ತೆಂಗಿನ ಮರಕ್ಕೆ ಇಲಿ ಕಾಟವೇ- ಇದು ಪರಿಹಾರ?

by | Apr 24, 2020 | Crop Protection (ಬೆಳೆ ಸಂರಕ್ಷಣೆ) | 0 comments

ತೆಂಗಿನ ಮರದ ಮೇಲೆ  ಹೋಗಿ ಪಾಶಾಣ ಇಡಲಿಕ್ಕೆ ಆಗುವುದಿಲ್ಲ. ಮರ ಏರಿ ಇಲಿ ಕೊಲ್ಲಲಿಕ್ಕೆ ಆಗುವುದಿಲ್ಲ.  ಇಲಿಗಳು ಹಾಳು ಮಾಡುವ ಎಳೆ ಕಾಯಿಗಳನ್ನು ನೋಡಿದರೆ ಮಾತ್ರ ಬೆಳೆದವರಿಗೆ  ಬಹಳ ನಷ್ಟ. ಇಲಿಗಳನ್ನು ಕಾದು ಕುಳಿತುಕೊಳ್ಳಲು ಆಗುತ್ತದೆಯೇ? ಇಲ್ಲ. ಇದನ್ನು  ಕೆಲವು ಉಪಾಯಗಳಿಂದಲೇ  ನಿಯಂತ್ರಿಸಬೇಕು.

  • ನಮ್ಮ ರೈತರ ತಲೆಯಲ್ಲಿ ಕೆಲವು  ಸಣ್ಣ ಸಣ್ಣ ಯೋಚನೆಗಳು ಇರುತ್ತವೆ.
  • ಇದರ ಅನುಕೂಲ ಮಾತ್ರ  ಬಹಳ ದೊಡ್ಡದು.
  • ಇತ್ತೀಚೆಗೆ ನಮ್ಮಲ್ಲಿ ಇಂತಹ ಯುಕ್ತಿಗಳನ್ನು ತಿಳಿದವರು ತುಂಬಾ ಕಡಿಮೆಯಾಗುತ್ತಿದ್ದಾರೆ.
  • ಇಂತಹ ಹಿರಿಯರು ನಮ್ಮೊಂಡನೆ ಅಲ್ಲಲ್ಲಿ ಕಂಡು ಬರುತ್ತಾರೆ.
  • ಇಂತಹವರ ಜ್ಞಾನವನ್ನು ಸ್ವಲ್ಪ ದಾಖಲಾತಿ ಮಾಡಿದರೆ ಮಾತ್ರ ಅದು ಹೊಸ ತಲೆಮಾರಿಗೆ ವರ್ಗಾವಣೆಯಾಗಲು ಸಾಧ್ಯ.

ಇಲಿಗಳ ನಿಯಂತ್ರಣ ಕುರಿತಾಗಿ ಶಿವಮೊಗ್ಗ ಬಿದ್ರಳ್ಳಿಯ ಓರ್ವ ಮಿತ್ರ  ತನ್ನ ಹೊಲದಲ್ಲಿ  ಮಡಿದ ಒಂದು ಉಪಾಯ ಇದು. ಇದರಲ್ಲಿ ಇವರು ತುಂಬಾ ಪ್ರಯೋಜನ ಪಡೆದುಕೊಂಡಿದ್ದಾರಂತೆ.

ಹೇಗೆ  ನಿಯಂತ್ರಣ ;

  • ಹೆಚ್ಚಾಗಿ ತೆಂಗಿನ ಮರದ ಗರಿ ಕಂಕುಳಲ್ಲಿ ಇಲಿಗಳು ಮರಿ ಇಡಲು ಹೋಗುತ್ತವೆ.
  • ಆ ಸಮಯದಲ್ಲಿ ಅವು  ಎಳೆ ಕಾಯಿಯನ್ನೂ  ಕೆರೆಯುವುದುಂಟು.
  • ಇವು ಗರಿಯಿಂದ ಗರಿಗೆ ಹಾರಿ ಮರದಿಂದ ಮರಕ್ಕೆ ಹಾರುತ್ತಾ , ಕಾಂಡದ ಮೂಲಕವೂ  ನೆಲಕ್ಕೂ ಬರುತ್ತವೆ.
  • ಇಲಿಗಳು ಕೋತಿಗಳಂತೆ ಸಾಕಷ್ಟು ಕಾಯಿಗಳನ್ನು ಹಾಳು ಮಾಡುತ್ತವೆ.
  • ಈಗಂತೂ ಇಲಿಗಳ  ಉಪಟಳ ಬಹಳ ಹೆಚ್ಚಿದೆ.
  • ಇದರ ನಿಯಂತ್ರಣಕ್ಕೆ ಒಂದು ಉಪಾಯ ಇದೆ.

ತಯಾರಿ ಹೇಗೆ.

  • ಒಂದು  ಬೆತ್ತದ ಬುಟ್ಟಿಯನ್ನು ತೆಗೆದು ಕೊಳ್ಳಿ.
  • ಅದಕ್ಕೆ  ಒಂದು ಇಲಿ ಹಿಡಿಯುವ ಬೋನನ್ನು ಕಟ್ಟಿ.
  • ಆ ಬೋನಿನಲ್ಲಿ ಆಹಾರ ಇಡಿ. ಕೊಬ್ಬರಿಯ ಹುರಿದ ತುಂಡು ಉತ್ತಮ.
  • ಬುಟ್ಟಿಗೆ ನಾಲ್ಕು ದಿಕ್ಕಿಗೆ ಹಗ್ಗ ಹಾಕಿ ಒಂದು ಕಡೆ ಬ್ಯಾಲೆನ್ಸ್ ಆಗುವಂತೆ   ಮಾಡಿ. ( ಚಿತ್ರದಲ್ಲಿರುವಂತೆ)
  •  ಅದನ್ನು ತೆಂಗಿನ ಮರದ ಗರಿಯಲ್ಲಿ ಒಮ್ಮೆ ನೇತಾಡಿಸಿ ಬಿಡಿ.
  • ಹಗ್ಗದ ಒಂದು ತುದಿ ಕೆಳಗೆ  ಇರಲಿ. 
  • ಅದನ್ನುಪಕ್ಕದ ಯಾವುದಾದರೂ  ಸಸಿಗೆ ಕೈಗೆಟಕುವಂತೆ ಕಟ್ಟಿ.
  • ಇಲಿಗಳು ಆಹಾರದ ವಾಸನೆಗೆ ಬುಟ್ಟಿಗೆ  ಹೋದಾಗ ಬೋನಿಗೆ  ಬೀಳುತ್ತವೆ.
  • ಕೆಳಗಿನಿಂದ ಬೋನು ನೇತಾಡಿಸಿದ ಹಗ್ಗವನ್ನು ಬಿಡಿಸಿ ಬುಟ್ಟಿ ಕೆಳಕ್ಕಿಳಿಸಿ.
  • ಇಲಿ ತೆಗೆಯಿರಿ , ಮತ್ತೊಂದು ಬೋನು ಇಡಿ.
  • ಇದನ್ನು ತೊಳೆದು ಮುಂದಿನ ಸಲ ಇಡಲು ಉಪಯೋಗಿಸಿ.
  • ವಿಧಾನದಲ್ಲಿ ದಿನಕ್ಕೆ  ಒಂದೆರಡು ಬಾರಿ ಇಲಿ ಹಿಡಿಯಬಹುದು.
  • ಕತ್ತಲೆಗಂತೂ ಇಲಿ ಯಾವಾಗಲೂ ಬೀಳುತ್ತದೆ.
  • ಈ ರೀತಿಯಲ್ಲಿ ಹಲವಾರು ಸಾರಿ ಮಾಡಿದಾಗ  ಸಾಕಷ್ಟು ಇಲಿಗಳು ಕಡಿಮೆಯಾಗುತ್ತವೆ.

ಇಲಿಗಳು, ಹೆಗ್ಗಣಗಳು, ಅದೇ ರೀತಿ ಕೆಲವು ದಂಶಕಗಳನ್ನು  ಪೂರ್ತಿಯಾಗಿ  ನಾಶ ಮಾಡುವುದು ಸಾಧ್ಯವಾಗದು. ಸ್ವಲ್ಪ ಸಂಖ್ಯೆ ಕಡಿಮೆಯಾದರೂ ಅವುಗಳ ಉಪಟಳ ಕಡಿಮೆಯಾಗುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಒಂದು ಜಾಗದಲ್ಲಿ ಯಾವುದಾದರೂ  ಒಂದು ಉಪಾಯದಲ್ಲಿ ಅವುಗಳನ್ನು ನಾಶ ಮಾಡಿದರೆ ಮತ್ತೆ ಅವು ಅಲ್ಲಿಗೆ ಸುಳಿಯುವುದಿಲ್ಲ.

End of the article: ——————————————————-
search words: Rat control# Rats of coconut garden# rats traping# rat catching# rats damage#
 
 
 
 
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!