ಅಡಿಕೆ ಬೆಲೆ ಕುಸಿಯುವ ಆತಂಕ ಇದೆ.

ಕ್ಯಾಂಪ್ಕೋ ಸಂಸ್ಥೆ, ಹಾಗೂ ಕೆಲವು ಖಾಸಗಿ ವ್ಯಾಪಾರಿಗಳು ಚಾಲಿ ಅಡಿಕೆ ಖರೀದಿಯ ಉತ್ಸಾಹದಲ್ಲಿದ್ದಾರೆ.  ಅತ್ತ ಕೆಂಪಡಿಕೆ ವ್ಯವಹಾರದಲ್ಲಿ ಶಿರಸ್ಸಿಯ TSS  ವ್ಯಾಪಾರಕ್ಕೆ ಇಳಿದು ಚಾಲಿಗೆ 32,000 ದಾಟಿಸಿ ಕೆಲವೇ ದಿನಗಳಲ್ಲಿ ಮತ್ತೆ 26,000 ಕ್ಕೆ ಇಳಿಸಿದೆ. ಎಲ್ಲಿಯೂ ಅಡಿಕೆ ಟೆಂಡರ್ ಆಗಿ ಮಾರಾಟ ಆಗಿಲ್ಲ. ಇದು ಬೆಲೆ ಸ್ಥಿತರೆಯ ಬಗ್ಗೆ ಆತಂಕ ಉಂಟು ಮಾಡುತ್ತಿದೆ.

  • ಕೆಂಪಡಿಕೆಗೆ ನಾಲ್ಕು ದಿನಕ್ಕೆ ಹಿಂದೆ 32,000 ಕ್ಕೆ ಒಂದು ಬಿಡ್ಡಿಂಗ್ ನಡೆಯುವುದರಲ್ಲಿತ್ತು.
  • ಆದರೆ  ಕೆಲವು ದೊಡ್ಡ ವ್ಯಾಪಾರೀ  ಕುಳಗಳ ಒತ್ತಡದಿಂದ ಅದು ನಡೆಯದೆ ಬಾಕಿಯಾಗಿದೆ.
  • ಯಾವಾಗದಿಂದ ಬಿಡ್ಡಿಂಗ್ ಪ್ರಾರಂಭವಾದೀತು ಎಂಬುದು ವ್ಯಾಪಾರಿಗಳ ಆಸಕ್ತಿಯ ಮೇಲೆ ನಿಂತಿದೆ.
  • ಈ ಮಧ್ಯೆ ಮೇ. 11 ಕ್ಕೆ ಮ್ಯಾಂಮ್ಕೋಸ್ ಅಡಿಕೆ ಖರೀದಿ ಪ್ರಾರಂಭಿಸಲಿದೆ ಎಂಬ ಸುದ್ದಿ ಇದೆ.

  ಯಾವ ದರಕ್ಕೆ ಖರೀದಿ ಪ್ರಾರಂಭವಾಗುತ್ತದೆ, ಅಂದೇ  ಏನಾದರೂ ಬಿಡ್ಡಿಂಗ್ ನಡೆಯುತ್ತದೆಯೋ , ಅಥವಾ ಮತ್ತೆ ಒಂದು ವಾರ ಮುಂದಕ್ಕೆ ಹೋಗುತ್ತದೆಯೋ ಕಾದು ನೋಡಬೇಕಿದೆ.

ಯಾಕೆ ಅರ್ಧ ಮಾರುವುದು ಸೂಕ್ತ:

  • ಕೆಂಪಡಿಕೆಯ ಕ್ಲೋಸಿಂಗ್  ಧಾರಣೆ 41,000 ಆಗಿತ್ತು. ಅದೇ ದರದಲ್ಲಿ ಖರೀದಿ ನಡೆಯುವ ಸಾಧ್ಯತೆ ಬಹುತೇಕ ಇಲ್ಲ ಎಂಬುದು ಮೊನ್ನೆ ದರ ಮುಹೂರ್ತ ಆದಾಗ ಗೊತ್ತಾಗಿದೆ.
  • 32,000 ಕ್ಕೇ ದರ ನಿರ್ಧರಣೆ ಆಗುತ್ತದೆಯೋ ಅಥವಾ ಇನ್ನೂ ಕೆಳಗೆ ಬರುತ್ತದೆಯೋ ಯಾರಿಗೂ ಗೊತ್ತಿಲ್ಲ.
  • ಬೆಲೆ ಕಡಿಮೆಯಾದರೆ  ಬೆಳೆಗಾರರು ಭಯದಿಂದ ಭಾರೀ ಪ್ರಮಾಣದಲ್ಲಿ ಮಾರಾಟ ಮಾಡುವುದಂತೂ ನಿಶ್ಚಿತ.
  •   ಆಗ ಮತ್ತಷ್ಟು ದರ ಕುಸಿಯುತ್ತದೆ.  ಕೆಂಪಡಿಕೆಯ ಬೆಲೆ ಕುಸಿತವಾದರೆ ಸಹಜವಾಗಿ ಚಾಲಿಯ ದರ ಕೆಳಕ್ಕೆ ಬರುತ್ತದೆ.
  • ಎಲ್ಲಾ ಚಾಲಿಯೂ ಕಚ್ಚಾ ಸುಪಾರಿಯಾಗಿ ಬಳಕೆಗೆ ಹೋಗುವುದಿಲ್ಲ.
  • ಈಗ ಚಾಲಿ ಪ್ರಮಾಣ ಹಿಂದಿಗಿಂತ ದುಪ್ಪಟ್ಟು ಹೆಚ್ಚು ಇದ್ದು, ಗುಟ್ಕಾಕ್ಕೇ  ಹೆಚ್ಚಿನ ಪ್ರಮಾಣದಲ್ಲಿ ಚಾಲಿ ಬಳಕೆಯಾಗುತ್ತದೆ.
  • ಕಾರಣ ಗುಟ್ಕಾ ತಯಾರಿಕೆಯಲ್ಲಿ ಕೆಂಪಡಿಕೆಗೆ ಪ್ರಥಮ ಪ್ರಾಶಸ್ತ್ಯ.  ನಂತರ ಚಾಲಿಯದ್ದು. ಆದ ಕಾರಣ ಚಾಲಿಯ ಬೆಲೆಯಲ್ಲೂ ಇಳಿಕೆ ಸಾಧ್ಯತೆ ಇಲ್ಲದಿಲ್ಲ.
  • ಇದರ ಒಂದು ಸಣ್ಣ ಸೂಚನೆ ಶಿರಸಿಯಲ್ಲಿ ಬೆಳೆಗಾರರಿಗೆ ಅಡಿಕೆ  ಮಾರಾಟಕ್ಕೆ ತರಬೇಡಿ ಎಂಬುದಾಗಿ ಹೇಳುತ್ತಿದ್ದಾರೆ.

ಎಲ್ಲಿ ತನಕ ದರ ಇಳಿಕೆ ಆಗಬಹುದು:

ಖರೀದಿದರಾರಲ್ಲಿ ಅಂತಹ ದಾಸ್ತಾನು ಇಲ್ಲ.
  • ಅಡಿಕೆ ವ್ಯವಹಾರದಲ್ಲಿ ದರ ಏರಿಕೆ ಆಗುವುದು ಬೆಳೆಗಾರರಲ್ಲಿ ಅಡಿಕೆ ಇದ್ದಾಗ ಅಲ್ಲ.
  • ಯಾವ ವರ್ಷ ಅಡಿಕೆಯ ಉತ್ಪಾದನೆ ಕಡಿಮೆ ಇರುತ್ತದೆಯೋ ಆ ವರ್ಷ ಅಡಿಕೆಗೆ ಬೆಲೆ ಏರಿಕೆ ಅಗುವುದಿಲ್ಲ.
  • ಯಾವಾಗ ಹೆಚ್ಚು ಇರುತ್ತದೆಯೋ ಆಗ ಬೆಲೆ ಏರಿಕೆ ಆಗುತ್ತದೆ. ಇದರ ಅರ್ಥ ಅಡಿಕೆಯ  ದಾಸ್ತಾನು ವ್ಯಾಪಾರಿಗಳ ಕೈಯಲ್ಲಿ ಆಗಬೇಕು.
  • ಅಗ ಬೆಲೆ ಏರಿಕೆ ಪ್ರಾರಂಭವಾಗುತ್ತದೆ.

ಈಗ ವ್ಯಾಪಾರಿಗಳು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಬೆಳೆಗಾರರ ದಾಸ್ತಾನನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಬೆಳೆಗಾರರಲ್ಲಿ ಅಡಿಕೆ ಮುಗಿಯುವ ತನಕ ದರ ಏರಿಕೆ ಮಾಡುವ ಸುದ್ದಿಗೇ ಹೋಗುವುದಿಲ್ಲ. ಇದು ಸುಮಾರು 2-4  ತಿಂಗಳ ತನಕವೂ ಮುಂದುವರಿಯುತ್ತದೆ. ಅಷ್ಟು ಸಮಯ ಹಣಕಾಸಿನ ಅಡಚಣೆ ನೀಗಿಸಲು ಅರ್ಧ  ಪಾಲು ಅಡಿಕೆಯನ್ನು ಮಾರಾಟ ಮಾಡುವುದು ಉತ್ತಮ.

ವ್ಯಾಪಾರಿಗಳಿಗೆ ಬೆಲೆ ಇಳಿಕೆ ಅಗತ್ಯ:

  • ಅಡಿಕೆ ವ್ಯಾಪಾರಿಗಳಿಗೂ ಈಗ ಕಡಿಮೆ ಬೆಲೆಗೆ ಅಡಿಕೆ ಬೇಕು.
  • ಕಾರಣ ಈಗ ಹಿಂದೆ ಖರೀದಿ ಮಾಡಿ ಉತ್ತರ ಭಾರತಕ್ಕೆ ಕಳುಹಿಸಿದ ಅಡಿಕೆಯ ಹಣ ಬಂದಿಲ್ಲ.
  • ಅದು ಬರಬೇಕಾದರೆ ಕೆಲವು ಚರ್ಚೆಗಳು ಆಗಿ ಕೊನೆಗೆ ಕಡಿಮೆ ದರಕ್ಕೆ ಒಪ್ಪಿಕೊಳ್ಳಲೇ ಬೇಕು.
  • ಆ ನಷ್ಟವನ್ನು ಹೊಂದಿಸಲು ಈಗ ಕಡಿಮೆ ದರದಲ್ಲಿ ಅಡಿಕೆ ಖರೀದಿ ನಡೆಸಬೇಕು.
  • ಅಷ್ಟೇ ಅಲ್ಲ. ಮುಂದಕ್ಕೆ ದಾಸ್ತಾನು ಇಟ್ಟುಕೊಂಡು ಪೂರೈಕೆಯಲ್ಲಿ  ಕೊರತೆಯನ್ನು ಸೃಷ್ಟಿಸಿ ಮತ್ತೆ ದರ ಏರಿಕೆ ಮಾಡಿ ಎಲ್ಲಾ ನಷ್ಟವನ್ನು  ಹೊಂದಿಸಿಕೊಳ್ಳಬೇಕು.

ಈಗ ಯಾಕೆ ಬೆಲೆ ಏರಿದೆ?

  • ಚಾಲಿ ಅಡಿಕೆ ಪೂರ್ತಿಯಾಗಿ ಕಚ್ಚಾ ಸುಪಾರಿಯಾಗಿ ಪಾನ್ ಬೀಡಾ ಕ್ಕೆ ಬಳಕೆಯಾಗುದು ಎಂಬುದು ಸುಳ್ಳು ಸುದ್ದಿ.
  • ಇದರಲ್ಲಿ ಮೋರಾ – ಮೋಟಿ ವರ್ಗದ ಅಡಿಕೆ ಮಾತ್ರ ಅದಕ್ಕೆ ಬಳಕೆಯಾಗುತ್ತದೆ.
  • ಉಳಿದವು ಗುಟ್ಕಾಕ್ಕೆ ಬಳಕೆಯಾಗುವಂತದ್ದು. ಅಲ್ಲಿಯೂ ಹಿಂದಿನ ವ್ಯವಹಾರದ ಹಣ ವಸೂಲಾತಿ ಆಗಿಲ್ಲ.
  • “ಪೈಸೆ ಬರುವುದಿಲ್ಲ” ಎಂಬ ಮಾತುಗಳೇ ಇದರ ಸೂಚನೆ.
  • ತರ್ಕಗಳು ನಡೆದು ಕಡಿಮೆ ಬೆಲೆಗೆ ವ್ಯವಹಾರ ತೀರಿಸಿ, ದಾಸ್ತಾನು ಇಟ್ಟು ಮತ್ತೆ ಏರಿಕೆ ಮಾಡುವ ವ್ಯಾಪಾರ ತಂತ್ರವು ಚಾಲಿಯಲ್ಲೂ ಇದೆ.

ಬೆಲೆ  ಏರುತ್ತದೆ, ತಡವಾಗಿ:

  • ಬೆಳೆಗಾರರಿಂದ ಗರಿಷ್ಟ ಅಡಿಕೆಯನ್ನು ಸಂಗ್ರಹಿಸುವ ಉದ್ದೇಶದಿಂದ ಈಗ ಬೆಲೆ ಏರಿಕೆ ಮಾಡಲಾಗುತ್ತಿದೆ.
  • ಬೆಲೆ ಏರಿಕೆ ಆದರೆ ಅಡಿಕೆ ಬರುವುದಿಲ್ಲ ಎಂಬುದು ಎಲ್ಲಾ ವ್ಯಾಪಾರಿಗಳಿಗೂ ಗೊತ್ತು.
  • ಬರುವಿಕೆಯ ಪ್ರಮಾಣ ಅಷ್ಟು ಇರುವುದಿಲ್ಲ ಹೆಚ್ಚಿನ ಬೆಳೆಗಾರರೂ ಕಾದು ನೊಡುತ್ತಾರೆ.
  • ಬೆಲೆ ಏರಿಕೆ ಮಾಡಿ ತಕ್ಷಣ   ಸ್ವಲ್ಪ ಇಳಿಕೆ ಸಹಜವಾಗಿ ಮಾಡುತ್ತಾರೆ.
  • ಆಗ ಅಡಿಕೆ ಬರುತ್ತದೆ. ಹಾಗೆಯೇ ಸ್ವಲ್ಪ ಸ್ವಲ್ಪ ಇಳಿಕೆ ಮಾಡುತ್ತಾ ತಮ್ಮ ದಾಸ್ತಾನು ಹೆಚ್ಚಿಸಿ ಮತ್ತೆ  ಉತ್ತರ ಭಾರತದ ಖರೀದಿದರಾರರ ಜೊತೆ ಕೊರತೆಯ ವ್ಯಾಪಾರ ಮಾಡುತ್ತಾರೆ.
  • ಆದ ಕಾರಣ ಈಗ ಏರಿದ ಬೆಲೆ ಸ್ವಲ್ಪ ಇಳಿಯಬಹುದು. ಹಾಗೆಯೇ ಕೆಲವು ತಿಂಗಳ ನಂತರ ಭಾರೀ ಏರಿಕೆಯೂ ಆಗಬಹುದು.

ಬೆಳೆಗಾರರು ಅಡಿಕೆಗೆ ಬೆಲೆ ಇನ್ನೂ ಇನ್ನೂ ಏರುತ್ತದೆ. 350  ಈ ವರ್ಷದ  ಟಾರ್ಗೆಟ್ ಎಂದು ಸ್ವಲ್ಪವೂ  ಮಾರಾಟ ಮಾಡದೆ ಇರಬೇಡಿ. ಮಾರುಕಟ್ಟೆಯಲ್ಲಿ ಅಡಿಕೆ ಇಲ್ಲ ಎಂಬುದು ಸತ್ಯವಲ್ಲ. ದರ ಇಳಿದು ಏರಿಕೆಯಾಗಲು 3-4 ತಿಂಗಳೂ ಆಗಬಹುದು. ಆದ ಕಾರಣ ಸ್ವಲ್ಪ ಮಾರಾಟ ಮಾಡುವುದು ಸೂಕ್ತ.

 

Leave a Reply

Your email address will not be published. Required fields are marked *

error: Content is protected !!