ಬೀಜ – ಸಸಿ ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೆ ತಿಳಿದುಕೊಳ್ಳಿ.

ಹಿರಿಯರು ಹೇಳುವುದುಂಟು , ಪರವೂರಿನ ಸುಭಗನಿಗಿಂತ ( ನಯ ವಿನಯದ ವ್ಯಕ್ತಿ) ಊರಿನ ಕಳ್ಳನಾದರೂ ಆಗಬಬಹುದು ಎಂದು. ಇದು ನಿಜ. ರೈತರು ಖರೀದಿ ಮಾಡುವ ಸಸಿ, ಬೀಜ  ಇವುಗಳನ್ನು ಗೊತ್ತು ಪರಿಚಯ ಇರುವವರಿಂದಲೇ ಖರೀದಿ ಮಾಡಿ. ನಾಳೆ ಮೋಸವಾದರೆ ಅವರು ನಿಮ್ಮ ಕಣ್ಣು ಮುಂದೆಯೇ ಇರುತ್ತಾರೆ.

 certified seedlings of coconut
ತೆಂಗಿನ ಸಸಿ ಕೊಡುವಾಗ ಈ ರೀತಿ QR ಕೋಡ್ ಹಾಕಿ ಗ್ಯಾರಂಟಿಯೊಂದಿಗೆ ಸಸಿ ಕೊಡುವವರೂ ಇದ್ದಾರೆ.

  • ನೆಡು ಸಾಮಾಗ್ರಿಗಳಾದ ಬೀಜ, ಸಸಿಗಳ ವ್ಯವಹಾರ ಎಂದರೆ ಬಲವಾದ ನಂಬಿಕೆ.
  • ಇದು ದೇವರಿಗೆ ನಮಸ್ಕರಿಸಿ ಆಶೀರ್ವಾದ ಬೇಡುವುದಕ್ಕಿಂತಲೂ ಮಿಕ್ಕಿದ ನಂಬಿಕೆಯ ವ್ಯವಹಾರ.
  • ಒಬ್ಬ ರೈತ ಒಂದು ಬೀಜ ಅಥವಾ ಸಸಿಯನ್ನು ಖರೀದಿಸಿ ತಂದು ನೆಟ್ಟು, ಬೆಳೆಸಿ ಅದರ ಪ್ರತಿಫಲ ಪಡೆಯಲು ಒಂದಷ್ಟು ವರ್ಷ ಬೇಕಾಗುತ್ತದೆ.
  • ಎಲ್ಲವೂ ನಿರೀಕ್ಷೆಯಂತೆ ನಡೆದರೆ ನಂಬಿಕೆ ಗೆಲ್ಲುತ್ತದೆ.
  • ಮೋಸವಾದರೆ ರೈತರ ಶ್ರಮ, ಹಣ ಹಾಗೂ  ಸಮಯಕ್ಕೆ ಯಾವ ಕಿಮ್ಮತ್ತೂ ಇರುವುದಿಲ್ಲ.

ರೈತ ಬೆಳೆ ಬೆಳೆಸುವುದರಲ್ಲಿ ಸೋಲುವುದಿಲ್ಲ. ಆದರೆ ಅವನು ನಂಬಿಕೆಯಿಂದ ಖರೀದಿಸುವ  ನೆಡು ಸಾಮಾಗ್ರಿ ಬಹಳಷ್ಟು ಬಾರಿ ಮೋಸಮಾಡುತ್ತದೆ. ಅದೆಷ್ಟೂ ಜನ ಇಂತಹ ಮೋಸಗಳನ್ನು ಮಾಡಿ ತಮ್ಮ ಕಿಸೆ ತುಂಬಿಕೊಂಡು ಹೋದದ್ದು  ಇದೆ.

CLICK HERE TO CONTACT FOR SALES

Avertisement

ಹೇಗೆ ಸಸಿ – ಬೀಜ ಖರೀದಿ ಮಾಡಬೇಕು:

  • ಸಸಿ ಖರೀದಿ ಮಾಡುವವರಿಗೆ ಅವರದ್ದೇ ಆದ ಕೆಲವು ಹಕ್ಕುಗಳಿವೆ. ಅದು ಸಸ್ಯಮೂಲವನ್ನು ( mother plant sourace) ತಿಳಿದುಕೊಳ್ಳುವುದು.
  • ಇದನ್ನು ಬಹಿರಂಗ ಗೊಳಿಸುವುದು ನರ್ಸರಿ ಮಾಡುವವರ ಆದ್ಯ ಕರ್ತವ್ಯವಾಗಿದ್ದು, ಈ ವಿಷಯದಲ್ಲಿ ಉಢಾಫೆ ಮಾಡುವವರ ಜೊತೆ ವ್ಯವಹಾರ ಮಾಡಬೇಡಿ.
  • ಇಷ್ಟಕ್ಕೂ ಗ್ರಾಹಕರಾಗಿ ನೀವು ಅಪೇಕ್ಷೆ ಪಟ್ಟಲ್ಲಿ ಅವರು ಆಯ್ಕೆ ಮಾಡಿದ  ಮೂಲವನ್ನು ನಿಮಗೆ ತೋರಿಸಬೇಕು, ಇಲ್ಲವೇ ಫಸಲಿನ ಗ್ಯಾರಂಟಿ ಕೊಟ್ಟು, ಅದಕ್ಕೆ ಬಾಧ್ಯತೆಯನ್ನು ಅವರು ಹೊಂದಿರುವವರಾಗಬೇಕು.

Sapota plants with mother plants
ಈ ರೀತಿ ತಾಯಿ ಮರ ಕಣ್ಣೆದುರಿಗೆ ಇಟ್ಟುಕೊಂಡು ಸಸಿ ತಯಾರಿಸುವವರಿಂದ ಖರೀದಿ ಮಾಡಿ ಸಾಂದರ್ಭಿಕ ಚಿತ್ರ)

ಬಹಳಷ್ಟು ಜನ ಬೀಜ ಮಾರಾಟಗಾರರು , ಸಸಿ ಮಾರಾಟಗಾರರು ಎಲ್ಲೆಲ್ಲಿಂದಲೋ ಸಸಿಗಳನ್ನು ತಂದು ತಮ್ಮ ನರ್ಸರಿ  ಮೂಲಕ ಮಾರಾಟ ಮಾಡುತ್ತಾರೆ. ಇದಕ್ಕೆ ಯಾವುದೇ ಮೂಲದ ಗುರುತು ಇರುವುದಿಲ್ಲ.

  • ನಿಜವಾಗಿ ಒಂದು ಮಾವಿನ ಸಸಿಯನ್ನು ಮಾರುವುದಿದ್ದರೂ ಅದಕ್ಕೆ ಒಂದು  ಟ್ಯಾಗ್ ಹಾಕಿರಬೇಕು.
  • ಅವನ ನರ್ಸರಿಯಲ್ಲಿ ಅದರ  ತಾಯಿ ಮರ ಇರಬೇಕು.
  • ಈಗಿನ ಆಧುನಿಕ ತಾಂತ್ರಿಕತೆಯಲ್ಲಿ ಇದಕ್ಕೆ (QR code)  ಕೊಡುವುದು ಸೂಕ್ತ.
  • ಇದನ್ನು ಹಾಕಿ ಸಸಿ ಕೊಡುವ ನರ್ಸರಿಗಳೂ ಇವೆ. ಯಾವ ಮೂಲದ ಸಸಿ, ಅದಕ್ಕೆ ಎಷ್ಟು ತಲೆಮಾರು ಅಗಿದೆ, ಯಾವ ದಿನ ಕಸಿ ಮಾಡಲಾಗಿದೆ ಎಂಬೆಲ್ಲಾ ಅವಶ್ಯಕ ವಿವರಗಳು ಬೇಕು.
  • ಇದನ್ನು ಒದಗಿಸುವ ನರ್ಸರಿಗಳು ಬೆರಳೆಣಿಕೆಯಷ್ಟೂ ಇಲ್ಲ.

ಯಾವುದೇ ಸಸಿ ಅಥವಾ ಬೀಜಗಳನ್ನು  ಖರೀದಿ ಮಾಡುವಾಗ ಆ ಬೀಜ ತಯಾರಿಕಾ ಸಂಸ್ಥೆಯ ಬಗ್ಗೆ ತಿಳಿದಿರಬೇಕು.  ಅವರ ಅಧಿಕೃತ ಬೀಜವನ್ನು ಪ್ಯಾಕೇಟ್ ಸಹಿತ  ಖರೀದಿ ಮಾಡಿ, ಅದಕ್ಕೆ ಬಿಲ್ ಅನ್ನು ಪಡೆಯಲೇಬೇಕು.

  • ಸಸಿಗಳನ್ನು ಯಾವುದೇ ನರ್ಸರಿಯಿಂದ ಖರೀದಿ ಮಾಡುವಾಗ ಅವರೇ ಸಸಿ ತಯಾರಿಸುವರೇ ಅಥವಾ ಎಲ್ಲಿಂದಲಾದರೂ ತರುವವರೇ ಎಂದು ಗಮನಿಸಬೇಕು.
  • ಸಸ್ಯೋತ್ಪಾದಕರು ಅದು ಯಾವುದೇ ಸಸಿಯಾದರೂ ಅದರ ಮೂಲ ವನ್ನು ತಮ್ಮ ತಾಕಿನಲ್ಲಿ ಬೆಳೆಸಿರಬೇಕು.
  • ಅಂಗಾಂಶ ಕಸಿಯ ಸಸಿ ಮಾರುವವರೂ ಸಹ ಅದರ ಮೂಲವನ್ನು ಬೆಳೆಸಿರಬೇಕು.
  • ರಸ್ತೆ ಬದಿಯ ಸಸ್ಯ ವ್ಯಾಪಾರಿಗಳಿಂದ ಖರೀದಿ ಮಾಡುವಾಗ ಜಾಗರೂಕತೆ ವಹಿಸಿರಿ.
  • ಮನೆ ಮನೆಗೆ ಗಿಡ ತಂದು ಮಾರುವವರ ಮಾತಿಗೆ ಮರುಳಾಗದಿರಿ. ಯಾವುದೋ ಒಂದು ಫೊಟೋ ನೋಡಿ ನಂಬಿ ಕೆಡಬೇಡಿ.
  • ಇಂದಿಗೂ ನಮ್ಮಲ್ಲಿ ಉತ್ತಮ ಬೀಜಗಳ ಜೊತೆಗೆ ಕೆಲವು ಅಗ್ಗದ ಬೀಜಗಳನ್ನು ಹಾಕಿ ಮೋಸ ಮಾಡುವವರಿದ್ದಾರೆ.
  • ತೋಟದಲ್ಲಿ ಬಿದ್ದು ಮೊಳಕೆ ಬಂದ ಅಡಿಕೆ, ತೆಂಗು ಸಸಿಗಳನ್ನು ಮಾರುವವರೂ ಇದ್ದಾರೆ.
  • ಧೀರ್ಘಾವಧಿ ಬೆಳೆಗಳ ಸಸಿಗಳಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳಬೇಡಿ.
  • ಯಾವುದಿದ್ದರೂ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ.

BEWERE OF THIS TYPE OF PLANTING MATERIALS
ಈ ರೀತಿ ಎಲ್ಲೆಲ್ಲಿಂದಲೋ ಸಸಿ ತಂದು ಮಾರುವವರ ಬಗ್ಗೆ ಜಾಗರೂಕರಾಗಿರಿ (ಸಾಂದರ್ಭಿಕ ಚಿತ್ರ)

ಯಾವುದೇ ಕಾರಣಕ್ಕೆ ಸಸಿ ಖರೀದಿ ಮಾಡುವಾಗ ಅದರ ಮಾತೃ ಗಿಡವನ್ನು ನೋಡದೆ ಖರೀದಿ ಮಾಡಬೇಡಿ. ನರ್ಸರಿ ವ್ಯವಸ್ಥೆ ಮತ್ತು ಅಲ್ಲಿನ ಸಸಿಗಳ ಆರೋಗ್ಯವನ್ನು ಖುದ್ದು ಭೇಟಿ ಕೊಟ್ಟೇ  ವೀಕ್ಷಿಸಿ ಖರೀದಿ ಮಾಡಬೇಕು. ಪ್ರಮಾಣೀಕರಿಸದ ಬೀಜಗಳನ್ನು ಖರೀದಿಸಬೇಡಿ

  • ಧೀರ್ಘಾವಧಿ ಬೆಳೆಗಳ ಸಸಿಗಳನ್ನು (ಅಡಿಕೆ, ತೆಂಗು, ಸಾಂಬಾರ ಸಸ್ಯ, ಹಣ್ಣಿನ ಗಿಡ)ವನ್ನು ಖರೀದಿ   ಮಾಡುವಾಗಲೂ ವ್ಯಾವಹಾರಿಕ ನರ್ಸರಿಗಳ ಪೂರ್ವಾಪರವನ್ನು ತಿಳಿದುಕೊಳ್ಳಿ.
  • ಯಾವುದೇ ಕಾರಣಕ್ಕೆಅವರು ಬೀಜ ತರುವ ಮೂಲವನ್ನು ಬಹಿರಂಗ ಮಾಡದವರ ಕಡೆಯಿಂದ ಇಂತಹ ಸಸಿಗಳನ್ನು ಖರೀದಿ ಮಾಡಬೇಡಿ.
Tissue culture banana planting material
ಅಂಗಾಂಶ ಕಸಿಯ ಸಸಿ ಮಾರುವವರು ಸಹ ತಮ್ಮಲ್ಲಿ ಸಸಿ ಬೆಳೆಸಿ ಮಾರಾಟ ಮಾಡಬೇಕು(ಸಾಂದರ್ಭಿಕ ಚಿತ್ರ)

ಕಾನೂನಿನ ರಕ್ಷಣೆ:

  • ಕಾನೂನು ನೆಡು ಸಾಮಾಗ್ರಿ ಮೂಲದಲ್ಲಿ ರೈತರಿಗೆ ವಂಚನೆ ಆದರೆ ಶಿಕ್ಷೆ ವಿಧಿಸುವಷ್ಟು ಹೊರ ನೋಟಕ್ಕೆ ಬಲವಾಗಿದೆ. (Seeds Act and the Nursery Registration Act http://nhb.gov.in/documents/horticulture-nursery.pdf  )
  • ಆದರೆ ನೆಡು ಸಾಮಾಗ್ರಿ ಪೂರೈಕೆ ಮಾಡುವವರಿಗೆ ನುಸುಳಿಕೊಳ್ಳಲು ಬೇಕಾದಷ್ಟು ಅವಕಾಶಗಳನ್ನೂ ಇಟ್ಟಿದೆ.
  • ಆ ಕಾನೂನಿನ ಆಸರೆಯನ್ನು ಬಯಸಿದರೆ ರೈತನೇ ಸೋಲುವುದು.

ನೆಡು ಸಾಮಾಗ್ರಿ ಒದಗಿಸುವವರ ಬಾಧ್ಯತೆ:

  • ನರ್ಸರಿ  ಹಾಗೂ ಇನ್ನಿತರ  ನೆಡು ಸಾಮಾಗ್ರಿ ವ್ಯವಹಾರ ಇಟ್ಟುಕೊಂಡವರು ತಮ್ಮ ವ್ಯವಹಾರದಲ್ಲಿ ಸ್ವಲ್ಪ ನಿಯತ್ತನ್ನು ಇಟ್ಟುಕೊಳ್ಳಲೇ ಬೇಕು.
  • ಸಸಿಯನ್ನು ಕೊಟ್ಟೆವು ದುಡ್ಡು ಬಂತು ಎಂದು ಅಲ್ಲಿಗೆ ವ್ಯವಹಾರವನ್ನು ಬಿಡುವುದಲ್ಲ. ತ
  • ನ್ನ ಗ್ರಾಹಕನಿಗೆ ಕೆಲವು ಬೆಳೆ ಸೂಕ್ಷ್ಮಗಳನ್ನು ಹೇಳುವುದು ಅವನ ಬಾಧ್ಯತೆಯಾಗಿರಬೇಕು.
  • ಒಂದು ಬಾರಿ ಬಂದ ರೈತ ಮತ್ತೆ ಅವನ ಬಳಿಗೆ ಬರುವಂತೆ ತನ್ನ ವ್ಯವಹಾರವನ್ನು ಇರಿಸಿಕೊಂಡರೆ ನಂಬಿಕೆ ಎಂಬ ಶಬ್ಧಕ್ಕೆ ನೈಜ ಅರ್ಥ ಬರುತ್ತದೆ.

ರೈತರಾದವರು  ತಾವೇ ತಮಗೆ ಬೇಕಾದ ನೆಡು ಸಾಮಾಗ್ರಿಗಳನ್ನು  ತಾವೇ ಮಾಡಿಕೊಳ್ಳುವುದು ಉತ್ತಮ. ತಮ್ಮ ಪರಿಚಯದವರಿಂದ ಕೊಳ್ಳುವುದು ಮಧ್ಯಮ. ಗೊತ್ತು ಪರಿಚಯ ಇಲ್ಲದವರಿಂದ ಖರೀದಿ  ಮಾಡುವುದು ಯೊಗ್ಯವಲ್ಲ.
end of the article:—————————————-
serch words: Nurseries# planting materials # Plants# seeds# seed control# nursery act#  genuine Planting matirials #   certified seeds#
 
 

One thought on “ಬೀಜ – ಸಸಿ ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೆ ತಿಳಿದುಕೊಳ್ಳಿ.

Leave a Reply

Your email address will not be published. Required fields are marked *

error: Content is protected !!