ಮನೆಯಲ್ಲೇ ಹಲಸಿನ ಹಣ್ಣಿನ ವೈನ್ ತಯಾರಿಕೆ.

ಹಲವು ಬಗೆಯ ಹಣ್ಣುಗಳಿಂದ ವೈನ್ ತಯಾರಿಸಲಿಕ್ಕೆ ಆಗುತ್ತದೆ. ಹುಳಿ ಅಂಶ ಇರುವ ಹಣ್ಣುಗಳ ವೈನ್ ಮಾಡುವುದು ಸಾಮಾನ್ಯವಾದರೂ , ಬರೇ ಸಿಹಿ ಇರುವ ಹಣ್ಣುಗಳಿಂದಲೂ ವೈನ್ ಮಾಡಬಹುದು. ವೈನ್ ಎಂಬುದು ಆರೋಗ್ಯಕ್ಕೆ ಉತ್ತಮ ಪೇಯವಾಗಿದ್ದು, ಎಲ್ಲರೂ ಇದನ್ನು ಹಿತ ಮಿತವಾಗಿ ಸೇವಿಸಬಹುದು. ಹಲಸಿನ ಹಣ್ಣಿನ ವೈನ್ ವಿಶಿಷ್ಟ ಸುವಾಸನೆಯೊಂದಿಗೆ ಸಿಹಿ ವೈನ್ ಆಗಿರುತ್ತದೆ. ಹಲಸಿನಲ್ಲಿ ಬಕ್ಕೆ ಮತ್ತು ಬೆಳುವ ಎಂಬ ಎರಡು ವಿಧ. ಹಣ್ಣಿಗೆ ಬಕ್ಕೆ ಹಲಸು ಸೂಕ್ತ. ಬೆಳುವೆ ಅಥವಾ ಅಂಬಲಿ ಹಣ್ಣು ರುಚಿಯಲ್ಲಿ, ಎಲ್ಲದರಲ್ಲೂ…

Read more
ಉತ್ತಮ ಇಳುವರಿಗೆ ಇವುಗಳಲ್ಲಿ ಯಾವ ಗೊಬ್ಬರ ಉತ್ತಮ?

ಉತ್ತಮ ಇಳುವರಿಗೆ ಇವುಗಳಲ್ಲಿ ಯಾವ ಗೊಬ್ಬರ ಉತ್ತಮ?

ಉತ್ತಮ ಇಳುವರಿ ಪಡೆಯಲು ರೈತರು ಯಾವ ಗೊಬ್ಬರವನ್ನು ಬಳಸಿದರೆ ಒಳ್ಳೆಯದು ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಹೆಚ್ಚಿನ ರೈತರು ರಸಗೊಬ್ಬರದ ಜೊತೆಗೆ ಅಲ್ಪ ಸ್ವಲ್ಪವಾದರೂ ಸಾವಯವ ಮೂಲದ ಗೊಬ್ಬರವನ್ನು ಬಳಕೆ ಮಾಡುತ್ತಾರೆ. ಅವುಗಳಲ್ಲಿ ಬೇರೆ ಬೇರೆ ಪ್ರಕಾರದ ಗೊಬ್ಬರಗಳಿದ್ದು  ಪೋಷಕಾಂಶ ಮತ್ತು ಅದರ ಬಿಡುಗಡೆ ಹಾಗೂ ಅವುಗಳ ಧೀರ್ಘಕಾಲಿಕ ಪರಿಣಾಮಗಳನ್ನು ತುಲನೆ ಮಾಡಿದಾಗ ಯಾವ ಗೊಬ್ಬರ ಉತ್ತಮ ಎಂಬ ತೀರ್ಮಾನಕ್ಕೆ ಬರಬಹುದು. ಎಲ್ಲಾ ರೈತರೂ ಮಣ್ಣು ಬೇಕು ಎಂಬ ಕಳಕಳಿಯಿಂದ…

Read more

ಕೃತ್ರಿಮ ವಿಧಾನ- ಜೈಲು ಶಿಕ್ಷೆ.

ನಮ್ಮ ದೇಶದಲ್ಲಿ ಹಣ್ಣು ಹಂಪಲುಗಳನ್ನು ಬೇಗ ಹಣ್ಣು ಮಾಡಲು ಕೆಲವು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದು ಬಹಿರಂಗ ವಿಚಾರ. ಇನ್ನು ಮುಂದೆ ಈ ರೀತಿ ಮಾಡಿದರೆ  ಮಾಡಿದವನಿಗೆ ಜೈಲು ಶಿಕ್ಷೆ ಆಗುತ್ತದೆ. ಇದು ದೆಹಲಿ ಹೈಕೋರ್ಟು ನೀಡಿದ ತೀರ್ಪು.   ಹಿನ್ನೆಲೆ: ಹಣ್ಣುಹಂಪಲುಗಳನ್ನು ಗಿರಾಕಿಗಳು ಕೊಳ್ಳುವುದು ಅದರ  ಆಕರ್ಷಕ ಮೈ ಬಣ್ಣ ಮತ್ತು ಗಾತ್ರವನ್ನು ನೋಡಿ.   ಹಣ್ಣು ಹಂಪಲುಗಳಿಗೆ ಅತೀ ದೊಡ್ಡ ಸಮಸ್ಯೆ ಎಂದರೆ ಹಣ್ಣಿನ ಒಳಗೆ  ಹುಳ ಆಗುವುದು ಮತ್ತು ಸಿಪ್ಪೆ ಕೊಳೆಯುವುದು. ಇದರಿಂದ…

Read more
ಜೀವ ವೈವಿಧ್ಯಗಳ ನಾಶ – ಭಾರತದ ಕೃಷಿಗೆ ಅತೀ ದೊಡ್ಡ ಆತಂಕ

ಜೀವ ವೈವಿಧ್ಯಗಳ ನಾಶ – ಭಾರತದ ಕೃಷಿಗೆ ಅತೀ ದೊಡ್ಡ ಆತಂಕ.

ನೈಸರ್ಗಿಕ ವಿಕೋಪಗಳು, ಮಾನವನ ಕೃತ್ಯಗಳಿಂದ  ಸ್ಥಳೀಯ ಜೀವ ವೈವಿಧ್ಯಗಳ ನಾಶ ಅವ್ಯಾಹತವಾಗುತ್ತಿದೆ. ಇದು ನಮ್ಮ ದೇಶದ ಕೃಷಿ, ಮಳೆ, ಇತ್ಯಾದಿಗಳಿಗೆ ಭಾರೀ ತೊಂದರೆಯನ್ನು ಉಂಟುಮಾಡಲಿದೆ. ಸೂಕ್ಷ್ಮವಾಗಿ ಗಮನಿಸಿದವರಿಗೆ ಇದರ ಅರಿವು ಆಗಿರಬಹುದು. ಅರಿವು ಆಗದವರಿಗೆ ಕೆಲವೇ ವರ್ಷಗಳಲ್ಲಿ ಅರಿವಿಗೆ ಬರಲಿದೆ.  ಕಾಸರಕನ ಮರ ಗೊತ್ತಾ ? ಈ ಪ್ರಶ್ನೆಯನ್ನು ಯಾರಲ್ಲಿಯಾದರೂ ಕೇಳಿದರೆ ಹಿಂದೆ ಹೇರಳವಾಗಿತ್ತು. ಈಗ ಹುಡುಕಿದರೆ ಮಾತ್ರ ಸಿಗುತ್ತದೆ ಎನ್ನುತ್ತಾರೆ. ಹಾಗೆಯೇ ಇನ್ನೊಂದು ಮರ ಇತ್ತು. “ಕನಪ್ಪಡೆ” ಎಂಬ ಹೆಸರಿನ ಈ ಮರ ಗುಡ್ಡ, ಕಾಡುಗಳಂಚಿನಲ್ಲಿ…

Read more
ನೇರಳೆ ಮರವನ್ನು ಪೊದೆಯಾಗಿ ಬೆಳೆಸುವ ವಿಧಾನ

ನೇರಳೆ ಮರವನ್ನು ಪೊದೆಯಾಗಿ ಬೆಳೆಸುವ ವಿಧಾನ.

ನೇರಳೆ ಮರ ಇದು ನಮಗೆಲ್ಲಾ ಗೊತ್ತಿರುವಂತದ್ದು. ಮರ ಪೊದೆಯಾಗಿದ್ದರೆ ಕೊಯ್ಯುವುದು ಬಹಳ ಸುಲಭ. ಇದನ್ನು ತರಬೇತಿಗೊಳಿಸುತ್ತಾ ಪೊದೆಯಾಕಾರದಲ್ಲಿ ಬೆಳೆಸಲು ಸಾಧ್ಯ. ನೇರಳೆ ಹಣ್ಣು ಒಂದು ಆರೋಗ್ಯ ಸಂಜೀವಿನಿಯಾಗಿದ್ದು, ಇದರ ಹಣ್ಣಿಗೆ ಭಾರೀ ಬೇಡಿಕೆ. ಇದರ ಬೀಜಕ್ಕೂ ಸಹ ಬೆಲೆ ಇದ್ದು, ಎಲ್ಲಾ ಬೆಳೆಗಳ ಜೊತೆಗೆ ಸ್ವಲ್ಪ ನೇರಳೆ  ಬೆಳೆಯೂ ಇದ್ದರೆ  ಒಳ್ಳೆಯದು. ಹಳ್ಳಿಯ ಹಿರಿಯ ತಲೆಮಾರಿನ ಜನರಿಗೆ ನೇರಳೆ ಹಣ್ಣು , ಕುಂಟು ನೇರಳೆ ಹಣ್ಣು, ಹಾಗೆಯೇ ಇನ್ನಿತರ ಕಾಡು ಹಣ್ಣುಗಳನ್ನು ತಿಂದ ಅನುಭವ ಇದೆ. ಹಿಂದೆ…

Read more
ಹನಿ ನೀರಾವರಿಯಲ್ಲಿ ನಿಮ್ಮ ಅನುಭವ- ರೈತರು ರೇಟಿಂಗ್ ಕೊಡುವುದು ಅಗತ್ಯ

ಹನಿ ನೀರಾವರಿಯಲ್ಲಿ ನಿಮ್ಮ ಅನುಭವ- ರೈತರಿಂದ ರೇಟಿಂಗ್ ಅಗತ್ಯ.

ನೀರಾವರಿಯಲ್ಲಿ ಅಮೂಲ್ಯವಾದ ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹನಿ ನೀರಾವರಿ ಸಾಮಾಗ್ರಿಗಳನ್ನು ತಯಾರಿಸಿ ಪೂರೈಕೆ ಮಾಡುವವರ ಸಂಖ್ಯೆಯೂ ತುಂಬಾ ಹೆಚ್ಚಾಗುತ್ತಿದೆ. ಹೀಗಿರುವಾಗ ನೀವು ಅಳವಡಿಸಿಕೊಂಡ ಬ್ರಾಂಡ್ ನಲ್ಲಿ ನೀವೆಷ್ಟು ತೃಪ್ತರು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಮಾಡುವ ಕಿರು ಪ್ರಯತ್ನ ಇದು.  ಹನಿ ನೀರಾವರಿ ಅಳವಡಿಸಿಕೊಂಡ ಪ್ರತೀಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಿಂದ  ಹೊಸಬರಿಗೆ ಯಾವ ಬ್ರಾಂಡ್ ಒಳ್ಳೆಯದು ಎಂಬುದನ್ನು ತೀರ್ಮಾನಿಸುವುದಕ್ಕೆ  ಅನುಕೂಲವಾಗುತ್ತದೆ. ಈ ಉದ್ದೇಶಕ್ಕಾಗಿಯೇ ಈ ಬರಹ. ಸಾಮಾನ್ಯವಾಗಿ…

Read more
ಬೇರು ಮೇಲೆ ಬಂದ ಅಡಿಕೆ ಗಿಡ

ಅಡಿಕೆ ಮರದ ಬೇರುಗಳು ಮೇಲೆ ಬರುವುದಕ್ಕೆ ಕಾರಣ ಇದು.

ಅಡಿಕೆ ಮರಗಳ ಬೇರು ಮೇಲೆ ಬರಬಾರದು ಎಂದು  ಕರಾವಳಿ ಮಲೆನಾಡಿನ ಬಹುತೇಕ ಬೆಳೆಗಾರರು ಹೊಂಡ ಮಾಡಿ ಸಸಿ ನೆಡುತ್ತಾರೆ. ಎಷ್ಟೇ ಹೊಂಡ ಮಾಡಿದರೂ ಮರ ಬೆಳೆದಂತೆ ಬೇರು ಮೇಲೆ ಬರಲಾರಂಭಿಸುತ್ತದೆ.  ನೆಲಮಟ್ಟದಿಂದ 1 ಅಡಿ ಮೇಲೆ ಬರುವುದೂ ಇದೆ. ಇದು ಯಾವುದೇ ರೋಗ ಅಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ.  ಅಡಿಕೆ ಸಸ್ಯದ ಬೇರು ಮೇಲೆ ಬಂದಿದೆ ಎಂದರೆ ಮಣ್ಣಿನಲ್ಲಿ ಸಸ್ಯದ ಬೇರುಗಳ ಬೆಳವಣಿಗೆಗೆ ಏನೋ ಅಡ್ದಿ ಉಂಟಾಗಿದೆ ಎಂದರ್ಥ. ಒಮ್ಮೆ ಹುಟ್ಟಿದ ಬೇರು ಸಮರ್ಪಕವಾಗಿ ಬೆಳವಣಿಗೆ…

Read more

ಈ ನೀಲಿ ದ್ರಾಕ್ಷಿಗೆ ರಾಸಾಯನಿಕ ಮುಕ್ತ – ಸಿಂಪರಣೆಯ ಅಗತ್ಯವಿಲ್ಲ.

ಬೆಂಗಳೂರು ಸುತ್ತಮುತ್ತ  ನೂರಾರು ವರ್ಷಗಳಿಂದ ಬೆಳೆಯುತ್ತಿರುವ ನೀಲಿ ದ್ರಾಕ್ಷಿ ಅಥವಾ ಬೀಜ ಉಳ್ಳ ಕಪ್ಪು ರಾಸಾಯನಿಕ ಮುಕ್ತವಾಗಿ ಬೆಳೆಯಬಲ್ಲ ತಳಿ. ಇದನ್ನು ಬಾಲರಿಂದ ಹಿಡಿದು ವೃದ್ಧರ ವರೆಗೂ ಯಾವುದೇ ಅಂಜಿಕೆ ಇಲ್ಲದೆ ಸೇವಿಸಬಹುದು. ಇದು ಒಂದು ನಾಟಿ ತಳಿಯಾಗಿದ್ದು, ರೋಗ ಕೀಟ ಬಾಧೆ ಕಡಿಮೆ ಇರುವ ಕಾರಣ ಯಾರೂ ಅನವಶ್ಯಕ ಕೀಟನಾಶಕ- ರೋಗ ನಾಶಕ ಸಿಂಪಡಿಸುವುದಿಲ್ಲ. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವಳಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ  ಬೆಲೆಗೆ ದೊರೆಯುವ ಬೆಂಗಳೂರು ನೀಲಿ ದ್ರಾಕ್ಷಿಯನ್ನು /ಬೆಂಗಳೂರು…

Read more
ಮಳೆ ಬಂತು ಮಳೆ

ದಿನಾಂಕ 17/11/21 ರಿಂದ 24/11/2021 ತನಕ ಒಂದು ವಾರದ ಕಾಲ ರಾಜ್ಯದಲ್ಲಿ ಮಳೆ.

ಏನು ಮಳೆಯ ಆವಾಂತರವೋ ತಿಳಿಯದು. ಚಳಿಗಾಲ ಬರಬೇಕಾದ ಸಮಯವಾದರೂ ಮಳೆಗಾಲಕ್ಕೆ ನಮ್ಮನ್ನಗಲಲು  ಮನಸ್ಸಿಲ್ಲ. ಒಂದಿಲ್ಲೊಂದು ವಾಯುಭಾರ ಕುಸಿತ. ಈ ಭಾರಿ ಅರಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಎರಡರಲ್ಲೂ ವಾಯು ಭಾರ ಕುಸಿತ ಉಂಟಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಇದೆ. ಕರ್ನಾಟಕದಲ್ಲಿ ದಿನಾಂಕ 17/11/21 ರಿಂದ 23/11/2021 ತನಕ ಒಂದು ವಾರದ ಕಾಲ ರಾಜ್ಯದಲ್ಲಿ ಮಳೆ ಬರುವ ಮುನ್ಸೂಚನೆ ಇರುತ್ತದೆ. ಇನ್ನೊಂದು ವಾರದಲ್ಲಿ ಜನ  ತರಕಾರಿ ತಿನ್ನುವುದಕ್ಕೂ ಕಷ್ಟ ಪಡಬೇಕಾಗಬಹುದು.ಗ್ರಾಹಕರು ತರಕಾರೀ ಬೆಳೆಗಾರರಿಗೆ ಬಂಪರ್ ಲಾಭ…

Read more
water over flow

ಬೋರ್ ವೆಲ್ ಗೆ ನೀರು ಹುಡುಕುವಲ್ಲಿ ಇವರದ್ದೇ ಮೇಲುಗೈ

ಇವರು ಭೂ ವಿಜ್ಞಾನ ಅಧ್ಯಯನ ಮಾಡಿದವರಲ್ಲ. ಆದರೆ ಇವರಿಗೆ ಭೂ ಗರ್ಭದಲ್ಲಿರುವ ಜಲ ಶೋಧನೆ ಕಲೆ ಗೊತ್ತಿದೆ. ಪ್ರಪಂಚದಾದ್ಯಂತ ಭೂ ಗರ್ಭ ಜಲ ಶೊಧನೆಯಲ್ಲಿ ಇವರದ್ದೇ ಮೇಲುಗೈ. ವಿಜ್ಞಾನ ಒಪ್ಪದಿದ್ದ ಪಾರಂಪರಿಕ ಜಲ ಶೋಧನಾ ವಿದ್ಯೆಯನ್ನು ಸಮಾಜ ಒಪ್ಪಿದೆ ಮತ್ತು ಗೌರವಿಸಿದೆ. ಅನಾದಿ ಕಾಲದಿಂದಲೂ ನೀರಿನ ಶೋಧನೆ ಎಂಬುದು ಕೆಲವು ಸಾಂಪ್ರದಾಯಿಕ ವಿಧಾನಗಳ ಮೂಲಕ ನಡೆಯುತ್ತಾ ಬಂದಿದೆ. ಈಗಲೂ ಇದರ ಸ್ಥಾನವನ್ನು ವೈಜ್ಞಾನಿಕ ವಿಧಾನ ಓವರ್ ಟೇಕ್ ಮಾಡಿಲ್ಲ. ಪ್ರತೀ ಹಳ್ಳಿಗಳಲ್ಲೂ ನೀರಿನ ಸೆಳೆಯನ್ನು ಗುರುತಿಸಿ ಇಲ್ಲಿ ಬಾವಿ…

Read more
error: Content is protected !!