ಅಡಿಕೆ -ದರ ಏರಿಕೆಗೆ ಮುಹೂರ್ತ ಕೂಡಿ ಬರುವ ಮುನ್ಸೂಚನೆ.

ಅಡಿಕೆ -ದರ ಎರಿಕೆ

ಈ ಹಿಂದೆ ನಾವು ಕೆಲವು ವರ್ತಕರು ಮತ್ತು  ಅನುಭವಿಗಳ ಹೇಳಿಕೆಯಂತೆ ಊಹಿಸಿದ್ದ ಬೆಲೆ ಏರಿಕೆಯ  ಕಾಲ ಈಗ ಕೂಡಿ ಬರುವ ಸೂಚನೆ ಕಾಣುತ್ತಿದೆ. ನಿನ್ನೆ ಪಟೋರಾ ಅಡಿಕೆಗೆ 20 ರೂ, ಜಂಪ್. ಇಂದು ಹಳೆ ಅಡಿಕೆಗೆ 10 ರೂ. ಜಂಪ್. ಇನ್ನೇನು ಮುಂದಿನ ವಾರದ ಒಳಗೆ ಚಾಲಿ ಮತ್ತು ಕೆಂಪಡಿಕೆ ಎರಡೂ ಏರಿಕೆ ಪ್ರಾರಂಭವಾಗುವ ಮುನ್ಸೂಚನೆ ಇದೆ. ದರ ಏರಿಕೆಯ ಮುಹೂರ್ತ ಖಾಸಗಿ ವ್ಯಾಪಾರಿಗಳಿಂದ ಪ್ರಾರಂಭವಾಗಿದೆ. ಈಗ ಏರಿಕೆ ಆಗುವುದು ಮುಂದಿನ ಮಳೆಗಾಲದ ಹಂಗಾಮಿಗೆ ದಾಸ್ತಾನು ಮಾಡಿಕೊಳ್ಳುವುದಕ್ಕೆ ಎನ್ನಲಾಗುತ್ತಿದೆ. ವಾಡಿಕೆಯಾಗಿ ರಂಜಾನ್ ಕೊನೆಗೆ ಹಾಗೂ ಮುಂಗಾರು ಹಂಗಾಮಿನ ಎದುರಿಗೆ ಅಡಿಕೆಗೆ ಬೇಡಿಕೆ ಹೆಚ್ಚುತ್ತದೆ. ಬೆಲೆಯೂ ಏರಿಕೆಯಾಗುತ್ತದೆ.

ಖಾಸಗಿ ವ್ಯಾಪಾರಿಗಳ ಹಿಂಜರಿತ 2 ತಿಂಗಳಿಂದ ಅಡಿಕೆ ಧಾರಣೆಯನ್ನು ಮೇಲೆತ್ತಲೇ ಇಲ್ಲ. ಹಾಗೆಂದು ಕ್ಯಾಂಪ್ಕೋ ಅಡಿಕೆ ಧಾರಣೆಯನ್ನು ಇಳಿಸಲೇ ಇಲ್ಲ. ವರ್ಷಾಂತ್ಯ ಮಾರ್ಚ್ 2022 ತಿಂಗಳ ಕೊನೆಗೂ ದರ ಸ್ಥಿರವಾಗಿಯೇ ಇತ್ತು. ಇದು ಬೆಳೆಗಾರರಿಗೆ ಮುಂದೆ ದರ ಏರಿಕೆಯಾಗಿಯೇ ತೀರುತ್ತದೆ ಎಂಬ ಸಂದೇಶವನ್ನು ರವಾನಿಸಿದೆ. ಕಳೆದ ಒಂದು ತಿಂಗಳಲ್ಲಿ ಅಡಿಕೆ ಮಾರುಕಟ್ಟೆಗೆ ಬಂದ ಪ್ರಮಾಣ ಬಹಳ ಕಡಿಮೆ. ಈಗ ಮತ್ತೆ ಅಡಿಕೆಗೆ ಬೇಡಿಕೆ ಪ್ರಾರಂಭವಾಗಿದೆ. ಖಾಸಗಿಯವರು ದರ ಎರಿಕೆಗೆ  ಮುಂದಾಗಿದ್ದಾರೆ. ಖಾಸಗಿಯವರ ಸ್ಪರ್ಧೆಗನುಗುಣವಾಗಿ ಕ್ಯಾಂಪ್ಕೋ ಸಹ ತುಸು ಏರಿಕೆ ಮಾಡುವ ಸಾಧ್ಯತೆ ಇದೆ. ಖಾಸಗಿ ವ್ಯಾಪಾರಿಗಳಲ್ಲಿ ಸ್ಟಾಕು ಕಡಿಮೆ ಇದ್ದು ಬೇಡಿಕೆ ಇರುವ ಕಾರಣ ಹೆಚ್ಚು ಬೆಲೆಯಲ್ಲಿ ಖರೀದಿಸಲು ಪ್ರಾರಂಭಿಸಿದ್ದಾರೆ.

ಚಾಲಿ ಅಡಿಕೆ ಹೊಸದು ಸರಾಸರಿ 44,000 ಸಹಕಾರಿಗಳ ದರವಾದರೆ ಕೆಲವು ಖಾಸಗಿಯವರು 44,500 ತನಕವೂ ಖರೀದಿಗೆ ಮುಂದಾಗಿದ್ದಾರೆ. ಕೆಲವು ಕಡೆ 45,000 ಕ್ಕೆ ಖರೀದಿ ಮಾಡುತ್ತಿದ್ದಾರೆ ಎಂಬ ಸುದ್ದಿಗಳಿವೆ. ಪಟೋರಾ ಅಡಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಹಳೆ ಪಟೋರಾಕ್ಕೆ 42,000 ತನಕವೂ ಏರಿಕೆಯಾಗಿದೆ. ಹಳೆ ಚಾಲಿ  ಮತ್ತು ಡಬ್ಬಲ್ ಚೋಲ್ ಮತ್ತೆ ಏರಿಕೆ ಕಂಡಿದ್ದು, ಖಾಸಗಿಯವರು 54000-55,000 ಕ್ಕೆ ಖರೀದಿ ಮಾಡಲಾರಂಭಿಸಿದ್ದಾರೆ. ಒಡೆದ ಪಟೋರಾ ಬೇಡಿಕೆ ಹೆಚ್ಚೆದ  ಕಾರಣ ಕೆಂಪಡಿಕೆ ದರವೂ ಏರಲಿದೆ. ಸಾಮಾನ್ಯವಾಗಿ ಈ ಅಡಿಕೆ ಬಣ್ಣ ಹಾಕಿ ಕೆಂಪಿಗೆ ಮಿಶ್ರಣ ಮಾಡಲು ಬಳಕೆಯಾಗುವ ಕಾರಣ ಕೆಂಪಡಿಕೆ ಸ್ವಲ್ಪ ಕೊರತೆ ಇರಬೇಕು.

ಕೆಂಪು ರಾಶಿ
 •  ಕೆಂಪು ರಾಶಿ ಅಡಿಕೆಯ ಬೆಲೆ ಸ್ಥಿರವಾಗಿದ್ದು, ನಿಧಾನಗತಿಯಲ್ಲಿ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದೆ.
 • ಕಳೆದ ತಿಂಗಳು ಗರಿಷ್ಟ 47,000 ದ ಆಸು ಪಾಸಿನಲ್ಲಿದ್ದ ಧಾರಣೆ ಈ ತಿಂಗಳು 48,000 ಕ್ಕೆ ಏರಿದೆ. 
 • ಕೆಂಪಡಿಕೆಯ ಅವಕ ಕಡಿಮೆ ಇದೆ. ಶಿವಮೊಗ್ಗದಲ್ಲಿ ಸೋಮವಾರ 3333 ಚೀಲ ಅಡಿಕೆ ಮಾರಾಟವಾಗಿದ್ದರೆ ಇಂದು ಕೇವಲ 50 ಚೀಲ ಮಾತ್ರ.
 • ಭದ್ರಾವತಿಯಲ್ಲಿ ಮಾತ್ರ 1535 ಚೀಲ ಮಾರಾಟವಾಗಿದೆ.
 • ಉಳಿದೆಡೆ ಬರೇ  ಬರೇ ಎರಡಂಕೆಯಷ್ಟು  ಮಾತ್ರ ಅಡಿಕೆ ಮಾರಾಟವಾಗಿದೆ.
 • ಕೆಂಪಡಿಕೆಯ ಧಾರಣೆ ನಿಧಾನಗತಿಯಲ್ಲಿ ಏರಿಕೆ ಆಗಿಯೇ ತೀರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
 • ಮಾರ್ಚ್ ಕೊನೆ ತನಕ ಸಿದ್ದಾಪುರ, ಶಿರಸಿ  ಮತ್ತು  ಸಾಗರದಲ್ಲಿ 47,000 ಸುಮಾರಿಗೆ ಇದ್ದ ಧಾರಣೆ  ಎಪ್ರೀಲ್ ಎರಡನೇ ವಾರಕ್ಕೆ 48,000 ಕ್ಕೆ ಏರಿಕೆಯಾಗಿದೆ.
 • ಯಲ್ಲಾಪುರದಲ್ಲಿ   51,000-52,000 ಸುಮಾರಿಗೆ ಇದ್ದ ದಾರಣೆ ಈಗ 53,500 ದಾಟಿದೆ.
 • ತೀರ್ಥಹಳ್ಳಿಯಲ್ಲಿಯೂ 48,000 ಸುಮಾರಿಗೆ ಇದ್ದ ಧಾರಣೆ 50,000  ಕ್ಕೆ ಏರಿಕೆಯಾಗಿದೆ.

ಶ್ರೀಲಂಕಾ ಮೂಲಕ ಈ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಅಡಿಕೆ ಆಮದು ನಡೆಯುತ್ತಿತ್ತು. ಅಲ್ಲಿನ  ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಅಲ್ಲಿಂದ ಆಮದು ಆಗುವ ಅಡಿಕೆ, ಕರಿಮೆಣಸು ಕಡಿಮೆಯಾಗಿ ಸ್ಥಳೀಯ ವಸ್ತುಗಳಿಗೆ ಬೆಲೆ ಹೆಚ್ಚಳವಾಗಬಹುದು ಎನ್ನುತ್ತಾರೆ. ಬರ್ಮಾ ಮೂಲಕ ಸಹ ಅಡಿಕೆ ಬರುತ್ತಿಲ್ಲ. ಈ ಬಾರಿ ಮುಂಗಾರು ಮಳೆ ಮಾಮೂಲಿನಂತೆ ಜೂನ್ ಎರಡನೇ ವಾರ ಪ್ರಾರಂಭವಾಗಲಿದ್ದು, ಸರಾಸರಿ ಮಳೆಯ ಮುನ್ಸೂಚನೆ ಇದೆ. ಹಾಗಾಗಿ ಎಲ್ಲವೂ ಅನುಕೂಲ ಪರಿಸ್ಥಿತಿ ಇರುವುದರಿಂದ ಅಡಿಕೆಗೆ ಬೆಲೆ ಇಳಿಕೆಯಾಗದು.

ಚಾಲಿ ಅಡಿಕೆ ಧಾರಣೆ ಎಲ್ಲೆಲ್ಲಿ ಹೇಗಿತ್ತು:

 • ಮಂಗಳೂರು: ಹೊಸತು: 43,000 ಸರಾಸರಿ: ಗರಿಷ್ಟ: 44,000
 • ಹಳತು:52000-54,000
 • ಪುತ್ತೂರು: 43,000-44,500
 • ಹಳತು: 52000-54000
 • ಸುಳ್ಯ: ಹೊಸತು: 41000-45.000
 • ಹಳೆಯದು:51,000-54,500
 • ಬೆಳ್ತಂಗಡಿ: ಹೊಸತು: 42,000-45,000
 • ಕಾರ್ಕಳ: ಹೊಸತು: 42,500-45.000
 • ಹಳತು: 50.000-53,000
 • ಕುಂದಾಪುರ: ಹೊಸತು 44000 – 44000,
 • ಹಳೆಯದು: 52000 –  52000,
 • ಶಿರಸಿ: ಹೊಸ ಚಾಲಿ: 39975 – 41131,
 • ಯಲ್ಲಾಪುರ:ಹೊಸ ಚಾಲಿ: 40289 – 41169,
 • ಸಿದ್ದಾಪುರ: ಹೊಸ ಚಾಲಿ: 39599 – 41099,
 • ಹಳೆ ಚಾಲಿ: 48599 – 48599,
 • ಕುಮಟಾ: ಹೊಸತು 39869 – 40199,
 • ಹಳತು:  49899- 50500
 • ಸಾಗರ: ಹೊಸ ಚಾಲಿ: 38799 -39169
 • ಪಟೋರಾ: ಹೊಸತು:36,000-37,000
 • ಹಳೆಯದು: 40,000-42,000
 • ಉಳ್ಳಿ ಗಡ್ಡೆ:20,000-25,000
 • ಕರಿಗೋಟು: 22,000-26,000
 • ಸಿಪ್ಪೆಗೋಟು: 21699 – 23099,

ಕೆಂಪಡಿಕೆ ಧಾರಣೆ:

ಕೆಂಪಡಿಕೆ ಧಾರಣೆಯಲ್ಲಿ ಸರಾಸರಿ ಬೆಲೆ ಮತ್ತು ಗರಿಷ್ಟ ಬೆಲೆಗಳ ಅಂತರ ಬಹಳ ಕಡಿಮೆ ಇದೆ. ಬೇಡಿಕೆ ಚೆನ್ನಾಗಿದ್ದು, ಬರುವ ಪ್ರಮಾಣ ಕಡಿಮೆ ಇದೆ.

 • ಚೆನ್ನಗಿರಿ ರಾಶಿ: 48317 – 48899,
 • ದಾವಣಗೆರೆ: 48300, 46000
 • ಬಧ್ರಾವತಿ: 47091 – 48599,
 • ಹೊನ್ನಾಳಿ: ರಾಶಿ: 48099 – 48300
 • ಚಿತ್ರದುರ್ಗ ರಾಶಿ: 47959 – 47969
 • ಸಾಗರ ರಾಶಿ: 47699 -47299,
 • ಶಿರಸಿ: ರಾಶಿ: 47557 – 49499,
 • ಸಿದ್ದಾಪುರ: ರಾಶಿ: 47399 – 48799
 • ಯಲ್ಲಾಪುರ ರಾಶಿ: 50999 – 53889,
 • ಬೆಟ್ಟೆ : 43869 –  47699,
 • ತೀರ್ಥಹಳ್ಳಿ: ರಾಶಿ: 48999 -49699.
 • ಸರಕು: 70019 – 78000,
 • ಶಿವಮೊಗ್ಗ ಸರಕು: 75200 – 77600,
 • ಶಿವಮೊಗ್ಗ ರಾಶಿ: 48309 – 48689,
 • ಬೆಟ್ಟೆ: 51759 – 52569,

ಕರಿಮೆಣಸು ಧಾರಣೆ:

ಕರಿಮೆಣಸಿನ ಧಾರಣೆ ತಕ್ಷಣಕ್ಕೆ ಏರಿಕೆ ಆಗದಿದ್ದರೂ ಇಳಿಕೆಯಂತೂ ಆಗದು. ಬೇಡಿಕೆ ಇದೆ. ಇಂದು ಶಿರಸಿಯಲ್ಲಿ 53800 ಕ್ಕೆ ಖರೀದಿ ಆಗಿದೆ.ಮಂಗಳೂರಿನಲ್ಲಿ ಇಂದು ಕ್ವಿಂಟಾಲಿಗೆ 52500 ಕ್ಕೆ ಖರೀದಿಯಾಗಿದೆ. ಬೆಳೆಗಾರರಲ್ಲಿ ಸ್ಟಾಕು ಇದೆ ಎಂಬ ಸ್ಪಷ್ಟ ಮಾಹಿತಿ ವರ್ತಕರಿಗೆ ತಿಳಿದಿದ್ದು, ನಿಧಾನಗತಿಯಲ್ಲಿ ದರ ಏರಿಳಿತ ಮಾಡುತ್ತಾ ಮುಂದೆ ಕೊಂಡೋಗುವ ಸಾಧ್ಯತೆ ಇದೆ. ಮೆಣಸು ಬೆಳೆಯವ ಎಲ್ಲಾ ದೇಶಗಳಲ್ಲೂ  ಕಡಿಮೆ ಬೆಲೆಗೆ ಮೆಣಸು ಲಭ್ಯವಿಲ್ಲ ಎಂಬುದಾಗಿ ಇಂಟರ್ ನ್ಯಾಶನಲ್ ಪೆಪ್ಪೆರ್ ಕಮ್ಯೂನಿಟಿ ಜರ್ನಲ್ ನ ಪ್ರಕಟಣೆಗಳು ಹೇಳುತ್ತಿವೆ. ಹಾಗಾಗಿ ಸ್ಥಳೀಯ ಮೆಣಸಿನ ಬೆಲೆ ಸ್ವಲ್ಪ ಏರಿಕೆ ಆಗಬಹುದು. ಮೆಣಸಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಒಂದಷ್ಟು ಸಂಸ್ಥೆಗಳು ದೊಡ್ದ ಪ್ರಮಾಣದಲ್ಲಿ ಈ ವ್ಯವಹಾರಕ್ಕೆ ಇಳಿದ ಕಾರಣ ಬೆಲೆ ಏರಿಕೆ ಆಗಬಹುದು. ಜೂನ್ ಸುಮಾರಿಗೆ 55,000 ತನಕ ಏರಿಕೆ ಆಗಬಹುದು.

ಏರಿಕೆಯಲ್ಲಿ ಕರಿಮೆಣಸು
 • ಬಹುತೇಕ ಎಲ್ಲಾ ಕಡೆಯ ಮಾರುಕಟ್ಟೆಯಲ್ಲೂ  ಸರಾಸರಿ 50,000- ಗರಿಷ್ಟ 51,500 ದರ ಇದೆ.
 • ಕೆಲವು ಕಡೆ (ಮಂಗಳೂರು) 52,500 ದರ  ಪ್ರಕಟಣೆ ಇರುತ್ತದೆ.
 • ಕ್ಯಾಂಪ್ಕೋ ಲೀಟರ್ ತೂಕ ಮತ್ತು ತೇವಾಂಶ ಮಾಪಕದ ಆಧಾರದ ಮೇಲೆ ಕಿಲೋ 510 ರಂತೆ ಖರೀದಿ ಮಾಡುತ್ತಿದೆ.
 • ಬಿಳಿ ಮೆಣಸಿನ ಧಾರಣೆ ಚೆನ್ನಾಗಿದ್ದು, ಕ್ವಿಂಟಾಲಿಗೆ 83,000-84,000 ತನಕ ಇದೆ.

ಶುಂಠಿ ಧಾರಣೆ:

ಇನ್ನು ಶುಂಠಿ ದರ ಏರಿಕೆ ಕಷ್ಟ ಸಾಧ್ಯ. ಬೆಲೆ ಏರಲಿದೆ ಎಂಬ ಸುದ್ದಿಗಳು ಅಂತಹ ಫಲಿತಾಂಶ ಕೊಡಲಿಲ್ಲ. ಕಳೆದ ವರ್ಷದಷ್ಟು ಈ ವರ್ಷ ಶುಂಠಿ ಹಾಕಿದವರಿಲ್ಲ. ಈಗೀಗ ಬೀಜದ ಶುಂಠಿಗೆ ಬೇಡಿಕೆ ಬರಲಾರಂಭಿಸಿದ್ದು, ಪ್ರಮಾಣ ಬಹಳ ಕಡಿಮೆ. ಇದು ದರ ಮೇಲೆತ್ತಲಾರದು. ಬೆಳೆಗಾರರಲ್ಲಿ ಸಾಕಷ್ಟು ಶುಂಠಿ ದಾಸ್ತಾನು ಇದ್ದು, ಶುಂಠಿ ಬೆಳೆಗಾರರೆಲ್ಲಾ ಈ ವರ್ಷ ಬಹಳ ನಷ್ಟ ಅನುಭವಿಸಿದ್ದಾರೆ.

 • ಹಸಿ ಶುಂಠಿ ಬೆಲೆ ಸರಾಸರಿ 1000 ಗರಿಷ್ಟ 1100 ತನಕ ಇದೆ.

ಕೊಬ್ಬರಿ ಧಾರಣೆ:

ಕೊಬ್ಬರಿ ಧಾರಣೆ ಸ್ಥಿರವಾಗಿದೆ. ಉಳಿದೆಲ್ಲಾ ಎಣ್ಣೆಗಳ ಬೆಲೆ ಏರಿಕೆಯಾಗಿದ್ದರೂ ಸಹ ತೆಂಗಿನೆಣ್ಣೆಯ ಬೆಲೆ ಏರಿಕೆ ಆಗಿಲ್ಲ. ಹಾಗಾಗಿ ಎಣ್ಣೆ ಕೊಬ್ಬರಿಗೂ ಬೆಲೆ ಏರಿಲ್ಲ. ಬಾಲ್ ಕೊಬ್ಬರಿಗೂ ಏರಿಕೆ ಆಗಿಲ್ಲ. ಈಗಾಗಲೇ ಹೊಸ ತೆಂಗಿನ ಕಾಯಿ ಕೊಯಿಲು ಪ್ರಾರಂಭವಾಗಿದ್ದು, ಇನ್ನು ಹೆಚ್ಚು ದರ ಏರಿಕೆ ಆಗಲಾರದು.

ಕೊಬ್ಬರಿ
 • ಅರಸೀಕೆರೆಯಲ್ಲಿ  ಬಾಲ್ ಕೊಬ್ಬರಿ 16500-16900
 • ತಿಪಟೂರು: 17000-17011
 •  ಪುತ್ತೂರು  ಎಣ್ಣೆ ಕೊಬ್ಬರಿ :9500-10500
 • ಮಂಗಳೂರು ಎಣ್ಣೆ ಕೊಬ್ಬರಿ :9000-11000
 • ತೆಂಗಿನ ಕಾಯಿ ಕಿಲೋ:31-32

ಏಲಕ್ಕಿ ಧಾರಣೆ:

 • ಕೂಳೆ,  430-450.00  
 •  ನಡುಗೊಲು,  500-550.00 
 •  ರಾಶಿ,  600-650.00  
 •  ರಾಶಿ ಉತ್ತಮ,  650-700.00 
 •   ಜರಡಿ,  750-800.00 
 • ಹೇರಕ್ಕಿದ್ದು,  1100-1150.00 
 •  ಹಸಿರು ಸಾದಾರಣ,  600-700.00
 •  ಹಸಿರು ಉತ್ತಮ,  900-950.00 
 •  ಹಸಿರು ಅತೀ ಉತ್ತಮ,  1200-1250.

ರಬ್ಬರ್ ಧಾರಣೆ:

 • 1X grade:181.00
 • RSS 4  168.00
 • RSS 5 162.50
 • RSS 3 168.50
 • LOT: 158.50
 • SCRAP;110.00-118.00

ಕಾಫೀ ಧಾರಣೆ:

ಕಾಫಿ
 • ರೋಬಸ್ಟಾ ಪಾರ್ಚ್ ಮೆಂಟ್:9000-9400
 • ರೋಬಸ್ಟಾ ಚೆರಿ:3900-4500
 • ಅರೆಬಿಕಾ ಪಾರ್ಚ್ ಮೆಂಟ್:15500-16100
 • ಅರೇಬಿಕಾ ಚೆರಿ: 7200-8000

ವನ ಸಾಂಬಾರ:

 • ಜಾಯೀ ಕಾಯಿ:190 -200 ಕಿಲೊ
 • ಜಾಯಿ ಪತ್ರೆ: 800-950
 • ದಾಲ್ಛಿನಿ ಮೊಗ್ಗು: 1000-1200
 • ರಾಂಪತ್ರೆ: 500-600
 • ಕಾಯಿ: 150 -200

ಈಗ ಹಳೆ ಚಾಲಿಗೆ ದರ ಏರಿಕೆಯಾಗಿದೆ. ಹಳೆ ಚಾಲಿ ಬಹಳ ಕಡಿಮೆ ಇದೆ. ಇನ್ನೇನು  ಕೆಲವೇ ದಿನಗಳಲ್ಲಿ ಸ್ವಲ್ಪ ಸ್ವಲ್ಪವೇ ಹೊಸ ಚಾಲಿಯ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹಳೆ ಚಾಲಿ ಹೆಚ್ಚು ಏರಿಕೆ ಆಗಲಾರದು. ಮೆಣಸು ಏರಿಕೆ ಆಗುವ ಸಾಧ್ಯತೆ ಇದೆ. ರಬ್ಬರ್ ಮಳೆಗಾಲದಲ್ಲಿ ಏರಿಕೆ ಆಗಬಹುದು.

Leave a Reply

Your email address will not be published. Required fields are marked *

error: Content is protected !!