ರಾಸಾಯನಿಕ ಮುಕ್ತ ಭತ್ತ ಬೇಸಾಯ ಹೀಗೆ.

by | May 13, 2020 | Organic Cultivation (ಸಾವಯವ ಕೃಷಿ), Paddy (ಭತ್ತ) | 0 comments

ಸಮಗ್ರ  ಕೃಷಿ ಪದ್ದತಿ ಎಂದರೆ ಲಭ್ಯವಿರುವ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಅಧಿಕ ಉತ್ಪಾದನೆ  ಪಡೆಯುವ  ಕೃಷಿ ಪದ್ದತಿ. ಇದರಲ್ಲಿ ಒಂದಕ್ಕೊಂದು ಅನುಕೂಲಗಳಿರುತ್ತವೆ. ಸ್ವಾವಲಂಬಿಯಾಗಿ ಬೆಳೆ ತೆಗೆಯಲು ಇದು ಸಹಕಾರಿ.

  • ಭತ್ತದ ಬೆಳೆಗೆ ಯಾವುದೇ ಕೀಟನಾಶಕ- ರೋಗ ನಾಶಕ ಬಳಕೆ ತುಂಬಾ ಕಷ್ಟ ಹಾಗೆಯೇ  ಅಪಾಯಕಾರಿಯೂ ಸಹ.
  • ಇದನ್ನು  ಬಳಸದೆ ಬೆಳೆ ಬೆಳೆಯಲು  ಭತ್ತದ ಜೊತೆಗೆ ಮೀನು, ಕೋಳಿ ಸಾಕಿ.
  •  ಭತ್ತದ ಪೈರಿನ ಅಧಿಕ ಇಳುವರಿಗೆ ಮೇಲ್ ಸ್ಥರದಲ್ಲಿ ಕೋಳಿ  ಗೊಬ್ಬರಕೊಟ್ಟರೆ  ಮೀನು ಬೆಳೆ ಸಂರಕ್ಷಿಸುತ್ತದೆ.
  • ಇದರಿಂದ ಕೀಟ- ರೋಗ ನಾಶಕ ಇಲ್ಲದೆ ಬೆಳೆ ಬೆಳೆಸಲು  ಸಾಧ್ಯ.

 ಇಂದಿನ ಕಾಲ ಪರಿಸ್ಥಿತಿಯೊಳಗೆ ಹೊಲ ದೊಡ್ದದಾದಷ್ಟು ನಿರ್ವಹಣೆ ತುಂಬಾ ಕಷ್ಟ. ದೈನಂದಿನ ಮೇಲ್ವಿಚಾರಣೆ ಮಾಡುವುದು ಸಹ ಕಷ್ಟವಾಗುತ್ತದೆ. ಇದನ್ನು ನಿಬಾಯಿಸಲು ಕಡಿಮೆ ಹೊಲದಲ್ಲಿ ಬಹುಬಗೆಯ ಆದಾಯ ತಂದುಕೊಡಬಲ್ಲ ಕೃಷಿ  ಮತ್ತು ಕೃಷಿ ಪೂರಕ ವೃತ್ತಿಗಳನ್ನು ಒಟ್ಟು ಹಾಕುವುದೇ ಪರಿಹಾರ.

  • ಮುಖ್ಯ ಕೃಷಿಯೊಂದಿಗೆ  ಪೂರಕ ಕೃಷಿಗಳಾಗಿ ರೇಶ್ಮೆ ವ್ಯವಸಾಯ, ಕೋಳಿ ಸಾಕಣೆ, ಮೀನು ಸಾಕಣೆ, ಹಂದಿ, ಮೊಲ ಸಾಕಣೆ,ಮುಂತಾದವುಗಳನ್ನು ಮಾಡುತ್ತಾ ವರ್ಷವಿಡೀ ನಿರಂತರ ಆದಾಯ ಸಂಪಾದಿಸುವುದು ಸಾಧ್ಯ.
  • ಇದರಲ್ಲಿ ಕೃಷಿ ಕೂಲಿ ಕಾರ್ಮಿಕರಿಗೂ ವರ್ಷವಿಡೀ ಉದ್ಯೋಗ ಒದಗಿಸಬಹುದು.
  • ಇವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮುಖ್ಯ ಕೃಷಿಗೆ ಪ್ರಯೋಜನಕಾರಿಯಾಗುತ್ತದೆ.
  • ಕೃಷಿಕನ ಆರ್ಥಿಕ ಸ್ಥಿತಿಗತಿ ಉತ್ತಮವಾಗಲು ಬಹು ಬಗೆಯ ಕೃಷಿ ಇರಬೇಕು.

ಭತ್ತ ದೊಂದಿಗೆ ಕೋಳಿ- ಮೀನು ಸಾಕಣೆ:

  • ಭತ್ತದ ಹೊಲದ ಮಧ್ಯ ಭಾಗದಲ್ಲಿ ಒಂದು ಹೊಂಡ ಮತ್ತು ಅದರ ಮೇಲು ಭಾಗದಲ್ಲಿ ಒಂದು  ಕೋಳಿ ಸಾಕಾಣಿಕೆ ಮಾಡುವ ಶೆಡ್ ನಿರ್ಮಿಸಿಕೊಳ್ಳಿ.
  • ಅದರಲ್ಲಿ ಕೋಳಿ ಸಾಕಣೆ ನಡೆಯುತ್ತಿರಲಿ.
  • ತಳದ ಹೊಂಡದಲ್ಲಿ ನೀರು ನಿರಂತರ ನಿಲ್ಲುವಂತಿರಲಿ.
  • ಇದರಲ್ಲಿ ಮೀನಿನ ಮರಿಗಳನ್ನು ಬಿಡಿ. ಭತ್ತದ ಬೇಸಾಯ ಮಾಡುವ ಸಮಯದಲ್ಲಿ ಹೊಲದ  ಪೂರ್ತಿ ನೀರು ನಿಂತಿರುತ್ತದೆ.
  • ಮೀನುಗಳು ಹೊಂಡದಿಂದ  ಮೇಲೆ ಬಂದು ಗದ್ದೆಯ  ನೀರಿನಲ್ಲಿ ಸಂಚರಿಸುತ್ತಿರುತ್ತದೆ.
  • ಭತ್ತ ಕಠಾವಿನ ಸಮಯದಲ್ಲಿ ನೀರು ಆರಿಸುವ ಸಮಯದಲ್ಲಿ ಮೀನುಗಳು  ಮತ್ತೆ ಹೊಂಡದ ನೀರಿಗೆ  ಚಲಿಸುತ್ತವೆ.

ಕೋಳಿ ಸಾಕಾಣಿಕಾ ಶೆಡ್ ನಲ್ಲಿ ಲಭ್ಯವಾಗುವ ಹಿಕ್ಕೆ ಭತ್ತದ ಹೊಲಕ್ಕೆ ಉತ್ತಮ ಪೋಷಕಾಂಶವಾಗುತ್ತದೆ. ಅದೇ ಪೋಷಕಾಂಶದಲ್ಲಿ ಮೀನುಗಳೂ ಸಹ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತವೆ.  ಕೋಳಿಯ ಗೊಬ್ಬರದಲ್ಲಿ ಸಾರಜನಕ, ರಂಜಕ ,ಪೊಟ್ಯಾಶ್ ಅಲ್ಲದೆ ಸೂಕ್ಷ್ಮ ಪೋಶಕಾಂಶಗಳು  ಇರುವ ಕಾರಣ ಭತ್ತದ ಫಸಲು ಉತ್ತಮವಾಗುತ್ತದೆ.

  • ಭತ್ತದ ಬೆಳೆಗೆ ತೊಂದರೆ ಮಾಡುವ ಕೆಲವು ಕೀಟಗಳನ್ನು ( ಕಂದು ಜಿಗಿ ಹುಳ)  ಮಾತ್ತು ಬೆಂಕಿ ರೋಗಕ್ಕೆ ಕಾರಣವಾದ  ಕೆಲವು ಕೀಟಗಳನ್ನು ಇದು ಭಕ್ಷಿಸುತ್ತದೆ.
  • ಕಳೆ ಬೀಜಗಳನ್ನು ಹುಡುಕ್ಕಿ ಹುಡಿಕಿ ತಿನ್ನುವ ಕಾರಣ ಕಳೆ ನಿಯಂತ್ರಣ ಸುಲಭವಾಗುತ್ತದೆ.
  • ಮೀನುಗಳ ಚಲನೆಯಿಂದಾಗಿ ಭತ್ತದ ಗದ್ದೆಯ ನೀರಿನಲ್ಲಿ ಆಮ್ಲಜನಕ  ಪ್ರಮಾಣ ಹೆಚ್ಚುತ್ತದೆ.

ಹೀಗೆ ಮಾಡಿದರೆ ಯಶಸ್ಸು:

  •  ಭತ್ತದ ಗದ್ದೆಯ ಮಧ್ಯ ಭಾಗದಲ್ಲಿ  ಹೊಂಡವನ್ನು ಮಾಡಬೇಕು. ಒಂದು ಹೆಕ್ಟೇರ್ ವಿಸ್ತೀರ್ಣದ ಹೊಲಕ್ಕೆ 10X 6X 4 ಮೀ.   ಉದ್ದ, ಅಗಲ, ಆಳದ ಹೊಂಡವನ್ನು ಮಾಡಬೇಕು.
  • ಹೊಂಡಕ್ಕೆ ಇಳಿಜಾರಾಗಿರುವಂತೆ ಗದ್ದೆಯ ಒಂದು ಮಗ್ಗುಲನ್ನು ( 2 ಸೆಂ. ಮೀ)  ಎತ್ತರಿಸಿದರೆ  ಗದ್ದೆಯ ಕೊಯಿಲಿನ ಸಮಯದಲ್ಲಿ ನೀರು ಬಸಿಯಲು ಮತ್ತು ಮೀನುಗಳು ಕೊಳಕ್ಕೆ ಇಳಿಯಲು ಅನುಕೂಲವಾಗುತ್ತದೆ.
  • ಮೇಲಿನ ಅಳತೆಯ ಹೊಂಡದಲ್ಲಿ ಸುಮಾರು 1000 ಮೀನು ಮರಿಗಳನ್ನು ಬಿಡಬಹುದು. ಭತ್ತದ ಸಸಿ ಬೆಳೆದಂತೆ ಹೊಲದಲ್ಲಿ ನೀರನ್ನು 5-10 ಸೆಂ ಮೀ. ನಷ್ಟು ಏರಿಸಿರಿ. https://kannada.krushiabhivruddi.com/wp-admin/post.php?post=5860
  • ಗದ್ದೆಯಲ್ಲಿ ಹೆಚ್ಚಾದ ನೀರನ್ನು ಪೈಪು ಕೊಳವೆ ಇಟ್ಟು ಒಳ ಹಾಗಕ್ಕೆ ಬಲೆಯನ್ನು  ಹಾಕಿ ಹೊರ ಹೋಗುವಂತೆ ತಡೆಯಬೇಕು.
  • ಕೋಳಿ ಸಾಕುವ ಶೆಡ್ ನಲ್ಲಿ ಅಧಿಕ ಇಳುವರಿ ನೀಡಬಲ್ಲ ಗಿರಿರಾಅಜ ಕೋಳಿಯನ್ನು ಸಾಕಾಣೆ ಮಾಡಿ.

ಎಷ್ಟು ಮೀನು- ಯಾವ ಮೀನು:

  • 10X 6X 4 ಮೀ.   ಉದ್ದ, ಅಗಲ, ಆಳದ ಹೊಂಡದಲ್ಲಿ ಸುಮಾರು 1000 ಮೀನುಗಳನ್ನು ಸಾಕಬಹುದು.
  • ಅದರಲ್ಲಿ ಸುಮಾರು  ರೋಹು  20% (200) ಕಾಟ್ಲಾ 30%( 300) ಮತ್ತು ಮೃಗಾಲ 50% (500) ಸಾಕಬೇಕು.
  • ರೋಹು ಮೀನುಗಳು ಭತ್ತದ ಗದ್ದೆಯ  ನ್ರಿನ ಮದ್ಯಭಾಗದಲ್ಲಿರುವ  ಹುಳಗಲನ್ನು ಮತ್ತು, ರೋಗದ ಭಾಗಗಳನ್ನು ತಿಂದು ನಾಶ ಮಾಡುತ್ತದೆ.
  • ಕಾಟ್ಲಾ ಮೀನುಗಳು ನೀರಿನ ಮೇಲಿನ ಪದರದಲ್ಲಿರುವ ಹುಳಗಳನ್ನು ಮತ್ತು ರೋಗದ ಭಾಗಗಳನ್ನು ನಾಶ ಮಾಡುತ್ತದೆ.
  • ಮೃಗಾಲ ನೀರಿನ  ಕೆಳಭಾಗದಲ್ಲಿರುವ ಹುಳಗಳನ್ನು ಮತ್ತು  ರೋಗದ ಭಾಗಗಳನ್ನು ನಾಶ ಮಾಡುತ್ತದೆ.

ಕೋಳಿ ಸಾಕುವ ಕ್ರಮ:

  •  ಕೋಳಿಗಳ ಬುಡ ಭಾಗಕ್ಕೆ ಭತ್ತದ ಹುಲ್ಲನ್ನು ಹಾಕಬೇಕು. ಅಥವಾ ಇನ್ಯಾವುದೇ ನೀರು ಹೀರುವ ವಸ್ತುಗಳನ್ನು ಹಾಕಬೇಕು.
  • ಕೋಳಿ ಗೊಬ್ಬರವನ್ನು 15 ದಿನಕ್ಕೊಮ್ಮೆ ತೆಗೆದು  ಭತ್ತದ ಹೊಲಕ್ಕೆ ಬಳಕೆ ಮಾಡಬೇಕು.
  • ಕೋಳಿಗಳನ್ನು ಪಂಜರದಲ್ಲಿ ಸಾಕಬೇಕು. ಆಗ ಗೊಬ್ಬರವನ್ನು ತೆಗೆಯಲು ಅನುಕೂಲವಾಗುತ್ತದೆ.
  • ಕೋಳಿಗಳಿಗೆ ಆಹಾರ ಮತ್ತು ನೀರನ್ನು ಕೊಡುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
  • 8  ತಿಂಗಳು ಅಥವಾ ಒಂದು ವರ್ಷದ ಒಳಗೆ ಮೀನನ್ನು ಹಿಡಿದು ಕೊಳವನ್ನು ಬರಿದು ಮಾಡಿ  ನೆಲವನ್ನು ಸ್ವಚ್ಚಗೊಳಿಸಬೇಕು. ಮಣ್ಣನ್ನು ಅದೇ ಗದ್ದೆಗೆ ಹರಡಬೇಕು.
  • ಈ ಸಮಗ್ರ ಕೃಷಿ ಪದ್ದತಿಯಲ್ಲಿ ಮೊದಲ ವರ್ಷ ಅಂತಹ ಆದಾಯ ಇಲ್ಲವಾದರೂ ನಂತರದ ವರ್ಷಗಳಲ್ಲಿ  ಆದಾಯ ಹೆಚ್ಚುತ್ತದೆ.

ಭತ್ತದ ಬೇಸಾಯ ಮಾಡುವವರು ತಮ್ಮ ಭತ್ತ ಸಾಗುವಳಿಯ ಲಾಭದಾಯಕತೆಗೆ ಇದು ಉತ್ತಮ ಕೃಷಿ ಪದ್ದತಿ.  ಇದರಿಂದ ಬೆಳೆ ಪೋಷಕಗಳ ಸ್ವಾವಲಂಭನೆ ಮತ್ತು ಭತ್ತದ ಹೊಲದ ರೋಗ ಕೀಟ ಭಾಧೆಗಳೂ ಕಡಿಮೆಯಾಗುತ್ತದೆ.

ಲೇಖಕರು: ಮಾನಸ ಎಲ್ ಪಿ ಎಂ ಎಸ್ ಸಿ  (ಕೃಷಿ,)ಬೇಸಾಯ  ಶಾಸ್ತ್ರ ವಿಭಾಗ ಕೃವಿವಿ ಧಾರವಾಡ ಮತ್ತು ಪೂಜಾ  ಎಸ್ ಪಿ     ಪಿ ಎಚ್ ಡಿ ಸಂಶೊಧನಾ ವಿಧ್ಯಾರ್ಥಿ, (ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ  ವಿಭಾಗ) ಕೃವಿ ವಿ ಬೆಂಗಳೂರು.
 
ಪ್ರಶ್ನೆ;  ಪಾಪಸು ಕಳ್ಳಿಯ ಕೋಲನ್ನು ಎಕರೆಗೆ  ಎಷ್ಟು ಸಂಖ್ಯೆಯಲ್ಲಿ ಊರಬಹುದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!