ಚೆಂಡು ಹೂವು- ನೈಸರ್ಗಿಕ ಕೀಟ ನಾಶಕ ಸಸ್ಯ.

ಚೆಂಡು ಹೂವು

ಚೆಂಡು ಹೂವು ಈಗ ಒಂದು ಲಾಭದಾಯಕ ಪುಷ್ಪ ಬೆಳೆ. ಇದು ಮಣ್ಣಿಗೂ, ವಾತಾವರಣಕ್ಕೂ, ಒಳ್ಳೆಯ ಬೆಳೆ. ಇದನ್ನು ಪುಷ್ಪ ಬೆಳೆಯಾಗಿ ಬೆಳೆಸುವುದಲ್ಲದೆ ಹೊಲದಲ್ಲಿ ಅಲ್ಲಲ್ಲಿ  ಬೆಳೆದರೆ ಮಣ್ಣಿನ ಕೆಲವು ಜಂತು ಹುಳಗಳೂ ನಿವಾರಣೆ ಆಗುತ್ತದೆ.ಮದುವೆ, ಸಮಾರಂಭಗಳಲ್ಲಿ ಚೆಂಡು ಹೂವಿನ ಅಲಂಕಾರ ಮಾಡಿದರೆ ಒಂದೆಡೆ ಸೊಗಸು.ಅದನ್ನು ಬಿಸಾಡಿದಲ್ಲಿ ಸೊಳ್ಳೆಗಳೂ ಉತ್ಪತ್ತಿಯಾಗಲಾರವು. ಅಷ್ಟು ಇದೆ ಅದರಲ್ಲಿ ವಿಷೇಶ ಗುಣಗಳು.

ರಾಸಾಯನಿಕ ಕೀಟ ನಾಶಕಕ್ಕೆ ಬದಲಿ:

 • ನಾವು ಎಲ್ಲದಕ್ಕೂ ರಾಸಾಯನಿಕ ಕೀಟನಾಶಕಗಳನ್ನೇ ಕೇಳುತ್ತೇವೆ.
 • ನಮಗೆ ಸಲಹೆ ಕೊಡುವವರೂ ಅದನ್ನೇ ಸೂಚಿಸುತ್ತಾರೆ.
 • ನಿಜವಾಗಿಯೂ ಎಲ್ಲದಕ್ಕೂ ರಾಸಾಯನಿಕ ಬೇಕೇ?
 • ಕೈಯಲ್ಲಿ ಕೊಯ್ಯುವುದನ್ನು ಕೈಯಲ್ಲೇ ಕೊಯ್ಯಬೇಕು ವಿನಹ ಅದಕೆ ಕೊಕ್ಕೆ  ಬಳಸಿದರೆ ಅನಾಹುತವಾಗುತ್ತದೆ.
 • ಈಗ ನಮ್ಮ ಸ್ಥಿತಿ ಹೀಗೇ ಆಗಿದೆ.
 • ನೂರಾರು ಬಗೆಯ ಕೀಟ ನಾಶಕಗಳಿದ್ದರೂ ಸಹ ಯಾವುದಕ್ಕೂ ಬಗ್ಗದ ಕೀಟಗಳು ನಮ್ಮಲ್ಲಿವೆ.
 • ಕಾರಣ ಅವು ನಿರೋಧಕ ಶಕ್ತಿ ಪಡೆಯುತ್ತಿವೆ.
 • ಜೊತೆಗೆ ಈ ರಾಸಾಯನಿಕಗಳು ನಿರುಪ್ರದವಿ ಪರಭಕ್ಷಕ ಕೀಟಗಳನ್ನು ನಾಶ ಮಾಡುವುದರಿಂದ ಅವುಗಳ ಸಂತತಿ ನಾಶ ಅಗುತ್ತಿದೆ.
 • ಪರಿಸರದ ಅಸಮತೋಲನಕ್ಕೂ ಇದು ಕಾರಣ .
 • ಕೀಟ ನಾಶಕ ತಯಾರಕರು ಹೊಸ ಹೊಸ ಕೀಟ ನಾಶಕಗಳನ್ನು ಮಾರುಕಟ್ಟೆಗೆ ಬಿಡುತ್ತಲೇ ಇದ್ದಾರೆ.
 • ನಾವು ಅವರನ್ನು  ಬೆಳೆಸಲು ಇರುವುದಲ್ಲ.

ಕಿತ್ತಳೆ ಚೆಂಡು ಹೂವು
ನಮ್ಮ ಪಾರಂಪರಿಕ ಜ್ಞಾನದಲ್ಲಿ  ಹಲವಾರು  ಸುರಕ್ಷಿತ ಕೀಟ ನಿಯಂತ್ರಣ ವಿಧಾನಗಳು ಇವೆ. ನಮಗೆ ಅದು ಮರೆತಿದೆ. ಇನ್ನಾದರೂ ಅದನ್ನು  ನೆನಪಿಸಿಕೊಂಡು ಸಾಧ್ಯವಾದಷ್ಟು ನೈಸರ್ಗಿಕವಾಗಿ ಕೀಟ ನಿಯಂತ್ರಣ ಮಾಡೋಣ. ನಮ್ಮ ಹಿರಿಯರ ತಲೆಯಲ್ಲಿ ಈಗಿನ ವಿಜ್ಞಾನ ಅಭ್ಯಾಸ ಮಾಡಿದವರ ತರಹ ವೈಜ್ಞಾನಿಕ ಭಾಷೆಗಳ ತಿಳುವಳಿಕೆ ಇರಲಿಲ್ಲ. ಆದರೆ  ಅವರಲ್ಲಿ ಸರಳ ತಿಳುವಳಿಕೆ ಅಪಾರವಾಗಿತ್ತು.

 • ಅವರು ಬೆಳೆ ಬೆಳೆಸುವಾಗ, ಸಸ್ಯ ಸಂರಕ್ಷಣೆ ಮಾಡುವಾಗ ಅನುಸರಿಸುತ್ತಿದ್ದ ಕೆಲವು ಪದ್ದತಿಗಳು ಈಗ ಸ್ವಲ್ಪ ಸುಧಾರಣೆ ಆಗಿ ವೈಜ್ಞಾನಿಕ ನೆಲೆಯಲ್ಲಿ ಚಾಲ್ತಿಯಲ್ಲಿದೆ.
 • ಇದೆಲ್ಲದರ ಕ್ರೆಡಿಟ್ ನಮ್ಮ ಹಿರಿಯ ತಲೆಮಾರಿಗೇ ಸಲ್ಲಬೇಕು.

ಚೆಂಡು ಹೂವಿನ ಉಪಯೋಗ:

 • ನಮ್ಮ ಹಿರಿಯರು ಯಾವುದೇ ತರಕಾರಿ ಬೆಳೆಯುವಾಗ ಎಡೆ ಎಡೆಯಲ್ಲಿ ಚೆಂಡು ಹೂವು ಬೆಳೆಸುತ್ತಿದ್ದರು.
 • ಇದರ ಹಿಂದೆ ಎಷ್ಟೆಲ್ಲಾ ಅರ್ಥಗಳಿವೆ ಎಂಬುದನ್ನು ಈಗ ಜಗತ್ತಿನಾದ್ಯಂತ  ವೈಜ್ಞಾನಿಕ ಅಧ್ಯಯನ ಮಾಡಿ ತಿಳಿಯಲಾಗಿದೆ.
 • ಹೊರ ದೇಶದ ವಿಜ್ಞಾನಿಗಳು ಹಲವಾರು ಸಸ್ಯ ಜನ್ಯ ಕೀಟ ನಾಶಕಗಳ ಮಹತ್ವವನ್ನು ಅರಿತಿದ್ದಾರೆ.

University of Alabama studied three species of marigold. They boiled extracts from their roots, leaves and flowers, then separated the individual chemicals using gas chromatography.

 • ನಮ್ಮಲ್ಲಿ   ಬೆಳೆಯುವ ಚೆಂಡು ಹೂವು ಎಂಬುದು ಅದ್ಭುತ ಕೀಟ ವಿಕರ್ಷಕ.
 • ಇದರಲ್ಲಿರುವ ಲಿಮೋನಿನ್ limonene ಎಂಬ ರಾಸಾಯನಿಕವು ವೈವಿಧ್ಯಮಯ ಕೀಟಗಳನ್ನು  ದೂರಮಾಡುತ್ತದೆ.
 •  ಚೆಂಡು ಹೂವಿನಿಂದ ತಯಾರಿಸಿದ ಕೀಟನಾಶಕ ಮಲೇರಿಯಕ್ಕೆ ಕಾರಣವಾದ ಅನಾಫಿಲಿಸ್ ಸೊಳ್ಳೆಯ ಸಂತತಿಯನ್ನು ಹಾಗೂ ಹಳದಿ ಜ್ವರ ರೋಗ (Yellow fever)ವನ್ನು ಹರಡುವ ಸೊಳ್ಳೆಯನ್ನು ನಿಯಂತ್ರಿಸಲು ಸಹಕಾರಿ.
 • ಏಡಿಸ್ ಈಜಿಪ್ಟಿ Aedes aegypti ಎಂಬ ಬಹು ರೋಗಗಳನ್ನು ಹರಡುವ ಸೊಳ್ಳೆಯನ್ನು ಅದರ ಲಾರ್ವೆಯ ನಿಯಂತ್ರಣದಲ್ಲಿ ಚೆಂಡು ಹೂವಿನಲ್ಲಿರುವ ಥಯೋಫಿನ್ (Thiophenes) ಎನ್ನುವ ರಾಸಾಯನಿಕ ಸಹಕಾರಿ.

ಹಳದಿ ಬಣ್ಣದ ಚೆಂಡು ಹೂವು

 • ಸಾಮಾನ್ಯ ಕೀಟಗಳಾದ ಬಿಳಿ ನೊಣ,ಜೇಡರ ನುಶಿ, ಬಸವನ ಹುಳು, ಸಿಂಬಳದ ಹುಳು, ಉಣ್ಣಿ (ಉಣುಂಗು), ಬೆಳ್ಳಿ ಮೀನು (silvar fish) ಉಂಬುಳ (leach),  ಹಾಸಿಗೆ ತಿಗಣೆ, ಇರುವೆ, ಕುರುವಾಯಿ ಮುಂತಾದ ಹಲವು ಕೀಟಗಳನ್ನು  ನೈಸರ್ಗಿಕವಾಗಿ  ಯಾರಿಗೂ ಯಾವುದೇ ಹಾನಿ ಇಲ್ಲದೆ ನಿಯಂತ್ರಿಸಲು ಚೆಂಡು ಹೂವು ಮತ್ತು ಅದರ ಸಸ್ಯದ ಸಾರ ಸಹಾಯಕ.
 • ಚಿಕ್ಕಬಳ್ಳಾಪುರದ ಮಿತ್ರರಾದ ಶ್ರೀ ಧಶರಥ ರೆಡ್ಡಿಯವರ ಪ್ರಕಾರ (ಬಾಳೆ. ಪಪಾಯ, ಬದನೆಕಾಯಿ, ಪೇರಳೆ ) ಬಹುತೇಕ ಎಲ್ಲಾ ನಮೂನೆಯ ಬೇರು ಜಂತು ಹುಳ( ನಮಟೋಡು) ನಿಯಂತ್ರಣಕ್ಕೆ ರಾಸಾಯನಿಕ ಔಷಧಿಗಳಿಗಿಂತ ಇದು ಪರಿಣಾಮಕಾರಿಯಂತೆ.
 • ಚೆಂಡು ಹೂವಿನ ಗಿಡದ ಪ್ರತೀಯೊಂದು ಭಾಗವೂ ಸಹ ಉಪಯುಕ್ತ.

ಕುಂಡದಲ್ಲಿ ಬೆಳೆಯಬಹುದಾದ ಚೆಂಡು ಹೂವು

 • ಜಂತು ಹುಳ ನಿವಾರಣೆಗಾಗಿ ಕೆಲವು ರೈತರು ಈ ಸಸ್ಯವನ್ನು  ಹೂ ಬಿಡುವ  ಹಂತದವರೆಗೆ  ಬೆಳೆಸಿ ಅದನ್ನು ಮಣ್ಣಿಗೆ ಸೇರಿಸುತ್ತಾರೆ.
 • ಚೆಂಡು ಹೂವಿನ ರಸವನ್ನು ಬಳಸಿ ಹಲವಾರು  ಸಸ್ಯ ಜನ್ಯ ಕೀಟ ನಾಶಕಗಳನ್ನು ತಯಾರಿಸಲಾಗುತ್ತದೆ.
 • ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ.

ರೈತರಾದ ನಾವು ನಮ್ಮ ಹೊಲದಲ್ಲಿ  ಸಾಧ್ಯವಿರುವಲ್ಲೆಲ್ಲಾ ಚೆಂಡು ಹೂವು ಬೆಳೆಸೋಣ. ಇದರ ಸುವಾಸನೆಯೇ ಕೀಟಗಳನ್ನು ದೂರ ಮಾಡುತ್ತದೆ. ಸಸ್ಯ ಸತ್ತ ನಂತರವೂ   ಅದು ನೆಲದಲ್ಲಿ  ಕೀಟ ನಿಯಂತ್ರಕವಾಗಿ  ಕೆಲಸ ಮಾಡುತ್ತಿರುತ್ತದೆ.

end of the article:———————————————————————————–
search words: marigold cultivation# marigold flower# natural pest control# nematode control# pest repellent#  mosquito control# floriculture#  flower crop#

0 thoughts on “ಚೆಂಡು ಹೂವು- ನೈಸರ್ಗಿಕ ಕೀಟ ನಾಶಕ ಸಸ್ಯ.

Leave a Reply

Your email address will not be published. Required fields are marked *

error: Content is protected !!