ಸಸ್ಯ ಪೀಳಿಗೆಗೆ ಮರು ಜೀವ ಕೊಡುವ ಕಸಿ ಗುರುಗಳು.

ಉಡುಪಿಯ ಪೆರ್ಡೂರು ಸಮೀಪ ಗುರುರಾಜ ಬಾಲ್ತಿಲ್ಲಾಯ ಎಂಬ ಕಸಿ ತಜ್ಞ ಮಾಡದ ಕಸಿ ಇಲ್ಲ. ಇವರು ಸಸ್ಯಾಭಿವೃದ್ದಿಯಅಥವಾ ಕಸಿಗಾರಿಕೆಯ  ತಜ್ಞನೂ ಅಲ್ಲದೆ ಒಬ್ಬ ಸಸ್ಯ ಸಂರಕ್ಷಕನೂ ಹೌದು. ಇವರ ಕೈಯಲ್ಲಿ ಮರುಜೀವ ಪಡೆದ ಅದೆಷ್ಟೋ ಅಳಿದು ಹೋದ ತಳಿಗಳಿವೆ.

  • ಸಸ್ಯದ ಒಂದು ಮೊಗ್ಗು ಸಿಕ್ಕರೂ ಸಾಕು ಹೇಗಾದರೂ ಅದನ್ನು ಕಸಿ ಮಾಡಿ ಮರು ಜೀವ ಕೊಡಬಹುದು ಎನ್ನುತ್ತಾರೆ.
  • ಸುಮಾರು 25 ಕ್ಕೂ ಹೆಚ್ಚು ವಿಧಾನದಲ್ಲಿ ಕಸಿಮಾಡುವ ತಂತ್ರವನ್ನು ಇವರು ಕರಗತ ಮಾಡಿಕೊಂಡಿದ್ದಾರೆ.

ನಿಮ್ಮ ಹೊಲದಲ್ಲಿ ಒಂದು ವಿಶಿಷ್ಟ  ಗುಣದ  ಮಾವಿನ, ಅಥವಾ ಹಲಸಿನ ಅಥವಾ ಇನ್ಯಾವುದೋ ಅಪರೂಪದ  ಫಲಕೊಡುವ  ಮರ ಇದೆ. ಅದನ್ನು ಅನಿವಾರ್ಯವಾಗಿ ಕಡಿಯಲೇ ಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಬಾಳ್ತಿಲ್ಲಾಯರಂತಹ ಒಬ್ಬ ಕಸಿ ತಜ್ಞ ಇದ್ದರೆ ಅಂತವರಿಂದ ಆ ಮರದ ಪೀಳಿಗೆಯನ್ನು ಉಳಿಸಬಹುದು.

  • ಇಂತವರು ಊರೂರಿಗೆ ಒಬ್ಬೊಬ್ಬ ಇದ್ದರೆ ಮರ ಮಟ್ಟು ಹೋದರೂ ಅದರ ಪೀಳಿಗೆ ಅಳಿಯುತ್ತಿರಲಿಲ್ಲ.
  • ನಮ್ಮ ಸುತ್ತಮುತ್ತ ಕಾಡಿನಲ್ಲಿ, ಮನೆ ಹಿತ್ತಲಲ್ಲಿ ಇದ್ದ ಅದೆಷ್ಟೂ ವಿಶೇಷ ಗುಣದ ಹಣ್ಣು ಹಂಪಲು, ಔಷಧೀಯ ಸಸ್ಯಗಳು ಇಂದು ಕಾಣದಾಗುತ್ತಿದೆ.
  • ನಮಗೆ ಅದನ್ನು  ಉಳಿಸಿಕೊಳ್ಳುವ ಬಗ್ಗೆ ತಿಳುವಳಿಕೆಯೂ  ಇರಲಿಲ್ಲ.  ಉಳಿಸಿಕೊಳ್ಳುವ ವಿಧಾನವೂ ಗೊತ್ತಿರಲಿಲ್ಲ.
  • ಉಳಿಸಿಕೊಡುವವರೂ ವಿರಳವಾಗಿದ್ದರು.

ಬಾಳ್ತಿಲ್ಲಾಯರು ಒಬ್ಬ ಕಸಿ ಪರಿಣತ:

  • ಇವರದ್ದು ಕಸಿಗಾರಿಕೆಯಲ್ಲಿ ಮೂರು ದಶಕಕ್ಕೂ ಹೆಚ್ಚಿನ ಅನುಭವ.
  • 1990  ಇಸವಿಯಲ್ಲಿಯೇ ಕಸಿ  ಮಾಡುವ ಕಲೆಯನ್ನು ಕಲಿತುಕೊಂಡರು.
  • ಇದನ್ನು ಮತ್ತೆ ತಮ್ಮ ವೃತ್ತಿ ಜೀವನದಲ್ಲಿ ಬೇಕಾದಂತೆ ಸಣ್ಣ ಪುಟ್ಟ ಬದಲಾವಣೆ ಮಾಡುತ್ತಾ ಅದರಲ್ಲಿ ನೈಪುಣ್ಯತೆಯನ್ನು ಗಳಿಸಿದರು.

ಮೃದುಕಾಂಡ ಕಸಿ, ಕಣ್ಣು ಕಸಿ, ವಾಟೆ ಕಸಿ, ಸಾಮಿಪ್ಯ ಕಸಿ, ತೊಗಟೆ ಕಸಿ ಹೀಗೆ ಗಚ್ಚು ಕಸಿ ಹೀಗೆ ಎಲ್ಲಿಗೆ ಯಾವುದು ಸೂಕ್ತವೋ ಅದಕ್ಕನುಗುಣವಾಗಿ ಕಸಿ ಮಾಡಬಲ್ಲರು.

  • ಬಾಳ್ತಿಲ್ಲಾಯರದ್ದು, ಹಣ್ಣು ಹಂಪಲು, ಮುಂತಾದ ಸಸ್ಯಗಳ ಕಸಿ ವೃತ್ತಿ.
  • ಇಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು , ಹೂವಿನ ಸಸ್ಯಗಳು ಇವೆಲ್ಲಾ ಇಲ್ಲ.
  • ಏನಿದ್ದರೂ ಅದು ಹಣ್ಣು ಹಂಪಲುಗಳು ಮಾತ್ರ.
  • ಅಪರೂಪದ ಯಾವ ಹಣ್ಣು ಹಂಪಲುಗಳಿದ್ದರೂ ಬಾಳ್ತಿಲ್ಲಾಯರಲ್ಲಿ ಇರುತ್ತದೆ.
  • ಹಿಂದಿನಿಂದಲೂ ಹಲಸು ಮಾವು, ಚಿಕ್ಕು ಮುಂತಾದ ಸಸ್ಯಗಳ ಕಸಿ ಮಾಡುತ್ತಿದ್ದರು.
  • ಈಗಾಲೂ ಅದನ್ನೇ ಮಾಡುತ್ತಾರೆ. ವ್ಯಾವಹಾರಿಕ ನರ್ಸರಿ ಅಲ್ಲ.

ವನಶ್ರೀ ಪ್ಲಾನ್ಟ್ ಕ್ಯಾರ್ ( Vanshri plant care) ಇದು ಇವರ ಸಸ್ಯೋತ್ಪಾದನಾ  ಕೇಂದ್ರದ ಹೆಸರು. ಇವರೊಬ್ಬ ಸಸ್ಯ ಪ್ರಿಯ. ಆ ಪ್ರೀತಿಯನ್ನು ಎಲ್ಲೂ ಬಿಟ್ಟು ಕೊಟ್ಟವರಲ್ಲ. ಅದಕ್ಕಾಗಿಯೇ ಈ ಹೆಸರು.

  • ಬಹಳಷ್ಟು ಜನ ಸಸ್ಯ ಪ್ರಿಯರು ತಮ್ಮಲ್ಲಿ ಯಾವುದಾದರೂ  ಅಪರೂಪದ ಸಸ್ಯಗಳಿದ್ದರೆ ಅದರ ಸಸ್ಯಾಭಿವೃದ್ದಿಗೆ ಬಾಳ್ತಿಲ್ಲಾಯರನ್ನು ಸಂಪರ್ಕಿಸುತ್ತಾರೆ.
  • ಕೆಲವರು  ವಿದೇಶಗಳಿಗೆ ಹೋದಾಗ ಅಲ್ಲಿಂದ ಯಾವುದಾದರೂ  ಗೆಲ್ಲು ತಂದರೂ ಸಹ ಅದರ ಸಸ್ಯಾಭಿವೃದ್ದಿಗೆ ಇವರನ್ನು ಸಂಪರ್ಕಿಸುತ್ತಾರೆ.
  • ಬಾಳ್ತಿಲ್ಲಾಯರಲ್ಲಿ ಆಗದ ಕಸಿಗಾರಿಕೆ ಬೇರೆಯವರಿಂದ ಆಗಲಿಕ್ಕಿಲ್ಲ ಎಂಬುದು ಜನ ಆಡಿಕೊಳ್ಳುವ ಮಾತು.
  • ಇಷ್ಟೇ ಅಲ್ಲದೆ ಇವರಲ್ಲಿ ಒಂದು ನಿಯತ್ತು ಇದೆ. ಯಾಅರೋ ಕಸಿ ಮಾಡಲು ಕೊಟ್ಟ ಸಸ್ಯವನ್ನು ಅವರ ಅನುಮತಿ ಇಲ್ಲದೆ ಬೇರೆಯವರಿಗೆ ಕೊಡಲಾರರು.

ಇವರ ಕಸಿಗಾರಿಕೆಗೆಗೆ ಮಣ್ಣಣೆ:

  • ಬಾಳ್ತಿಲ್ಲಾಯರ ಕಸಿ ತಂತ್ರಗಾರಿಕೆ ಮತ್ತು ಸಸ್ಯ ಪ್ರೀತಿಯನ್ನು ಗುರುತಿಸದವರೇ ಇಲ್ಲ.
  • ಬಹಳ ಹಿಂದಿನಿಂದಲೂ  ಕರ್ನಾಟಕದ ಬಹುತೇಕ ನರ್ಸರಿಗಳು  ಇವರಲ್ಲಿ ಉತ್ಪಾದನೆಯಾಗುವ ಸಸಿಗಳನ್ನು ಖರೀದಿಸಿ ಮಾರಾಟ ಮಾಡುತ್ತಿರುವುದೂ ಉಂಟು.
  • ವಿಶೇಷವಾಗಿ  ಬೆಂಗಳೂರು ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆ ಯು ಬಿಡುಗಡೆ ಮಾಡಿದ ಸಿದ್ದು,  ಮತ್ತು ಶಂಕರ ಹಲಸಿನ ಸಸ್ಯಾಭಿವೃದ್ಧಿ ಇವರ ನರ್ಸರಿಯಲ್ಲೇ ನಡೆಯುತ್ತದೆ.
  • ವರ್ಷಕ್ಕೆ ಒಂದಷ್ಟು ಸಸ್ಯಗಳನ್ನು ಇವರು ಉತ್ಪಾದಿಸಿ ಅವರಿಗೆ ಕೊಡುತ್ತಾರೆ.
  • ಇವರ ಸಸ್ಯ ಪ್ರೀತಿ ಹಲವು ಸಸ್ಯ ಸಂಪತ್ತಿನ ಉಳಿವಿಗೆ ಕಾರಣವಾಗಿದೆ.
  • ಅವರ ಈ ವೃತ್ತಿ ಜೀವನೋಪಾಯದ ಜೊತೆಗೆ  ಪರಿಸರ ಕಾಳಜಿಯದ್ದೂ ಆಗಿದೆ.
ಸಸ್ಯ ಮೂಲಗಳ ಸಂಗ್ರಹ ( Germplasam collection)

 ಬಾಳ್ತಿಲ್ಲಾಯರ ಸಸ್ಯ ಕ್ಷೇತ್ರದಲ್ಲಿ ಹಲವಾರು ವಿಧದ ಸಸ್ಯಗಳಿವೆ. ಹಲವಾರು ಹಲಸು ಸಸಿಗಳು, ವಿದೇಶೀ ಹಣ್ಣುಗಳು, ಮಾವು ಹೆಸರು ಪಡೆದ ( ಮಲ್ಲಿಕಾ ಕಾಲಪ್ಪಾಡಿ, ರತ್ನ ಮುಂತಾದ)  ಮಾವೂ ಅಲ್ಲದೆ ಕಾಡು ಮಾವಿನ ಸಸ್ಯಗಳ ಇಲ್ಲಿವೆ. ಬಟರ್ ಪ್ರುಟ್, ರೋಸ್ ಆಪಲ್, ವುಡ್ ಆಪಲ್, ಲಿಂಬೆ, ಅಪರೂಪದ ಪೇರಳೆ ಹೀಗೆ ಹಲವಾರು ವಿಧದ ಸಸ್ಯಗಳ ಸಯೋತ್ಪಾದನೆಯನ್ನು ಖುದ್ದು ಬಾಳ್ತಿಲ್ಲಾಯರೇ ಮಾಡುತ್ತಾರೆ.

ಬಾಳ್ತಿಲ್ಲಾಯರಂತಹ ಸಸ್ಯ ಸಂರಕ್ಷಕರು ನಮ್ಮಲ್ಲಿ ಇನ್ನಷ್ಟು ಜನ ಬರಬೇಕು.  ಇವರನ್ನು ಬಳಸಿಕೊಂಡು ಸಂಶೋಧಾನ ಕೇಂದ್ರಗಳು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿವೆ. ಇವರ ಸಸ್ಯ ಪ್ರೇಮ ಮತ್ತು ಕಳಕಳಿಯನ್ನು ನಾವು ಗೌರವಿಸಬೇಕಾಗಿದೆ. 

 
ಸಂಪರ್ಕಕ್ಕಾಗಿ: ಗುರುರಾಜ ಬಾಲ್ತಿಲ್ಲಾಯರು: 9731734688
 

Leave a Reply

Your email address will not be published. Required fields are marked *

error: Content is protected !!