ.
 • ಕಾರಣ, ಅನನಾಸಿನಲ್ಲಿ ಕೆಮ್ಮು ತರುವ ಗಂಟಲು ಕೆರೆಯವನ್ನು ನಿವಾರಿಸುವ ಗುಣ ಇದೆ.
 • ಅನನಾಸಿನಲ್ಲಿ ಬ್ರೋಮೆಲೈನ್ ಎಂಬ ಕಿಣ್ವ ಇದ್ದು ಇದು ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುವ ಗುಣವನ್ನು  ಹೊಂದಿದೆ.
 • ಕರುಳಿನ ಸಂದಿ ಗೊಂದಿಗಳಲ್ಲಿ ಅಡಗಿರುವ ಬ್ಯಾಕ್ಟೀರಿಯಾಗಳನ್ನೂ ಸಹ ಇದು ಕೊಲ್ಲುತ್ತದೆ.
 • ಬರೇ ಹಣ್ಣು ಮಾತ್ರವಲ್ಲ ಅನನಾಸಿನ ಗರಿಯ ರಸ ತೆಗೆದು ಸಕ್ಕರೆ ಸೇರಿಸಿ ಸೇವಿಸಿದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ.
 • ಅನನಾಸಿನಲ್ಲಿರುವ ಆಂಟೀ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಿಸುವ ಗುಣ ಕೆಮ್ಮನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
 • ಇದು ಕೆಮ್ಮಿನ ಸಿರಪ್ ಗಿಂತಲೂ ಉತ್ತಮ ಎನ್ನುತ್ತಾರೆ ತಜ್ಞರು.

ಹೇಗೆ ಬಳಸಬೇಕು:

 • ಆಧುನಿಕ ಶೈಲಿಯಂತೆ ಅನನಾಸಿಗೆ ಒಂದಷ್ಟು ನೀರು ಸೇರಿಸಿ ಸಕ್ಕರೆಯೊಂದಿಗೆ ಸಿಹಿ ಮಾಡಿ  ಜ್ಯೂಸ್  ಕುಡಿಯುವುದಲ್ಲ.
 • ಅವರವರೇ ಶುದ್ಧ ನೀರು ಬಳಸಿ ಇಲ್ಲವೇ ಬರೇ ಅನನಾಸಿನ ರಸವನ್ನೇ ಜ್ಯೂಸ್ ಆಗಿ ಸೇವನೆ ಮಾಡುವುದಿದ್ದರೆ ತೊಂದರೆ ಇಲ್ಲ.
 • ಬದಲಿಗೆ ಜ್ಯೂಸ್ ಅಂಗಡಿಗಳಲ್ಲಿ ಆದನ್ನು ಸೇವನೆ  ಮಾಡುವುದು ಯುಕ್ತವಲ್ಲ.
 • ಆಲ್ಲಿ ಅದಕ್ಕೆ ಬಳಸುವ ಮಂಜುಗಡ್ಡೆ ಹಾಗು ಅನನಾಸಿನ ಗುಣ ನಿರೀಕ್ಷೆಯ ಫಲಿತಾಂಶ ಕೊಡಲಿಕ್ಕಿಲ್ಲ.

ಈ ಸಮಸ್ಯೆಗಳು ಇಲ್ಲ:

ಕಿವ್ (Kew) ತಳಿಯ ಅನನಾಸು
 • . ಅಧಿಕ ಪ್ರಮಾಣದಲ್ಲಿ ಅನನಾಸು ತಿನ್ನುವವರಿಗೆ ಕನ್ನಡಕ ಬೇಕಾಗುವುದಿಲ್ಲ. ಕಾರಣ ಇದರಲ್ಲಿ ಅಷ್ಟು ಎ ವಿಟಮಿನ್ ಇರುತ್ತದೆ. ತುಟಿ ಒಡೆಯುವುದಿಲ್ಲ
 • ಅನನಾಸು ಶ್ವಾಸಕೋಶದ ಸಮಸ್ಯೆಯನ್ನು ನಿವಾರಿಸುತ್ತದೆ.
 • ಅದರಲ್ಲಿರುವ ಸಿ ವಿಟಮಿನ್ ಇದಕ್ಕೆ ಸಹಾಯಕ.
 • ಚಯಾಪಚಯ ಕ್ರಿಯೆಯನ್ನು ಸಹ ಇದು ಉತ್ತಮಪಡಿಸುತ್ತದೆ.
 • ಮೂಳೆಗಳಿಗೆ ಶಕ್ತಿ ಕೊಡುತ್ತದೆ.
 • ಇದರಲ್ಲಿ ಬರೇ ಸಿ ಅನ್ನಾಂಗ ಮಾತ್ರವಲ್ಲದೆ ಅಧಿಕ ಪ್ರಮಾಣದಲ್ಲಿ ಮ್ಯಾಂಗನೀಸ್,ಕ್ಯಾಲ್ಸಿಯಂ, ಕಬ್ಬಿಣ, ಫೋಸ್ಫರಸ್ ಹಾಗೂ ಪೊಟ್ಯಾಶಿಯಂ ಸತ್ವಗಳು ಇರುತ್ತವೆ.
 • ಇದರಲ್ಲಿರುವ ಕ್ಯಾಲ್ಸಿಸಿಯಂ ಅನ್ನು ದೇಹ ಹೀರಿಕೊಳ್ಳುತ್ತದೆ.
 • ಇದರಿಂದ ಆರ್ಥರೈಟಿಸ್ ಬರಲಾರದು.
ಕ್ವೀನ್ ಜಾತಿಯ ಅನನಾಸು
 • ಮೂತ್ರ ಕಟ್ಟುವಿಕೆ, ಕಿಡ್ನಿ ಸಮಸ್ಯೆ ಉಂಟಾಗಲಾರದು.ಪಿತ್ತಕೊಶ , ಕಣ್ಣಿನ ಸಮಸ್ಯೆಗೂ ಸಹ ಅನನಾಸು ಉತ್ತಮ.
 • ಚಿಕ್ಕ ಮಕ್ಕಳಿಗೆ ಅನನಾಸು ರಸ ಕೊಡುವುದರಿಂದ ಅವರಿಗೆ  ಗಂಟಲು ನೋವು ಸಮಸ್ಯೆ ಬರಲಾರದು.
 • ಕಾಮಲೆ ರೋಗ, ಹೃದಯದ ಸಮಸ್ಯೆಗಳಿಗೂ ಸಹ ಅನನಾಸು ಉತ್ತಮ ಹಣ್ಣು.
 • ದೂಮಪಾನದಿಂದ ಉಂಟಾಗುವ ಸಮಸ್ಯೆಗಳ ನಿವಾರಣೆಗೆ ಅನನಾಸು ಸೇವನೆ ಉತ್ತಮ.
 • ಚರ್ಮ ಸಂಬಂಧಿತ ತೊಂದರೆಗಳೂ ಸಹ ದೂರವಾಗುತ್ತವೆ.
 • ಜೇನುತುಪ್ಪದೊಂದುಗೆ ಅನನಾಸು ಸೇವನೆ ಸರ್ವಶ್ರೇಷ್ಟ.
 • ಕೆಲವರು ಇದನ್ನು ಉಪ್ಪಿನ ಜೊತೆ ಸೇವಿಸುತ್ತಾರೆ. ಇದು ಸಹ ಉತ್ತಮವೇ.
 • ಬೇಸಿಗೆಯ ಬೇಗೆಯಲ್ಲಿ ಆಯಾಸವಾಗುವುದನ್ನು ತಡೆಯಲು ಅನನಾಸು ಸಹಕಾರಿ.
 • ಅನನಾಸು ಸೇವಿಸಿದರೆ ಅದು ತಕ್ಷಣ ರಕ್ತಕ್ಕೆ ಸೇರಿಕೊಂಡು ಶಕ್ತಿಯನ್ನು ಕೊಡುತ್ತದೆ.

ಅನನಾಸು ತಿನ್ನುವುದು ಒಳ್ಳೆಯದು. ಆದರೆ ಆಯ್ಕೆ ಮಾಡುವಾಗ ದಪ್ಪದ, ದೊಡ್ಡ ಗಾತ್ರದ, ಬಣ್ಣ ಬಂದ  ಹಾಗೆಯೇ ಆಕರ್ಶಕ ನೊಟದ  ಹಣ್ಣುನ್ನು ಆಯ್ಕೆ ಮಾಡಬೇಡಿ. ನಿಮ್ಮ ಅಪೇಕ್ಷೆಗೆ ಹೊಂದುವಂತೆ ಬೆಳೆಗಾರರು ಅನಿವಾರ್ಯವಾಗಿ  ಕೆಲವು ರಾಸಾಯನಿಕ  ಪ್ರಚೋದಕಗಳನ್ನು  ಬಳಸ ಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!