ಕೃಷಿಯೊಂದಿಗೆ ಅರಣ್ಯ ಬೇಡ – ಸೊಪ್ಪು ಕಟ್ಟಿಗೆ ಮಾತ್ರ ಇರಲಿ..

ಕೃಷಿ ಮತ್ತು ಅರಣ್ಯ

ಮರಮಟ್ಟಿಗಾಗಿ (ನಾಟಾ) ಉದ್ದೇಶಕ್ಕಾಗಿ ಸಸಿ ನೆಟ್ಟು ಬೆಳೆಸುವುದೇ ಆಗಿದ್ದರೆ , ಅದು ಕೃಷಿಯ ಜೊತೆಗೆ ಇದ್ದರೆ ಆಗುವುದಿಲ್ಲ. ಮರಮಟ್ಟುಗಳನ್ನು ಪ್ರತ್ಯೇಕ ಜಾಗದಲ್ಲಿ ಬೆಳೆಸಿದರೆ ಮಾತ್ರ ಅದು ಲಾಭದಾಯಕ.

ಸರಕಾರ ರೈತರಿಗೆ ಹುಡಿಗಾಸಿನ ಆಸೆ ತೋರಿಸು ಕೃಷಿ ಅರಣ್ಯವನ್ನು ಪ್ರೋತ್ಸಾಹಿಸುತ್ತಿದೆ. ಭಾರೀ ಪ್ರಚಾರವನ್ನೂ ಮಾಡುತ್ತಿವೆ. ಕೆಲವು ರೈತರು  ಹಣದ ಆಸೆಗೆ ಒಂದಷ್ಟು ಮರಮಟ್ಟಿನ ಸಸ್ಯಗಳನ್ನು  ಬದುಗಳಲ್ಲಿ, ಖಾಲಿ ಜಾಗದಲ್ಲಿ ಬೆಳೆಸುತ್ತಿದ್ದಾರೆ.  ಕೃಷಿ ಹೊಲದಲ್ಲಿ ಮರಮಟ್ಟುಗಳು ಇದ್ದರೆ ಭವಿಷ್ಯದಲ್ಲಿ  ಬಹಳ ಅನುಕೂಲ ಇರಬಹುದು. ಆದರೆ ವರ್ತಮಾನದಲ್ಲಿ ಅನನುಕೂಲತೆಯೇ ಹೆಚ್ಚು ಹೇಗೆ ಗೊತ್ತೇ? ಹಾಗೆಂದು ಕೃಷಿಕರ ಹೊಲದಲ್ಲಿ ಮರಮಟ್ಟುಗಳು ಬೇಡ ಎಂದಲ್ಲ. ಹಸಿ ಸೊಪ್ಪು, ಒಣ ಎಲೆ, ಕಟ್ಟಿಗೆಗೆ ತಕ್ಕಷ್ಟು ಮಾತ್ರ ಇರಲಿ.

ದಾಳಿಂಬೆ ತೋಟದ ಬದುವಿನಲ್ಲಿ ಹೆಬ್ಬೇವು

ಕೆಲವು ಸಮಸ್ಯೆಗಳು;

  • ಶಂಕರಯ್ಯ ನವರು ತಮ್ಮ 5 ಎಕ್ರೆ ಹೊಲದಲ್ಲಿ ತೆಂಗು,ಅಡಿಕೆ, ಹಣ್ಣು   ಹಂಪಲು ಮುಂತಾದ ಬೆಳೆಗಳನ್ನು ಬೆಳೆಸಿ ಮಾದರಿಯಾಗಿ ಕೃಷಿ ಮಾಡಿದ್ದಾರೆ.
  • ನೆರೆಯ  ಹಾಳಪ್ಪನವರು ಕೃಷಿ ಅಗತ್ಯವಿಲ್ಲ.
  • ಊಟಕ್ಕೆ ಸರಕಾರ ತಿಂಗಳಿಗೆ 50 ಕಿಲೋ ಉಚಿತ ಅಕ್ಕಿ ಕೊಡುತ್ತದೆ, ಬೇಳೆ ಕೊಡುತ್ತದೆ.
  • ಉಚಿತ ವೈದ್ಯಕೀಯ ಸವಲತ್ತನ್ನೂ ಕೊಡುತ್ತದೆ.
  • ಸ್ವ ಸಹಾಯ ಸಂಘದ ಸಾಲಕ್ಕೆ ನೆರೆಯ ಶಂಕರಯ್ಯನವರಲ್ಲಿ  ಕೂಲಿ ಕೆಲಸ ಇದೆ.
  • ಅವನಿಗೆ ಗೊತ್ತು, ಸರಕಾರ ಉಚಿತವಾಗಿ ಕೊಟ್ಟ ಭೂಮಿಯಲ್ಲಿ  ಕೃಷಿಮಾಡುವುದಕ್ಕಿಂತ ಅದರಲ್ಲಿ ಅರಣ್ಯ ಬೆಳೆಸಿದರೆ  ಮರ ಮಾರಿದರೂ ಲಾಭವಾಗುತ್ತದೆ ಎಂದು.
  • ಹಾಳಪ್ಪನವರ ಕಾಡು ಶಂಕರಯ್ಯನವರ ಕೃಷಿಯ ಶ್ರಮವನ್ನೆಲ್ಲಾ ನೀರಿನಲ್ಲಿ ಹೋಮ ಇಟ್ಟಂತೆ ಆಗಿದೆ.
  • ಹೊಲದಲ್ಲಿ ಪಾಲು ಕೇಳಲು ಹಗಲು ಕೋತಿಗಳು, ರಾತ್ರೆ ಹಂದಿ, ಹುಳ್ಳು ಹಂದಿಗಳು, ನವಿಲುಗಳು.
  • ಇವೆಲ್ಲಕ್ಕೂ ಕಾರಣ ನೆರೆಯ ಹಾಳಪ್ಪನವರ ಕಾಡಿನ ಆಶ್ರಯ.

ಮರಮಟ್ಟುಗಳು ಕೃಷಿ ಜೊತೆಗೆ ಹೊಂದುವುದಿಲ್ಲ:\

ಗಾಳಿ ತಡೆಗೆ ಸಾಗುವಾನಿ
ಗಾಳಿ ತಡೆಗೆ ಸಾಗುವಾನಿ
  • ಕೃಷಿ ಎಂದರೆ ಅದು ಮೇಲ್ಸ್ತರದ ಮರಮಟ್ಟುಗಳ ತೋಟದ ಬೆಳೆಗಳಿರಬಹುದು, ಕೆಳಸ್ಥರದ ಸಸ್ಯಗಳಿರಬಹುದು, ಅದರ ಎಡೆಯಲ್ಲಿ ಮರಮಟ್ಟುಗಳು ಇರಕೂಡದು.
  • ಮರಮಟ್ಟುಗಳು ಇದ್ದಾಗ ಅದರ ನೆರಳು ಬೆಳೆಗಳಿಗೆ ತೊಂದರೆಯನ್ನು ಉಂಟು ಮಾಡುತ್ತದೆ.
  • ಬೇರುಗಳು ಬೆಳೆಗಳ ಬೆಳವಣಿಗೆಯಲ್ಲಿ ಪಾಲು ಕೇಳಿ ಆಹಾರ ಕಬಳಿಸುತ್ತವೆ.
  • ಮರ ಮಟ್ಟಿನ ಬೆಳೆವಣಿಗೆ ನಿಯಂತ್ರಿಸಲು  ಗೆಲ್ಲು ಸವರುವಾಗ ಅದು ಬೆಳೆಗಳ ಮೇಲೆ ಬಿದ್ದು, ಅಲ್ಲಿ ಒಂದಹ್ಟು ಹಾನಿ ಉಂಟುಮಾಡುತ್ತದೆ.
  • ಮರಮಟ್ಟುಗಳ ಅಡಿಯ ನೆರಳಿನಲ್ಲಿ ಇತರ ಬೆಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ.
  • ಮರಮಟ್ಟುಗಳನ್ನು ಬೆಳೆಸಿದಾಗ ಹೊಲಕ್ಕೆ ಯಾವಾಗಲೂ  ಆಂಶಿಕ ನೆರಳು  ಉಂಟಾಗುತ್ತದೆ.
  • ಇದರಿಂದ ನೈಸರ್ಗಿಕವಾಗಿ ಮೆಣ್ಣಿಗೆ ದೊರಕಬೇಕಾದ ಸೂರ್ಯನ ಶಾಖದಿಂದ ಲಭ್ಯವಾಗುವ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.

ಜ್ವಲಂತ ಸಮಸ್ಯೆಗಳು:

  • ಮೊದಲೇ ಹೇಳಿದಂತೆ ಹಾಳಪ್ಪನವರ ಕಾಡಿನಲ್ಲಿ ವಾಸ್ತವ್ಯ ಹೂಡಿದ ದಂಶಕ ಪ್ರಾಣಿಗಳು  ಶಂಕರಪ್ಪನವರ ನೆಮ್ಮದಿಯನ್ನು ಹಾಳು ಮಾಡಿದಂತೆ  ಒಂದೆಡೆ ಕಾಡು, ಮರಮಟ್ಟು ಮತ್ತೊಂದೆಡೆ ಕೃಷಿ ಇದ್ದರೆ ಬೆಳೆಗಳಿಗೆ ಮಂಗಗಳ ಹಾವಳಿ, ಕಾಡು ಹಂದಿ, ಮುಳು ಹಂದಿ, ನವಿಲು, ಹೆಗ್ಗಣ, ಇಲಿ, ಅಳಿಲು ಮುಂತಾದ ಬೆಳೆ ದಂಶಕಗಳ ಉಪಟಳ ಹೆಚ್ಚಾಗುತ್ತದೆ.
  • ಹಾಳಪ್ಪನವರ ಕಾಡು ಕೃಷಿಯನ್ನು ಶಂಕರಪ್ಪನವರು ವಿರೋಧಿಸುವಂತಿಲ್ಲ.
  • ಶಂಕರಪ್ಪನವರ ಕೃಷಿಯ ಬೆಲೆ ಹಾಳಪ್ಪನವರಿಗೆ ಬಿದ್ದು ಹೋಗಿಲ್ಲ.
  • ಇಂತಹ ಸ್ಥಿತಿ ನಮ್ಮಲ್ಲಿರುವಾಗ ಕೃಷಿ ಅರಣ್ಯ  ಎಂಬುದು ಬೇಕೇ ಯೋಚಿಸಿ.

ಕೃಷಿಯೊಂದಿಗೆ ಮರಮಟ್ಟು ಎಲ್ಲಿ ಬೇಕು:

ಹಸುರೆಲೆ ಸೊಪ್ಪಿಗಾಗಿ ಔಡಲ ಬೆಳೆ
ಹಸುರೆಲೆ ಸೊಪ್ಪಿಗಾಗಿ ಔಡಲ ಬೆಳೆ
  • ಕೃಷಿಬೆಳೆಗಳ ಜೊತೆಯಲ್ಲಿ  ಮರಮಟ್ಟುಗಳನ್ನು ಬೆಳೆಸುವುದೇ ಆದರೆ ಬದುಗಳಲ್ಲಿ ಗಾಳಿ ತಡೆಗಾಗಿ ಬೆಳೆಸಬೇಕು.
  • ಅದು  ವರ್ಷವೂ ನಿರ್ವಹಣೆಗೆ ( ಗೆಲ್ಲುಸವರುವುದು, ನೆರೆಯ ಸ್ಥಳದವರಿಗೆ  ತೊಂದರೆ ಕೊಡದಂತೆ  ಇರಿಸುವುದು) ಒಳಪಡುತ್ತಿರಬೇಕು.
  • ಗಾಳಿ ತಡೆಗೆ  ಮರಮಟ್ಟುಗಳಿಗೆ ಅಗತ್ಯವಾಗಿರುತ್ತದೆ.
  • ಬದುಗಳಲ್ಲಿ ಮರಮಟ್ಟು ಬೆಳೆಸುವಾಗ  ತುಂಬಾ ಜಾಗರೂಕತೆ ಬೇಕು.
  • ಇಂದಿನ ಸರಕಾರದ ಕಾನೂನು ವ್ಯವಸ್ಥೆಗಳು, ಭ್ರಷ್ಟ ಸರಕಾರೀ ವ್ಯವಸ್ಥೆ ಗಳು ನಾಳೆ ಗಡಿ ಸಮಸ್ಯೆ ಉಂಟಾದರೆ ನೀವು ನೆಟ್ಟ ಮರಮಟ್ಟಿನ ಪ್ರಯೋಜನವನ್ನು ನಿಮಗೇ ದೊರಕಿಸಿಕೊಡುವಲ್ಲಿ ಎಷ್ಟು ಸಹಕರಿಸಬಹುದು ಎಂಬುದು ಒಂದು ನಿತ್ಯ ಅಂಜಿಕೆಯ ವಿಚಾರ.
  • ರೈತರ ಬೆಳೆಗಳಿಗೆ ಸೊಪ್ಪು ಗೊಬ್ಬರಕ್ಕಾಗಿ ಬದುಗಳಲ್ಲಿ ಸೊಪ್ಪಿನ ಬೆಟ್ಟಗಳಲ್ಲಿ ಹಸುರೆಲೆ ಸಸ್ಯಗಳಾದ ಸೆಣಬು, ಕ್ರೋಟೆಲೇರಿಯಾ, ಗ್ಲೆರಿಸೀಡಿಯಾ, ಔಡಲ, ಮುಂತಾದ ಸಸ್ಯಗಳಿದ್ದರೆ ಸಾಕಾಗುತ್ತದೆ.

ಕಾಡಿನಲ್ಲಿ ಮರಮಟ್ಟು ತುಂಬಿ ತುಳುಕಾಡಲಿ:

  • ಮರಮಟ್ಟುಗಳ ದಟ್ಟಣೆ ಕಡಿಮೆಯಾಗಿ ಕಾಡು ಪ್ರಾಣಿಗಳು ನಾಡಿಗೆ ಬಂದಿದೆ ಎಂಬುದರ ಬಗ್ಗೆ ಎರಡು ಮಾತಿಲ್ಲ.
  • ಈ ಸಮಸ್ಯೆಯನ್ನು ನಿವಾರಣೆಗೆ ಏಕೈಕ ಪರಿಹಾರ ಎಂದರೆ ಕಾಡುಗಳ ಪುನಃಶ್ಚೇತನ.
  • ಇದನ್ನು ಸರಕಾರ, ಅರಣ್ಯ ಇಲಾಖೆ, ಜನಸಮಾನ್ಯರ ಸಹಕಾರ ತೆಗೆದುಕೊಂಡು ಮಾಡುವುದಕ್ಕೆ ನಾವೆಲ್ಲಾ ಪ್ರೋತ್ಸಾಹ ಕೊಡೋಣ.
  • ನಮ್ಮ ಶಕ್ತಿ ಮೀರಿ ಇದಕ್ಕೆ ಸಹಕರಿಸೋಣ.
  • ಇದರಿಂದ ಪರಿಸರ ಸಮತೋಲನ ಉಂಟಾಗುತ್ತದೆ. ಭವಿಷ್ಯದಲ್ಲಿ ಕೃಷಿಗೆ ಕ್ಷೇಮವೂ ದೊರೆಯುತ್ತದೆ.

ನಿಮ್ಮ ಬಳಕೆಗೆ ಬೇಕಾಗುವ ಮರ ಮಟ್ಟುಗಳಿಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟು ಅಲ್ಲಿ  ನಾಟಾ ಉದ್ದೇಶದ ಮರಮಟ್ಟು ಬೆಳೆಸಿ. ನಾಟಾ ಉದ್ದೇಶದ ಮರಮಟ್ಟು ಬೆಳೆಸಲು ಒಂದು ಕ್ರಮ ಇದೆ. ಆ ಪ್ರಕಾರ ಬೆಳೆದರೆ ಮಾತ್ರ ಅದು ಲಾಭದಾಯಕ.

ಈ ವಿಚಾರ ಸರಿ ಎನ್ನಿಸಿದರೆ ಇದನ್ನು ಸಾಧ್ಯವಾದಷ್ಟು ಮಿತ್ರರೊಂದಿಗೆ ಹಂಚಿಕೊಳ್ಳಿ. ತಲುಪಬೇಕಾದವರಿಗೆ ಈ ಸಂದೇಶ ತಲುಪುವುದು ನಮ್ಮ ಮುಂದಿನ  ಕೃಷಿ ಸುರಕ್ಷಿತೆಯ ದೃಷ್ಟಿಯಿಂದ  ಅತೀ ಅಗತ್ಯ
End of the Article:==================================
search words: Agro forestry # forest trees in farm land# forest and animals# forest# trees t farm land#

Leave a Reply

Your email address will not be published. Required fields are marked *

error: Content is protected !!