ಕೊರೋನಾ ಪರಿಣಾಮ- ಶೇಂಗಾ ಬೆಳೆಯ ಸುಗ್ಗಿ.

ಒಂದು ಕಾಲದಲ್ಲಿ ದೇಶದಲ್ಲೇ ಚಿತ್ರದುರ್ಗ ಶೇಂಗಾ ಬೆಳೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿತ್ತು. ಇಲ್ಲಿನ ಚಳ್ಲಕೆರೆ ತಾಲೂಕಿನಲ್ಲಿ ಎಲ್ಲಿ ನೋಡಿದರಲ್ಲಿ  ಶೇಂಗಾ ಹೊಲಗಳು, ಮತ್ತು ದೇಶದಲ್ಲೇ ಅತ್ಯಧಿಕ ಪ್ರಮಾಣದ ಶೇಂಗಾ ಎಣ್ಣೆ ಮಿಲ್ಲುಗಳಿದ್ದ ಈ ತಾಲೂಕು ಕ್ರಮೇಣ ತನ್ನ ವೈಭವವನ್ನು ಗತ ಕಾಲಕ್ಕೆ ಸೇರಿಸಿತ್ತು. ಈಗ ಮತ್ತೆ ಈ ವೈಭವ ಮರುಕಳಿಸಿದೆ. ಚಿತ್ರದುರ್ಗದ  ಚಳ್ಳಕೆರೆಯಲ್ಲಿ ಈ ವರ್ಷ 95 % ಕ್ಕೂ ಹೆಚ್ಚು ಶೆಂಗಾ ಬಿತ್ತನೆಯಾಗಿದೆ. ಎಲ್ಲೆಲ್ಲಿ ನೋಡಿದರೂ ಶೇಂಗಾ ಹೊಲಗಳೇ ಕಾಣಿಸುತ್ತಿವೆ.ಅದರ ಸೌಂದರ್ಯವನ್ನು ನೋಡುವುದೇ ಒಂದು ಅನಂದ.
Groundnut crop

ಪ್ರಕೃತಿಯ ಬೆಂಬಲ ಕೈ ಹಿಡಿಯಿತು:

  • ಬಹಳ ವರ್ಷಗಳಿಂದ ಈ  ಭಾಗದ ಜನರಿಗೆ ವರುಣ ದೇವರು ಅವಕೃಪೆಯನ್ನೇ ತೋರಿದ್ದಾರೆ.
  • ಅಕಾಲಿಕ ಮಳೆ, ಅತೀ ಕಡಿಮೆ ಮಳೆ, ಬತ್ತಿ ಹೋದ ಅಂತರ್ಜಲ, ಇವೆಲ್ಲದರಿಂದ ರೋಸಿ ಹೋದ ಇಲ್ಲಿನ ಜನ ಕೃಷಿಯ ಸಹವಾಸವೇ ಬೇಡ ಎಂದು ಪಟ್ಟಣದ ಉದ್ಯೋಗ ಅರಸಿ ಬೆಂಗಳೂರು ಸೇರಿದ್ದರು.
  • ವಾರಕ್ಕೊಮ್ಮೆ ಶನಿವಾರ ಊರಿಗೆ ಬರುವುದು, ಭಾನುವಾರ ರಾತ್ರೆ ಮತ್ತೆ ಬೆಂಗಳೂರಿಗೆ ಪಯಣ, ಹೀಗೆ ಬಹು ಕಾಲದಿಂದ ಇಲ್ಲಿನ ಜನ ತಮ್ಮ ಜೀವನೋಪಾಯಕ್ಕೆ ಬೆಂಗಳೂರನ್ನು ಆಶ್ರಯಿಸಿದ್ದರು.
  • ಬೆಂಗಳೂರಿನಲ್ಲಿ ಕೂಲಿ ಕೆಲಸವೂ ಸೇರಿದಂತೆ ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಈ ಜನರನ್ನು, ಮತ್ತೆ ಊರಿಗೆ ಕಳುಹಿಸಲೋ ಎಂಬಂತೆ ಕೊರೋನಾ ಎಂಬ ಮಹಾ ಮಾರಿ ವಕ್ಕರಿಸಿತು.
  • ಜನ ಬೆಂಗಳೂರಿನ ಸಹವಾಸವೇ ಬೇಡ ಎಂದು ಊರಿಗೆ ಹೊರಟರು.
  • ಸಾವಿರಾರು ಸಂಖ್ಯೆಯ ಜನ ಬೆಂಗಳೂರು ಬಿಟ್ಟು ಊರಿಗೆ ಬಂದವರು ತಮ್ಮ ಜೀವನೋಪಾಯಕ್ಕೆ ಆರಿಸಿಕೊಂಡದ್ದು,  ಕೃಷಿಯನ್ನು.
  • ಈ ಒಂದು ಚಿತ್ರಣವನ್ನು ನೋಡಬೇಕಿದ್ದರೆ ಚಿತ್ರದುರ್ಗದ ಚಳಕೆರೆ ಸುತ್ತಮುತ್ತ ಸುತ್ತು ಹೊಡೆಯಬೇಕು.
  • ಎಲ್ಲಿ ನೊಡಿದರಲ್ಲಿ ಶೇಂಗಾ ಹೊಲಗಳೇ ಕಾಣಸಿಗುತ್ತಿವೆ.

ವರುಣನ ಕೃಪೆಯೇ ಕಾರಣ:

  • ರೈತರ ಕಷ್ಟದ ಬದುಕು ಬಹುಶಹ ವರುಣ ದೇವರಿಗೂ ಅರಿವಾಗಿರಬೇಕು. ಕಳೆದ ವರ್ಷ ಈ ಭಾಗಗಳಲ್ಲಿ  ದಾಖಲೆಯ ಮಳೆಯಾಗಿ ಎಲ್ಲಾ ಕೆರೆಗಳು,ತುಂಬಿದೆ.
  • ನೆಲ ನೆನೆದು ಅಂತರ್ಜಲ ಮತ್ತೆ ಪುನಶ್ಚೇತನಗೊಂಡಿದೆ. ಬಹುಷ ಮಳೆರಾಯನಿಗೆ ಮುಂದೆ ಇಂತಹ ಸಂಕಷ್ಟ ಬರಲಿದೆ.
  • ಊರು ಬಿಟ್ಟು ಹೋದವರು ಮರಳಿ ಯಥಾ ಸ್ಥಾನಕ್ಕೆ ಬರಬಹುದು ಎಂದು ಗೊತ್ತಿತ್ತೋ ಏನೋ ಕಳೆದ ವರ್ಷವೇ  ಬಾರೀ ಮಳೆಯಾಗಿ ಅನುಕೂಲ ಮಾಡಿಕೊಟ್ಟಿತು.

ಈ ವರ್ಷ ಮಾರ್ಚ್ ತಿಂಗಳಲ್ಲಿ  ಕೊರೋನಾ ಕಾರಣದಿಂದ ಬೆಂಗಳೂರು ಬಿಡಬೇಕಾದ ಪ್ರಮೇಯ ಬಂತು, ಜನ ಸಮರೋಪಾದಿಯಲ್ಲಿ ಊರಿಗೆ ಬಂದರು ಬಂದವರು ಮಾಡಿದ್ದು, ತಮ್ಮ ಮಳೆಯಾಶ್ರಿತ ಭೂಮಿಯಲ್ಲೆಲ್ಲಾ ಶೇಂಗಾ ಬಿತ್ತನೆ.

  • ಅದಕ್ಕೆ ಪೂರಕವಾಗಿ ಈ ವರ್ಷವೂ ರೈತಾಪಿ ವರ್ಗದ ಮೇಲೆ ವರುಣನ ಕೃಪೆ  ಇದ್ದಂತಿದೆ.
  • ರಾಜ್ಯದಲ್ಲೇ ಅತೀ ಕಡಿಮೆ ಮಳೆಯಾಗುವ ಚಳ್ಳಕೆರೆಯಲ್ಲಿ ಮಳೆ ಉತ್ತಮವಾಗಿಯೇ ಆಗಿದೆ.
  • ಶೇಂಗಾ ಬೆಳೆದ ರೈತರಿಗೆ ಇದು ದೈವಾನುಗ್ರಹವಾಗಿಯೇ ಪರಿಣಮಿಸಿದೆ.
  • ಮೊದಲೇ ಉದ್ಯೋಗ ಇಲ್ಲದೆ ಬದುಕಿದರೆ ಬಿಕ್ಷೆ ಬೇಡಿಯಾದರೂ ಹೊಟ್ಟೆ ಹೊರೆದೇನು ಎಂದು ಊರಿಗೆ ಬಂದವರಿಗೆ ದೇವರೂ ಕೈ ಕೊಡಲಿಲ್ಲ.  ಅನುಕೂಲವನ್ನೇ ಮಾಡಿಕೊಟ್ಟಿದ್ದಾನೆ.
  • ಬಿತ್ತನೆ ಏನೋ ಚೆನಾಗಿದೆ. ಬೆಳೆಯೂ ಚೆನ್ನಾಗಿದೆ.

 Groundnut harvest

ಶೇಂಗಾ  ಮಾರುಕಟ್ಟೆ  ಕುಸಿಯಬಹುದೊ?:

  • ಶೇಂಗಾ ಒಂದು ಅತಿ ದೊಡ್ಡ ಖಾದ್ಯ ಎಣ್ಣೆ ಕಾಳು ಬೆಳೆ.
  • ಇದು ನಮ್ಮ ರಾಜ್ಯವಲ್ಲದೆ ಉತ್ತರ ಭಾರತದಲ್ಲೂ ಬೆಳೆಯಲ್ಪಡುತ್ತದೆ.
  • ಈ ಬೆಳೆಗೆ ಖರ್ಚು ಸಹ ಸಾಕಷ್ಟು ಇದ್ದು, ಈ ತನಕ ಈ ಬೆಳೆ ಉತ್ಪನ್ನ ಕೊರತೆಯಲ್ಲಿ ಮುಂದುವರಿಯುತ್ತಿತ್ತ್ತು.
  • ಬೆಳೆ ಕಡಿಮೆ ಇದ್ದು, ಬೇಡಿಕೆ ಚೆನ್ನಾಗಿರುವ  ಕಾರಣ ಬೆಳೆಗಾರರಿಗೆ ಸ್ವಲ್ಪ ಮಟ್ಟಿಗೆ ಆಕರ್ಷಕ ದೊರೆಯುತ್ತಿತ್ತು.
  • ಹಿಂದೆ ಬೆಳೆಯಲಾಗುತ್ತಿದ್ದ ಒಟ್ಟಾರೆ ಬೆಳೆ ಸುಮಾರು 20-25% ದಷ್ಟು ಮಾತ್ರ.
  • ಉಳಿದ ಬೆಳೆ ಪ್ರದೇಶ ಖಾಲಿಯಾಗಿ ಉಳಿಯುತ್ತಿತ್ತು.
  • ಬೆಳೆದವರಲ್ಲಿ  ಇಳುವರಿಯೂ ತುಂಬಾ ಕಡಿಮೆ ಇರುತ್ತಿತ್ತು.
  • ಈ ವರ್ಷ ಹಾಗಾಗಲಿಲ್ಲ. ಎಲ್ಲಾ ಪ್ರಾಕೃತಿಕ ಅನುಕೂಲತೆಗಳೊಂದಿಗೆ ಬೆಳೆ ಚೆನ್ನಾಗಿ ಬಂದಿದೆ.
  • ಇಳುವರಿಯೂ ಹೆಚ್ಚಾಗಬಹುದು. ಆದ ಕಾರಣ ಬೆಲೆಯೂ ಸ್ವಲ್ಪ ಇಳಿಕೆಯಾಗಬಹುದು.

ರೈತರ ಮಕ್ಕಳು ಉದ್ಯೋಗ ಇಲ್ಲದೆ ದುಡಿಮೆಗೆ ಬೇಕಾದ ಅನುಕೂಲಗಳೂ ಇಲ್ಲದೆ, ಊರು ಬಿಟ್ಟು ಪಟ್ಟಣ ಸೇರಿದ್ದರೂ ಸಹ ಕೊರೋನಾ ಕಾರಣದಿಂದ ಇವರು ದಿಕ್ಕಾಪಾಲಾಗಲಿಲ್ಲ. ಕೃಷಿಯಾದರೂ ಇವರಿಗೆ ಬದುಕು ಕೊಟ್ಟಿತು.
END OF THE ARTICLE:—————————————–
search words: Groundnut crop at  Chitradurga#  Ground nut crop in full swing#  plenty of groundnut # area under cultivation#  Challakere taluk#  Groundnut# Corona and groundnut crop#
 

Leave a Reply

Your email address will not be published. Required fields are marked *

error: Content is protected !!