ಅಕ್ಕಿಯ ಬೆಲೆ ಬಾರೀ ಏರಲಿದೆ – ಎಚ್ಚರ.

ಈಗಾಗಲೇ ಅಕ್ಕಿಯ ಬೆಲೆ ಏರಿಕೆಯ ಗತಿಯಲ್ಲಿದ್ದು, ಅಕ್ಕಿ ಮಿಲ್ಲುಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಭತ್ತ ಹೊರ ಪ್ರದೇಶಗಳಿಂದ  ಬರುತ್ತಿಲ್ಲ. 


 

  • ಈ ವರ್ಷ ಅಕ್ಕಿ ಬೆಳೆಯಲಾಗುತ್ತಿರುವ ಪ್ರದೇಶಗಳಲ್ಲಿ ಕೊಯಿಲಿನದ್ದೇ ದೊಡ್ದ ಸಮಸ್ಯೆಯಾಗಿದೆ.
  • ಕರ್ನಾಟಕ, ಆಂದ್ರಪ್ರದೇಶ, ಹರ್ಯಾಣ ಮುಂತಾದ ಕಡೆ ಭತ್ತ ಕಠಾವು ಆಗದೆ ಹೊಲದಲ್ಲಿ ಹಾಳಾಗುತ್ತಿದೆ.
  • ಕೆಲಸಗಾರರಿಲ್ಲ. ಯಂತ್ರ ಸಾಧನಗಳಿಲ್ಲ. ಇಂಥಹ ಪರಿಸ್ಥಿತಿ ಈ ತನಕ ಆಗಿಲ್ಲ ಎಂಬುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ.

ನಮ್ಮ ದೇಶದ ಅಕ್ಕಿಯ ಕಣಜಗಳು ಆಂದ್ರಪ್ರದೇಶ, ಹರ್ಯಾಣ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಚತ್ತೀಸ್ ಘಡ್, ಒಡಿಸ್ಸಾ ರಾಜ್ಯಗಳು. ಕರ್ನಾಟಕದ ಪಾಲು ಬರೇ ಸಣ್ಣದು.

  • ಇಲ್ಲಿ ದಾವಣಗೆರೆ, ರಾಯಚೂರು ಬಿಟ್ಟರೆ ಉಳಿದೆಡೆ ಭಾರೀ ಕಡಿಮೆ ಭತ್ತವನ್ನು ಬೆಳೆಯಲಾಗುತ್ತದೆ.
  • ನಮ್ಮ ದೇಶವಲ್ಲದೆ ವಿಯೆಟ್ಮಾಂ, ಥೈಲಾಂಡ್, ಕಂಬೋಡಿಯಾ,  ಮುಂತಾದ ಕಡೆಗಳಿಂದಲೂ ಅಕ್ಕಿ ಆಮದು ಆಗುತ್ತಿದೆ.
  • ಆದರೆ ಈಗ ಅಮದು ನಡೆಯುತ್ತಿಲ್ಲ. ಅಲ್ಲಿಯು ಇದೇ ಸಮಸ್ಯೆ.
  • ಇದೆಲ್ಲವೂ ಅಕ್ಕಿಯ ಕೊರತೆಯನ್ನು ಉಂಟು ಮಾಡಿದೆ.

ಯಾಕೆ ಕೊರತೆ:

  • ನಮ್ಮ ದೇಶವೂ ಸೇರಿದಂತೆ  ಭತ್ತ ಬೆಳೆಯುವ ದೇಶಗಳಲ್ಲೆಲ್ಲಾ  ಕಳೆದ ವರ್ಷ ಅಕ್ಕಿ ಗೋಧಿ ಉತ್ಪಾದನೆ  ಚೆನ್ನಾಗಿತ್ತು.
  • ನಮ್ಮಲ್ಲಿ ಈ ವರ್ಷ ಮುಂಗಾರು ಹಂಗಾಮಿನ ಬೆಳೆ ಅಷ್ಟೊಂದು ಉತ್ತಮವಾಗಿರಲಿಲ್ಲ.
  • ಆದರೂ ನಂತರದ ಹಂಗಾಮಿನಲ್ಲಿ ಬೆಳೆ ಚೆನ್ನಾಗಿಯೇ ಇತ್ತು. ಇನ್ನೇನೂ ಮಾರ್ಚ್ ಕೊನೇ ವಾರದಲ್ಲಿ ಕೊಯಿಲು ನಡೆಯುವುದರಲ್ಲಿತ್ತು.
  • ಆದರೆ ಸಾಂಕ್ರಾಮಿಕ ರೋಗದ  ಹಿನ್ನೆಲೆಯಲ್ಲಿ ಕೆಲಸಗಾರ ವರ್ಗವೆಲ್ಲಾ ತಮ್ಮ ತಮ್ಮ ಊರಿಗೆ ವಾಪಾಸ್ಸಾಗುವ ನಿರ್ಧಾರ ತೆಗೆದುಕೊಂಡ ಕಾರಣ ಕೊಯಿಲಿಗೆ ಸಮಸ್ಯೆಯಾಗಿದೆ.
  • ಅಕ್ಕಿ ಮಾಡಲೂ ಸಮಸ್ಯೆಯಾಗಿದೆ. ಇದು ದೇಶದಲ್ಲಿ ಮುಂದಿನ ದಿನಗಳಲ್ಲಿ ಅಕ್ಕಿಯ ಕೊರತೆಯನ್ನು ಉಂಟು ಮಾಡಲಿದೆ.
  • ಭತ್ತ ಬೆಳೆಯುವ ಇತರ ದೇಶಗಳಲ್ಲೂ ಲಾಕ್ ಡೌನ್ ಮುಂತಾದ ಕಾರಣಗಳಿಂದ ಭತ್ತದ ಬೆಳೆಗೆ ಬಹಳ ತೊಂದರೆ ಉಂಟಾಗಿದೆ.
  • ಕೊಯಿಲು ನಡೆದಿಲ್ಲ. ಹೊಸ  ಬಿತ್ತನೆ ಆಗಿಲ್ಲ.
  • ಜಾಗತಿಕ ಅಕ್ಕಿಯ ಬೇಡಿಕೆಯಲ್ಲಿ 90% ಏಷ್ಯಾ ಖಂಡ ಪೂರೈಸುತ್ತಿದ್ದು, ಇಲ್ಲಿ ಉತ್ಪಾದನೆಗೆ ಭಾರೀ ತೊಂದರೆ ಉಂಟಾಗಿದೆ.

ಸಾಗಾಣಿಕೆಯೂ ಸಮಸ್ಯೆಯಾಗಿದೆ:

  •   ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಾಗಾಣಿಕೆಯು ಬಹಳ ತೊಂದರೆಗೊಳಗಾಗಿದೆ.
  • ಇದು ದೇಶದಲ್ಲಿ ಅಕ್ಕಿಯ ಕೊರತೆಯನ್ನು ಸೃಷ್ಟಿಸಿದೆ.
  • ಲಾಕ್ ಡೌನ್ ಭಹುಷಃ ಮೇ ಕೊನೆ ತನಕವೂ ಭಾಗಶಹ ಚಾಲ್ತಿಯಲ್ಲಿರುವ  ಕಾರಣ ಮುಂದಿನ ಹಂಗಾಮಿನ ಬೆಳೆಗೂ ಇದು ತೊಂದರೆಯಾಗಿ ಪರಿಣಮಿಸಲಿದೆ.

ಈಗಾಗಲೇ ಜಿಲ್ಲೆ ಜಿಲ್ಲೆಗಳ ಮೂಲಕ ಸಾಗಾಣಿಕೆ ನಡೆಸಲು ತೊಂದರೆ ಆಗಿದ್ದು, ಲಾರಿಗಳು, ತನಿಖಾ ಠಾಣೆಗಳ  ರಗಳೆಯನ್ನು  ಸಹಿಸಲಾಗದೆ ಸಾಗಾಟವೇ ನಡೆಯುತ್ತಿಲ್ಲ. ಗಿರಣಿಗಳಲ್ಲಿ ಭತ್ತದ ಕೂರತೆಯಿಂದ ಉತ್ಪಾದನೆ ಸ್ಥಗಿತವಾಗಿದೆ. ದಾಸ್ತಾನು ಸಹ ಕಡಿಮೆಯಾಗುತ್ತಿದೆ.

ಸಾರ್ವಜನಿಕ ವಿತರಣೆ:

  • ಅಕ್ಕಿ ಗೋಧಿಯ ಅಲ್ಪ ಸ್ವಲ್ಪ ದಾಸ್ತಾನನ್ನು ರಾಜ್ಯ ಸರಕಾರಗಳು ಸಾರ್ವಜನಿಕ ವಿತರಣೆಗೆ ಬಳಕೆ ಮಾಡಿಕೊಳ್ಳುತ್ತಿವೆ. 
  • ದಾರ್ಮಿಕ ಕ್ಷೇತ್ರಗಳಲ್ಲಿ ಸಂಗ್ರಹವಾದ  ಅಕ್ಕಿಯನ್ನೂ ಈ ವಿತರಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
  • ದಾಸ್ತಾನು ಖಾಲಿಯಾಗುವ ವರೆಗೂ ಈ ಉಚಿತ ಮತ್ತು ರಿಯಾಯಿತಿ ದರದ ಆಕ್ಕಿಯ ವಿತರಣೆ ನಡೆಯಲಿದ್ದು,
  • ಮುಂದೆ ದಾಸ್ತಾನು ಖಾಲಿಯಾದ ನಂತರ ದೇಶದಲ್ಲಿ ಅಕ್ಕಿಯ ಭಾರೀ ಕೊರತೆ ಉಂಟಾಗಲಿದ್ದು, ಅಕ್ಕಿಯ ಬೆಲೆ ಬಾರೀ  ಏರಿಕೆಯಾಗಲಿದೆ.

ಉಚಿತ ವಿತರಣೆ ಕಷ್ಟ:

  •  ಸದ್ಯದ ಸ್ಥಿತಿಯಲ್ಲಿ ಪಡಿತರ ವಿತರಣೆ ಅನಿವಾರ್ಯವಾದರೂ ಮುಂದೆ ಎಲ್ಲವೂ ಸರಿಯಾಗುವ ಸಮಯಕ್ಕೆ ಈ ಉಚಿತ ವಿತರಣೆ ಮುಂತಾದವುಗಳಿಗೆ ಆಹಾರ ಸಾಮಾಗ್ರಿಯ  ಲಭ್ಯತೆಯೇ  ಇರಲಾರದು.
  • ಅಕ್ಕಿಯ ಕೊರತೆ ಮಾರುಕಟ್ಟೆಯಲ್ಲಿ  ದಾಸ್ತಾನನ್ನು ಹೆಚ್ಚಿಸಲು ಕಾರಣವಾಗುತ್ತಿದೆ.
  • ಪ್ರಮುಖ ದಾಸ್ತಾನುಗಾರರು ಮತ್ತು ರಫ್ತುದಾರರು ಈ ಅವಕಾಶವನ್ನು  ಬಳಸಿಕೊಂಡು ತಮ್ಮ ದಾಸ್ತಾನನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
  • ಇದು ಮತ್ತಷ್ಟು ಅಕ್ಕಿಯ ಕೊರತೆಯನ್ನು ಸೃಷ್ಟಿಸಲಿದೆ.

ಮುಂದಿನ ಕೆಲವೇ ಸಮಯದಲ್ಲಿ ಮಳೆಗಾಲ ಅರಂಭವಾಗಲಿದ್ದು, ಭತ್ತದ ಹೊಲವನ್ನು ಖಾಲಿ ಬಿಡದೆ , ಸಾಗುವಳಿ ಮಾಡಿ ಜಿಲ್ಲೆಗಳೇ ಅಕ್ಕಿ ಯಲ್ಲಿ ಸ್ವಾವಲಂಭಿಗಳಾಗಬೇಕಾದ ಅನಿವಾರ್ಯತೆ ಇದೆ. ಸರಕಾರ ಪಾಳು ಭೂಮಿಯನ್ನು ಸಾಗುವಳಿ ಮಾಡುವರೇ ಆಸಕ್ತರಿಗೆ  ಒದಗಿಸಿಕೊಡಲು ಏನಾದರೂ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!