ಈ ಆಪ್ ಗಳು ನಿಮಗೆ ತುಂಬಾ ಜ್ಞಾನ ಕೊಡುತ್ತವೆ.

ಮಾಹಿತಿಯ ಕೊರತೆಯಿಂದ ನಮ್ಮ ದೇಶದ ರೈತರು ಮಾರುಕಟ್ಟೆ, ಹವಾಮಾನ, ಸರಕಾರದ ಸವಲತ್ತು ಮತ್ತು  ತಾಂತ್ರಿಕ ನೆರವುಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಭಾರತ ಸರಕಾರದಿಂದ ಬಿಡುಗಡೆಯಾದ ಆಪ್ಲಿಕೇಶನ್ ಗಳು ಇವು.  ಕೃಷಿಗೆ ಬೇಕಾದ ಮಾಹಿತಿ ಎಂದರೆ ಕೇವಲ ಮಾರುಕಟ್ಟೆಗೆ ಸಂಬಂಧಿಸಿದ್ದು ಎಂದಲ್ಲ, ರೈತರಿಗೆ ಬಿತ್ತನೆಗೆ ಭೂಮಿ ಸಿದ್ದಪಡಿಸಿ, ಅದನ್ನು ಮಾರಾಟ ಮಾಡಿ, ನಂತರ ಯಾವ ಬೆಳೆ ಬೆಳೆಯಬಹುದು ಎಂಬುದನ್ನು ಒಳಗೊಂಡ ಮಾಹಿತಿ ಅತ್ಯವಶ್ಯಕ. ಕೃಷಿ ಚಟುವಟಿಕೆ ಎಂದರೆ ಅದು ನಿರಂತರ ಚಟುವಟಿಕೆ. ರೈತರು ತಮಗೆ ಅವಶ್ಯವಿರುವ ಮಾಹಿತಿಯನ್ನು ಈಗ ತಾವಿರುವ ಸ್ಥಳದಲ್ಲಿಯೇ ಕುಳಿತು, ತಮ್ಮ ಮೊಬೈಲ್ ನಲ್ಲಿಯೇ , ಕ್ಷಣಾರ್ಧದಲ್ಲಿ ಪಡೆಯಬಹುದು. ಅಂತಹ ಕೆಲವು ಆಪ್ ಗಳ ಬಗ್ಗೆ ಈ ಕೆಳಗೆ ನೋಡೋಣ.
RML mobile application

RML –  ಕೃಷಿ ಮಿತ್ರ ಆಪ್:

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ರೈತರು ತಮ್ಮ ಅಂತಿಮ ಉತ್ಪನ್ನಗಳ ಮೇಲೆ 40 ರಿಂದ 50% ರಷ್ಟು ಲಾಭ ಪಡೆದರೆ ಭಾರತದಲ್ಲಿ ರೈತರು ಕೇವಲ ಅದಕ್ಕೆ 20ರಿಂದ 25% ರಷ್ಟು ಬೆಲೆಯನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ. ಭಾರತೀಯ ಬೆಳೆಗಳ ಉತ್ಪಾದನೆಯು ಜಾಗತಿಕವಾಗಿ ಅತ್ಯಂತ ಕಡಿಮೆ ಇದೆ. ಇದಕ್ಕೆ ಸಮಯೋಚಿತ, ವಿಶ್ವಾಸರ್ಹ ಹಾಗೂ ನಿಖರವಾದ ಮಾಹಿತಿಯ ಕೊರತೆಯು ಒಂದು ಪ್ರಮುಖ ಕಾರಣವಾಗಿದೆ.

 • ರೈತರಿಗೆ ಅವಶ್ಯಕವಿರುವ ಮಾಹಿತಿ ಸೇವೆಯನ್ನು ಒದಗಿಸುವ ಮೂಲಕ RML ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ.
 • ರೈತರ ಮೊಬೈಲ್ ನೊಳಗೆ ದೈನಂದಿನ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ಸರಳ ಸಂದೇಶಗಳನ್ನು ನೀಡುತ್ತದೆ
 • ಇದು ಕೃಷಿ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ನಿಖರವಾದ ಮತ್ತು ಕ್ರಿಯಾತ್ಮಕ ಮಾಹಿತಿಯನ್ನು ಒದಗಿಸುತ್ತದೆ.
 • ಈ ಸೇವೆಯು 9 ಸ್ಥಳೀಯ ಭಾಷೆಗಳಲ್ಲಿ ಹಾಗೂ ಎಲ್ಲ ಮೊಬೈಲ್ ಗಳಲ್ಲೂ ಲಭ್ಯವಿದೆ.
 • 450 ಬೆಳೆ ಪ್ರಭೇದಗಳು 1300 ಕ್ಕೂಹೆಚ್ಚು ಮಾರುಕಟ್ಟೆಗಳ ಮಾಹಿತಿ ಇದರಲ್ಲಿ ಸಿಗುತ್ತದೆ ವಿವಿಧ ಸ್ಥಳಗಳ 3500 ಹವಾಮಾನ ಮುನ್ಸೂಚನೆ ಕೇಂದ್ರಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ರೈತರಿಗೆ ಲಭ್ಯ.
 • ಭಾರತದ 17 ರಾಜ್ಯಗಳ ಪೈಕಿ 50 ಸಾವಿರ ಹಳ್ಳಿಗಳಲ್ಲಿ3 ಮಿಲಿಯ ನೋಂದಾಯಿತ ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ.
 • ಶೈಕ್ಷಣಿಕ ಸರ್ಕಾರಿ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವ ದೊಂದಿಗೆ ನೂರಾರು ಕೃಷಿತಜ್ಞರ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ರೈತರಿಗೆ ನೀಡುತ್ತಿದೆ.

Kisan Suvidhaa application

ಕಿಸಾನ್ ಯೋಜನಾ (KISAN YOJANA) :

 • ಕಿಸಾನ್ ಯೋಜನಾ, ಇದು ಜನಪ್ರಿಯ ಕೃಷಿ ಆಪ್ ಗಳಲ್ಲಿ ಒಂದಾಗಿದ್ದು, ಉಚಿತವಾಗಿ ರೈತರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ.
 • ರೈತರಿಗೆ ಎಲ್ಲ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುತ್ತಿದೆ, ಇದರಿಂದ ರೈತರು ತಮಗೆ ಅಗತ್ಯವಿರುವ ಸರ್ಕಾರದ ಸೇವೆಗಳನ್ನು ಪಡೆಯಬಹುದು.
 • ವಿವಿಧ ರಾಜ್ಯ ಸರ್ಕಾರಗಳ ಕೃಷಿ ಯೋಜನೆಗಳ ಮಾಹಿತಿಯನ್ನು ಸಹ ಒದಗಿಸುತ್ತದೆ.
 • ರೈತರು ತಮಗೆ ಬೇಕಾದ ಕೃಷಿ ಯೋಜನೆಗಳ ಮಾಹಿತಿ ಪಡೆಯಲು ಸರಕಾರಿ ಕಚೇರಿಗೆ ಹೋಗುವ ಸಮಯ ಹಾಗೂ ಪ್ರಯಾಣದ ವೆಚ್ಚವನ್ನು ಉಳಿಸುತ್ತದೆ.
 • ಸುಮಾರು 50 ಸಾವಿರ ರೈತರು ಈ ಅಪ್ಲಿಕೇಶನ್ ಅನ್ನು ಉಪಯೋಗಿಸುತ್ತಿದ್ದಾರೆ.

ಕೃಷಿ ಜ್ಞಾನ್ (KRSHI GYAN) :

Krushi Gyan application

 • ಈ ಅಪ್ಲಿಕೇಶನ್ಕೂ ಕೂಡ ವಾಟ್ಸಪ್ ಸಂವಹನದಂತೆಯೇ ಕೆಲಸ ಮಾಡುತ್ತದೆ.
 • ಈ ಆಪ್ ಬಸಲು ರೈತರ ಮೊಬೈಲ್ ಸಂಖ್ಯೆಯ ಅಗತ್ಯವಿಲ್ಲ
 • ಕೃಷಿಯ ಬಗ್ಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ಒದಗಿಸುತ್ತದೆ
 • ರೈತರು ಕೃಷಿ ತಜ್ಞರೊಂದಿಗೆ ಸಂಪರ್ಕ ಸಾಧಿಸಿ, ತಮಗೆ ಬೇಕಾದ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಸಹಾಯಕವಾಗಿದೆ.
 • ರೈತರು ಕೃಷಿ, ಉತ್ಸಾಹಿಗಳು ತಮ್ಮ ಉತ್ತರವನ್ನು ಇಲ್ಲಿ ಪರಸ್ಪರ ಹಂಚಿಕೊಳ್ಳಬಹುದು.

ಕಿಸಾನ್ ಸುವಿಧಾ (KISAN SUVIDA) :

 • ರೈತರ ಸಬಲೀಕರಣದ ಉದ್ದೇಶದಿಂದ ಕೆಲಸಮಾಡಲು 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಅಪ್ಲಿಕೇಶನ್ ಗೆ ಚಾಲನೆ ನೀಡಿದ್ದಾರೆ
 • ಇದು ಮುಂದಿನ 5 ದಿನಗಳವರೆಗಿನ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ಒದಗಿಸುತ್ತದೆ
 • ರೈತರ ಹತ್ತಿರದ ಪಟ್ಟಣಗಳಲ್ಲಿರುವ ಸರಕು ಅಥವಾ ಬೆಳೆಗಳ ಮಾರುಕಟ್ಟೆ ಬೆಲೆಗಳು ,ರಸಗೊಬ್ಬರಗಳು, ಬೀಜಗಳು, ಯಂತ್ರೋಪಕರಣಗಳು, ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತದೆ.
 • ಇದರಲ್ಲಿ ರೈತರು ತಮ್ಮ ಸ್ಥಳೀಯ ಭಾಷೆಗಳಲ್ಲಿಯೇ ಬೇಕಾದ ಮಾಹಿತಿ ಪಡೆಯಬಹುದು.

ಕೃಷಿ ಅಭಿವೃದ್ದಿ:

Krushiabhivruddi application

 • ಆಯಾಯ ಕಾಲಕ್ಕೆ ಅನುಗುಣವಾಗಿ ರೈತರಿಗೆ ಕೃಷಿ ವಿಜ್ಞಾನದ ಬಗ್ಗೆ ಮಾಹಿತಿ ನೀಡಬಲ್ಲ ಮೊಬೈಲ್ ಆಪ್ಲಿಕೇಶನ್ ಇದು.
 • ಮುಖ್ಯವಾಗಿ ರೈತರಿಗೆ ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಕೃಷಿಯ ಮಾಹಿತಿಯನ್ನು ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ  ನೀಡಲಾಗುತ್ತದೆ.
 • ದಿನಂಪ್ರತಿ 3-4 ಮಾಹಿತಿ ಪೂರ್ಣ ಲೇಖನಗಳಿರುವ  ಇದರಲ್ಲಿ ಸುಮಾರು 550 ಕ್ಕೂ ಹೆಚ್ಚು ಲೇಖನಗಳು ಇವೆ.
 •  ಪೇಸ್ ಬುಕ್  ಮತ್ತು ಯೂ ಟ್ಯೂಬ್ ಗಳಲ್ಲೂ  ಇದು ಉಚಿತವಾಗಿ ಮಾಹಿತಿಯನ್ನು ನೀಡುತ್ತದೆ.  ಮತ್ತು 30 ಕ್ಕೂ ಹೆಚ್ಚು ವೀಡಿಯೋಗಳು ಫೇಸ್ ಬುಕ್ ಪುಟದಲ್ಲಿ  ಇವೆ. (link: facebook.com/krushi100,  https://youtube.com/c/KrushiNews24x7

ಇನ್ನೂ ಅನೇಕ ಅಪ್ಲಿಕೇಶನ್ ಗಳು ರೈತರಿಗೆ ಬೇಕಾದ ಕೃಷಿಸಂಬಂಧಿತ ಮಾಹಿತಿ ನೀಡುತ್ತಿವೆ. ರೈತರು ಆದಷ್ಟು ಲಭ್ಯವಿರುವ ಹೊಸ ಹೊಸ ತಂತ್ರಜ್ಞಾನಗಳಿಂದ, ಅಪ್ಲಿಕೇನ್ ಗಳಿಂದ, ಹೊಸ ತಳಿಗಳು, ರಸಗೊಬ್ಬರಗಳ ಬಳಕೆ, ಸಾವಯವ ಗೊಬ್ಬರ ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಬಗ್ಗೆ ಮಾಹಿತಿ ಪಡೆದು ತಮ್ಮ ಸಬಲೀಕರಣದ ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಗೆ ಕಾರಣೀಕರ್ತರಾಗಬೇಕು.
[ಈ ಅಪ್ಲಿಕೇಶನ್ ಗಳನ್ನು ರೈತರು ತಮ್ಮ ಮೊಬೈಲ್ ಗಳಲ್ಲಿ ಪ್ಲೇಸ್ಟೋರ್ ಗಳಿಂದ ಡೌನ್ಲೋಡ್ ಮಾಡಿ ಬಳಕೆ ಮಾಡಬಹುದಾಗಿದೆ.]
 ಲೇಖಕರು:  ವೀಣಾ ಬುಶೆಟ್ಟಿ,   ಸಂಧ್ಯಾ ಎಸ್  ರ್‍ಯಾವನಕಿ ,  ಪೂಜಾ ಎಸ್ ಪಿ, ಪಲ್ಲವಿ ಬಾದಾಮಿ, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಕೃಷಿ ವಿಶ್ವವಿದ್ಯಾಲಯ, ಧಾರವಾಡ. 
 
end of the article: ————————————————–
search words: Farmers apps# Farming aids# farmers knowledge # mobile knowledge# farm guidance# crop guidance# Farmer# free agriculture knowledge#

Leave a Reply

Your email address will not be published. Required fields are marked *

error: Content is protected !!