ಸಾವಯವ ಕೃಷಿ- ಇದು ವ್ಯವಸ್ಥಿತ ರಾಜಕೀಯ.

by | Feb 24, 2020 | Organic Cultivation (ಸಾವಯವ ಕೃಷಿ) | 0 comments

ರೈತರೇ ನೀವು ಕೃಷಿ ಮಾಡುವವರೇ ಹೊರತು ಪಕ್ಷ ಕಟ್ಟುವವರಲ್ಲ. ಪಕ್ಷ ಕಟ್ಟುವ, ರಾಜಕೀಯ ಮಾಡುವ ಮನೋಸ್ಥಿತಿಯವರು ನಾವಲ್ಲ. ನಾವು ಸಾಧ್ಯವಾದಷ್ಟು ಒಗ್ಗಟ್ಟಾಗುವ ಬಗ್ಗೆ ಶ್ರಮಿಸೋಣ. ನಮಗೆ ಯಾವ ವಿಧಾನದ ಕೃಷಿ ಲಾಭದಾಯಕ ಎಂದೆಣಿಸುತ್ತದೆಯೋ ಅದನ್ನು ಮಾಡೋಣ..

 • ಕೃಷಿ ಮಾಡುವುದು ನಮ್ಮ ಬದುಕುವ ದಾರಿಗಾಗಿಯೇ ಹೊರತು ಪ್ರಚಾರಕ್ಕಾಗಿ ಅಲ್ಲ ತಾನೇ?
 • ಇಲ್ಲಿ ಇದರ ಪ್ರಸ್ತಾಪ ಯಾಕೆಂದರೆ ಕೃಷಿಕರು ಅವರ ಹೊಟ್ಟೆ ಪಾಡಿಗಾಗಿ  ವೃತ್ತಿ ಮಾಡುವವರು.
 • ಇವರ ಶ್ರಮದಲ್ಲಿ ಸ್ವಾರ್ಥ ಅಲ್ಲದೆ ಸಾಮಾಜಿಕ ಕಳಕಳಿಯೂ ಇದೆ.
 • ಇದರಲ್ಲಿ ಮಧ್ಯಪ್ರವೇಶಕ್ಕೆ ಮೂರನೆಯವರಿಗೆ ಅವಕಾಶ ಇಲ್ಲ.
 • ರಾಸಾಯನಿಕ ಬಳಸಿ ಕೃಷಿ ಮಾಡುವವರನ್ನು ವಾಚಾಮಗೋಚರ  ಜರೆಯುವ ಈ ಮಂದಿಗಳಿಗೆ ಬೇಕಾದುದು ಕೃಷಿಕರನ್ನು ಒಡೆಯುವುದು ಮಾತ್ರ.

ಇದು ಒಡೆದು ಆಳುವ ನೀತಿ:

 • ರಾಜಕೀಯ ಪಕ್ಷಗಳ ಲೆಕ್ಕಾಚಾರವೇ ಬೇರೆ ಇರುತ್ತದೆ.
 • ಅಂದು ನಂಜುಂಡ ಸ್ವಾಮಿಯವರು ರೈತ ಸಂಘ ಎಂಬ ಹೊಸ ಪರಿಕಲ್ಪನೆಯೊಂದಿಗೆ  ರೈತರನ್ನು ಒಟ್ಟು ಹಾಕುವ ಕೆಲಸಕ್ಕೆ ಕೈ ಹಾಕಿದರು.
 • ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ವಿದ್ಯುತ್ ಶಾಕ್ ಕೊಟ್ಟಂತಾಯಿತು.
 • ಅದಕ್ಕೆ ಪ್ರತಿ ತಂತ್ರವಾಗಿ ಪ್ರತೀ ರಾಜಕೀಯ ಪಕ್ಷಗಳೂ ತಮ್ಮ ಅನುಯಾಯಿಗಳ  ರೈತ ಸಂಘಟನೆಯನ್ನು ಸ್ಥಾಪಿಸಿದವು.
 • ಇಂತದ್ದರ ಇನ್ನೊಂದು ಅವತಾರವೇ ಈಗಿನ ಸಾವಯವ ಮತ್ತು ರಾಸಾಯನಿಕ ಕೃಷಿಕರು ಎಂಬ  ಒಡೆಯುವ  ತಂತ್ರಗಾರಿಕೆ.

ದುಬಾರಿ ಬೆಲೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಿದರೆ ಅವರೂ ನಮ್ಮಂತೇ ಬದುಕುವವರಲ್ಲವೇ.

ಇದು ಕೃಷಿಕರ ಆಯ್ಕೆ:

 •  ಸಾವಯವ ವಿಧಾನದಲ್ಲಿ ಬೇಸಾಯ  ಮಾಡುವುದಾಗಲೀ, ನೈಸರ್ಗಿಕ ವಿಧಾನದಲ್ಲಿ ಮಾಡುವುದಾಗಲೀ ಯಾರೂ  ಯಾರಿಗೂ  ಒತ್ತಾಯದಲ್ಲಿ ಹೇರುವಂತದ್ದಲ್ಲ. ·
 • ಅದೆಲ್ಲವೂ ಅವರವರ ಅನುಕೂಲಕ್ಕೆ ತಕ್ಕಂತೆ ಅನುಸರಿಸುವಂತದ್ದು.
 • ಬಹುತೇಕ ಸಾವಯವ ಕೃಷಿಕರು ಹಿಂದೆ ರಾಸಾಯನಿಕ ಮಾಡಿ ನಂತರ  ಸಾವಯವ ಅಥವಾ ನೈಸರ್ಗಿಕ ವಿಧಾನವನ್ನು ಆಯ್ಕೆ ಮಾಡಿಕೊಂಡವರಾಗಿರುತ್ತಾರೆ.·
 • ಸಾವಯವದ  ಅಥವಾ ನೈಸರ್ಗಿಕ ಕೃಷಿಯ ಬಗ್ಗೆ ಉಪನ್ಯಾಸ ಕೊಡುವ ತಜ್ಞರು ಪ್ರತ್ಯೇಕ ಸಾವಯವ  ವಸ್ತು ವಿಷಯದಲ್ಲಿ ಅಧ್ಯಯನ ಮಾಡಿದವರಲ್ಲ.
 • ಪ್ರತೀಯೊಬ್ಬನೂ  ಕೃಷಿ ಮಾಡುವುದು ಅದು ತನ್ನ ಜೀವನ ವೃತ್ತಿ ಎಂದು.
 •  ಅದು ಒಂದು ರೀತಿಯಲ್ಲಿ ವ್ಯವಹಾರವೇ ಆಗಿರುತ್ತದೆ.
 • ಇಲ್ಲಿ ಗರಿಷ್ಟ ಉತ್ಪಾದನೆ ಗುರಿಯಾಗಿರುತ್ತದೆ.
 • ಅದಕ್ಕೆ ಬೇಕಾಗುವ  ಬೇಸಾಯ ಕ್ರಮವನ್ನು ಅವನು ಅನುಸರಿಸಿಯೇ ತೀರುತ್ತಾನೆ.
 •  ವಿರಾಗಿ ಮಾಡುವ ಕೃಷಿಯಾದರೆ ಅದು ಒಂದು ಹವ್ಯಾಸ ಎಂದು ತಿಳಿಯಬಹುದು.

ಸಾವಯವ ಅನುಯಾಯಿಗಳು:

 • ನನ್ನ ವೃತ್ತಿ ಜೀವನದಲ್ಲಿ ನೂರಾರು ಸಾವಯವ , ನೈಸರ್ಗಿಕ ಕೃಷಿಕರನ್ನು ಕಂಡಿದ್ದೇನೆ.
 • ಒಬ್ಬರಿಗೆ ವರ್ಷಕ್ಕೊಂದು ಬಟ್ಟೆ ಸಾಕು.
 • ಹೆಂಡತಿ ಮಕ್ಕಳಿಲ್ಲ. ಅವರ ದೈನಂದಿನ ಅಗತ್ಯ ಅಂದಿನ ಕಾಲದಲ್ಲಿ 100 ರೂ.
 • ಯಾವುದೂ ಹಾಕದೆ ಬಂದ ಹತ್ತಾರು ತೆಂಗಿನ ಕಾಯಿ,
 • ಅದರಷ್ಟಕ್ಕೇ ಬೆಳೆಯುವ ಕೆಲವು ಗಡ್ಡೆ ಗೆಣಸು, ಬೇಸಿಗೆಯ ಮಾವಿನ ಕಾಯಿ, ಗೇರು ಬೀಜ,ಸುಮಾರು 2 ಎಕ್ರೆ  ಹೊಲದಲ್ಲಿ ಅವರು ತೃಪ್ತರಾಗಿದ್ದರು.
 • ಇವರ ಕೃಷಿ ಕ್ರಮವನ್ನು ಪಾಲಿಸಿದರೆ ಕೃಷಿಕ ಸುಖಿ ಎನ್ನುವ ಸಾವಿರಾರು ಜನರೂ ಇದ್ದರು.
 • ಅವರು ಕೃಷಿಕರಾಗಿರಲಿಲ್ಲ.
 • ಕೃಷಿಕರಿಗೆ  ಹೇಳಿ ಕೊಡುವವರಾಗಿದ್ದರು.

ಕೆಲವು ಕಟ್ಟಾ ಸಾವಯವ ಕೃಷಿಕರ ಮನೆಯ ಕೆಲಸದಾಳುಗಳು ಅವರ  ಕೃಷಿಯ ಗುಟ್ಟು ಏನು ಎಂದು ಗುಟ್ಟಿನಲ್ಲಿ ಹೇಳುವುದನ್ನು ಕೇಳಿದ್ದೇನೆ.

ಸಾವಯವ ಉಪನ್ಯಾಸ

ಬಹುತೇಕ ಸಾವಯವ ಕೃಷಿಯ ಪ್ರತಿಪಾದಕರು ನಿವೃತ್ತ ಸರಕಾರೀ ಉದ್ಯೋಗಿಗಳಾಗಿದ್ದು, ಜೀವನಕ್ಕೆ ಸರಕಾರ ಕೊಡುವ ಪೆನ್ಶನ್  ಹಣ ಇರುವಾಗ  ತಾವು ಸಮಾಜಕ್ಕೆ ಕೊಡುಗೆಯಾಗಿ ಇದನ್ನು ಹೇಳುವವರೇ ಆಗಿದ್ದಾರೆ.

 • ಮಂಗಳೂರಿನಲ್ಲಿ ಒಬ್ಬ ಸಾವಯವ ಕೃಷಿ ಮುಖಂಡ ಬಹುಮಹಡಿ ಕಟ್ಟಡದ ತುದಿಯ ಪ್ಲಾಟ್ ನಲ್ಲಿ ಕುಳಿತು ಸಾವಯವ ಕೃಷಿ ಬಗ್ಗೆ ಮಾತಾಡುತ್ತಾನೆ ಎಂದಾದರೆ ಇದೆಲ್ಲವೂ ಒಂದು ಪ್ರಚಾರ ತಂತ್ರ ಎಂದೆನಿಸುತ್ತದೆ.

ನೈಜ ಕೃಷಿಕರಿಗೆ  ಮಾತ್ರ:

 • ಸಾವಯವ ಕೃಷಿ ಉತ್ತಮವೇ.
 • ನಿಮಗೆ ಅದನ್ನು ಮಾಡಲು ಬೇಕಾದ ಎಲ್ಲಾ ಅನುಕೂಲಗಳೂ ಇದ್ದರೆ ಅದನ್ನು ಅನುಸರಿಸಿದರೆ  ಯಾವ ತೊಂದರೆಯೂ ಇಲ್ಲ.
 • ಕೃಷಿ ಮಾಡುವಾಗ ಅದು ನಿಮಗೆ ಲಾಭದಾಯಕ  ಆಗಬೇಕು.
 • ಅದಕ್ಕೆ  ನಿಮಗೆ ಯಾವುದು ಸೂಕ್ತವೋ ಅದನ್ನುಅನುಸರಿಸುವ ಎಲ್ಲಾ  ಹಕ್ಕೂ ನಿಮಗೆ ಇದೆ.

ರಾಸಾಯನಿಕ ಬಳಕೆಯೂ ಹಾಳಲ್ಲ.

 • ಎಷ್ಟು ಬೇಕೋ ಅಷ್ಟು ಮಾತ್ರ ಬಳಕೆ ಮಾಡಬೇಕು.
 • ಅತಿಯಾದರೆ ಅಮೃತವೂ ವಿಷ.
 • ರಾಸಾಯನಿಕ ಕೀಟ ನಾಶಕಗಳಿಂದ ಅನುಕೂಲ ಇದ್ದಷ್ಟೇ ಅನನುಕೂಲವೂ ಇದೆ.
 • ಅನನುಕೂಲಗಳಾಗುವಂತೆ ಬಳಸಬಾರದು ಎಂದು ತಿಳುವಳಿಕೆ ಹೇಳುವವರು ಹೇಳಬೇಕು.
 • ಅದು ತಜ್ಞತೆ ಇಲ್ಲದ ಕೃಷಿಕನಿಗೆ  ಗೊತ್ತಾಗಲಾರದು.
 • ಆರೋಗ್ಯ ಸರಿ ಇರಬೇಕಾದರೆ ಅದಕ್ಕನುಗುಣವಾದ ಆಹಾರ ಸೇವಿಸಿ ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿ ಬೆಳೆಸಬೇಕು.

ಅದಕ್ಕೂ ಮೀರಿ ಕೆಲವೊಮ್ಮೆ ಅನಾರೋಗ್ಯಗಳು ಬಂದರೆ ತಕ್ಷಣದ ಉಪಶಮನಕ್ಕೆ ವೈದ್ಯರ ಬಳಿ ಹೋಗಬೇಕಾಗುತ್ತದೆ.  ಹಾಗೆಯೇ ಸಾವಯವ ಮತ್ತು ರಾಸಾಯನಿಕ ಕೃಷಿಗಳು.

 • ಆಯ್ಕೆ ಅವರವರದ್ದು. ಭೂಮಿ – ಭೂ ಮಾತೆ- ಮಣ್ಣು, ನೀರು, ಪರಿಸರ ಇದೆಲ್ಲವನ್ನೂ ಮನುಷ್ಯ ಮಾತ್ರರಿಂದ ಹಾಳು ಮಾಡಲು ಸಾಧ್ಯವಿಲ್ಲ.
 • ಅಂತದ್ದು ಆದಾಗ ಪ್ರಕೃತಿಯೇ ಪ್ರತಿರೋಧ  ಒಡ್ಡುತ್ತದೆ.
 • ಯಾವ ಪರಿಸರವಾದಿಗೂ ಪರಿಸರದ ಜೊತೆ ಸಂವಾದ ಮಾಡಿ ರಾಜಿ ಸಂಧಾನ ಮಾಡಲು  ಆ ಸಮಯದಲ್ಲಿ ಆಗುವುದಿಲ್ಲ.
 • ಕೃಷಿ ಮಾಡುವಾಗ ಅಧಿಕ ಉತ್ಪಾದನೆ ಗುರಿಯಾಗಿರಬೇಕು.
 • ಹಾಗೆಯೇ ಕೃಷಿ ಮಾಡುವ ಹೊಲವೂ ಉತ್ಪಾದಕವಾಗಿಯೇ ಇರಬೇಕು.
 • ಅದಕ್ಕೆ ಮಣ್ಣು ಶ್ರೀಮಂತವಾಗಿರಿಸಲು ಹಿತ ಮಿತ ರಾಸಾಯನಿಕ ಗೊಬ್ಬರದ ಜೊತೆ ಸಾವಯವ ವಸ್ತುಗಳನ್ನೂ ಸೇರಿಸಿ ಕೃಷಿ ಮಾಡಬೇಕು.

ರೈತರಾದ ನಾವೆಲ್ಲಾ ಯಾವುದೇ ಬಣಕ್ಕೆ ಸೇರುವುದು ಬೇಡ. ನಮಗೆ ಯಾವುದು ಅನುಕೂಲವೋ ಆದನ್ನು ಮಾಡೋಣ. ಆದರೆ  ಬದುಕಲು ಬೇಕಾಗುವ ಉತ್ಪಾದನೆ  ಇರಲಿ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!