ಬೇಗ ಮಳೆ ಬರುವ ಸೂಚನೆ ಇದೆ- ಎಚ್ಚರ.

ಕಳೆದ ಕೆಲವು ದಿನಗಳಿಂದ ಸುಡುಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಇದು ಮಳೆ ಬರುವ ಮುನ್ಸೂಚನೆಯಾಗಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾದಂತೆ ಮಳೆ ಬರುವ ಸಾಧ್ಯತೆ ಹೆಚ್ಚು.

  • ನಮ್ಮ  ಹಿರಿಯರು  ಕೆಲವು  ಹವಾಮಾನ ಮುನ್ಸೂಚನೆಗಳನ್ನು ಹೇಳಿದ್ದಾರೆ.
  • ಗಣಪತಿ ಜಾತ್ರೆಯ ಓಕುಳಿಯಂದು ಮಳೆ ಬರುತ್ತದೆ.
  • ಧರ್ಮಸ್ಥಳ ದೀಪೋತ್ಸವದಂದು ಮಳೆ ಬರುತ್ತದೆ.
  • ಹಾಗೆಯೇ ಇನ್ನೂ ಕೆಲವು ವಿಷೇಶ ದಿನಗಳ ಸಂಧರ್ಭದಲ್ಲಿ ಮಳೆ ಬರುವ ಸೂಚನೆಯನ್ನು ಕೊಟ್ಟಿದ್ದಾರೆ.
  • ಅದು ಸುಮ್ಮನೆ ಅಲ್ಲ. ಸಾಮಾನ್ಯವಾಗಿ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ  ಇದು ನಿಜವಾಗುತ್ತದೆ.

ಮಳೆಯ ಈ ಮುನ್ಸೂಚನೆಯು ಹವಾಮಾನಕ್ಕೂ ಒಂದು ಸಂಬಂಧ ಇದೆ. ಆದ ಕಾರಣ ಮಳೆ ಬರುತ್ತಿತ್ತು.

ಈಗ  ಮಳೆ ಬರಬಹುದು:

  • ಕುಂಭ ಮಾಸದ ತರುವಾಯ ಮಳೆಗಾಲ ಇದು ನಮ್ಮ ಹಿರಿಯರು ಹಾಕಿಕೊಟ್ಟ ಮಳೆ ಕ್ಯಾಲೆಂಡರ್.
  • ಕುಂಭ ಮಾಸ ಕಳೆದು ಮೀನ ಮಾಸ ಬಂದಿದೆ. ಕುಂಭ ಮಾಸದಲ್ಲೂ ಮಳೆ ಬಂದಿದೆ.
  • ಮೀನ ಮಾಸದಲ್ಲೂ  ಮಳೆ ಆಗಿದೆ. ಇದು ಇನ್ನೂ ಮುಂದುವರಿಯಲಿದೆ.

ವಾತಾವರಣದ ಬಿಸಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ದಿನದ ತಾಪಮಾನ  ಏರಿಕೆಯಾಗುತ್ತಲೇ ಇದೆ  ದಿನಾಂಕ-17  ರಂದು ಗರಿಷ್ಟ ತಾಪಮಾನ 40 ಡಿಗ್ರೀ ತನಕ ಹೋಗಿದೆ.  ಈ ದಿನವೂ 40 ಡಿಗ್ರಿ ದಾಟಿದೆ.  ಇದು ಹಾಗೆಯೇ ಮುಂದುವರಿದಿದ್ದು ಅಲ್ಲಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದೆ.

  • ಕರಾವಳಿಯ ಒಳನಾಡಿನಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸುಮಾರಾಗಿ ಪ್ರತೀ ದಿನ ಅಲ್ಲಲ್ಲಿ  ಮಳೆಯ ಸಿಂಚನವಾಗುತ್ತಿದೆ.
  • ಬಿಸಿಲಿನ ಪ್ರಖರತೆ  ಈ ವರ್ಷ  40 ರಿಂದ   42 ಡಿಗ್ರಿ  ತನಕ ಏರುವ ಸೂಚನೆ ಇದೆ.
  • ಸಸ್ಯಗಳು ಮಳೆ ಬರುವ ಮುನ್ಸೂಚನೆಯನ್ನು  ತಮ್ಮ ಎಲೆಗಳ ಮೂಲಕ ತೋರ್ಪಡಿಸುತ್ತಿವೆ.
  • ಕೆಲವು ಉನ್ನತ ಸ್ಥರದ ಸಸ್ಯಗಳ ಎಲೆಯಲ್ಲೂ ಸೂರ್ಯ ರಶ್ಮಿಯ ಘ್ಹಾಸಿ ಕಂಡುಬರುತ್ತದೆ.

ಮಳೆಗಾಲ ಬೇಗ ಬರಬಹುದು:

  • ಕಳೆದ ವರ್ಷಕ್ಕೆ ಹೋಲಿಸಿದರೆ  ಈ ವರ್ಷ  ವಾತಾವರಣದ ಬಿಸಿ ಜಾಸ್ತಿಯಾಗಿದೆ.
  • %

error: Content is protected !!