ಜಲ್ಲಿ ಮಂಗಳ ಎಂಬ ಹೊಸ ತಳಿ ಇದೆಯೇ?

by | Sep 18, 2020 | Arecanut (ಆಡಿಕೆ) | 0 comments

ಮಂಗಳ ಎಂಬ ತಳಿಯನ್ನು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು 1972 ರಲ್ಲಿ ಚೀನಾ ದಿಂದ ಮೂಲ ತಂದು ಇಲ್ಲಿ ಅಭಿವೃದ್ದಿಪಡಿಸಿದ್ದು ಬಿಟ್ಟರೆ, ಈ ತನಕ ಬೇರೆ ಮಂಗಳ ತಳಿಯನ್ನು ಬಿಡುಗಡೆ ಮಾಡಿಲ್ಲ. ಅದರ ಮೂಲ ಗುಣ ಕ್ಷೀಣವಾದುದಕ್ಕೆ ಅದರಲ್ಲೇ ಆಂತರಿಕ ಕ್ರಾಸಿಂಗ್  ಮಾಡಿ ಇಂಟರ್ ಮಂಗಳವನ್ನು 1984 ರಲ್ಲಿ ಪಡೆಯಯಲಾಗಿದೆ.  ಚೀನಾದಲ್ಲಿ ಇದಕ್ಕೆ ಯಾವ ಹೆಸರಿತ್ತೋ ಗೊತ್ತಿಲ್ಲ. ಇಲ್ಲಿ ಅಭಿವೃದ್ದಿಪಡಿಸಿ ಬಿಡುಗಡೆ ಮಾಡುವಾಗ ಮಂಗಳ ಹೆಸರನ್ನು ನೀಡಲಾಗಿದೆ.

  • ಹಾಗೆ ನೋಡಿದರೆ ಕೆಲವು ಚಾಲಿ ಅಡಿಕೆಗೆ ಹೊಂದುವ ತಳಿಗಳಿಗೂ ಮಂಗಳ ಹೆಸರನ್ನು ಜೊತೆಗೆ ಪೋಣಿಸಲಾಗಿದೆ.
  • ಸ್ವರ್ಣ ಮಂಗಳ, ಸುಮಂಗಳ, ಶತಮಂಗಳ, ಶ್ರೀ ಮಂಗಳ ಎಂಬಿತ್ಯಾದಿ ಮಂಗಳ ಸೇರಲ್ಪಟ್ಟ ತಳಿಗಳು ಇವೆ.
  • ಆದರೆ ಜಲ್ಲಿ ಮಂಗಳ ಮಾತ್ರ ಹೊಸ ಹೆಸರಿನಂತೆ ಕಾಣುತ್ತಿದೆ.

ಎಲ್ಲಿಂದ ಬಂದಿರಬಹುದು ಜಲ್ಲಿ ಮಂಗಳ:

 arecanut bunch looks like specila

  • ಜಲ್ಲಿ ಅಂದರೆ ಅದು ದೊಡ್ದ ಗೊಂಚಲು ಇರುವುದಕ್ಕೆ ಆ ಹೆಸರು ಕೊಟ್ಟಿರಬಹುದು.( ಚಿತ್ರದಲ್ಲಿ ತೋರಿಸಿದ ಗೊನೆಯಂತೆ ಇರುವ)
  • ಅಡಿಕೆಯಲ್ಲಿ ಬೇರೆ ಬೇರೆ ತಳಿಗಳನ್ನು ಒಟ್ಟಿಗೆ ನೆಟ್ಟು ಬೆಳೆಸಿದಾಗ ಅಲ್ಲಿ ನೈಸರ್ಗಿಕವಾಗಿ ಕ್ರಾಸಿಂಗ್ ನಡೆಯುವ ಸಾಧ್ಯತೆ ಇದೆ.
  • ಅದರ ಯಾವುದಾದರೂ ಒಂದು ತಳಿಯಲ್ಲಿ ಬಿಟ್ಟಂತಹ ಫಲದಲ್ಲಿ ಭಿನ್ನವಾದ ಗುಣವನ್ನು ಗುರುತಿಸಿದರೆ ಅದರಿಂದ  ಪಡೆದ  ಬೀಜ ಆರಿಸಿ ಸಸಿ ಮಾಡಿ ಅದರಲ್ಲಿ ಬಿಡುವ ಫಲದ ಲಕ್ಷಣಗಳನ್ನು  ಅಭ್ಯಸಿಸಿದಾಗ  ನಮ್ಮ ಅಗತ್ಯಕ್ಕೆ ಹೊಂದುವ ಗುಣದ ತಳಿ ಸಿಗಲೂ ಬಹುದು.
  • ಹೀಗೆ ಆದ ಒಂದು ಹೊಸ ಲಕ್ಷಣದ  ಅಡಿಕೆಯನ್ನೇ ಜಲ್ಲಿ ಮಂಗಳ ಎಂಬ ಹೆಸರಿನಿಂದ ಕರೆದಿರಬಹುದು.

ಉತ್ತಮ ತಳಿಯೇ ಆಗಿರಬಹುದು:

  • ಜಲ್ಲಿ ಮಂಗಳ ಎಂದು ಅದನ್ನು ಬರೇ ತಾತ್ಸಾರದಿಂದ ನೋಡುವಂತಿಲ್ಲ.
  • ತೆಂಗು ಅಡಿಕೆ ಮುಂತಾದ  ಪರಕೀಯ ಪರಾಗಸ್ಪರ್ಶ ಆಗುವ ಮರಗಳಲ್ಲಿ ತಲೆಮಾರಿನಿಂದ ತಲೆಮಾರಿಗೆ ತಳಿ ವ್ಯತ್ಯಾಸಗಳು ಆಗುವುದು ಪ್ರಕೃತಿಯ ಸಹಜ ಪ್ರಕ್ರಿಯೆ.
  • ಮಂಗಳ, ಅಥವಾ ಇನ್ಯಾವುದೋ ತಳಿಗಳ ಮಧ್ಯೆ ಮಿಶ್ರ ಪರಾಗಸ್ಪರ್ಶ ಉಂಟಾಗಿ ಈ ರೀತಿಯ ತಳಿ ಬಂದಿರಬಹುದು.
  • ನಮ್ಮಲ್ಲಿ ಯಾರೂ ಇದನ್ನು ತುಂಬಾ ಕೂಲಂಕುಶವಾಗಿ ಅಭ್ಯಾಸ ಮಾಡುವುದಿಲ್ಲ.
  • ತೆಂಗಿನಲ್ಲಿ ಸಹಸ್ರಾರು ವರ್ಷಗಳಿಂದ ಕೋಟ್ಯಾಂತರ ತಳಿಗಳು ಆಗಿವೆ.
  • ಅದು ಅಧಿಕ ಇಳುವರಿಯದ್ದೂ ಆಗಿರಬಹುದು, ಕಡಿಮೆ ಇಳುವರಿಯದ್ದೂ ಆಗಿರಬಹುದು.
  • ಪ್ರಾಕೃತಿಕ ಪರಾಗಸ್ಪರ್ಷದ ಮೂಲಕ ಆದ ಕಾರಣ ಇದಕ್ಕೆ ಹೆಸರನ್ನು ಕೊಡಲಾಗಿಲ್ಲ.
  • ಹಿಂದೆ ತಳಿ ಇತ್ಯಾದಿ ಹೆಸರು ಇಲ್ಲದ ಸಮಯದಲ್ಲಿ ಈ ರೀತಿಯ ವಿಶೇಷ ಗುಣದ ತಳಿಗಳಿಗೆ ಅದು ಎಲ್ಲಿ ಆಗಿದೆಯೋ ಯಾರ ತೋಟದಲ್ಲಿ ಅಗಿದೆಯೋ ಅಲ್ಲಿನ ಹೆಸರನ್ನು ನೀಡಲಾಗುತ್ತಿತ್ತು. ( ಜನಾರ್ಧನ ಪಸಂದ್ ಎಂಬ ಮಾವು ತಳಿ ಜನಾರ್ಧನ ಎಂಬವರ ಹೊಲದಲ್ಲಿ ಬೆಳೆದಿದ್ದ ಮಾವು)
  • ಅದೇ ರೀತಿಯಲ್ಲಿ ನೂರಾರು ವರ್ಷಗಳಿಂದ ಅಡಿಕೆ ಬೆಳೆಯುತ್ತಿರುವ ನಮ್ಮಲ್ಲಿ  ಹೆಸರು ಕೊಡಲಾದ ತಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಸರಿಲ್ಲದ ತಳಿಗಳು ಉಂಟಾಗಿರುವ ಎಲ್ಲಾ ಸಾಧ್ಯತೆಗಳಿವೆ.

ನಾವು ಪ್ರತೀ ಮರದ ಕೆಲವು ಅಡಿಕೆಯನ್ನು ಬೀಜ ಮಾಡಿ ಅದನ್ನು ಬಿತ್ತಿ ಬೆಳೆಸಿ ಅದರ ಇಳುವರಿ ಕ್ಷಮತೆಯನ್ನು ಅಧ್ಯಯನ ಮಾಡಿದಾಗ ಇದೆಲ್ಲವೂ ಬಹಿರಂಗವಾಗುತ್ತದೆ. ಜಲ್ಲಿ ಮಂಗಳ ಎಂಬುದು ಇದೇ ರೀತಿ ಮಾಮೂಲು ಬೀಜಕ್ಕಿಟ್ಟ ಅಡಿಕೆಯಲ್ಲಿ ಉಂಟಾದ ಒಂದು ಭಿನ್ನ ಗುಣ ಪಡೆದ  ತಳಿಯಾಗಿರಬೇಕು. ನಮ್ಮಲ್ಲಿರುವ ಸ್ಥಳೀಯ ತಳಿಯಲ್ಲಿಯೂ ಇಂತಹ ಗುಣದ ತಳಿ ಬರಲು ಸಾಧ್ಯವಿದೆ.

ಇದನ್ನೇ ಅಭಿವೃದ್ದಿಪಡಿಸಬಹುದು:

  • ಇಳುವರಿ, ರೋಗ ನಿರೋಧಕ ಶಕ್ತಿ, ಇಳುವರಿಯ ಗುಣಮಟ್ಟ , ಮರದ ಲಕ್ಷಣ ಎಲ್ಲವೂ ಹೊಂದಾಣಿಕೆಯಾಗುವಂತಿದ್ದರೆ , ಅದನ್ನು ಹೊಸ ತಳಿಯಾಗಿ ರೈತರೂ ಬಿಡುಗಡೆ ಮಾಡಬಹುದು.
  • ತಳಿ ಬಿಡುಗಡೆ ಎಂಬ ವಿಷಯ ಸ್ವಲ್ಪ ಜಠಿಲವಾದದ್ದು. ವಿಶೇಷ ಗುಣ ಪಡೆದ ಒಂದೋ ಎರಡೋ  ಮರಗಳು ಬಹುತೇಕ ಎಲ್ಲರ ತೋಟದಲ್ಲೂ ಇರಬಹುದು.
  • ಅದರ ಇಳುವರಿ ಕ್ಷಮತೆಯನ್ನು ಅಭ್ಯಾಸ ಮಾಡಿ, ಅದನ್ನು ಕೃತಕ ಪರಾಗ ಸ್ಪರ್ಶದ ಮೂಲಕ ನಿಜ ಬೀಜ ಉತ್ಪಾದನೆ ಮಾಡಿ ಅದರದ್ದೇ ಪ್ರತ್ಯೇಕ ತೋಟಮಾಡಿ ಅಲ್ಲಿ ಆಯ್ಕೆಯಾದ ಮರದ ಬೀಜವನ್ನು  ಮತ್ತೆ ಸಸಿ ಮಾಡಿ ಪ್ರತ್ಯೇಕವಾಗಿ ಬೆಳೆಸಿ, ಅದರ ಇಳುವರಿ ಆಧಾರದಲ್ಲಿ ಹೊಸ ತಳಿಯಾಗಿ ಬಿಡುಗಡೆ ಮಾಡಬಹುದು.
  • ಜಲ್ಲಿ ಮಂಗಳ ಎಂಬ ಹೊಸ ತಳಿ ಈ ರೀತಿಯಲ್ಲಿ ಸಸ್ಯಾಭಿವೃದ್ದಿ ಮಾಡಿದರೆ ಹೊಸ ತಳಿಯಾಗಬಲ್ಲುದು.

ಯಾವುದೇ ಒಂದು ತಳಿ, ಬಿಡುಗಡೆ ಆಗುವಾಗ ಇರುವ ಗುಣ ಅದನ್ನು ಹೊಲದಲ್ಲಿ ನೆಟ್ಟು ಬೆಳೆಸಿದಾಗ ತನ್ನ ಗುಣವನ್ನು ಉಳಿಸಿಕೊಳ್ಳುವುದಿಲ್ಲ.  ಪ್ರಾಕೃತಿಕವಾಗಿ ಬದಲಾವಣೆ ಆಗುತ್ತದೆ. ಆದ ಕಾರಣ ತಳಿ ಮೂಲ ಹೇಗಿದ್ದರೂ ಅದು ಹೊಲದಲ್ಲಿ ಬೆಳೆದು ಅಲ್ಲಿಂದ ಬೀಜ ಪಡೆದು ಸಸಿಯಾಗಿ ತಲೆಮಾರು ಬದಲಾದಂತೆ ಗುಣ ವ್ಯತ್ಯಾಸಗಳು ಬರುತ್ತಲೇ ಇರುತ್ತವೆ.
end of the article: —————————————————————————
search words: Jalli mangala# Cross pollination of arecanut# new variety# aracanut#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!