ಕೃಷಿ ಗಣತಿ 2022 ನೇ ಇಸವಿಯಲ್ಲಿ ಇದೆ.

ಕೃಷಿ ಗಣತಿ 2022

ಭಾರತ ಸರಕಾರವು  ಪ್ರತೀ 5 –ವರ್ಷಕ್ಕೊಮ್ಮೆ ಕೃಷಿ ಗಣತಿಯನ್ನು ಮಾಡುತ್ತಾ ಬಂದಿದೆ. ಈ ಹಿಂದೆ 2015-16 ರಲ್ಲಿ 10 ನೇ ಕೃಷಿ ಗಣತಿ ನಡೆದಿದ್ದು, ಈ ವರ್ಷ 2022-23 ರಲ್ಲಿ 11 ನೇ ಕೃಷಿ ಗಣತಿ ನಡೆಯಲಿದೆ.ಇದನ್ನು ಯಾಕೆ ಮಾಡುತ್ತಾರೆ, ಹೇಗೆ ಮಾಡಿದರೆ ಒಳ್ಳೆಯದು?

ನಮ್ಮ ದೇಶದಲಿ ಇನ್ನೂ 50% ಕ್ಕಿಂತಲೂ ಹೆಚ್ಚಿನ ಜನ ಕೃಷಿಯನ್ನು  ಜೀವನೋಪಾಯಕ್ಕಾಗಿ ಅವಲಂಭಿಸಿದ್ದಾರೆ. ಹೀಗಿರುವಾಗ ಕೃಷಿ ಸಂಬಂಧಿತ ಯಾವುದೇ ಯೋಜನೆ ನೀತಿ ನಿಯಮಾವಳಿಗಳನ್ನು  ತಯಾರಿಸುವಾಗ ಈ ಗಣತಿ ಮಾರ್ಗದರ್ಶಿಯಾಗಲಿದೆ. ಈಗಾಗಲೇ ಗಣತಿಯ  ಸುತ್ತೋಲೆ ಹೊರಬಂದಿದ್ದು, ಇನ್ನು ಕೆಲವೇ ಸಮಯದಲ್ಲಿ  ದಾಖಲಾತಿ ಸಂಗ್ರಹಣೆ ನಡೆಯಲಿದೆ.

ಕೃಷಿ  ಗಣತಿ ಹೇಗಿರುತ್ತದೆ?

 • ಕೃಷಿ ಗಣತಿಯೆಂದರೆ ಕೃಷಿ ಕ್ಷೇತ್ರದ ಪ್ರಚಲಿತ ವಿಧ್ಯಮಾನಗಳ  ಅಂಕಿ ಅಂಶಗಳ ಸಂಗ್ರಹಣೆಯಾಗಿರುತ್ತದೆ.
 • ದೇಶದಲ್ಲಿ ಕೃಷಿಯ ವ್ಯವಸ್ಥೆಯ ಬಗ್ಗೆ ಪರಿಮಾಣಾತ್ಮಕ ಮಾಹಿತಿಯ ಸಂಗ್ರಹಣೆ ಇದಾಗಿರುತ್ತದೆ.
 • ಹಿಡುವಳಿಗೆ ಅನುಗುಣವಾಗಿ ಕೃಷಿಯ ಅಭಿವೃದ್ಧಿಗೆ  ಬೇಕಾದ ನಿರ್ಧಾರ ತೆಗೆದುಕೊಳ್ಳಲು ಇದು ಬೇಕಾಗುತ್ತದೆ.
 • ಸಂಗ್ರಹಿತ ಅಂಕಿ ಅಂಶಗಳನು ಒಟ್ಟುಗೂಡಿಸಿ ಅದಕ್ಕನುಗುಣವಾಗಿ ಮುಂದೆ ಕೃಷಿ ಕ್ಷೇತ್ರದ ಸುಧಾನಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. 
 • ಈ ತನಕ ಇದನ್ನು ಮಾಮೂಲಿ ಜನಗಣತಿ ತರಹವೇ ನಡೆಸುತ್ತಿದ್ದರು.
 • ಈ ವರ್ಷದಿಂದ ಇದನ್ನು ಡಿಜಿಟಲೀಕರಣ ಮಾಡಲಾಗಿದ್ದು, ಮೊಬೈಲ್ ಹಾಗೂ ಟ್ಯಾಬ್ ಮೂಲಕ ದಾಖಲೆಗಳನ್ನು ಒಟ್ಟು ಹಾಕಲಾಗುತ್ತದೆ.
 • ಗಣತಿಯಲ್ಲಿ  ಹಿಡುವಳಿಗಳ ಮೂಲಭೂತ ಗುಣಲಕ್ಷಣಗಳಾದ ಭೂ ಬಳಕೆ ಮತ್ತು ಬೆಳೆ ಮಾದರಿಗಳು, ನೀರಾವರಿ ಸ್ಥಿತಿ, ಹಿಡುವಳಿ ವಿವರಗಳು ಮತ್ತು ಗುತ್ತಿಗೆಯ ನಿಯಮಗಳ ಮಾಹಿತಿಯ ಮುಖ್ಯ ಮೂಲವಾಗಿದೆ.
 • ಅಭಿವೃದ್ಧಿ ಯೋಜನೆ, ಸಾಮಾಜಿಕ-ಆರ್ಥಿಕ ನೀತಿ ನಿರೂಪಣೆ ಮತ್ತು ರಾಷ್ಟ್ರೀಯ ಆದ್ಯತೆಗಳ ಸ್ಥಾಪನೆಗೆ ಅಗತ್ಯವಿರುವ ಪರಿಶಿಷ್ಟ ಜಾತಿಗಳು / ಪರಿಶಿಷ್ಟ ಪಂಗಡಗಳು ಸೇರಿದಂತೆ ವಿವಿಧ ಗಾತ್ರದ ವರ್ಗಗಳು ಮತ್ತು ಸಾಮಾಜಿಕ ಗುಂಪುಗಳಿಂದ ಈ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ.
 • ಜನಗಣತಿಯು ಕೃಷಿ ಅಂಕಿ ಅಂಶಗಳ ಸಮಗ್ರ ರಾಷ್ಟ್ರೀಯ ವ್ಯವಸ್ಥೆಯ ಅಭಿವೃದ್ಧಿಗೆ ಮೂಲ ತಳಹದಿಯಾಗಿರುತ್ತದೆ.
 • ರಾಷ್ಟ್ರೀಯ ಅಂಕಿಅಂಶ ವ್ಯವಸ್ಥೆಯ ವಿವಿಧ ಘಟಕಗಳೊಂದಿಗೆ  ಇದು ಸಂಪರ್ಕವನ್ನು ಹೊಂದಿದೆ.ದೇಶದಲ್ಲಿ ಕೃಷಿ ಗಣತಿಯ ಸಂಪೂರ್ಣ ಯೋಜನೆಯನ್ನು ಮೂರು ವಿಭಿನ್ನ ಹಂತಗಳಲ್ಲಿ ಕಾರ್ಯಗತಗೊಳಿಸಲಾಗುತ್ತದೆ.
 • ಇದು ಸಂಖ್ಯಾಶಾಸ್ತ್ರೀಯವಾಗಿ ಒಟ್ಟಿಗೆ ಜೋಡಿಸಲ್ಪಟ್ಟಿದೆ. ಆದರೆ ಕೃಷಿ ಅಂಕಿಅಂಶಗಳ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ.
 • ಹಂತ-I ರಲ್ಲಿ, ಅವರ ಪ್ರದೇಶ ಮತ್ತು ಸಾಮಾಜಿಕ ಗುಣಲಕ್ಷಣಗಳು ಮತ್ತು ಹೊಂದಿರುವವರ ಲಿಂಗದೊಂದಿಗೆ ಹಿಡುವಳಿಗಳ ಪಟ್ಟಿಯನ್ನು ತಯಾರಿಸಲಾಗುತ್ತದೆ.
 • ಹಂತ-II ರಲ್ಲಿ, ಆಯ್ದ ಗ್ರಾಮಗಳಿಂದ ಹಿಡುವಳಿಗಳ ಕೃಷಿ ಗುಣಲಕ್ಷಣಗಳ ವಿವರವಾದ ಡೇಟಾವನ್ನು ಸಂಗ್ರಹಿಸಲಾಗುತ್ತದೆ.
 • ಹೀಗಾಗಿ ಭಾರತದಲ್ಲಿ ಕೃಷಿ ಗಣತಿಯ ಸಂಪೂರ್ಣ ಕಾರ್ಯಾಚರಣೆಯು ನಿಜವಾಗಿಯೂ ಸಂಪೂರ್ಣ ಜನಗಣತಿಯಾಗಿಲ್ಲ.
 • ವಾಸ್ತವವಾಗಿ, ಇದು ಜನಗಣತಿ ಮತ್ತು ಮಾದರಿ ಸಮೀಕ್ಷೆಯ ಸಂಯೋಜನೆಯಾಗಿರುತ್ತದೆ.
ಕೃಷಿ ಗಣತಿಗೆ ಚಾಲನೆ

ಡಾಟಾ ಸಂಗ್ರಹಣೆ ಇಷ್ಟು ಮಾತ್ರ:

ಗಣತಿಯಲ್ಲಿ ಡಾಟಾ ಸಂಗ್ರಹಣೆ ಕೇವಲ ಕೆಲವು ಅಂಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಮುಖ್ಯವಾಗಿ  ಹಿಡುವಳಿ ಗಾತ್ರ, ಪ್ರಕಾರಗಳು. ಕನಿಷ್ಠ (1 ಹೆಕ್ಟೇರ್‌ಗಿಂತ ಕಡಿಮೆ), ಸಣ್ಣ (1- 1.99 ಹೆ.), ಅರೆ-ಮಧ್ಯಮ, (2- 3.99 ಹೆ.), ಮಧ್ಯಮ (4- 9.99 ಹೆ.) ಮತ್ತು ದೊಡ್ಡ (10 ಹೆ. ಮತ್ತು ಮೇಲ್ಪಟ್ಟ), ವಿವಿಧ ವರ್ಗದ ರೈತರಿಂದ ಒಳಹರಿವಿನ ( inputs ರಸಗೊಬ್ಬರ ಇತ್ಯಾದಿ) ಬಳಕೆಯ ಮಾದರಿಯ ಒಳನೋಟವನ್ನು ಪಡೆಯಲಾಗುತ್ತ. ರಸಗೊಬ್ಬರಗಳ ಉತ್ಪಾದನೆ, ಆಮದು ಮತ್ತು ವಿತರಣೆಯನ್ನು ಯೋಜಿಸಲು ಈ ಮಾಹಿತಿಯು ಅತ್ಯಗತ್ಯವಾಗಿರುತ್ತದೆ. ಸಮೀಕ್ಷೆಯಲ್ಲಿ ಒಳಗೊಂಡಿರುವ ಇನ್ಪುಟ್ ಗಳಲ್ಲಿ ರಾಸಾಯನಿಕ ಗೊಬ್ಬರಗಳು, ಹೈಬ್ರೀಡ್  ಬೀಜಗಳು, ಕೀಟನಾಶಕಗಳು, ಸಾವಯವ  ಗೊಬ್ಬರಗಳು / ಕಾಂಪೋಸ್ಟ್, ಜೈವಿಕ ಗೊಬ್ಬರಗಳು, ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳು, ಜಾನುವಾರುಗಳು ಮತ್ತು ಕೃಷಿ ಸಾಲ. ಒಳಸುರಿ ಬಳಕೆಯ ಡೇಟಾ ಸಂಗ್ರಹಿಸಲಾಗುತ್ತದೆ. ಪ್ರಮಾಣೀಕೃತ ಬೀಜಗಳ ಬಳಕೆ, ಹೆಚ್ಚಿನ ಇಳುವರಿ ನೀಡುವ ಬೀಜಗಳು, ಬೆಳೆಗಾರರು ಅಳವಡಿಸಿಕೊಂಡ ಕೀಟ ನಿಯಂತ್ರಣ ಮಾಪನಗಳು ಗಣತಿಯಲ್ಲಿ ಸೇರಿರುತ್ತವೆ. ಕೃಷಿಕರ  ಶೈಕ್ಷಣಿಕ ಅರ್ಹತೆ, ವಯಸ್ಸು ಮತ್ತು ಕಾರ್ಯಾಚರಣೆ ಹೊಂದಿರುವವರ ಕುಟುಂಬಗಳ ಗಾತ್ರವನ್ನು ಇನ್‌ಪುಟ್ ಸಮೀಕ್ಷೆಯ ಮೂಲಕ ಸಂಗ್ರಹಿಸಲಾಗುತ್ತದೆ.
 •  ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಭಾರತದಲ್ಲಿ ಕೃಷಿ ಗಣತಿಯನ್ನು ನಡೆಸುತ್ತದೆ.
 • 1970-71 ರಲ್ಲಿ ಮೊದಲ ಕೃಷಿ ಗಣತಿಯನ್ನು ಪ್ರಾರಂಭಿಸಲಾಗಿದೆ.
 • ನಂತರ, ದೇಶವು ಇಲ್ಲಿಯವರೆಗೆ ಹತ್ತು ಕೃಷಿ ಗಣತಿಗಳನ್ನು ನಡೆಸಿದೆ ಮತ್ತು ಪ್ರಸ್ತುತ 2020-21 ರ ಉಲ್ಲೇಖ ವರ್ಷದೊಂದಿಗೆ ಈ ಸರಣಿಯಲ್ಲಿ 11 ನೇ ಜನಗಣತಿಯಾಗಿದೆ.
 • ಸಂಪೂರ್ಣ ಜನಗಣತಿ ಕಾರ್ಯಾಚರಣೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ.
 • ಮೂರು ಹಂತಗಳಲ್ಲಿ ಸಂಗ್ರಹಿಸಲಾದ ಕೃಷಿ ಜನಗಣತಿಯ ದತ್ತಾಂಶವನ್ನು ಆಧರಿಸಿ, ಅಖಿಲ ಭಾರತ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ವಿವಿಧ ನಿಯತಾಂಕಗಳಲ್ಲಿನ ಪ್ರವೃತ್ತಿಗಳನ್ನು ವಿಶ್ಲೇಷಿಸುವ ಮೂರು ವಿವರವಾದ ವರದಿಗಳನ್ನು ಇಲಾಖೆಯು ಹೊರತರುತ್ತದೆ.
 • ಜಿಲ್ಲೆ/ತಾಲೂಕು ಮಟ್ಟದ ವರದಿಗಳನ್ನು ಆಯಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸಿದ್ಧಪಡಿಸುತ್ತವೆ.

ಹೆಸರಿಗಷ್ಟೇ ಗಣತಿ;

 • ಸರಕಾರ ಇಷ್ಟೆಲ್ಲಾ ಖರ್ಚು ಮಾಡಿ ಗಣತಿ ಮಾಡುತ್ತದೆ. ಅದರಲ್ಲಿ ಭೂ ಹಿಡುವಳಿ, ಸಾಗುವಳಿ ಕ್ರಮ,  ಜಾತಿ ಇತ್ಯಾದಿ ಗಳನಷ್ಟೇ  ಗಣನೆಗೆ ತೆಗೆದುಕೊಂಡಿದೆ.
 • ಇದು ಸರಕಾರದ ಸವಲತ್ತುಗಳ ಹಂಚಿಕೆಗೆ ಮಾಡಿದ ಗಣತಿಯಂತೆ ಇದೆ.
 • ಬಹುಷಃ ಇದು ತಾಲೂಕು, ಗ್ರಾಮ ಮಟ್ಟದಲ್ಲಿ ಕುಳಿತಲ್ಲೇ ಸಿದ್ದಪಡಿಸುವ ಗಣತಿಯಂತಿದೆ.
 • ಇದರ ಜೊತೆಗೆ ಬೆಳೆ , ಉತ್ಪಾದನೆ ಇತ್ಯಾದಿಗಳನ್ನು ಸೇರಿಸಿ ಗಣತಿ ನಡೆಸಿದರೆ ತುಂಬಾ ಪ್ರಯೋಜನವಾಗುತ್ತಿತ್ತು.
 • ಹಿಂದಿನ ಸರಕಾರಗಳು ಮಾಡಿವೆ, ಹಾಲಿ ಸರಕಾರವೂ ಮಾಡುತ್ತದೆ.
 • ಮುಂದಿನವರೂ ಮಾಡುತ್ತಾರೆ. ಆದರೆ ಸುಧಾರಣೆ ಅಷ್ಟಕ್ಕಷ್ಟೇ.
 • ಈಗಲೂ ದೇಶದಲ್ಲಿನ ಭೂ ದಾಖಲೆಗಳ  ಮೂಲ ತಯಾರಿ 16 ನೇ ಶತಮಾನದ ಶೇರ್ ಶಾ ನದ್ದೇ.
 • ಅದರಲ್ಲಿ  ಸರಕಾರದ ಲಾಭಕ್ಕೆ ಅಲ್ಪ ಸ್ವಲ್ಪ ಬದಲಾವಣೆ ಮಾಡಲಾಗಿದೆಯೇ ಹೊರತು ರೈತಾಪಿ ವರ್ಗ ನಿಶ್ಚಿಂತ್ಯಲ್ಲಿರುವಂತೆ ಕಾಲಮಾನಕ್ಕನುಗುಣವಾಗಿ ಭೂ ದಾಖಲೆಯನ್ನು ಬದಲಾಯಿಸಲು ಈ ತನಕದ ಯಾವ ಸರಕಾರಕ್ಕೂ ಆಗಿಲ್ಲ.
 • ಗಣತಿಗಳನ್ನು ಮಾಡಲಿ, ಆದರೆ ಅದರ ಜೊತೆಗೆ ರೈತರಿಗೆ ಬೆಲೆ ಸ್ಥಿರತೆ, ಮಾನಸಿಕ ನೆಮ್ಮದಿ ಸಿಗುವಂತಾಗಲಿ.

Leave a Reply

Your email address will not be published. Required fields are marked *

error: Content is protected !!