ರೈತ ಹೋರಾಟದಲ್ಲಿ ಸತ್ತವರಿಗೆ ಪರಿಹಾರವೇ ಇಲ್ಲವಂತೆ.

ರೈತರ ಹೊರಾಟ- PTI image

ಕೇಂದ್ರದ ಕೃಷಿ ಕಾಯಿದೆಯ ವಿರುದ್ದ ಹಗಲು ರಾತ್ರೆ ಎನ್ನದೆ  ಒಂದು ವರ್ಷಕ್ಕೂ ಹೆಚ್ಚಿನ ಕಾಲ ಧರಣಿ ಪ್ರತಿಭಟನೆ ಮಾಡಿದ ರೈತರ ಪೈಕಿಯಲ್ಲಿ ಸುಮಾರು 700 ಮಂದಿ ಸತ್ತಿದ್ದಾರೆ ಎಂಬುದಾಗಿ ಸುದ್ದಿಗಳಿತ್ತು. ಸತ್ತವರಿಗೆ ಪರಿಹಾರ ಕೊಡಬೇಕು ಎಂಬುದಾಗಿ ವಿರೋಧ ಪಕ್ಷಗಳು ಬೊಬ್ಬಿಟ್ಟರೂ ಪ್ರಯೋಜನ ಆಗಲಿಲ್ಲ. ಸತ್ತವರು ಬೀದಿ ನಾಯಿ ಸತ್ತಂತೆ ಆಯಿತಲ್ಲಾ ದುರ್ಗತಿ!

ಈ ತನಕ ಭಾರತದ ಇತಿಹಾಸದಲ್ಲೇ ನಡೆದಿರದ ಸುಧೀರ್ಘ ರೈತ ಹೋರಾಟ ಜಯವನ್ನೇನೋ ಪಡೆಯಿತು. ಆದರೆ ರೈತರೆಂದು ಹೋರಾಟದಲ್ಲಿ ಭಾಗವಹಿಸಿದವರು ಸತ್ತರೆ ಅವರ ದಾಖಲೆಯೇ ಇಲ್ಲವೆಂದರೆ ನಮ್ಮ ಆಡಳಿತ ವ್ಯವಸ್ಥೆ ಹೇಗಿರಬಹುದು. ರೈತರ ಹೋರಾಟ ನಡೆದಿರುವುದು ದೆಹಲಿಯ ಗಡಿಯಲ್ಲಿ. ಬಹುಶಃ ಇಲ್ಲಿ ಸತ್ತರೆ ಯಾರೂ ಕೇಳುವವರಿಲ್ಲವೋ ಅಥವಾ ಬೇನಾಮೀ ಹೆಣಗಳನ್ನು ಹಾಗೆಯೇ ವಿಲೇವಾರಿ ಮಾಡಲಾಗುತ್ತದೆಯೋ ತಿಳಿಯದು. ಒಟ್ಟಾರೆ ಸತ್ತವರ ದಾಖಲೆಯೇ ಇಲ್ಲದ ಕಾರಣ ಅವರಿಗೆ ಪರಿಹಾರ ಎಂಬ ಪ್ರಶ್ನೆಯೇ ಇಲ್ಲದಾಯಿತು.

  • ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಿಗಳಾದ ಶ್ರೀ ನರೇಂದ್ರ ಸಿಂಗ್ ತೋಮರ್ ಇವರು ಸದನದಲ್ಲಿ  ಸತ್ತ ರೈತರಿಗೆ ಪರಿಹಾರ ಕೊಡುವ ಬಗ್ಗೆ ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗೆ  ಸತ್ತವರ ದಾಖಲೆಯೇ ಇಲ್ಲದ ಮೇಲೆ ಪರಿಹಾರ ಕೊಡುವ ಪ್ರಶ್ಣೆ ಎಲ್ಲಿಂದ ಬರುತ್ತದೆ ಎಂಬ ಉತ್ತರವನ್ನು ನೀಡಿದ್ದಾರೆ.
  • The ministry of agriculture and farmers welfare has no record  in the matter and hence the question does not arise.
  • ವಿರೋಧ ಪಕ್ಷಗಳ ನಾಯಕರು 2020 ರಿಂದ SINGHU,TIKRI, GAZIPUR ಗಡಿಗಳಲ್ಲಿ  700 ಜನ ರೈತರು ಮೃತ ಪಟ್ಟಿದ್ದಾರೆ.
  • ಹವಾಮಾನ, ಕೊಳಕು ಪರಿಸರ ದಿಂದ ಅನಾರೋಗ್ಯಕ್ಕೆ ತುತ್ತಾಗಿ, ರಕ್ಷಣಾ ಸಿಬ್ಬಂದಿಗಳ ದೌರ್ಜನ್ಯ,  ವಾಹನ ಅಪಘಾತ ಮತ್ತು ಕೆಲವು ಆತ್ಮ ಹತ್ಯೆ ಮಾಡಿಕೊಂಡು ಸತ್ತಿದ್ದಾರೆ.  
  • ಆದರೆ ಅದಕ್ಕೆ ಯಾವುದಕ್ಕೂ ದಾಖಲೆಯೇ ಇಲ್ಲವೆಂದರೆ ಏನು ಪರಿಸ್ಥಿತಿಯೋ?
ಕೇಂದ್ರ ರೈತ  ಕಲ್ಯಾಣ ಮಂತ್ರಿ ನರೇಂದ್ರ ಸಿಂಗ್ ತೊಮರ್

ವಿರೋಧ ಪಕ್ಷಗಳ ಕೆಲಸ ಮುಗಿಯಿತು:

  • ರೈತರ ಹೋರಾಟಕ್ಕೆಯೋ ರಾಜಕೀಯ ಲಾಭಕ್ಕೂ ವಿರೋಧ ಪಕ್ಷಗಳು ಈ ವಿಷಯವನ್ನು ಎತ್ತಿದವು. ಆದರೆ ಅವರಲ್ಲೂ ಯಾವ ದಾಖಲೆಯೂ ಇಲ್ಲವೇನ್ನೋ.
  • ಸರಕಾರ  ಅವರ ವಾದವನ್ನು ಗಾಳಿಗೆ ತೂರಿ ಬಿಟ್ಟಿತು.
  • ಈಗ ದೇಶದ ಪ್ರಜೆಗಳಿಗೆ ಸಂಶಯ ಜನ ಸತ್ತೇ ಇಲ್ಲವೋ ಆಥವಾ ಸತ್ತವರ ದಾಖಲೆ ಇಲ್ಲದೆ ಅವರ ಹೆಣವನ್ನು ಎಸೆಯಲಾಗುತ್ತದೆಯೋ ಎಂಬುದು.
  • ಒಂದು ವ್ಯಕ್ತಿ ಸತ್ತರೆ ಅವನ ಹೆಣವನ್ನು ಹೂಳಬೇಕಾದರೆ ಅಥವಾ ಸುಡಬೇಕಾದರೆ ಮರಣ ಧೃಢ ಪಟ್ಟಿರಬೇಕು.
  • ಮರಣ ದೃಢಪಟ್ಟಿರಬೇಕಾದರೆ ಅವನ ಕನಿಷ್ಟ ಹೆಸರು ವಿಳಾಸವಾದರೂ ಬೇಡವೇ?
  • ಇದ್ಯಾವುದೂ ಇಲ್ಲವೆಂದಾದರೆ ಅವನ ಹೆಣದ ವಿಲೇವಾರಿ ಹೇಗಾಗಿರಬಹುದು.?
  • ಸರಕಾರಕ್ಕೆ ಕೃಷಿ ಕಾಯಿದೆಯಲ್ಲಿ ಏನೋ ತಪ್ಪಿದ್ದೇವೆ ಎಂಬ ಅರಿವಾಗಿದೆ.
  • ಸರ್ವೋಚ್ಚ ನ್ಯಾಯಾಲಯಕ್ಕೂ  ಇದನ್ನು ಮನವರಿಕೆ ಮಾಡಿಕೊಡಲು ಸರಕಾರದಿಂದ ಆಗಲಿಲ್ಲ.
  • ಜನತೆಗೆ ಅದನ್ನು ಮನವರಿಕೆ ಮಾಡಿಕೊಡಲೂ ಆಗಲಿಲ್ಲ.
  • ಹಾಗಾಗಿ ಅದನ್ನು ವಾಪಾಸು ಪಡೆದಿದೆ ಎಂಬುದು ಮೇಲು ನೋಟಕ್ಕೆ ಸ್ಪಷ್ಟ.
  • ಹಾಗಿರುವಾಗ ನ್ಯಾಯಬೇಕು ಎಂದು ಹೋರಾಟ ನಡೆಸಿದ ಪ್ರಜೆಗಳು ಜೀವ ಕಳೆದುಕೊಂಡರೆ ಅವರಿಗೆ ಪರಿಹಾರ ಕೊಡುವುದೂ ನ್ಯಾಯವೆನಿಸುತ್ತದೆ.
  • ಇಷ್ಟಕ್ಕೂ ಅತೀ ದೊಡ್ದ ರೈತ ಹೋರಾಟ  ರಾಜಧಾನಿ ಸಮೀಪವೇ ನಡೆಯುತ್ತಿರುವಾಗ ಸರಕಾರ ಅದರ ಮೇಲೆ ಒಂದು ಕಣ್ಣು ಇಡಬೇಕಾದದ್ದು ಅಗತ್ಯವಲ್ಲವೇ?
  • ಎಲ್ಲವನ್ನೂ  ಕ್ಷುಲ್ಲಕವಾಗಿ ತೆಗೆದುಕೊಂಡಂತಿದೆ ಸರಕಾರ.

ಇದು ಪರವೂ ಅಲ್ಲ- ವಿರೋಧವೂ ಅಲ್ಲ:

  • ನಾವು ಕೇಂದ್ರದ ಕೃಷಿ ಕಾಯಿದೆಯ ಪರವಾಗಿಯೂ ಏನೂ ಹೇಳುವಂತಿಲ್ಲ. ವಿರೋಧವಾಗಿಯೂ ಏನೂ ಹೇಳುವಂತಿಲ್ಲ.
  • ಸರಕಾರ ಅದನ್ನು ಸಾಮಾನ್ಯ ಜನತೆಗೆ ಅರ್ಥವಾಗುವ ತರಹ ಅದರ ಒಳಿತನ್ನು  ತಿಳಿಸಿಯೂ ಕೊಟ್ಟಿಲ್ಲ.
  • ಒಟ್ಟಿನಲ್ಲಿ ಸತ್ತ ರೈತರಿಗೆ ಪರಿಹಾರ ಏನೂ ಇಲ್ಲ ಎಂಬ  ಹೇಳಿಕೆ ಮಾತ್ರ ಖಂಡನೀಯ.
  • ಸತ್ತವರ ದಾಖಲೆಯನ್ನೂ ಪಡೆಯದೆ, ಇದು ರೈತರು ಮುಂದೆ ಹೋರಾಟದಂತಹ ಕೆಲಸಕ್ಕೆ ಇಳಿಯದಿರಲಿ ಎಂದು ಅವರನ್ನು ಪರೋಕ್ಷವಾಗಿ ಹತ್ತಿಕ್ಕುವ ತಂತ್ರ ಎಂದೇ ಹೇಳಬಹುದು.

ಕೃಷಿ ಕಾಯಿದೆ ವಾಪಾಸಾಯಿತು. ಮುಂದೆ ಕಾನೂನಾತ್ಮಕವಾಗಿ ಕನಿಷ್ಟ ಬೆಂಬಲ ಬೆಲೆಯನ್ನು ನಿರ್ಧರಿಸುವ ಬಗ್ಗೆ ಕಮಿಟಿ ರಚನೆ ಮಾಡುವುದರಲ್ಲಿದೆ. ಇದಕ್ಕೆ ದೇಶದ  5 ಜನ ರೈತ ಮುಖಂಡರನ್ನು ರೈತ ಪ್ರತಿನಿಧಿಯಾಗಿ ನೇಮಿಸಲೂ ಸರಕಾರ ನಿಇರ್ಧರಿಸಿದೆ. ಅದು ಸಮರ್ಕಕವಾಗಿ ಆಗಲಿ. ಆಹಾರ ಬೆಳೆ ಬೆಳೆಯುವ ರೈತರಿಗೆ ಲಾಭದಾಯಕವಾಗುವ ಬೆಂಬಲ ಬೆಲೆ ದೇಶವ್ಯಾಪಿಯಾಗಿ ಜ್ಯಾರಿಗೆ ಬರುವಂತಾಗಲಿ.

ಇನ್ನಾದರೂ ರೈತರ ಹೋರಾಟ ಮುನ್ನಡೆಸುವವರು ಸಾವು ನೋವುಗಳ ದಾಖಲೆ ಇಟ್ಟುಕೊಂಡು ಅವರ ಕುಟುಂಬಕ್ಕೆ ಸಾಂತ್ವನ ರೂಪದ ಪರಿಹಾರ ದೊರೆಯುವಂತೆ ಮಾಡಬೇಕಾದ ಅನಿವಾರ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!