ಅಡಿಕೆ ಧಾರಣೆಯ ಈಗಿನ ಪರಿಸ್ಥಿತಿ ಬೆಳೆಗಾರರನ್ನು ಚಿಂತೆಗೀಡುಮಾಡಿದ್ದು, ಇಳಿಕೆಯಾದೀತೋ ಎಂಬ ಆತಂಕ ಉಂಟುಮಾಡಿದೆ. ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಈಗ ದರ ಇಳಿಕೆ ಆಗಿದೆ. ಮುಂದೆ ಇದು ಸರಿಯಾಗುತ್ತದೆ. ಈ ಸಮಯದಲ್ಲಿ ದರ ಇಳಿಕೆ ಆಗುವುದು ಸಹಜವಾಗಿದೆ.ಈಗ ಕೃಷಿಕರಿಗೆ ಹಣದ ಅಗತ್ಯ ಇರುತ್ತದೆ. ಬೆಳೆಗಾರರಿಗೆ ಮಾರಾಟ ಮಾಡದೆ ನಿರ್ವಾಹ ಇಲ್ಲದ ಸ್ಥಿತಿ ಇರುತ್ತದೆ. ಅದಕ್ಕೆ ಅನುಗುಣವಾಗಿ ದರ ಇಳಿಕೆ ಆಗುತ್ತದೆ. ಈಗ ಅದದ್ದೂ ಇದೆ.
ಬೆಳೆಗಾರರೆಲ್ಲರೂ ಅಧಿಕ ಬೆಲೆ ಸಿಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಧ್ಯವಾದಷ್ಟು ಕಮಿಟ್ ಮೆಂಟ್ ಗಳನ್ನು ಮುಂದೂಡುತ್ತಾ ಕಾಯುತ್ತಾರೆ. ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ವಸ್ತು ಸಿಗಬೇಕು. ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಬೇಕು. ಮಾರುಕಟ್ಟೆಗೆ ಮಾಲು ಬರಬೇಕು. ಅದಕ್ಕಾಗಿ ಬೇರೆ ಬೇರೆ ಸುದ್ದಿಗಳನ್ನು ಹಬ್ಬಿಸುವ ತಂತ್ರವನ್ನು ಮಾಡುತ್ತಾರೆ. ಬೆಲೆ ಏರಿಕೆ – ಇಳಿಕೆ ಮಾಡುತ್ತಾ ಅಸ್ಥಿರತೆಯಬರುವುದು ಕಡಿಮೆಯಾದರೆ ಬರಿಸುವ ತಂತ್ರಗಾರಿಕೆ ಮಾಡಲೇ ಬೇಕು. ಬೆಳೆಗಾರರು ಯಾವಾಗಲಾದರೂ ಅದನ್ನು ಮಾರಲೇ ಬೇಕು. ಇಬ್ಬರ ಮನೋಸ್ಥಿತಿಯೂ ಸರಿಯಾದದ್ದೇ. ಈಗ ವ್ಯಾಪಾರಿಗಳ ತಂತ್ರಗಾರಿಕೆ ಪ್ರಾರಂಭವಾಗಿದೆ. ಕಳೆದ ಒಂದು ವಾರದಿಂದ ಚಾಲಿ ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿದೆ. ಕೆಂಪು ಇಳಿಕೆ ಪ್ರಾರಂಭವಾಗಿ ವಾರ ಎರಡು ಆಗಿದೆ. ಕರಾವಳಿಯಲ್ಲಿ ಇಂದು ಖಾಸಗಿಯವರೂ ಕ್ಯಾಂಪ್ಕೋ ದರದ ಸನಿಹಕ್ಕೆ ಇಳಿದಿದ್ದಾರೆ. ಮುಂದಿನ ನಡೆ ಬಹುಶಃ ಸ್ವಲ್ಪ ಇಳಿಕೆಯೋ ಎಂಬ ಅನುಮಾನ ಉಂಟಾಗಿದೆ.
- ಕಳೆದ ಎರಡು ವರ್ಷದಿಂದ ಬೆಳೆಗಾರರಿಗೆ ಮಾರುಕಟ್ಟೆಯ ಕೆಲವು ಚಿತ್ರಣಗಳು ಅರಿವಿಗೆ ಬಂದಿದ್ದು, ಸಾಮಾನ್ಯವಾದ ಮಾರುಕಟ್ಟೆ ತಲ್ಲಣಗಳಿಗೆ ಅಂಜುವ ಸ್ಥಿತಿಯಲ್ಲಿ ಇಲ್ಲ.
- ಏರುವಾಗಲೂ ಮಾರಾಟ ಮಾಡುವುದಿಲ್ಲ. ಇಳಿಕೆಯಾದಾಗಲೂ ಮಾರುಕಟ್ಟೆಗೆ ಮಾಲು ಬರುವುದಿಲ್ಲ.
- ಏರಿಕೆಯಾದರೂ ಬರುವುದಿಲ್ಲ. ಬೆಲೆ ಬಂದೇ ಬರುತ್ತದೆ ಎಂಬ ಧೈರ್ಯ.
- ಹಾಗಾಗಿ ಚಾಲಿ ಮತ್ತು ರಾಶಿಯ ಬೆಲೆಯಲ್ಲಿ ಭಾರೀ ಏರಿಳಿತಗಳಾಗುತ್ತಿಲ್ಲ.
- ಈಗ ನಡೆದಿರುವ ವಿದ್ಯಮಾನ ಬಹುಶಃ ಬೆಳೆಗಾರರು ಮಾರುಕಟ್ಟೆಗೆ ತರುವಂತೆ ಮಾಡಲು ವ್ಯಾಪಾರಿಗಳು ನಡೆಸುವ ತಂತ್ರವೋ ಎಂಬ ಅನುಮಾನ ಇದೆ.
2-3-4 ನೇ ದರ್ಜೆಯ ಅಡಿಕೆಗೆ ಬೇಡಿಕೆ ಕಡಿಮೆಯಾದರೆ ಬೆಲೆ ಸ್ವಲ್ಪ ಇಳಿಕೆಯ ಸೂಚನೆ. ಕೆಲವೊಮ್ಮೆ ಕಳುಹಿಸಿದ ಮಾಲು ತಿರಸ್ಕರಿಸಲ್ಪಟ್ಟರೆ ಸಹ ದರ ಇಳಿಕೆಯಾಗುತ್ತದೆ. ಕಳೆದ ತಿಂಗಳಲ್ಲಿ ಕಳುಹಿಸಿದ ಸ್ವಲ್ಪ ಮಾಲು ಉತ್ತರ ಭಾರತದ ಖರೀದಿದಾರರಿಂದ ತಿರಸ್ಕರಿಸಲ್ಪಟ್ಟಿದೆ ಎಂಬ ಸುದ್ದಿ ಇದೆ.
ಇದು ಹಣಕಾಸಿನ ಅಗತ್ಯವಿರುವ ಸಮಯ:
- ಎಲ್ಲಾ ಬೆಳೆಗಾರರಿಗೂ ಈಗ ಅಂದರೆ ಸಪ್ಟೆಂಬರ್ ತಿಂಗಳಿನಿಂದ ನವೆಂಬರ್ ಡಿಸೆಂಬರ್ ತನಕ ಬೇರೆ ಬೇರೆ ವ್ಯವಹಾರಕ್ಕೆ ಹಣಕಾಸಿನ ಅಗತ್ಯ ಇರುತ್ತದೆ.
- ಒಂದೆಡೆ ತೋಟಕ್ಕೆ ಗೊಬ್ಬರ ಹಾಕಬೇಕು. ಹೊಸ ಯೋಜನೆಗಳನ್ನು (ಸಸಿ ನೆಡುವಿಕೆ ಭೂ ತಯಾರಿ ಇತ್ಯಾದಿ) ಮಾಡಿಕೊಳ್ಳಬೇಕು.
- ತೋಟದ ಸ್ವಚ್ಚತೆಗೆ ಆಳುಗಳಿಗೆ ಮಜೂರಿ ಕೊಡಬೇಕು. ಸಾಮಾನ್ಯವಾಗಿ ನವರಾತ್ರೆ ಕಳೆದ ತರುವಾಯ ಮದುವೆ ಇತ್ಯಾದಿ ಶುಭ ಸಮಾರಂಭಗಳು ಹೀಗೆಲ್ಲಾ ಇರುತ್ತವೆ.
- ಇದಕ್ಕೆಲ್ಲಾ ಮುಂದೆ ಹೋಗಲು ಬೇಕಾಗುವುದು ಹಣ.
- ಆಗಲೇ ಬಹುತೇಕ ಬೆಳೆಗಾರರು ಹಳೆ ಅಡಿಕೆಯನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಿ ಅಗಿದೆ.
- ಇನ್ನು ಹೊಸತೇ ಇರುವುದು. ಮಾರದೆ ನಿರ್ವಾಹ ಇಲ್ಲ.
- ಆದಂತೆ ಆಗಲಿ ಸ್ವಲ್ಪ ಪ್ರಮಾಣವನ್ನು ಈಗಿನ ದರದಲ್ಲಿ ಕೊಟ್ಟು ಹಣಕಾಸಿನ ಅಗತ್ಯವನ್ನು ನೀಗಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಈಗ ದರ ಇಳಿಕೆಯಾಗಿದೆ ಎಂಬುದು ಕೆಲವರ ವಾದ.
- ಈ ವಾದದಲ್ಲೂ ಹುರುಳು ಇಲ್ಲದಿಲ್ಲ.
ಆಮದು ಮತ್ತೆ ಆಗಿದೆ ಎಂಬ ವದಂತಿ:
- ಅಡಿಕೆ ಮಾರುಕಟ್ಟೆ ವದಂತಿಗಳ ಮೇಲೆಯೇ ಮುನ್ನಡೆಯುವುದು. ಈ ವಿಷಯದಲ್ಲಿ ಆಮದು ಎಂಬ ಸುದ್ದಿ ಒಂದಷ್ಟು ತಲ್ಲಣಗಳನ್ನು ಉಂಟು ಮಾಡುತ್ತದೆ.
- ಜಗತ್ತಿನ ಒಟ್ಟೂ ಉತ್ಪಾದನೆಯಲ್ಲಿ ಭಾರತದ ಪಾಲು 80%.
- ಆದರೂ ಇಲ್ಲಿಗೆ ಆಮದು ಆದರೆ ದರ ಕುಸಿತವಾಗುತ್ತದೆ.!
- ಬೇರೆ ದೇಶಗಳಿಂದ ಆಮದು ಎಷ್ಟು ಆಗುತ್ತಿದೆ, ಅದರ ಪ್ರಮಾಣ ಎಷ್ಟು ಎಂಬುದರ ಲೆಕ್ಕಾಚಾರ ಸಿಗುತ್ತಿಲ್ಲವಾದರೂ ಇಲ್ಲಿ ಒಮ್ಮೆ ಆಮದು ಆದರೆ ಅದರ ಪ್ರಮಾಣದ ಮೇಲೆ 5 ರಿಂದ 10% ದರ ಕುಸಿತವಾಗುತ್ತದೆ.
- ಈಗ ಗಡಿಯಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ, ಆಮದು ಸರಳವಾಗಿದೆ ಎಂಬುದಾಗಿ ಖರೀದಿದಾರರು ಕಾರಣ ಕೊಡುತ್ತಿದ್ದಾರೆ.
- ಇದೂ ಆಗುವ ಸಾಧ್ಯತೆ ಇದೆ. ಆದರೆ ಇದರ -ಮಿತಿ ಸ್ವಲ್ಪ ಸಮಯದ ತನಕ ಮಾತ್ರ.
- ಹೆಚ್ಚೆಂದರೆ 5 % ದರ ಇಳಿಕೆ ಅಷ್ಟೇ.
- ಕೆಲವು ಸಾಮಾಜಿಕ ಮಾಧ್ಯಮಗಳ ಸುದ್ದಿಗಳಂತೆ ಇಂಡೋನೇಶಿಯಾ, ಶ್ರೀಲಂಕಾ ಕಡೆಯ ಮಾಲು ಇದೆ ಎಂಬ ಸುದ್ದಿಗಳಿವೆ.
ಇಳಿಕೆ ಆದರೆ ಏರಿಕೆಯ ಮುನ್ಸೂಚನೆ:
- ಮೊದಲೇ ಹೇಳಿದಂತೆ ವ್ಯಾಪಾರಿಗಳು ಬಯಸುವುದು ಲಾಭವನ್ನು. ಬೆಳೆಗಾರರೂ ಬಯಸುವುದು ಅದನ್ನೇ.
- ವ್ಯಾಪಾರಿಗಳು ತಾವು ಖರೀದಿ ಮಾಡಿದ್ದನ್ನು ಕನಿಶ್ಟ 10% ಲಾಭ ಇಲ್ಲದೆ ಮಾರಾಟ ಮಾಡಲಾರರು.
- ಈ ಹಿಂದೆ ಖರೀದಿ ಮಾಡಿದ 425- 450 ದರದನ್ನು ಮೊನ್ನೆ ತಾನೇ ಏರಿಕೆಯಾದ ದರದಲ್ಲಿ ಮಾರಾಟ ಮಾಡಿ ಮುಗಿಸಿರುತ್ತಾರೆ.
- ಮಾರುಕಟ್ಟೆಯಲ್ಲಿ ದರ ಎರಿಕೆ ಮಾಡುವುದೇ ತಮ್ಮ ಮಾಲನ್ನು ಮಾರಾಟ ಮಾಡುವುದಕ್ಕಾಗಿ.
- ಅದು ಆದ ಮೇಲೆ ಮತ್ತೆ ಇಳಿಕೆ ಸಹಜ ಪ್ರಕ್ರಿಯೆ.
- ಅವರ ಲಾಭಕ್ಕೆ ಬೇಕಾದಂತೆ ದರ ಇಳಿಕೆ ಮಾಡಿ ಖರೀದಿ ಮಾಡಿ ಮತ್ತೆ ಮಾರುಕಟ್ಟೆಯಲ್ಲಿ ದರ ಎರಿಕೆ ಮಾಡಿ ಅದನ್ನು ಮಾರಾಟ ಮಾಡಲಾಗುತ್ತದೆ.
- ಇಳಿಕೆ ಎಂಬುದು ಹೆಚ್ಚಿನ ಪ್ರಮಾಣದಲ್ಲಿ ಆದರೆ ಬೇಗ ಮತ್ತೆ ದರ ಏರಿಕೆ ಆಗುತ್ತದೆ.
- ಅತ್ಯಲ್ಪ ಇಳಿಕೆ ಆದರೆ ಎರಿಕೆ ನಿಧಾನವಾಗುತ್ತದೆ.
- ಮಾರುಕಟ್ಟೆಗೆ ಹೆಚ್ಚು ಮಾಲು ಬರಲಾರಂಭಿಸಿದರೆ ದರ ಸ್ವಲ್ಪ ಸ್ವಲ್ಪ ಇಳಿಕೆಯಾಗಿ ಬೇಗ ಮತ್ತೆ ಏರಿಕೆ ಆಗುತ್ತದೆ.
- ವ್ಯಾಪಾರಿಗಳ ಪ್ರಕಾರ ಕ್ಯಾಂಪ್ಕೋ ದರ ಇಳಿಕೆ ಮಾಡಿದರೆ ಖಾಸಗಿಯವರು ಇಳಿಸುತ್ತಾರೆ.
- ಸ್ಥಿರವಾಗಿಟ್ಟರೆ ಸಲ್ಪ ಧೈರ್ಯದ ವ್ಯವಹಾರ ನಡೆಯುತ್ತದೆಯಂತೆ.
ಎಲ್ಲದಕ್ಕಿಂತ ಅಪಾಯ ಸುದ್ದಿಗಳು:
- ಆಮದು ಆದರೆ ಹೆಚ್ಚೆಂದರೆ 10% ಇಳಿಕೆಯಾಗಬಹುದು.
- ಆದರೆ ಸರಕಾರದಿಂದ ಅಥವಾ ನ್ಯಾಯಾಲಯ ಅಥವಾ ಏನಾದರೂ ಇದು ಹಾನಿಕರ ಎಂಬ ಸುದ್ದಿಗಳು ಹರಿದಾಡಿದರೆ ಭಾರೀ ದರ ಇಳಿಕೆಯಾಗುತ್ತದೆ.
- ಭಾರತ ಸರಕಾರ ಮುಂದಿನ ಚುನಾವಣೆ ತನಕ ( ಮೇ.2024) ಇದರ ಸುದ್ದಿಗೆ ಹೋಗುವುದಿಲ್ಲ ಎಂಬ ಖಾತ್ರಿ ಇದೆ.
- ಇಂತಹ ಸುದ್ದಿಗಳು ಹೆಚ್ಚಿನ ತೊಂದರೆಯನ್ನು ಮಾಡುತ್ತವೆ. ಬಹುತೇಕ ಸುಪಾರಿ ದೋ ನಂಬ್ರದ ವ್ಯವಹಾರದಲ್ಲಿ ನೆಡೆಯುವ ವ್ಯವಹಾರ.
- ಇದಕ್ಕೆ ಏನಾದರೂ ತೊಂದರೆ ಆದರೆ ದರ ಬೀಳುತ್ತದೆ.
ಎರಡು ತಿಂಗಳು ದರ ಏರಿಕೆ ಆಗಲಾರದು ಎಂಬ ವದಂತಿ:
- ಮಾರುಕಟ್ಟೆ ಇನ್ನು ಎರಡು ತಿಂಗಳ ತನಕ ಸ್ವಲ್ಪ ಇಳಿಕೆಯಾಗಿ ಅದೇ ದರದಲ್ಲಿ ಮುಂದುವರಿಯಬಹುದು ಎಂಬ ಸುದ್ದಿಗಳಿವೆ.
- ಒಂದೆಡೆ ಹಸಿ ಖರೀದಿ ದರ 7200 ಇದ್ದುದು 6800 ಕ್ಕೆ ಇಳಿಕೆಯಾಗಿತ್ತು.
- ಇಂದು ಮತ್ತೆ 7000 ಕ್ಕೆ ಏರಿಕೆಯಾಗಿದೆ.
- ಕ್ಯಾಂಪ್ಕೋ ಮಹಾಸಭೆಯ ನಂತರ ಸಂಸ್ಥೆ ತನ್ನ ಖರೀದಿ ದರದಲ್ಲಿ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದುದಾಗಿ ಕೆಲವು ಮೂಲಗಳು ಹೇಳುತ್ತಿವೆ.
- ಮಹಾಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರು ದರ ಇಳಿಕೆಯಾಗದು ಎಂಬುದಾಗಿ ಹೇಳಿಕೆ ನೀಡಿದ್ದಾರೆ.
- ಒಂದು ವೇಳೆ ಹೀಗೆ 5-10 ರೂ. ಗಳ ಇಳಿಕೆ ಆದರೆ ಮತ್ತೆ ತಿಂಗಳು ಎರಡು ತಿಂಗಳ ತನಕ ಮಾರುಕಟ್ಟೆಯಲ್ಲಿ ಸ್ವಲ್ಪ ಬಿಗುವಿನ ಸ್ಥಿತಿ ಉಂಟಾಗಲಿದೆ.
- ಗುಣಮಟ್ಟ, ಗಾತ್ರ ಇತ್ಯಾದಿಗಳ ಸಬೂಬಿನಲ್ಲಿ ನಿರೀಕ್ಷೆಯ ದರ ಸಿಗಲಿಕ್ಕಿಲ್ಲ.
- ದೀಪಾವಳಿ ಸಮಯಕ್ಕೆ ಒಮ್ಮೆ ಏರಿಕೆ ಆಗುವ ಸಾಧ್ಯತೆ ಇದೆ.
ದರ ಏರುತ್ತದೆ- ಕಾಯಬೇಕು.
- ಕೆಂಪಡಿಕೆ ಸ್ವಲ್ಪ ಇಳಿಕೆಯಾದರೂ ನಿನ್ನೆಯಿಂದ ಹಸಿ ದರ ಸ್ವಲ್ಪ ಬೆಲೆ ಹೆಚ್ಚಾಗಿದೆ.
- ಬೇಡಿಕೆ ಮತ್ತೆ ಹೆಚ್ಚಾಗುವ ಲಕ್ಷಣ ಕಾಣುತ್ತಿದೆ. ಕೆಂಪಡಿಕೆಗೆ ಅದರದ್ದೇ ಆದ ಮಾರುಕಟ್ಟೆ ಇದೆ.
- ಚಾಲಿ ಮತ್ತು ಕೆಂಪಡಿಕೆ ಆಗುವ ಕಡೆ ಕೊಳೆ ರೋಗದಿಂದ ಮುಂದಿನ ವರ್ಷದ ಬೆಳೆ ನಷ್ಟ ಶೇ.30 ರಷ್ಟು ಎಂಬುದಾಗಿ ಕೆಲವು ಲೆಕ್ಕಾಚಾರಗಳು ಹೇಳುತ್ತವೆ.
- ಇವು ಉತ್ಪಾದಕ ಹೊಸ ತೋಟಗಳ ಮೂಲಕ ಸರಿ ಹೊಂದಬಹುದು.
- ಹಾಗಾಗಿ ಈ ವರ್ಷದಲ್ಲಿ ಹಳೆಯದರ ದರ 56000 ಕ್ಕೆ ಮುಟ್ಟಿದಂತೆ ಮುಂದಿನ ಹೊಸ ವರ್ಷದಲ್ಲಿ ದರ ಏರಿಕೆ ಆಗುವ ಎಲ್ಲಾ ಸಾಧ್ಯತೆಗಳಿವೆ.
- ತಕ್ಷಣಕ್ಕೆ ಬೆಲೆ ಏರಿಕೆ ಆಗಲಾರದು.
- ಕಳೆದ ವರ್ಷ ಈ ಸಮಯದಲ್ಲಿ ಹಳೆ ಅಡಿಕೆಗೆ 525 -530 ಇತ್ತು. ಹೊಸತು 500-505 ತನಕ ಇತ್ತು.
- ಅಂತಹ ಗುಣಮಟ್ಟದ್ದು ಈಗ ಬರುತ್ತಿಲ್ಲ ಆ ಕಾರಣ ದರ ಏರಿಕೆ ಆಗಿಲ ಎನ್ನುತ್ತಾರೆ.
- ಯಾರೂ ಬಿಸಿಲಿನಲ್ಲಿ ಚೆನ್ನಾಗಿ ಒಣಗಿದ ಉತ್ತಮ ಮಾಲನ್ನು ಮಾರಾಟ ಮಾಡಿಲ್ಲ. ಒದ್ದೆಯಾದದ್ದು ಮಾತ್ರ ಮಾರಾಟ ಮಾಡಿದ್ದಾರೆ.
ಚಾಲಿ ದರ ಎಲ್ಲಿ ಹೇಗಿತ್ತು?
- ಪುತ್ತೂರು: ಹಳೆಯದು: 51000 – 56000
- ಹೊಸತು: 37500, 47500, 41000
- ಬೆಳ್ತಂಗಡಿ – ಹೊಸತು: 38000, 47500, 41000
- ಹಳೆಯದು: 40000, 56000, 47500
- ಬಂಟ್ವಾಳ-ಹೊಸತು:27500, 47500, 44500
- ಹಳತು: 46000, 56000, 51000
- ಕಾರ್ಕಳ- ಹೊಸತು: 40000, 47500, 43000
- ಹಳತು: 46000, 56000, 55000
- ಕುಂದಾಪುರ – ಹೊಸತು: 40000, 47500, 47000
- ಹಳತು: 50000, 56000, 55000
- ಸುಳ್ಯ- ಹೊಸತು: 30000, 47500, 40000
- ಹಳತು: 46000, 56000, 49600
- ಮಂಗಳೂರು ಹೊಸತು: 35000, 47500, 42500
- ಹಳತು: 48000, 56500, 50000
- ಕುಮಟಾ ಹೊಸ ಚಾಲಿ: 38899, 42809, 42319
- ಹಳೆ ಚಾಲಿ: 45599, 46299, 46029
- ಸಾಗರ: ಹೊಸಚಾಲಿ: 29099, 40019, 39599
- ಸಿರ್ಸಿ ಚಾಲಿ: 39069, 43799, 42214
- ಸಿದ್ದಾಪುರ ಚಾಲಿ: 38609, 42699, 40829
- ಯಲ್ಲಾಪುರ ಚಾಲಿ: 37899, 43509, 42311
- ಹೊಸನಗರ – ಚಾಲಿ: 37299, 38000, 37599
- ಸೊರಬ:ಚಾಲಿ 41000, 41000, 41000
- ಪಟೋರಾ ದರ 39,000-39,500 ತನಕ ಇದ್ದುದು 38,000 38,500 ಕ್ಕೆ ಇಳಿಕೆಯಾಗಿದೆ.
- ಉಳ್ಳಿ ಗಡ್ಡೆ ದರ ಇಳಿಕೆ ಆಗಿಲ್ಲ.
- ಕರಿಗೋಟು 29,500 ತನಕ ಇದ್ದುದು, 28,500 ಕ್ಕೆ ಇಳಿಕೆಯಾಗಿದೆ.
- ಕರಾವಳಿಯಲ್ಲಿ ಖಾಸಗಿಯವರ ಖರೀದಿ ದರ ಸರಾಸರಿ ಗರಿಷ್ಟ 480.00 ಇತ್ತು.
ಕೆಂಪಡಿಕೆ ಧಾರಣೆ:
- ಹೊಸನಗರ ಬಿಳೇ ಗೋಟು: 27000, 28599, 27000
- ಕೆಂಪುಗೋಟು: 35819, 38061, 37509
- ರಾಶಿ: 48109, 51221, 50299
- ಚೆನ್ನಗಿರಿ– ರಾಶಿ: 44129, 51239, 49093
- ಚಿತ್ರದುರ್ಗ– ಅಪಿ: 48600, 49000, 48800
- ಬೆಟ್ಟೆ: 38139, 38569, 38389
- ಕೆಂಪುಗೋಟು: 29629, 30059, 29849
- ರಾಶಿ: 48100, 48500, 48300
- ಭದ್ರಾವತಿ-ರಾಶಿ: 43199, 49699, 48557
- ಗುಬ್ಬಿ ಇತರ: 48200, 48800, 48500
- ಹೊಳಲ್ಕೆರೆ -ರಾಶಿ: 53199, 55209, 53778
- ಹೊನ್ನಾಳಿ -ರಾಶಿ: 46801, 47701, 46929
- ಕೊಪ್ಪ– ಇಡಿ: 51519, 51519, 51519
- ಗೊರಬಲು: 38199, 38199, 38199
- ಕುಮಟಾ ಚಿಪ್ಪು: 29509, 34019, 33729
- ಕೊಕಾ: 21089, 32999, 32549
- ಸಾಗರ -ಕೆಂಪುಗೋಟು:, 24690, 40899, 37619
- ರಾಶಿ: 41399, 50899, 49699
- ಸಿಪ್ಪೆಗೋಟು: 4299, 22463, 21763
- ಶಿವಮೊಗ್ಗ -ಬೆಟ್ಟೆ: 51090, 54120, 52190
- ಗೊರಬಲು: 17005, 38599, 37269
- ರಾಶಿ: 47099, 51099, 49899
- ಸರಕು: 60069, 79100, 71700
- ಸಿದ್ದಾಪುರ-ಬಿಳೇಗೋಟು: 28399, 36399, 34899
- ಕೆಂಪುಗೋಟು: 32111, 36089, 35609
- ರಾಶಿ: 48899, 50809, 50239
- ತಟ್ಟೆ ಬೆಟ್ಟೆ: 40109, 48609, 44589
- ಸಿರಾ-ಇತರ: 9000, 50000, 44942
- ಸಿರ್ಸಿ- ಬೆಟ್ಟೆ: 29649, 47699, 45030
- ಬಿಳೇಗೋಟು: 25219, 37499, 35448
- ಕೆಂಪುಗೋಟು: 30911, 35531, 33791
- ರಾಶಿ: 44899, 50599, 48974
- ಸೊರಬ– ರಾಶಿ: 49800, 49800, 49800
- ತೀರ್ಥಹಳ್ಳಿ– ಬೆಟ್ಟೆ:48099, 55129, 52099
- ಇಡಿ: 40168, 52009, 50829
- ಗೊರಬಲು: 30166, 38299, 37899
- ರಾಶಿ: 38000, 51159, 50749
- ಸರಕು: 50166, 80200, 70699
- ಸಿಪ್ಪೆಗೋಟು: 20212, 20321, 20321
- ತುಮಕೂರು– ರಾಶಿ: 49000, 52600, 51200
- ಯಲ್ಲಾಪುರ-ಅಪಿ: 61815, 61815, 61815
- ಬಿಳೇಗೋಟು: 26899, 36699, 33212
- ಕೋಕಾ: 18312, 32899, 26899
- ಕೆಂಪುಗೋಟು: 27099, 36899, 33499
- ರಾಶಿ: 48919, 56400, 53119
- ತಟ್ಟೆ- ಬೆಟ್ಟೆ: 38969, 47210, 44299
ಬೆಳೆಗಾರರು ದರ ಕುಸಿತ ಆಗಬಹುದೇ ಎಂಬ ಯೋಚನೆಯನ್ನೇ ಬಿಟ್ಟು ಬಿಡಿ. ಇದರ ಬಳಕೆ ತಕ್ಷಣಕ್ಕೆ ಕಡಿಮೆಯಾಗುವ ಸಾಧ್ಯತೆ ಇಲ್ಲವಾದ ಕಾರಣ ಬೇಡಿಕೆ ಇಷ್ಟೇ ಇರುತ್ತದೆ. ಬೆಳೆ ಪ್ರದೇಶ ಹೆಚ್ಚಾದರೂ ಪ್ರಕೃತಿ ಉತ್ಪತ್ತಿ ಹೆಚ್ಚಳವಾಗಲು ಬಿಡುವುದಿಲ್ಲ. ಹಾಗಾಗಿ ದರ ಇಳಿಕೆ ತಾತ್ಕಾಲಿಕ. ಸುಮಾರು ಕಿಲೋ 500 ರ ಸಮೀಪ ದರ ಉಳಿಯುತ್ತದೆ. ಈ ವರ್ಷವೂ ಕೆಂಪಡಿಕೆ ಉತ್ಪಾದನೆ ಕಡಿಮೆ ಇರುವ ಕಾರಣ ದರ ಸ್ಥಿರವಾಗಿ ಉಳಿಯಬಹುದು.