ತರಕಾರಿ ಬೀಜಗಳು ಈಗ ತ್ವರಿತವಾಗಿ ಲಭ್ಯ

by | Aug 26, 2020 | Government & Daily News (ಸರ್ಕಾರ ಮತ್ತು ದೈನಂದಿನ ಸುದ್ದಿ) | 0 comments

ರೈತರ ಬದುಕು ಸಕಾಲದಲ್ಲಿ ಮಳೆ ಮತ್ತು ಸಕಾಲದಲ್ಲಿ ಬೀಜದ ಲಭ್ಯತೆ ಮೇಲೆ ನಿಂತಿದೆ. ಗುಣಮಟ್ಟದ ಬೀಜಗಳನ್ನು ತ್ವರಿತವಾಗಿ ತಲುಪಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ  ಜೊತೆಯಾಗಿ ಹೊಸ ವ್ಯವಸ್ಥೆಯನ್ನು ಹಾಕಿಕೊಂಡಿದೆ.
seed portal image

  • ಭಾರತದಲ್ಲೇ ಪ್ರಥಮ ಬಾರಿಗೆ ಎಂಬಂತೆ ಬೆಂಗಳೂರಿನ ಹೇಸರಘಟ್ಟದಲ್ಲಿರುವ  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ   IIHR ತನ್ನ ಸೀಡ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
  • ಇದನ್ನು  ರೈತರಿಗೆ ನೇರವಾಗಿ ತಲುಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಯೇನೋ ಅಗ್ರಿಕಲ್ಚರ್  ಜೊತೆ ಒಡಂಬಡಿಯೊಂದು ಇಂದು ಚಾಲನೆಗೆ ಬಂದಿದೆ.

Central Agriculture minister

  • ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಗೌರವಾನ್ವಿತ ಶ್ರೀ ನರೇಂದ್ರ ಸಿಂಗ್ ತೋಮರ್  ಇವರು ಇದನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ.

ರೈತರಿಗೆ ಹೇಗೆ ಅನುಕೂಲ:

  • ಈ ಹಿಂದೆ IIHR ಸಂಸ್ಥೆಯ ವಿವಿಧ ಹಣ್ಣು, ತರಕಾರಿ ಮುಂತಾದ ಬೀಜಗಳನ್ನು ಪಡೆಯಬೇಕಿದ್ದರೆ ರೈತರು ಸಂಸ್ಥೆಗೆ ವಿಚಾರಿಸಿ, ಹಣ ಪಾವತಿಸಿ, ಅಲ್ಲಿಂದ ಅದು ವಿಲೇವಾರಿಯಾಗಿ ಕೊರಿಯರ್ ಅಥವಾ ಪೊಸ್ಟ್ ಮೂಲಕ ಪಡೆಯಬೇಕಿತ್ತು.
  • ಇಲ್ಲಿ ರೈತರು ವಿಚಾರಣೆ ಮಾಡುವುದು, ಹಣ ಕಳುಹಿಸುವುದು ಮುಂತಾದ ವಿಳಂಬ ಈ ಒಂದು ವ್ಯವಸ್ಥೆಯಿಂದ ದೂರವಾಗಿದೆ.

ಕೃಷಿಕರು ಮನೆಯಲ್ಲಿದ್ದುಕೊಂಡೇ ಯೋನೋ ಆಪ್ ನಲ್ಲಿ ಅನ್ ಲೈನ್ ಮೂಲಕ ಬೀಜಗಳನ್ನು ತರಿಸಿಕೊಳ್ಳಬಹುದು. ಇಲ್ಲಿ ಸಮಯದ ವ್ಯಯ ಇಲ್ಲ. ಮಧ್ಯವರ್ತಿಗಳಿರುವುದಿಲ್ಲ. ತ್ವರಿತವಾಗಿ ಲಭ್ಯ.

ಯೇನೋ ಎಸ್ ಬಿ ಐ ಆಪ್:

  • ಇದು ಭಾರತೀಯ ಸ್ಟೇಟ್ ಬ್ಯಾಂಕ್ ಇದು ಗ್ರಾಹಕರ ಅನುಕೂಲಕ್ಕಾಗಿ ಮಾಡಿರುವ ಒಂದು ಉತ್ತಮ ಅಪ್ಲಿಕೇಶನ್ ಆಗಿದೆ.
  • ಇದರಲ್ಲಿ ಗ್ರಾಹಕರು ತಮ್ಮ ವ್ಯವಹಾರವನ್ನು ಮನೆಯಲ್ಲಿದ್ದುಕೊಂಡೇ ಮಾಡಬಹುದಾಗಿದೆ.
  • ಬರೇ ಬ್ಯಾಂಕಿಂಗ್ ವ್ಯವಹಾರ ಮಾತ್ರವಲ್ಲದೆ ಬ್ಯಾಂಕು ಇದರೊಂದಿಗೆ ಕೆಲವು ಗ್ರಾಹಕ ಸ್ನೇಹೀ ಸೇವೆಗಳನ್ನೂ( ಹವಾಮಾನ ಸೂಚನೆ, ಮಾರುಕಟ್ಟೆ,ಬೆಲೆ ಆನ್ಲೈನ್ ನಲ್ಲಿ ಕೃಷಿ ಒಳಸುರಿ ಆರ್ಡರ್ ಮಾಡುವ ಅನುಕೂಲ ಮುಂತಾದ) ಸಹ ಇದರ ಮೂಲಕ ಒದಗಿಸುತ್ತದೆ.
  • ಅಪ್ಲಿಕೇಶನ್ ನಲ್ಲಿ ವಿಷೇಶವಾಗಿ ಕೃಷಿ ಮತ್ತು ಗ್ರಾಮಿಣ ಎಂಬ ಕಾಲಂ ಇದ್ದು, (Yono krishi – One stop solution for all your farming needs)ಇದರಲ್ಲಿ 24 ಗಂಟೆಯೂ ವ್ಯವಹಾರಕ್ಕೆ ಆಸ್ಪದ ಇರುತ್ತದೆ.
  • ಸೀಡ್ ಪೋರ್ಟಲ್ ಅನ್ನು ಯೋನೊ ಅಗ್ರಿಕಲ್ಚರ್‌ನೊಂದಿಗೆ ಸಂಯೋಜಿಸುವುದರಿಂದ ರೈತರು ತಮ್ಮ ಉತ್ಪನ್ನ ಮತ್ತು ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ.
  • ಹೆಚ್ಚು ಹೆಚ್ಚು ರೈತರು ಈ ಪೋರ್ಟಲ್‌ಗೆ ಸೇರಬೇಕು, ಮತ್ತು ಸಂಸ್ಥೆಯ ಪ್ರಮಾಣೀಕೃತ ಬೀಜಗಳಿಂದ ಪ್ರಯೋಜನ ಪಡೆಯಬೇಕು ಎಂಬುದು ಇದರ ಆಶಯವಾಗಿದೆ.

ಇಂದು ನಡೆದ ಕಾರ್ಯಕ್ರಮ:

IIHR Director Dr. MR Dinesh

  • ನವದೆಹಲಿಯ ಕೃಷಿ ಭವನದಲ್ಲಿ ಮಾನನೀಯ ಕೃಷಿ ಮಂತ್ರಿಗಳು ಸಮಾರಂಭವನ್ನು ಉದ್ಗಾಟಿಸಿದರು.
  • ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ತ್ರಿಲೋಚನ್ ಮೊಹಾಪಾತ್ರ ವಹಿಸಿದ್ದರು.
  • ಸಮಾರಂಭದ ವಿಶೇಷ ಅತಿಥಿಯಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾದ ಶ್ರೀ ರಜನೀಶ್ ಕುಮಾರ್ ಇದ್ದರು.
  • ಒಂದು ವೇಳೆ ರೈತರ ಬಳಿ ಆಂಡ್ರಾಯ್ಡ್  ಫೊನ್ ಇಲ್ಲದಿದ್ದ ಪಕ್ಷದಲ್ಲಿ  ಬ್ಯಾಂಕ್ ನವರೇ ತಮ್ಮ ಸಿಬ್ಬಂದಿಗಳ  ಫೋನ್ ಮೂಲಕ  ಈ ಸೇವೆಯನ್ನು  ಒದಗಿಸುವ ಭರವಸೆಯನ್ನು ನೀಡಿದ್ದಾರೆ..
  •  ಸಂಸ್ಥೆಯ ನಿರ್ದೇಶಕ ಕರ್ನಾಟಕದವರೇ ಆದ ಡಾ.ಎಂ.ಆರ್. ದಿನೇಶ್, ಇವರು ಈ ಒಂದು ಸೀಡ್ ಪೋರ್ಟಲ್ ಇದರ ರುವಾರಿಯಾಗಿದ್ದಾರೆ.
  • ಶ್ರೀಯುತರು ಸಚಿವರು ಮತ್ತು ಇತರ ಗಣ್ಯರನ್ನು ಸ್ವಾಗತಿಸಿದರು .
  • ಸಂಸ್ಥೆಯು  ಹಲವಾರು ತೋಟಗಾರಿಕಾ ಬೆಳೆ ಪ್ರಭೇದಗಳ ರೋಗ ಮುಕ್ತ ಗುಣಮಟ್ಟದ ಬೀಜಗಳ ಅಭಿವೃದ್ಧಿಯ ಬಗ್ಗೆ ಜನರಿಗೆ ಅರಿವು ಮೂಡಿಸಿದೆ ಎಂದು ಹೇಳಿದರು.

Surya papaya variety by IIHR

  • IIHR ಸಂಸ್ಥೆ ಪ್ರತಿವರ್ಷ 20 ಟನ್ ಬೀಜಗಳನ್ನು ಉತ್ಪಾದಿಸುತ್ತಿದೆ ದೇಶವ್ಯಾಪೀ ಬೇಡಿಕೆಯನ್ನು ಮನಗಂಡು ಮುಂಬರುವ ಸಮಯದಲ್ಲಿ ಅದನ್ನು 50 ಟನ್‌ಗಳಿಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು.

Arka seed packet

  • ಡಾ.ಎ.ಕೆ. ಸಿಂಗ್, ಭಾರತೀಯ ಕೃಷಿ ಸಂಶೋಧನಾ ಉಪ ಮಹಾನಿರ್ದೇಶಕ (ತೋಟಗಾರಿಕಾ ವಿಜ್ಞಾನ) ಇವರು   ತೋಟಗಾರಿಕಾ ಅಭಿವೃದ್ದಿಗಾಗಿ  ನಾವು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೇವೆ ಎಂದರು.

ಹಣ್ಣು ತರಕಾರಿ ಮುಂತಾದ ತೋಟಗಾರಿಕಾ ಬೆಳೆಗಳ ಸಂಶೋಧನೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಸಂಶೋಧನಾ ಕೇಂದ್ರವು ತೆರೆಯಲ್ಪಟ್ಟದ್ದು ನಮ್ಮ ಹೆಮ್ಮೆ.ಇಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಅರ್ಕಾ(Arka) ಹೆಸರಿನ ಪ್ರಮಾಣೀಕೃತ ಬೀಜಗಳು, ಸಸಿಗಳು ಲಭ್ಯವಿದೆ. ಇಲ್ಲಿನ ತಂತ್ರಜ್ಞಾನಕ್ಕೆ ರಾಷ್ಟ್ರ ಮನ್ನಣೆ ಸಹ ಇದೆ.
end of the article:
search words: IIHR# Seed Portal# Yeno app# certified seeds# vegetable seeds# fruits seeds# plants# Surya papaya# Okra# Tomato#Arka seeds#hybrid seeds# Horticulture# Horticulture research#
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!