ಹೂವು ರಹಿತ ಜೇನು ಉತ್ಪಾದನೆ- “ಜೇನು” ಹೆಸರಿಗೆ ಕಳಂಕ.
ಜೇನು ವ್ಯವಸಾಯ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಜೇನು ಕುಟುಂಬಗಳೂ ಕಡಿಮೆಯಾಗುತ್ತಿವೆ. ಆದರೆ ಜೇನಿನ ವ್ಯವಹಾರ ಬೆಳೆಯುತ್ತಿದೆ. ಜೇನು ಉತ್ಪಾದನೆ ಹೆಚ್ಚುತ್ತಿದೆ. ಬಹುತೇಕ ಜೇನು ಕೃತಕ ಜೇನಾಗಿದ್ದು, ಹೂವು ಇಲ್ಲದೆ ಜೇನು ಉತ್ಪಾದಿಸಲಾಗುತ್ತದೆ. ಸಕ್ಕರೆ , ಬೆಲ್ಲದ ಪಾಕವನ್ನು ಜೇನು ನೊಣಗಳಿಗೆ ತಿನ್ನಿಸಿ ಜೇನು ಉತ್ಪಾದನೆ ಮಾಡಲಾಗುತ್ತಿದೆ. ಗ್ರಾಹಕರೇ ಎಚ್ಚರ! ಕಾಡುಗಳು ಕಡಿಮೆಯಾಗುತ್ತಿವೆ, ಕಾಡಿನಲ್ಲಿ ಹೂವು ಬಿಡುವ ಮರಮಟ್ಟುಗಳೂ ಕಡಿಮೆಯಾಗುತ್ತಿವೆ. ಕಾಡು ಹೊರತಾಗಿ ನಾಡಿನಲ್ಲೂ ನೈಸರ್ಗಿಕ ಹೂ ಬಿಡುವ ಮರ ಮಟ್ಟುಗಳಿಲ್ಲ. ಬರೇ ರಬ್ಬರ್, ಅಡಿಕೆ, ತೆಂಗು ಬಿಟ್ಟರೆ…