ಮಾವಿನ ಮರದಲ್ಲಿ ಹೂ ಬರಲು ಇದನ್ನು ಮಾಡಬೇಕು.

ಉಪಚಾರ ಮಾಡಿ ಚೆನ್ನಾಗಿ ಹೂ ಬಿಟ್ಟ ಮಾವಿನ ಮರ.

ಮಾವಿನ ಮರದಲ್ಲಿ ಡಿಸೆಂಬರ್ ತಿಂಗಳಿಂದ ಪ್ರಾರಂಭವಾಗಿ ಫೆಬ್ರವರಿ ತನಕ ಹೂವಾಗುತ್ತದೆ. ಹೂವಾಗುವ ಸಮಯದಲ್ಲಿ  ಮರದ ಆರೋಗ್ಯ ಉತ್ತಮವಾಗಿರಬೇಕು. ಮುಖ್ಯವಾಗಿ ಮಾವಿನ ಹೂ ಬರುವ ಮೊಗ್ಗು (bud) ಭಾಗ ಆರೋಗ್ಯವಾಗಿದ್ದರೆ, ಅಂದರೆ ಕೀಟ , ರೋಗ ಸೋಂಕಿನಿಂದ ಮುಕ್ತವಾಗಿದ್ದರೆ, ಹೂ ಹೆಚ್ಚು ಬರುತ್ತದೆ. ಮುಂದೆ ಹೂವಿಗೆ ಬರುವ ಕೀಟಗಳೂ ಕಡಿಮೆಯಾಗುತ್ತವೆ. ಹೂವು ಉದುರುವುದು ಕಡಿಮೆಯಾಗಿ ಕಾಯಿ ಕಚ್ಚುವಿಕೆ ಹೆಚ್ಚುತ್ತದೆ. ಇದಕ್ಕೆ ಮರ ಚಿಗುರುವ ಮುಂಚೆ ಕೆಲವು ಉಪಚಾರಗಳನ್ನು ತಪ್ಪದೆ ಮಾಡಬೇಕು.

 • ಗೇರು ಮರ ಚಿಗುರಿದರೆ ಅದರಲ್ಲಿ ಹೂ ಗೊಂಚಲು ಬರುತ್ತದೆ. ಮಾವಿನ ಮರ ಚಿಗುರಿದರೆ ಅದರಲ್ಲಿ ಆ ವರ್ಷ ಫಸಲು ಇಲ್ಲ.
 • ಚಿಗುರುವುದಕ್ಕೆ  ಮತ್ತು ಚಿಗುರದೇ ಇರುವುದಕ್ಕೆ ಹೆಚ್ಚಿನ ಕಾರಣ ಅದರ ತಳಿ ಗುಣ.
 • ಕೆಲವು ವರ್ಷವೂ ಹೂ ಬಿಡುವ ತಳಿಗಳು , ಮತ್ತೆ ಕೆಲವು ವರ್ಷ ಬಿಟ್ಟು ವರ್ಷ ಹೂ ಬಿಡುವ  ತಳಿಗಳು ಇರುತ್ತವೆ.
 • ಕೆಲವು ಭಾಗಶಹ ಹೂ ಬಿಡುವವುಗಳೂ ಇರುತ್ತವೆ.
 • ಈಗಿನ ತಂತ್ರಜ್ಞಾನದಲ್ಲಿ ವರ್ಷವೂ ಹೂ ಬಿಡುವಂತೆ ಮಾಡುವ ವಿಧಾನವೂ ಇದೆ.
 • ಅದು ಎಲ್ಲರಿಗೂ ಮಾಡಲು ಅಸಾಧ್ಯವಾಗಬಹುದು.
 • ಆದರೆ  ಮರಕ್ಕೆ ಹೂ ಬಿಡುವ ಮುಂಚೆ ಕೆಲವು ಉಪಚಾರವನ್ನು ಎಲ್ಲರೂ ಮಾಡಬಹುದು.
 • ಈ ಉಪಚಾರ ಬರೇ ಹೂ ಉಳಿಯಲು ಮಾತ್ರವಲ್ಲ.
 • ಮುಂದೆ ಹೂವಾಗಿ ಕಾಯಿ ಕಚ್ಚುವ ತನಕವೂ ಪ್ರಯೋಜನಕಾರಿಯಾಗಿರುತ್ತದೆ.
ಮಾವಿನ ಮರದ ಬುಡವನ್ನು ಮಳೆಗಾಲ ಕಳೆದ ತಕ್ಷಣ ಹೀಗೆ ಸ್ವಚ್ಚ ಮಾಡಬೇಕು. Clean the base of mango plant after monsoon ends.
ಮಾವಿನ ಮರದ ಬುಡವನ್ನು ಮಳೆಗಾಲ ಕಳೆದ ತಕ್ಷಣ ಹೀಗೆ ಸ್ವಚ್ಚ ಮಾಡಬೇಕು.

ಮಾವಿನಲ್ಲಿ ಈಗ ಇರುವ ಸಮಸ್ಯೆ:

 • ಮಾವಿನ ಮರದ ಗೆಲ್ಲುಗಳ  ಮೇಲೊಮ್ಮೆ ದೃಷ್ಟಿ ಹರಿಸಿದರೆ ಅದರ ಎಲೆಗಳಲ್ಲಿ ಬಲೆ ಕಟ್ಟಿದ ತರಹದ ಕಾಣಿಸುತ್ತದೆ.
 • ಕೆಲವು ಗೆಲ್ಲುಗಳು ಒಣಗಿರುವುದು ಕಾಣಿಸುತ್ತದೆ.
 •  ಈ ಸಮಯದಲ್ಲಿ ಕೆಲವು ಮಾವಿನ ಮರದಲ್ಲಿ ಎಲೆ ಉದುರುವಿಕೆ ಇರುತ್ತದೆ.
 • ಇದೆಲ್ಲಾ  ನಿರ್ಲಕ್ಷ್ಯ ಮಾಡುವಂತದ್ದಲ್ಲ. ಇದಕ್ಕೆ  ಬೇಕಾದ ಉಪಚಾರಗಳನ್ನು ಈಗಲೇ ಮಾಡಬೇಕು.
 • ಅಗ ಮಾತ್ರ  ಚಿಗುರು ಬರುವ ಮೊಗ್ಗು ಉಳಿಯುತ್ತದೆ.
ಗೆಲ್ಲಿನಲ್ಲಿ ಹೀಗೆ ಬಲೆ ಕಟ್ಟಿದ್ದರೆ ಅದಕ್ಕೆ ಕೀಟನಾಶಕ ಸಿಂಪಡಿಸಿ ಅದನ್ನು ನಿವಾರಿಸಬೇಕು.If there was spiser nets on shoots spray insecticide to overcome
ಗೆಲ್ಲಿನಲ್ಲಿ ಹೀಗೆ ಬಲೆ ಕಟ್ಟಿದ್ದರೆ ಅದಕ್ಕೆ ಕೀಟನಾಶಕ ಸಿಂಪಡಿಸಿ ಅದನ್ನು ನಿವಾರಿಸಬೇಕು.

ಮಾವಿನ ಮರದ ಎಲೆಗಳನ್ನೆಲ್ಲಾ ಒಟ್ಟು ಸೇರಿಸಿ ಬಲೆ ಹೆಣೆದಂತೆ ಮಾಡುವ ಒಂದು ಕೀಟ ಮರದ ಹೂ ಅಥವಾ ಚಿಗುರು ಬರುವ ಮೊಗ್ಗನ್ನೇ ಹಾನಿ ಮಾಡುತ್ತದೆ.  ಇದನ್ನು Mango leaf webber: Orthaga exvinacea (Noctuidae: Lepidoptera) ಎಂದು ಕರೆಯುತ್ತಾರೆ. ಇದು  ಮಾವಿಗೆ ಈ ಸಮಯದಲ್ಲಿ ಬಹಳಷ್ಟು ಹಾನಿಮಾಡುತ್ತದೆ.

 • ಇದು ಎಳೆ ಮೊಗ್ಗನ್ನೇ ಹಾಳು ಮಾಡುತ್ತದೆ. ಇದರ ನಿವಾರಣೆ ಮಾಡದಿದ್ದರೆ ಹೂ ಬಿಡುವಿಕೆ  ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
 • ಒಂದು ಜಾತಿಯ ಬೂದು ಬಣ್ಣದ ಪತಂಗ,  ಎಲೆಯಲ್ಲಿ ಮೊಟ್ಟೆ ಇಡುತ್ತದೆ.
 • ಅಲ್ಲೇ ಅದು ಮರಿಯಾಗಿ ಎಲೆಗಳನ್ನು  ತಮ್ಮ ದೇಹದ ಅಂಟಾದ ಮೇಣದ ಸಹಾಯದಿಂದ ಒಟ್ಟು ಸೇರಿಸಿ ಗೂಡು ಕಟ್ಟಿ ಎಳೆ ಚಿಗುರು ಮೊಗ್ಗನ್ನು ತಿನ್ನುತ್ತವೆ.
 • ಪತಂಗ ಸುಮಾರು 30-50 ರಷ್ಟು ಮೊಟ್ಟೆಗಳನ್ನು ( ಹಳದಿ ಬಣ್ಣದ) ಇಡುತ್ತದೆ. ಇದಕ್ಕೆ ಎಳೆ ಮೊಗ್ಗೇ ಆಹಾರ.
 • ಇದು ಬರೇ ಚಿಗುರು ಮೊಗ್ಗಿಗೆ ಮಾತ್ರವಲ್ಲ. ಹೂ ಮೊಗ್ಗು ಬರುವಾಗ ಸಹ ತೊಂದರೆ ಉಂಟುಮಾಡುತ್ತದೆ. ಹೂವು ಉದುರುತ್ತದೆ.
ಬಲೆ ಒಳಗೆ ಇಂತಹ ಹುಳ ಇರುತ್ತದೆ.
ಬಲೆ ಒಳಗೆ ಇಂತಹ ಹುಳ ಇರುತ್ತದೆ.

ಬುಡವನ್ನು ಸ್ವಚ್ಚ ಮಾಡಬೇಕು:

 • ಮಾವನ್ನು ವಾಣಿಜ್ಯಿಕ ಬೆಳೆಯಾಗಿ ಬೆಳೆಸುವ ರೈತರು ಸಾಮಾನ್ಯವಾಗಿ ಬುಡ ಭಾಗವನ್ನು ಉಳುಮೆ ಮಾಡುತ್ತಾರೆ.
 • ಇದರಿಂದ ಬುಡ ಭಾಗ ಸ್ವಲ್ಪ ಪ್ರಮಾಣದಲ್ಲಿ ಒಣಗಲ್ಪಟ್ಟು ಹೂ ಮೊಗ್ಗು ಮೂಡಲು ಇದು ಪ್ರೇರಣೆಯಾಗುತ್ತದೆ.
 • ವಾಣಿಜ್ಯಿಕವಾಗಿ ಬೆಳೆ ಇಲ್ಲದ ಒಂದೆರಡು ಮರಗಳಿರುವವರು ಬುಡ ಭಾಗವನ್ನು ಚಳಿಗಾಲ ಬರುವ ಹೊತ್ತಿಗೆ ಗೆಲ್ಲುಗಳು ಹಬ್ಬಿರುವ ತನಕ  ಮೇಲ್ಪಣ್ಣನ್ನು ಸ್ವಲ್ಪ ಕೆರೆದು ಸ್ವಚ್ಚ ಮಾಡಿದರೆ ಬುಡ ಭಾಗ ಒಣಗಲು ಅನುಕೂಲವಾಗುತ್ತದೆ.
 • ಇಷ್ಟಲ್ಲದೆ ಬಿದ್ದ ತರಗೆಲೆ, ಒಣ ತ್ಯಾಜ್ಯಗಳಲ್ಲಿರುವ ರೋಗಾಣು ಕೀಟಾಣುಗಳು  ನಾಶವಾಗಲು ಸಹ ಈ ರೀತಿ ಮಾಡಿದರೆ ಪ್ರಯೋಜನವಾಗುತ್ತದೆ.
 • ಹೂ ಮೊಗ್ಗು ಬಿಡುವುದು ಸ್ವಲ್ಪ  ಶುಷ್ಕ ವಾತಾವರಣ ಇರುವಾಗ.  ಶುಷ್ಕ ವಾತಾವರಣ ಮತ್ತು ಮರಕ್ಕೆ ಸ್ವಲ್ಪ ಮಟ್ಟಿಗೆ ಸ್ಟ್ರೇಸ್ ಸಿಗಲು ಇದು ಸಹಕಾರಿ.
 • ಈ ತ್ಯಾಜ್ಯಗಳನ್ನು ಅಲ್ಲೇ ರಾಸಿ ಹಾಕಿ ಬೆಚ್ಚಗೆ ಆಗುವಂತೆ ಸುಟ್ಟರೆ ಒಳ್ಳೆಯದು.

ಉದುರುವ ಎಲೆಗಳು:

 • ಮರದಿಂದ  ಎಲೆ ಉದುರಿದರೆ ನಮಗೇನು ನಷ್ಟ ಎಂದು ಅಲ್ಲೇ ಅದರಷ್ಟಕ್ಕೇ ಬಿಡಬಾರದು.
 • ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
 • ಇದು ಒಂದು ಶಿಲೀಂದ್ರ ರೋಗವಾಗಿದ್ದು , ಇದರಿಂದ ಹೂ ಬಿಡುವ ಸಮಯದಲ್ಲಿ ಮತ್ತು  ಕಾಯಿ ಬೆಳೆಯುವಾಗ, ಹಣ್ಣಾಗುವಾಗ ತೊಂದರೆ ಉಂಟಾಗುತ್ತದೆ.
 • ಎಲೆಗಳು ಬಲಿತು ಹಣ್ಣಾಗಿ ಉದುರುವುದು ಸಹಜ.
 • ಎಲೆ ಚಿಗುರು ತಿನ್ನುವ ಹುಳ
  ಎಲೆ ಚಿಗುರು ತಿನ್ನುವ ಹುಳ

ಆದರೆ ಅರೆ ಬರೆ ಹಣ್ಣಾಗಿ, ಅಥವಾ ಎಲೆಯಲ್ಲಿ ಚುಕ್ಕೆಗಳು ಮತ್ತು ಅರ್ಧ ಒಣಗಿದಂತಾಗಿ ಅರೆ ಪಕ್ವ ಸ್ಥಿತಿಯ ಎಲೆ ಉದುರುವುದು ಒಂದು ಶಿಲೀಂದ್ರ Colletotrichum gloeosporioides  ರೋಗವಾಗಿರುತ್ತದೆ. ಇದರಿಂದಾಗಿ ಮುಂದೆ ಹೂವಿಗೆ ಮತ್ತು ಕಾಯಿಕಚ್ಚುವುದಕ್ಕೆ ಕೊನೆಗೆ  ಹಣ್ಣು ಕೊಳೆಯುವುದು ಸಹ  ಇದೇ ಕಾರಣದಿಂದ.

ನಿಯಂತ್ರಣ:

ಎಲೆಗಳು ಹೀಗಾಗಿದ್ದರೆ ಶಿಲೀಂದ್ರ ನಾಶಕ ಸಿಂಪಡಿಸಬೇಕು.
ಎಲೆಗಳು ಹೀಗಾಗಿದ್ದರೆ ಶಿಲೀಂದ್ರ ನಾಶಕ ಸಿಂಪಡಿಸಬೇಕು.
 • ಎಲೆಗಳು ಬಲೆ ಕಟ್ಟುವ ಕೀಟವನ್ನು ಕಾರ್ಬಾರಿಲ್ ಸಿಂಪರಣೆ ಮಾಡಿ ನಿಯಂತ್ರಿಸಬಹುದು.
 • ಆದರೆ ಅದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಇದರ ನಿಯಂತ್ರಣಕ್ಕೆ ಕ್ವಿನಾಲ್ ಫೋಸ್ ಅಥವಾ ಮೋನೋಕ್ರೋಟೋಫೋಸ್ ಕೀಟನಾಶಕವನ್ನು ಸಿಂಪರಣೆ ಮಾಡಬೇಕು.
 • ಎಲೆ ಉದುರಿದ್ದನ್ನು ಎಲ್ಲಾ ಒಟ್ಟು ಸೇರಿಸಿ ಬುಡದಲ್ಲೇ ಸುಡಬೇಕು.
 • ಸುಡುವಾಗ ಹೊಗೆ ಮಾತ್ರ ಬರಬೇಕು. ಇದು ಹೂವಾಗುವುದನ್ನು ಉತ್ತೇಜಿಸುತ್ತದೆ.
 • ಬುಡ ಭಾಗವನ್ನು ಸ್ವಚ್ಚ ಮಾಡಿ ಅಲ್ಲಿ ಈ ಶಿಲೀಂದ್ರದ ಬೀಜಾಣುಗಳು ನಾಶವಾಗುವಂತೆ ಮಾಡಬೇಕು.
 • ಅನುಕೂಲ ಇದ್ದವರು ಮರದ ಎಲೆಗಳಿಗಳಿಗೆ ಶಿಲೀಂದ್ರ ನಾಶಕವಾದ ಬಾವಿಸ್ಟಿನ್, ಅಥವಾ  ಮ್ಯಾಂಕೋಜೆಬ್ ಸಿಂಪಡಿಸಬಹುದು.
 • ಕೀಟನಾಶಕ ಸಿಂಪರಣೆ ಇಷ್ಟ ಇಲ್ಲದವರು ಹೂ ಮೊಗ್ಗು ಮೂಡುವ ಸಮಯದಲ್ಲಿ ವೆಟೆಬಲ್ ಸಲ್ಫರ್ 3 ಗ್ರಾಂ/ಲೀ. ಸಿಂಪರಣೆ ಮಾಡಿದರೆ ಮುಂದೆ ಕಾಯಿ ಉದುರುವಿಕೆ ಕಡಿಮೆಯಾಗುತ್ತದೆ.

ಈಗ ಬಾವಿಸ್ಟಿನ್ ಶಿಲೀಂದ್ರ ನಾಶಕಕ್ಕೆ ಶಿಲೀಂದ್ರಗಳು ನಿರೋಧಕ ಶಕ್ತಿ ಪಡೆದ ಕಾರಣ  ಮ್ಯಾಂಕೋಜೆಬ್ ಮತ್ತು ಬಾವಿಸ್ಟಿನ್ ಒಳಗೊಂಡ ಶಿಲೀಂದ್ರ ನಾಶಕವನ್ನು ಸಿಂಪರಣೆ ಮಾಡುವುದರಿಂದ ಹೂವಿನ ಕಾಯಿ ಕಚ್ಚಲು ಮತ್ತು ಕಾಯಿಯ ಉದುರುವಿಕೆ ಮತ್ತು ಕಾಯಿ ಬೆಳೆದಾಗ ಚುಕ್ಕೆಗಳು ಉಂಟಾಗುವುದು ಕಡಿಮೆಯಾಗುತ್ತದೆ.
ಮಾವು ಬೆಳೆಗಾರರು ಈ ಕೂಡಲೇ ಮಾವಿನ ತಮ್ಮ ಮಾವಿನ ಮರಗಳಿಗೆ ಈ ಉಪಚಾರವನ್ನು ಮಾಡುವುದರಿಂದ ಕಾಯಿ ಕಚ್ಚುವಿಕೆ  ಹೆಚ್ಚಾಗುತ್ತದೆ. ಮರದ ಬೆಳವಣಿಗೆಗೂ ಅನುಕೂಲವಾಗುತ್ತದೆ. ಎಳೆ ಚಿಗುರು ತಿನ್ನುವ ಹುಳಕ್ಕೂ ಕೂಡಾ ಇದು ಪರಿಣಾಮಕಾರಿಯಾಗಿರುತ್ತದೆ. ಎಳೆ ಚಿಗುರು ಚೆನ್ನಾಗಿದ್ದರೆ ಮುಂದಿನ ವರ್ಷದ ಫಸಲಿಗೆ ಅನುಕೂಲ.
End of the article:
Search words:# mango crop# mango pest# mango leaf webber# mango disease# leaf fall in mango and remedy# how to control pests of mango# Anthracnose of mango#  

Leave a Reply

Your email address will not be published. Required fields are marked *

error: Content is protected !!