ಕಿಲೋ 250 ರೂ. ಸೀತಾಫಲ ಹಣ್ಣು!

by | Feb 11, 2020 | Custard Apple (ಸೀತಾಫಲ) | 0 comments

ಸೀತಾಫಲ ಅತ್ಯಂತ ರುಚಿಕಟ್ಟಾದ ಹಣ್ಣು. ಒಮ್ಮೆ ಈ ಹಣ್ಣನ್ನು ಸವಿದರೆ ಮತ್ತೆ  ಬೇರೆ ಹಣ್ಣು ರುಚಿಸದು. ಅಂಥಹ ರುಚಿ ಹೊಂದಿದೆ. ಹಣ್ಣಿನ ಉತ್ಪಾದನೆ  ತುಂಬಾ ಕಡಿಮೆ  ಇರುವ  ಕಾರಣ ಬಳಕೆದಾರರಿಗೆ  ಬೇಕಾದಂತೆ  ಲಭ್ಯವಾಗದ ಸ್ಥಿತಿ ಇದೆ…

  • ಸೀತಾಫಲದ ಹಣ್ಣು ಸಿಹಿ ರುಚಿ ಮತ್ತು ಮತ್ತು ಅದಕ್ಕೆ ವಿಶಿಷ್ಟ ಸುವಾಸನೆ ಸಹ ಇದೆ.
  •   ಸಿತಾಫಲದ ಪ್ರಭೇಧದಲ್ಲಿ ರಾಮ ಫಲ ಹನುಮಫಲ ಎಂಬೆಲ್ಲಾ ವಿಧಗಳಿದ್ದು, ರಾಮಫಲAnnona reticulata  ಸಹ ಉತ್ತಮ ಹಣ್ಣೇ ಆಗಿದ್ದರೂ ಅದರ ಹಣ್ಣಿನ ತಿರುಳು ಬೀಜಕ್ಕೆ ಅಂಟಿಕೊಂಡಿರುತ್ತದೆ.
  • ಇದಕ್ಕೂ ಸುಮಾರು 200 -250 ರೂ. ತನಕ ಬೆಲೆ ಇದೆ.
  • ಹನುಮ ಫಲ ಸ್ವಲ್ಪ ಹುಳಿ. ಔಷಧೀಯ ಬಳಕೆಗೆ  ಮಾತ್ರ ಬಳಕೆ.
  • ಇದು Annona squamosa ಕುಟುಂಬಕ್ಕೆ ಸೇರಿದ ಸಸ್ಯ ವರ್ಗ.

ಎಲ್ಲಿ ಬೆಳೆಯಬಹುದು?

ಹೂವು ಬರಲು ಚಾಟನಿ ಮಾಡಿದ ಗಿಡ

  • ಸೀತಾಫಲ ವನ್ನು ಅಂಗ್ಲ ಭಾಷೆಯಲ್ಲಿ cluserd appale ಎನ್ನುತ್ತಾರೆ.
  •  ಒಣ ಭೂಮಿಯಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ.
  • ಮಹಾರಾಷ್ಟ್ರ , ರಾಜಸ್ಥಾನ ಆಂದ್ರ ಪ್ರದೇಶ, ತೆಲಂಗಾಣ, ಗುಜರಾತ್ ಮಧ್ಯ ಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚು.
  • ಕರ್ನಾಟಕದಲ್ಲಿ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಾಕಷ್ಟು  ಬೇಸಾಯ ಇದೆ.
  • ಇದನ್ನು ತೋಟ ಮಾಡಿಯೂ ಬೆಳೆಸಬಹುದು, ಬದುಗಳ ಸಸ್ಯವಾಗಿಯೂ ಬೆಳೆಸಬಹುದು.
  • ಒಂದು ಗಿಡದಲ್ಲಿ ಸುಮಾರು 1500 ರೂ. ತನಕ ಉತ್ಪತ್ತಿ ಮಾರುಕಟ್ಟೆಗೆ ಮಾರಾಟ ಮಾಡಿದಾಗ ಪಡೆಯಬಹುದು.
  • ಆನ್ ಲೈನ್ ಅಥವಾ ನೇರ ಮಾರುಕಟ್ಟೆ ಮಾಡಿದಾಗ  ಹೆಚ್ಚು ಸಿಗುತ್ತದೆ.
  • ಆಮೆಝಾನ್ ಮಾರುಕಟ್ಟೆಯಲ್ಲಿ ಕಿಲೋ ಹಣ್ಣಿಗೆ 250 ರೂ ತನಕ ಬೆಲೆ  ಇದೆ.

 ತಳಿಗಳು:

  • ಇದರಲ್ಲಿ  ಅರ್ಕಾ ಸುಹಾನ್ ಎಂಬ ಹಬ್ರೀಡ್ ತಳಿಯನ್ನು  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು ಇವರು ಬಿಡುಗಡೆ ಮಾಡಿದ್ದಾರೆ.
  • ಇದರಲ್ಲಿ  1 ಕಿಲೋ ಗೂ ಹೆಚ್ಚು ತೂಕದ ಹಣ್ಣು ಬರುತ್ತದೆ.
  • ಇದು ಶುದ್ಧ ಸಿತಾಫಲ ಅಲ್ಲ.75 %  ಸೀತಾ ಫಲ ಮತ್ತು  25 %  ಚೆರಿಮೋಯೋ ಇದೆ.
  • ಇದು ದೇಶದಲ್ಲೇ ಅತ್ಯುತ್ಕೃಷ್ಟ ಹಣ್ಣು ಎಂದು ಗುರುತಿಸಲ್ಪಟ್ಟಿದೆ, ಮಹಾರಾಷ್ಟ್ರದಲ್ಲಿ ಸೂಪರ್ ಗೋಲ್ದ್ , ಹನುಮಾನ್ , ಸರಸ್ವತಿ ಸಿತಾಫಲ್  ಎನ್ ಎಂ ಕೆ  ಗೋಲ್ಡನ್  ಎಂಬ ಕೆಲವು  ವಿಶಿಷ್ಟ ಸೀತಾಫಲದ ತಳಿಗಳು ಇದ್ದು ಇದರಲ್ಲಿ ಬಣ್ಣದ ತಳಿಗಳೂ ಇವೆ.


  • ಸೊಲಾಪುರದಲ್ಲಿ ಸೀತಾಫಲದ ಸಸಿಗಳನ್ನು ಒದಗಿಸುವ ದೊಡ್ದ ದೊಡ್ಡ ನರ್ಸರಿಗಳಿದ್ದು, ಹೊಸ ಹೊಸ ತಳಿ ಪರಿಚಯಿಸುವಲ್ಲಿ ಇವರು ಮುಂದಿದ್ದಾರೆ.
  • ಪುಣೆಯ ಕಿಸಾನ್ ಕೃಷಿ ವಸ್ತು ಪ್ರದರ್ಶನದಲ್ಲಿ ಈ ತಳಿಗಳ ಹಣ್ಣು, ಸಸಿಗಳನ್ನು ಮಾರಾಟ ಸಹ ಮಾಡುತ್ತಾರೆ.
  • ಮಹಾಬಲೇಶ್ವರದಲ್ಲಿ ರಾಮ ಫಲ ಮತ್ತು ಸೀತಾಫಲವನ್ನು ವ್ಯಾಪಕವಾಗಿ ಬೆಳೆಯುತ್ತಾರೆ.


 

ಸಾಂಗ್ಲಿ ಜಿಲ್ಲೆಯ ಜೆತ್ತಡ್ಕದ ಸಿದ್ದಣ್ಣ ಎಂಬವರು  ಬರೇ 11  ಗಿಡಕ್ಕೆ 18000  ರೂ ಆದಾಯ ಪಡೆದಿದ್ದಾರೆ. 2 ಕಿಲೋ ತನಕದ ಕಾಯಿಯನ್ನೂ ಪಡೆದಿದ್ದಾರೆ. ಒಂದು ಗಿಡದಲ್ಲಿ  50 ರಷ್ಟು ಕಾಯಿಗಳು ಬಂದಿವೆ ಎಂಬ ವರದಿ ಇದೆ.

  • ಅರ್ಕಾ ಸುಹಾನ ಒಂದು ಉತ್ತಮ ತಳಿ. ಇದರಲ್ಲಿ  ಬೀಜ ಕಡಿಮೆ.  ಚಮಚದಲ್ಲಿ ತಿನ್ನಬಹುಹುದು.  ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಹಣ್ಣು ಸಿಗುತ್ತದೆ.
  • ಸೀತಾಫಲ ವರ್ಷಕ್ಕೆ ಒಮ್ಮೆ  ಮಾತ್ರ ಇಳುವರಿ ಕೊಡುವಂತದ್ದು.
  • ಮಾರುಕಟ್ಟೆಯಲ್ಲಿ ಬೇರೆ  ಹಣ್ಣುಗಳು ತುಂಬಾ ಕಡಿಮೆ  ಇರುವ ಸಮಯ ಸಪ್ಟೆಂಬರ್ – ಅಕ್ಟೋಬರ್ – ನವೆಂಬರ್ ಗೆ  ಫಸಲು ಸಿಗುತ್ತದೆ.

ನೆಟ್ಟು 3  ವರ್ಷಕ್ಕೆ  ಇಳುವರಿ ಪ್ರಾರಂಭವಾಗುತ್ತದೆ. ಕಸಿ ಮಾಡಿದ ಗಿಡಗಳಾಗಿರಬೇಕು. ಒಣ ಪ್ರದೇಶದಲ್ಲಿ ತೀರಾ ಕಡಿಮೆ  ನೀರಾವರಿಯಲ್ಲಿ ಬೆಳೆಯಬಹುದು. ಜ್ಯೂಸ್ ತಯಾರಿಕೆಗೆ ಅತೀ ಹೆಚ್ಚು ಬಳಕೆಯಾಗುತ್ತದೆ.

  •  ಜವಾರಿ ತಳಿಯಲ್ಲಿ ಬೀಜ ಜಾಸ್ತಿ.  ಜವಾರಿ ತಳಿ ಎಲ್ಲಾ ಮುಗಿದ ಮೇಲೆ  ಹೈಬ್ರೀಡ್ ತಳಿ  ಹಣ್ಣಾಗುತ್ತದೆ.
  • ಹೈಬ್ರೀಡ್ ತಳಿಯನ್ನು  ಹೆಚ್ಚು ಸಮಯ 8 ದಿನ ತನಕ ಇಡಬಹುದು.
  • ಹೂ ಬಿಟ್ಟು 3  ತಿಂಗಳಲ್ಲಿ ಬೆಳೆದು ಹಣ್ಣಾಗುತ್ತದೆ.

ಈ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಕ್ಯಾನ್ಸರ್ ಕೋಶಗಳನ್ನೂ ಸಹ ಸಾಯಿಸುತ್ತದೆ ಎನ್ನುತ್ತಾರೆ. ಒಣ ಭೂಮಿಯಲ್ಲಿ  ಬೆಳೆಯಬಹುದಾದ ಅತ್ಯಂತ ಲಾಭದಾಯಕ ಹಣ್ಣಿನ ಬೆಳೆ.

 

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!