ಗೇರು – ಈಗ ಮರಗಳ ಮೇಲೆ ಒಮ್ಮೆ ದೃಷ್ಟಿ ಹರಿಸುತ್ತಿರಿ

by | Sep 2, 2022 | Pest Control (ಕೀಟ ನಿಯಂತ್ರಣ), Cashew (ಗೇರು) | 0 comments

ಈ ಸಮಯದಲ್ಲಿ ಗೇರು ಮರಗಳಲ್ಲಿ ಗೇರು ಬೀಜದ ಕೊಯಿಲು ನಡೆಯುತ್ತಿರುತ್ತದೆ. ಗೇರು ಬೀಜ ಕೊಯಿಲಿಗೆ ಹೋಗುವ ಸಮಯದಲ್ಲಿ ಬುಡ ಭಾಗವನ್ನು ತಪ್ಪದೇ ಗಮನಿಸಿರಿ. ಈ ಸಮಯದಲ್ಲಿ ಬುಡದ ಕಾಂಡಕ್ಕೆ ಕಾಂಡ ಕೊರಕ ಹುಳು ಬಾಧಿಸುತ್ತದೆ. ಈ ಹುಳು ಬಾಧಿಸಿದ ಸಮಯದಲ್ಲಿ ಉಪಚಾರ ಮಾಡಿದರೆ  ಮಾತ್ರ ಅದನ್ನು ಬದುಕಿಸಲು ಸಾಧ್ಯ.

Borer effected Tree

 ಪತ್ತೆ ಕ್ರಮ:

  • ಗೇರು ಮರಕ್ಕೆ ಮಾರಣಾಂತಿಕವಾಗಿ ಹಾನಿ ಮಾಡುವ ಕೀಟ ಕಾಂಡ ಕೊರಕ (Stem borer of cashew). ಈ ಸಮಯದಲ್ಲಿ ಕಾಂಡ ಕೊರಕ ಕೀಟ ಕಾಡದ ಬುಡ ಭಾಗದಲ್ಲಿ ತೂತು ಕೊರೆದು ಒಳಗೆ ಮೊಟ್ಟೆ ಇಡುತ್ತದೆ.
  • ಅದು ಆ ಮೊಟ್ಟೆಗಳು ಮರಿಗಳಾಗಿ ಕಾಂಡದ ಅಸ ಹೀರುತ್ತಾ ಮರದ ಅಂಗಾಂಶವನ್ನು ತಿಂದು ಹಿಕ್ಕೆ ಯ ರೂಪದಲ್ಲಿ ಹೊರಹಾಕುತ್ತದೆ.
  • ಕಾಂಡದ ಬುಡ ಭಾಗದಲ್ಲಿ ಸುಮಾರು 2 ಅಡಿ ಎತ್ತರದ ತನಕವೂ ಇದು ಹಾನಿ ಮಾಡುತ್ತದೆ.
  • ಬೇರುಗಳನ್ನೂ ಹಾನಿ ಮಾಡುತ್ತದೆ. ಸಾಮನ್ಯವಾಗಿ ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ಈ ಕಾಂಡ ಕೊರಕ ದುಂಬಿಗಳು (Cashew stem and root Borer CSRB) ಹೆಚ್ಚು ಚಟುವಟಿಕೆಯಲ್ಲಿದ್ದು,

Stem Borer larvae

  • ಈ ಸಮಯದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಮೊಟ್ಟೆ ಇಡುತ್ತವೆ.
  • ಮೊಟ್ಟೆಗಳು 7-8 ದಿನಗಳಲ್ಲಿ ಮರಿಯಾಗಿ ಭಕ್ಷಣೆಗೆ ಪ್ರಾರಂಭವಾಗುತ್ತದೆ.
  • ಬುಡ ಭಾಗವನ್ನು ಗಮನಿಸಿದರೆ ಬುಡದಲ್ಲಿ ತೂತುಗಳು ಕಾಣಿಸುತ್ತದೆ.
  • ಮೇಣ ಕಾರಿದ್ದೂ ಕಾಣಿಸುತ್ತದೆ. ಮರದ ಹುಡಿ ಉದುರಿರುವುದೂ ಕಾಣುತ್ತದೆ.

ಪ್ರಾರಂಭ ಯಾವಾಗ:

  • ಮಳೆಗಾಲದುದ್ದಕ್ಕೂ ಈ ಕೀಟದ ಹುಳುಗಳು ಕಾಂಡವನ್ನು  ಭಕ್ಷಿಸುತ್ತಾ ಮರದಲ್ಲಿ ರಂದ್ರ ಕೊರೆಯುತ್ತಾ ಇರುತ್ತವೆ.
  • ಮಳೆಗಾಲದಲ್ಲಿ ಅಧಿಕ ತೇವಾಂಶ ಇರುವ ಕಾರಣ ಮರಕ್ಕೆ ಹಾನಿಯಾದುದು ಕಾಣಿಸುವುದಿಲ್ಲ.
  • ಆದಾಗ್ಯೂ ಹಚ್ಚ ಹಸುರಾಗಿ ಇರಬೇಕಾದ ಎಲೆಗಳು ತಿಳಿ ಹಳದಿ ಬಣ್ಣದಲ್ಲಿರುತ್ತವೆ.
  • ಚಳಿಗಾಲ ಬಂದಾಗ ತೇವಾಂಶದ ಕೊರತೆಯಲ್ಲಿ  ಸಸ್ಯ ಸಾಯುತ್ತದೆ.

Treatment

ನಿಯಂತ್ರಣ:

  • ನಿಯಂತ್ರಣಕ್ಕೆ ಪ್ರಾರಂಭದ ಹಂತದಲ್ಲಿ ಉಪಚಾರ ಕೈಗೊಂಡರೆ ಮಾತ್ರ ಸಾಧ್ಯವಾಗುತ್ತದೆ.
  • ತಡವಾದರೆ ಫಲವಿಲ್ಲ. ಬುಡ ಭಾಗವನ್ನು ಕೆತ್ತಿ ತೂತುಗಳನ್ನು ಗುರುತಿಸಿರಿ.
  • ಅಲ್ಲಿ ಹುಳುಗಳು ಇದ್ದರೆ ಅದನ್ನು ತೆಗೆಯಿರಿ. ಅಲ್ಲಿರುವ ತೂತಿಗೆ ಒಳಗಡೆ ಕೀಟನಾಶಕ ಹೋಗುವಂತೆ ಮಾಡಲು ಒಂದು ದೊಡ್ದ ತೂತಿನ ಇಂಜೆಕ್ಷನ ಸಿರಿಂಜ್ ನಲ್ಲಿ ಕ್ಲೋರೋಫೆರಿಫೋಸ್ ಕೀಟನಾಶಕ (10 ಮಿಲಿ-1 ಲೀ ನೀರು) ಮಿಶ್ರಣ ಮಾಡಿ ಒಳ ಭಾಗಕ್ಕೆ ತಾಗುವಂತೆ ಬಿಡಿ.
  • ಅದೇ ದ್ರಾವಣದಿಂದ ಅ ಬುಡ ಭಾಗವನ್ನು ತೋಯಿಸಬೇಕು.
  • ಹಾನಿ ಆಗಿದ್ದರೆ  ಆ ಮರ ಬದುಕುವ ಸಾಧ್ಯತೆ ಕಡಿಮೆ. ಇಂತಹ ಮರಗಳಿಗೆ ಮರುಜೀವ ನೀಡುವುದು (rejuvanation)  ಉತ್ತಮ.

chemical treatment

  • ಸಾಧ್ಯವಾದರೆ ಬುಡ ಭಾಗವನ್ನು ಸ್ವಲ್ಪ ಅಗೆದು ತೋರು ಬೆರಳು ಗಾತ್ರದ ಬೇರನ್ನು ಆಯ್ಕೆ ಮಾಡಿ ಅದರ ತುದಿಯನ್ನು ತುಂಡು ಮಾಡಿ ಅದಕ್ಕೆ  25-50 ಮಿಲಿ  ಮೇಲಿನ ಕೀಟನಾಶಕ ದ್ರಾವಣವನ್ನು ಬೇರಿನ ಮೂಲಕ ಉಣಿಸಿರಿ.
  • ಹಾನಿಯಾದ ಮರಗಳಿದ್ದರೆ ಅದನ್ನು ಅಲ್ಲೇ ಬಿಡದೆ ಉರುವಲಿಗೆ ಬಳಕೆ ಮಾಡುವುದು ಅಥವಾ ಸುಡಬೇಕು. ಅಲ್ಲಿಯೇ ಬಿಟ್ಟರೆ ಬೇರೆ ಮರಗಳಿಗೆ ಹಾನಿಯಾಗುತ್ತದೆ.
  • ಮೆಟರಿಜಿಯಂ ಅನಿಸೊಪ್ಲಿಯ (Metarhizium anisopliae) ಮತ್ತು ಎಂಟಮೋ ಪಥೋಜೆನಿಕ್ ಶಿಲೀಂದ್ರ (Entomopathogenic fungus) ದಿಂದ  ಹುಳು ಬಾರದಂತೆ ತಡೆಯಲು ಸಾಧ್ಯವೆನ್ನುತ್ತಾರೆ.

ಹಾನಿಗೊಳಗಾಗ ಮರದ ಕಾಂಡವನ್ನು ಬುಡಭಾಗದಿಂದ ಮಟ್ಟಕ್ಕೆ ಕತ್ತರಿಸಿ, ಕೆಳಭಾಗದಲ್ಲಿ ಮತ್ತೆ ಚಿಗುರು ಬರುವಂತೆ ಮಾಡಿ ಪುನಶ್ಚೇತನ ಮಾಡಬಹುದು. ಹೀಗೆ ಮಾಡಬೇಕಿದ್ದರೆ ಕೆಳಭಾಗದ ಕಾಂಡ ಹಾನಿ ಆಗಿರಬಾರದು.  ಮತ್ತೆ ಹೊಸ ಚಿಗುರು ಬಂದಾಗ ಅದಕ್ಕೆ ಹೊಸ ತಳಿಯನ್ನೂ ಕಸಿ ಮಾಡಬಹುದು.

ಗೇರು ತೋಟದಲ್ಲಿ ನೈರ್ಮಲ್ಯ ಇರಲಿ. ಹಣ್ಣುಗಳನ್ನು  ಅಲ್ಲೇ ಎಸೆಯದಿರಿ. ಅದು ದುಂಬಿಗಳನ್ನು ಆಕರ್ಷಿಸುತ್ತದೆ. ಮರದ ಎಲೆಯನ್ನು  ವೀಕ್ಷಿಸಿ ಅದರ ಬಣ್ಣ ಬದಲಾವಣೆಯನ್ನು ಗಮನಿಸಿದರೆ ,ಕಾಂಡ ಕೊರಕ ಇರುವಿಕೆಯನ್ನು ಗುರುತಿಸಬಹುದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!