ನೆಟ್ಟು ಬೆಳೆಸುವ ಹುಲ್ಲು ವೇಗವಾಗಿ ಬೆಳೆಯಬೇಕೇ? ಇದು ಸೂಕ್ತ ಬೆಳೆ ಕ್ರಮ.

ನೆಟ್ಟು ಬೆಳೆಸುವ ಹುಲ್ಲು ವೇಗವಾಗಿ ಬೆಳೆಯಬೇಕೇ? ಇದು ಸೂಕ್ತ ಬೆಳೆ ಕ್ರಮ.

ಹಸು ಸಾಕಣಿಕೆ ಮಾಡುವವರು ಮೇವಿನ ಉದ್ದೇಶಕ್ಕಾಗಿ ಹಸಿರು ಹುಲ್ಲು ಬೆಳೆಸುವುದು ಸಾಮಾನ್ಯ. ಹಸಿಹುಲ್ಲು ಬೆಳೆಸಿದರೆ  ಬೇಕಾದಾಗ ಬೇಕಾದಷ್ಟು ಮೇವು ಪಡೆಯಬಹುದು.ನೆಟ್ಟು ಬೆಳೆಸುವ ಈ ಹುಲ್ಲಿನಸಸ್ಯ ಧೀರ್ಘಾವಧಿಯಾಗಿದ್ದು, ಯಾವ ರೀತಿಯಲ್ಲಿ ಬೆಳೆದರೆ ಅದನ್ನು ಧೀರ್ಘ ಕಾಲದ ತನಕ ಉಳಿಸಿಕೊಂಡು ಕಠಾವು ಮಾಡುತ್ತಿರಬಹುದು ಎಂಬ ಬಗ್ಗೆ  ವಿಸೃತ ಮಾಹಿತಿ ಇಲ್ಲಿದೆ.  ಹಸಿಹುಲ್ಲು ಪಶು ಸಂಗೋಪನೆಯಲ್ಲಿ ಬಹಳ ಮಹತ್ವ ಪಡೆದಿದೆ. ಹಸುಗಳು ಇರಲಿ, ಮೇಕೆಗಳಿರಲಿ, ಎಮ್ಮೆಗಳಿರಲಿ, ಅವುಗಳಿಗೆ  ಕೊಡಬೇಕಾದ ಪ್ರಾಮುಖ್ಯ ಆಹಾರ ಎಂದರೆ ಹಸುರು ಮೇವು. ಇದು ಪಶುಗಳಿಗೆ  ದೇಹ ಪೋಷಣೆಗೆ…

Read more
ಒಂದು ಬುಟ್ಟಿ ಸಗಣಿಗೆ ಬೆಲೆ ರೂ.500 ಕ್ಕೂ ಹೆಚ್ಚು!

ಒಂದು ಬುಟ್ಟಿ ಸಗಣಿಗೆ ಬೆಲೆ ರೂ.500 ಕ್ಕೂ ಹೆಚ್ಚು!

ನೆಲಕ್ಕೆ ಸಗಣಿ ಸಾರಿಸಲು ಸ್ವಲ್ಪ ಸಗಣಿ ಕೊಡಿ ಎಂದು ಹಸು ಸಾಕದವರು ಸಾಕುವವರಲ್ಲಿ ಯಾವಾಗಲೂ ಕೇಳುತ್ತಾ ಇರುತ್ತಾರೆ. ಅವರಿಗೆ ನಿರ್ಧಾಕ್ಷಿಣ್ಯವಾಗಿ ಹೀಗೆ ಹೇಳಿ. ಒಂದು ಬುಟ್ಟಿ ಸಗಣಿ ಬೇಕಾದರೆ ರೂ. 500 ಆಗುತ್ತದೆ ಎಂದು. ಯಾಕೆ ಇಷ್ಟು ಬೆಲೆ ಎಂದು ಕೇಳಿಯೇ ಕೇಳುತ್ತಾರೆ.ಆಗ ಈ ರೀತಿ ಅದರ ಉತ್ಪಾದನಾ ವೆಚ್ಚವನ್ನು ವಿವರಿಸಿ. ಸಗಣಿಯ ಉತ್ಪಾದನಾ ವೆಚ್ಚ ರೂ.1000 ಕ್ಕಿಂತಲೂ ಹೆಚ್ಚು ಇರುವಾಗ ಅದನ್ನು ಕಡಿಮೆ ಬೆಲೆಗೇ ಕೊಡಲಾಗುತ್ತದೆ.  ಹಸು ತಿಂದ ಮೇವು ಅದು ಹಸಿ ಹುಲ್ಲು ಇರಲಿ,…

Read more
ಜಾನುವಾರುಗಳಿಗೆ ಸಿಡುಬು ರೋಗ- ಪಶುಗಳು ಸಂತತಿಯ ವಿನಾಶಕ್ಕೆ ಕಾರಣವಾಗಬಹುದೇ

ಜಾನುವಾರುಗಳಿಗೆ ಸಿಡುಬು ರೋಗ- ಪಶು ಸಂತತಿಯ ವಿನಾಶಕ್ಕೆ ಕಾರಣವಾಗಬಹುದೇ?

ಪಶುಗಳ ಅದರಲ್ಲೂ ದನಗಳ ಚರ್ಮಗಂಟು ರೋಗ ತೀವ್ರ ರೂಪ ತಳೆಯುತ್ತಿದ್ದು, ಈಗಾಗಲೇ ಸಾವಿರಾರು ಹಸುಗಳು ಮರಣ ಹೊಂದಿವೆ. ಸಾವಿರಾರು ಜೀವನ್ಮರಣ ಹೋರಾಟದಲ್ಲಿವೆ. ಕೊರೋನಾ, ಅಥವಾ ಸಿಡುಬು  ತರಹದ ಸಾಂಕ್ರಾಮಿಕ ರೋಗವೊಂದು  ಹಸು ಸಾಕುವರ ಮನೆಯಲ್ಲಿ ಸೂತಕದ ವಾತಾವರಣವನ್ನು ಉಂಟುಮಾಡಿದೆ. ಯಾವಾಗ  ಯಾವುದಕ್ಕೆ ಬರಬಹುದೋ ಎಂಬ ಆತಂಕ ಉಂಟಾಗಿದೆ. ಹೊಸ ತಲೆಮಾರಿಗೆ ಕೊರೋನಾ ರೋಗ ಹೇಗೆ ಮನುಷ್ಯ ಮನುಷ್ಯರನ್ನು ದೂರ ದೂರ ಮಾಡುವ ಸನ್ನಿವೇಶ ಉಂಟು ಮಾಡಿತ್ತು ಎಂಬುದರ ಅರಿವು ಇದೆ. ಸುಮಾರು 70 ರ ದಶಕದಲ್ಲಿ ಸಿಡುಬು…

Read more
ಒಂದು ಲೀ. ಹಾಲಿಗೆ 100 ರೂ.

ಒಂದು ಲೀ. ಹಾಲು ರೂ.100 ಆದರೆ…

ಒಬ್ಬ ಮಿತ್ರರು ಹೇಳುತ್ತಾರೆ, ನಾನು ಹಸು ಸಾಕಾಣೆ ಮಾಡಬೇಕಾದರೆ ಹಾಲು ಲೀಟರೊಂದರ ರೂ. 100 ರೂ. ಸಿಗಬೇಕು. ಅಷ್ಟು  ಖರ್ಚು ಹಸು ಸಾಕುವುದಕ್ಕೆ ಇದೆ. ಹಾಗಾಗಿ ನಷ್ಟವಾಗುವ ಕಸುಬನ್ನು ನಾನು ಯಾಕೆ ಮಾಡಬೇಕು? ಇದು ನನ್ನ ಮಿತ್ರರೊಬ್ಬರ ಕಥೆ ಮಾತ್ರ ಅಲ್ಲ ಬಹುತೇಕ ಹೈನುಗಾರಿಕೆ ಅಥವಾ ಹಸು ಸಾಕಣೆ ಮಾಡುತ್ತಿದ್ದ ರೈತರು ಅದನ್ನು ಈಗ ಬಿಟ್ಟಿದ್ದರೆ ಅದಕ್ಕೆ ಕಾರಣ ಲಾಭ ನಷ್ಟದ ಲೆಕ್ಕಾಚಾರ. ಲಾಭವಾಗುವುದಾರರೆ ಹಸು ಸಾಕಣೆ ಬೇಕು. ಲಾಭ ಇಲ್ಲವಾದರೆ ಬೇಡ. ಹಸು ಸಾಕಾಣಿಕೆ ಲಾಭವಲ್ಲ…

Read more
ಧೀರ್ಘ ಆಯುಷ್ಯ – ಸ್ವಸ್ಥ ಆರೋಗ್ಯಬೇಕೇ? ಹಾಸು ಸಾಕಣೆ ಮಾಡಿ

ದೀರ್ಘ ಆಯುಷ್ಯ – ಸ್ವಸ್ಥ ಆರೋಗ್ಯಬೇಕೇ? ಹಸು ಸಾಕಣೆ ಮಾಡಿ.

ಇಂದಿನ ಹೊಸ ತಲೆಮಾರು ಆರೋಗ್ಯ – ಆಯುಷ್ಯಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ನಮ್ಮ ಹಿರಿಯರು ಖರ್ಚು ಮಾಡಿ ಆರೋಗ್ಯವಂತರಾಗಿರಲಿಲ್ಲ. ಅವರ ದೈನಂದಿನ ಕೆಲಸ ಕಾರ್ಯಗಳು ಅವರನ್ನು ಆರೋಗ್ಯವಾಗಿಟ್ಟಿದೆ. ಅದರಲ್ಲಿ ಒಂದು ಹಸು ಸಾಕಾಣಿಕೆ. ಹಸು ಸಾಕಾಣಿಕೆಯಿಂದ ಪ್ರತ್ಯಕ್ಷವಾಗಿಯೂ ಆರೋಗ್ಯ, ಆಯುಸ್ಸು ವೃದ್ಧಿಸುತ್ತದೆ. ಪರೋಕ್ಷವಾಗಿಯೂ ವೃದ್ಧಿಸುತ್ತದೆ. ಇದು ನಿಜವೋ, ಅಲ್ಲವೋ ಎಂಬುದನ್ನು  ಹತ್ತಾರು ಕಡೆ ನೋಡಿ, ತಿಳಿದು ಎಲ್ಲರೂ  ಗಮನಿಸಬಹುದು. ಹಸು ಸಾಕಾಣಿಕೆ ಎಲ್ಲರಿಗೂ ಮಾಡಲಿಕ್ಕೆ ಸಾಧ್ಯವಿಲ್ಲ. ಪೇಟೆ ಪಟ್ಟಣದಲ್ಲಿರುವವರು ಹಸು ಸಾಕುವುದು ಅಸಾಧ್ಯ. ಆದರೆ…

Read more
ಜಾನುವಾರುಗಳ ಚರ್ಮ ಗಂಟು ರೋಗ

ಜಾನುವಾರುಗಳ ಚರ್ಮ ಗಂಟು ರೋಗಕ್ಕೆ ಈಗ ಔಷಧಿ ಸಿದ್ದವಾಗಿದೆ.

ಜಾನುವಾರುಗಳ ಚರ್ಮದಲ್ಲಿ ಅಲ್ಲಲ್ಲಿ ಗಂಟುಗಳಂತೆ ಅಥವಾ ಗುಳ್ಳೆಗಳಂತೆ ಎದ್ದು ಉಂಟಾಗುವ ಅಸ್ವಾಸ್ಥ್ಯ ಔಷಧಿ ಇಲ್ಲದೆ  ಇತ್ತೀಚೆಗೆ ಕೆಲವು ಕಡೆ ತೀವ್ರ ಸ್ವರೂಪ ಪಡೆಯುತ್ತಿದೆ.  ಇದನ್ನು Lumpy skin disease (LSD) ಎಂದು ಕರೆಯುತ್ತಾರೆ. ಇದರ ಔಷದೋಪಚಾರಕ್ಕೆ ಹೈನುಗಾರರು ಸಿಕ್ಕ ಸಿಕ್ಕ ವೈದ್ಯರ, ಮೆಡಿಕಲ್ ಶಾಪ್ ಗಳ ಮೊರೆ ಹೋಗುತ್ತಿದ್ದಾರೆ, ಈ ತನಕ ಇದಕ್ಕೆಂದೇ ಔಷಧಿ ಬಿಡುಗಡೆ ಆಗಿಲ್ಲ. ಹಾಗಾಗಿ ಔಷದೋಪಚಾರದಿಂದ ಈ ರೋಗ ವಾಸಿಯಾಗಿಲ್ಲ. ರೋಗಕ್ಕೆ ಕಾರಣ ಒಂದು ವೈರಸ್ ( ನಂಜಾಣು ) ಆಗಿರುತ್ತದೆ.  ಹಿಂದೆ…

Read more
ಹಾಲು ಕರೆಯುವುದು

ದನಗಳು ಇನ್ನು ಹಾಲು ಕೊಡಲಾರವು!

ಕೆಲ ದಿನಗಳ ಹಿಂದೆ ಶ್ರೀ ರಮೇಶ್ ದೇಲಂಪಾಡಿಯವರು  ಅನಿಲ್ ಕುಮಾರ್ ಜಿ ಅವರ ಒಂದು ಪೋಸ್ಟ್ ಹಂಚಿಕೊಂಡಿದ್ದರು. ದನಗಳು ಹಾಲು ಕೊಡುವುದಿಲ್ಲ ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಸುವ ಒಂದು ಅರ್ಥಗರ್ಭಿತ ಬರಹ. ಇದಕ್ಕೆ ಪೂರಕವಾಗಿ ಇಂದಿನ ಹಸು ಸಾಕಾಣೆ ಮತ್ತು ಅದನ್ನು ಮುಂದುವರಿಸುವ ಕಷ್ಟದ ಬಗ್ಗೆ ಇಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇವೆ. ಅನಾದಿ ಕಾಲದಿಂದಲೂ ಹಸು ಸಾಕುವುದು ಮಾನವನ ಒಂದು ಉಪಕಸುಬಾಗಿತ್ತು. ಹಸುಗಳನ್ನು ಸಾಕಿದರೆ ಮಾತ್ರ ಅದು ಉಳಿಯುತ್ತದೆ. ಇದು ಅನ್ಯರ ಆಶ್ರಯದಲ್ಲಿ ಬೆಳೆಯಬೇಕಾದ ಪ್ರಾಣಿ. ಅದಕ್ಕಾಗಿಯೇ…

Read more
ಸ್ಥಳೀಯ ಹಸುವಿನ ಸಗಣಿಯ ಅಥವಾ ಗೋಮಯ

ವೈಜ್ಞಾನಿಕವಾಗಿಯೂ ಸಾಬೀತಾದ ಸ್ಥಳೀಯ ಹಸು ಸಗಣಿಯ ಈ ಉಪಯೋಗಗಳು.

ಪ್ರಪಂಚದಲ್ಲಿ ಕೇವಲ 12 ಗಂಟೆ ಒಳಗೆ ನಾವು ಕೊಡುವ ಹಸಿ, ಒಣ ಹುಲ್ಲನ್ನು ತಿಂದು ಜೀರ್ಣಿಸಿ ಅದನ್ನು ಸಗಣಿ ರೂಪದ ಗೊಬ್ಬರವಾಗಿ ಬುಟ್ಟಿಯಷ್ಟು ಇದ್ದುದನ್ನು ಬೊಗಸೆ ಯಷ್ಟಕ್ಕೆ ಪರಿವರ್ತಿಸಿಕೊಡುವ ಒಂದು ಜೀವಂತ ಗೊಬ್ಬರ ಮಾಡುವ ಯಂತ್ರ ಇದ್ದರೆ ಅದು ಹಸು/ಎಮ್ಮೆ/ಆಡು, ಕುರಿ ಮಾತ್ರ. ಅದರಲ್ಲೂ ನಮ್ಮ ಸುತ್ತಮುತ್ತ ಅನಾದಿ ಕಾಲದಿಂದ ಸಾಕಣೆಯಲ್ಲಿದ್ದ  ಸ್ಥಳೀಯ ಹಸುವಿನ ಈ ಸಗಣಿಯಲ್ಲೇ ಉಪಯೋಗ ಹೆಚ್ಚು.  ದೇಸೀ ಹಸು ಅಥವಾ ಸ್ಥಳೀಯ ನಾಟಿ ಹಸು ಅಥವಾ ಮೇಯಲು ಬಿಟ್ಟು  ಸಾಕುವ ಹಸುಗಳ ಸಗಣಿಯನ್ನು…

Read more
ಮೇಯುತ್ತಿರುವ ಸ್ಥಳೀಯ ತಳಿ ದನ, ಮತ್ತು ಎಮ್ಮೆ

ಸ್ಥಳೀಯ ತಳಿಯ ಜಾನುವಾರುಗಳ ಸಗಣಿಯಲ್ಲಿ ಯಾಕೆ ವಿಶೇಷ ಶಕ್ತಿ ಅಡಗಿದೆ?

ಸ್ಥಳೀಯ ತಳಿಗಳ ಜಾನುವಾರುಗಳ ಸಗಣಿ ಬಗ್ಗೆ ಹೇಳಿದರೆ ಕೆಲವರಿಗೆ ಇದು ಕ್ಷುಲ್ಲಕ ವಿಚಾರವೆನಿಸಬಹುದು, ಇನ್ನು ಕೆಲವರಿಗೆ ಉತ್ಪ್ರೇಕ್ಷೆಯೂ ಆಗಬಹುದು.ಸತ್ಯವೆಂದರೆ ನಮ್ಮ ಹಿರಿಯರೆಲ್ಲಾ ಇದರ ಗುಣಗಳನ್ನು ನಂಬಿದವರು. ಇತ್ತೀಚೆಗೆ ನಾವು ಇದನ್ನು ಮರೆತಿದ್ದೇವೆ. ನಿಜವಾಗಿ ಹಸುವಿನ ಸಗಣಿಯಲ್ಲಿ ಕೆಲವು ವಿಶೇಷ ಶಕ್ತಿ ಇದೆ ಎಂಬುದಂತೂ ಸತ್ಯ. ದೇಶಿ ತಳಿ ಜಾನುವಾರುವಿನ ಸಗಣಿ ಶ್ರೇಷ್ಟ. ಮೂತ್ರವೂ ಹಾಗೆಯೇ. ಇದು ಈಗ ಚರ್ಚೆಯಾಗುತ್ತಿರುವ  ವಿಷಯ. ಯಾಕೆ ಶ್ರೇಷ್ಟ , ಅದರ ಹಿನ್ನೆಲೆ ಏನು? ಶ್ರೇಷ್ಟತೆಗೆ  ಮೂಲ ಕಾರಣ ಯಾವುದು? ಈ ವಿಷಯಕ್ಕೆ…

Read more
ಸ್ವಚ್ಚಂದ ಪರಿಸರದಲ್ಲಿ ಮೇಯುತ್ತಿರುವ ಗೀರ್ ಹಸು

ಹಸುಗಳನ್ನು ಕಟ್ಟಿ ಸಾಕುವುದರಿಂದ ಏನೆಲ್ಲಾ ಅನಾಹುತಗಳಾಗುತ್ತದೆ?

ಬಹಳಷ್ಟು ಜನ ಹಸು ಸಾಕಾಣೆ ಮಾಡುತ್ತಾರೆ. ಆದರೆ ಆ ಹಸುಗಳು ಹಟ್ಟಿಯೆಂಬ ಜೈಲಿನಲ್ಲಿ ಎಲ್ಲಾ  ಆಹಾರಗಳ ಸಮೇತ ಬಂಧಿಯಾಗಿ ಇಡುತ್ತಾರೆ. ಇದರಿಂದ ಆಗುವ ಅತೀ ದೊಡ್ಡ ಸಮಸ್ಯೆ  ಕೇಳಿದರೆ ಹಸು ಸಾಕುವವರು ಆ ವೃತ್ತಿಯನ್ನು ಬಿಟ್ಟು ಬಿಡಬಹುದು. ಹಾಲು ಕುಡಿಯುವವರೂ ಬಳಕೆ ಕಡಿಮೆ ಮಾಡಬಹುದು. ಮನುಷ್ಯರನ್ನು ದಿನವಿಡೀ ಒಂದು ಕೋಣೆಯಲ್ಲಿ ಹೊಟ್ಟೆಗೆ ಬೇಕಾದಷ್ಟು ತಿನ್ನಲು ಕೊಟ್ಟು ಕೂಡೀ ಹಾಕಿದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೆಲ್ಲಾ ಒಂದು ದಿನ ಎರಡೂ ದಿನ ಹೇಗಾದರೂ ನಡೆಯುತ್ತದೆ. ಅನುದಿನವೂ ಹೀಗೇ…

Read more
error: Content is protected !!