ಕರಿಮೆಣಸಿನ ಬೆಲೆ ಸಡನ್ ಜಂಪ್- ಕ್ವಿಂಟಾಲಿಗೆ ರೂ. 3000 ಏರಿಕೆ: ಅಡಿಕೆ ಕುಂಟು ನಡೆ.

ಕರಿಮೆಣಸು ಜಂಪ್

ಕರಿಮೆಣಸಿನ ಧಾರಣೆ ಅನಿಶ್ಚಿತತೆ ಬಗ್ಗೆ ಈ ಹಿಂದೆಯೇ ಹೇಳಲಾಗಿತ್ತು. ಕೊಚ್ಚಿನ್ ಮಾರುಕಟ್ಟೆಯಲ್ಲಿ  ಸ್ವಲ್ಪ ದರ ಇಳಿದಾಗ ಇಲ್ಲಿ ಭಾರೀ ದರ ಇಳಿಸಲಾಗಿತ್ತು. ಆದರೆ ರಾಜ್ಯದ ಪ್ರಮುಖ ಬೆಳೆ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ ಸಕಲೇಶಪುರಗಳಲ್ಲಿ ಅಂತಹ ದರ ಕುಸಿತ ಆಗಿರಲಿಲ್ಲ. ಇಂದು ಎಲ್ಲಾ ಕಡೆ ಕರಿಮೆಣಸಿನ ಧಾರಣೆ ಕ್ವಿಂಟಾಲಿಗೆ 2500 -3000 ತನಕ ಸಡನ್ ಜಂಪ್ ಆಗಿದೆ. ಕೊಚ್ಚಿನ್ ಮರುಕಟ್ಟೆಯ ಏರಿಕೆ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ.ಚಾಲಿ ಅಡಿಕೆ ಯಾಕೋ ಕುಂಟು ನಡೆಯಲ್ಲಿದೆ.

ಕರಿಮೆಣಸಿಗೆ ಇನ್ನು ಎರಡು ಮೂರು ವರ್ಷ ಕಾಲ ಉತ್ತಮ ಬೆಲೆ ಬರಲಿದೆ. ಕ್ವಿಂಟಾಲಿಗೆ 70,000 ತನಕ ತಲುಪಿದರೂ ಅಚ್ಚರಿ ಇಲ್ಲ ಎಂಬ ವರರಿಗಳು ಕಳೆದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ  ಸುದ್ದಿಯಲ್ಲಿತ್ತು. ಜಗತ್ತಿನ ಇತರ ಬೆಳೆ ಬೆಳೆಯುವ ರಾಷ್ಟ್ರಗಳಲ್ಲಿ  ಉತ್ಪಾದನೆ ಕೊರತೆ ಇದೆ. ನಮ್ಮಲ್ಲಿಯೂ. ಹಾಗಾಗಿ ಬೆಲೆ ಏರಿಕೆ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಕೊಯಿಲಿನ ಸಮಯಕ್ಕೆ ಕೊಚ್ಚಿ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ 1500 ತನಕ ಇಳಿಕೆಯಾಯಿತು. ತತ್ಪರಿಣಾಮವಾಗಿ ಕರಾವಳಿಯ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ 5000 ಇಳಿಕೆ ಆಯಿತು. ಈಗ ಮತ್ತೆ ಕೊಚ್ಚಿನ ಮಾರುಕಟ್ಟೆ ಜಂಪ್ ಆಗಿದೆ. ವ್ಯಾಪಾರಿಗಳಿಗೆ ಬೇಡಿಕೆ ಬರಲಾರಂಭಿಸಿದೆ. ಹಾಗಾಗಿ ಇಂದಿನ ದಿನವೇ ಭಾರೀ ನೆಗೆತದೊಂದಿಗೆ ಮೆಣಸಿನ ಬೆಲೆ ಕ್ವಿಂಟಾಲಿಗೆ 50,000 -54,000 ತನಕ ಏರಿಕೆಯಾಗಿದೆ. ಬಹುಶಃ ಇನ್ನು ಕೆಲವೇ ದಿನಗಳಲ್ಲಿ ಇದು 57,500 ತನಕ ಏರಬಹುದು. ಅಥವಾ 60,000 ಆದರೂ ಅಚ್ಚರಿ ಇಲ್ಲ.

ಎಲ್ಲೆಲ್ಲಿ ಯಾವ ದರ ಇತ್ತು?

 • ಸಕಲೇಶಪುರ: Royal Traders, ಅಯದ್ದು  540.00 
 • ಸಕಲೇಶಪುರ :Gain Coffee ಅಯದ್ದು ,  525.00 
 • ಸಕಲೇಶಪುರ :Sathya Murthy, ಅಯ್ದದ್ದು,  540.00 
 • ಸಕಲೇಶಪುರ :Sathya Murthy, ಆಯದ್ದು  520.00 
 • ಸಕಲೇಶಪುರ :S.K Traders, ಆಯದ್ದು,  530.00 
 • ಸಕಲೇಶಪುರ :H.K.G & Bros-ಆಯದ್ದು,  520.00 
 • ಸಕಲೇಶಪುರ :Nasir Traders ಆಯದ್ದು,  530.00 
 • ಸಕಲೇಶಪುರ -Sainath Cardamom, ಹೊಸತು.  550.00 
 • ಬಾಳುಪೇಟೆ :Geetha Coffee Trading, ಆಯದ್ದು  505.00 
 • ಬಾಳುಪೇಟೆ:Coffee Age-ಆಯದ್ದು,  535.00 
 • ಮೂಡಿಗೆರೆ :Sha.M.Khimraj, ಆಯದ್ದು,  545.00 
 • ಮೂಡಿಗೆರೆ :Bhavarlal Jain, ಆಯದ್ದು,  535.00 
 • ಮೂಡಿಗೆರೆ :A1 Traders, ಆಯದ್ದು  550.00 
 • ಮೂಡಿಗೆರೆ :Harshika Traders-ಆಯದ್ದು,  540.00 
 • ಮೂಡಿಗೆರೆ :A.M Traders-ಆಯದ್ದು,  535.00
 • ಮೂಡಿಗೆರೆ :Hadhi Coffee, ಆಯದ್ದು,  540.00 
 • ಚಿಕ್ಕಮಗಳೂರು:Arihant Coffee, ಆಯದ್ದು,  527.00 
 • ಚಿಕ್ಕಮಗಳೂರು:Nirmal Commodities, ಆಯದ್ದು,  530.00 
 • ಚಿಕ್ಕಮಗಳೂರು:M.R Stancy G.C, ಆಯದ್ದು,  500.00
 • ಚಿಕ್ಕಮಗಳೂರು:Kiran, ಆಯದ್ದು,  510.00
 • ಮಡಿಕೇರಿ:Kiran Commodities, ಆಯದ್ದು,  510.00 
 • ಕೊಡಗು ಸಿದ್ದಾಪುರ:Trust Spices ಆಯದ್ದು,  520.00 
 • ಗೋಣಿಕೊಪ್ಪ:Sri Maruthi, ಆಯದ್ದು,  520.00 
 • ಕಳಸ :PIB Traders, ಆಯದ್ದು  520.00 
 • ಕಾರ್ಕಳ:Kamadhenu, 9845256188,  535.00 
 • ಪುತ್ತೂರು :ಕ್ಯಾಂಪ್ಕೋ, ಆಯದ್ದು,  500.00 
 • ಮಂಗಳೂರು:PB Abdul-7204032229, ಆಯದ್ದು,  510.00 
 • ಮಂಗಳೂರು;  ಕ್ಯಾಂಪ್ಕೋ, ಆಯದ್ದು,  500.00 
 • ಶಿರ್ಸಿ :Kadamba Marketing, ಆಯದ್ದು,  500.00 

ಇನ್ನೂ ಎರಡೇ ವರ್ಷ  ಕಾಯಿರಿ:

ಒಂದು ಕಾಲ ಅದು 18-19 ನೇ ಶತಮಾನದಲ್ಲಿ ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕರಿಮೆಣಸಿನ ಉತ್ಪಾದನೆ ಇತ್ತಂತೆ. ಅದಕ್ಕಾಗಿ ವಿದೇಶೀಯರು ಇಲ್ಲ್ಗೆ ವ್ಯಾಪಾರಕ್ಕೆ ಬಂದರು ಎಂಬ ಇತಿಹಾಸ ನಾವು ಓದಿದ್ದೇವೆ. ಈಗ ಬಲಲಾವಣೆ ಆಗಿ ನಮ್ಮ ಸ್ಥಾನವನ್ನು ಬೇರೆ ದೇಶಗಳು ಹಿಂದಿಕ್ಕಿವೆ. ಆದರೆ ಬದಲಾವಣೆ ಇನ್ನು ಎರಡು ಮೂರು ವರ್ಷಗಳಲ್ಲಿ ಆಗಲಿದೆ. ನಮ್ಮ ರಾಜ್ಯ ಇಡೀ ಜಗತ್ತಿನಲ್ಲೇ ಆತ್ಯಧಿಕ  ಕರಿಮೆಣಸು ಉತ್ಪಾದಕ ರಾಜ್ಯವಾಗಲಿದೆ. ನಮ್ಮ ರಾಜ್ಯದ ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ  ಇಲ್ಲೆಲ್ಲಾ ಭಾರೀ ಪ್ರಮಾಣದಲ್ಲಿ ಮೆಣಸಿನ ಬೆಳೆ ಹಚ್ಚಲ್ಪಟ್ಟಿದೆ. ಇಲ್ಲಿ ನೀರಾವರಿಗೆ ಇನ್ನು ಸಮಸ್ಯೆ ಇಲ್ಲ. ಅಡಿಕೆ ಮರಗಳು, ಅಗಸೆ ಮರ, ನುಗ್ಗೆ ಮರ ಸಿಲ್ವರ್ ಸಿಕ್ಕ ಸಿಕ್ಕ ಮರ ಮಟ್ಟುಗಳಿಗೆ ಮೆಣಸನ್ನು ಬೆಳೆಸಿ ಚೆನ್ನಾಗಿ ಬಳ್ಳಿ ಬೆಳೆಯುವ ಉಪಚಾರ ಮಾಡುತ್ತಿದ್ದಾರೆ. ಇಲ್ಲಿ ಮೆಣಸು ಚೆನ್ನಾಗಿ ಬರುತ್ತದೆ ಎಂಬುದನ್ನು ಆಗಲೇ ಕೆಲವು ರೈತರು ಬೆಳೆಸಿ ನೊಡಿದ್ದಾರೆ. ಇವೆಲ್ಲಾ ಫಸಲಿಗಾರಂಭವಾಗುವಾಗ ನಮ್ಮ ದೇಶ ಪ್ರಪಂಚದಲ್ಲೇ ಅತ್ಯಧಿಕ ಮೆಣಸು ಉತ್ಪಾದಕ ದೇಶವಾಗಿ ಹೊರ ಹೊಮ್ಮಲಿದೆ.

ಅಡಿಕೆ ಮಾರುಕಟ್ಟೆಯ ಕುಂಟು ನಡೆ :

ಅಡಿಕೆ ಕುಂಟು

ಚಾಲಿ ಅಡಿಕೆ ಧಾರಣೆ ಕುಸಿತವಾಗಿದೆ. ಹೊಸತು ಹೆಚ್ಚು ಕುಸಿತವಾಗಿದ್ದು, ಹಳೆಯದು ಕ್ವಿಂಟಾಲಿಗೆ 1000 ದಷ್ಟು ಕಡಿಮೆಯಾಗಿದೆ. ಈ ದರ ಇಳಿಕೆಯ ಕಾರಣದಿಂದಾಗಿ ಸುಳ್ಯ ಮಾರುಕಟ್ಟೆಯಲ್ಲಿ ಹೊಸ ಚಾಲಿ (1007 ಚೀಲ) ಹಾಗೂ ಹಳೆ ಚಾಲಿ (1140 ಚೀಲ) ಗರಿಷ್ಟ ಪ್ರಮಾಣದಲ್ಲಿ ಮಾರುಕಟ್ಟೆಗೆ  ಬಂದಿದೆ. ಉಳಿದೆಡೆ ಅಂತಹ ಅವಕ ಇಲ್ಲ. ಮಂಗಳೂರು ಮಾರುಕಟ್ಟೆಯಲ್ಲಿ ಕೋಕಾ 1674 ಚೀಲ ಆವಕವಾಗಿದೆ. ಪುತ್ತೂರಿನಲ್ಲೂ  635 ಚೀಲ ಕೋಕಾ ಅಡಿಕೆ ವ್ಯಾಪಾರವಾಗಿದೆ.

ಚಾಲಿ ಇನ್ನೂ ಇಳಿಕೆ ಆಗುವ ಸೂಚನೆ ಕಂಡು ಬರುತ್ತಿದ್ದು,ಖಾಸಗಿ ವ್ಯಾಪಾರಿಗಳು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕ್ಯಾಂಪ್ಕೋ ತನ್ನ ಒಂದು ತಿಂಗಳ ಹಿಂದಿನ ನಿಗದಿತ ದರವನ್ನು ಏನೂ ಕಡಿಮೆ ಮಾಡದೆ ಮಾರುಕಟ್ಟೆ ಬೀಳುವುದನ್ನು ಆಧರಿಸಿದೆ ಎಂಬುದಾಗಿ ಹೇಳುತ್ತಿದ್ದಾರೆ. ಚಾಲಿ ಈಗಾಗಲೇ ಒಂದು ಕೊಯಿಲಿನ ಅಡಿಕೆ ಸಿದ್ದವಾಗಿದೆ. ಮುಂದಿನ ಮಾರ್ಚ್ ತಿಂಗಳ ತನಕ ಅತ್ಯಧಿಕ ಮದುವೆ, ಉಪನಯನ, ಗೃಹ ಪ್ರವೇಶ, ಭೂತದ ಕೋಲಗಳು ಇರುವ ಕಾರಣ ಹಣಕಾಸಿನ ತುರ್ತು ಸಹ ಇದೆ. ಹಾಗಾಗಿ ಅಡಿಕೆ ಮಾರಾಟಕ್ಕೆ ಬರುವ ಸಾಧ್ಯತೆ ಹೆಚ್ಚು. ಮಾರುಕಟ್ಟೆಗೆ ಹೆಚ್ಚಿನ ಅಡಿಕೆ ಬರಲಾರಂಭಿಸಿದಂತೆ ದರ ಇಳಿಕೆ ಆಗುವ ಸಾಧ್ಯತೆ ಇದೆ. ಎಲ್ಲಾ ವ್ಯಾಪಾರಿಗಳ ಕಣ್ಣು ಕ್ಯಾಂಪ್ಕೋ  ನಡೆಯ ಮೇಲೆ ಎಂಬಂತಾಗಿದೆ.

ಕೆಂಪಡಿಕೆ ಮಾರುಕಟ್ಟೆ ಅಬಾಧಿತ. ದರ ಸ್ಥಿರವಾಗಿದೆ. ತೀರ್ಥ ಹಳ್ಳಿ, ಕೊಪ್ಪ ಮಾರುಕಟ್ಟೆಗೆ ಈ ವಾರ ಅತ್ಯಧಿಕ ಅಡಿಕೆ ಬಂದಿದ್ದರೂ ದರ ಸ್ಥಿರವಾಗಿರುವ ಕಾರಣ  ಕೆಂಪಡಿಕೆ ಮಾರುಕಟ್ಟೆ ನಿರೀಕ್ಷೆಯಂತೆ ಕೊಯಿಲು ಪೂರ್ತಿ ಮುಗಿಯುವ ಸಮಯಕ್ಕೆ ಏರಿಕೆ ಗತಿ ಕಾಣಬಹುದು. ದರ ಏರಿಕೆಗಿಂತಲೂ ಈ ವರ್ಷ ದರ ಇಳಿಕೆ ಆಗದೆ ಸ್ಥಿರವಾಗಿ ಉಳಿದುದು ಬೆಳೆಗಾರರಿಗೆ ಖುಷಿ ಕೊಟ್ಟಿದೆ. ಮಾರುಕಟ್ಟೆಗೆ ಅವಕ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದೆ. ಹಾಗಾಗಿ ದರ ಇಳಿಕೆ ಖಂಡಿತವಾಗಿಯೂ ಆಗದು ಎಂಬ ಲೆಕ್ಕಾಚಾರ.

ಚಾಲಿ ಅಡಿಕೆ ಮಾರುಕಟ್ಟೆ:

 • ಬಂಟ್ವಾಳ: ಕೋಕಾ, 12500, 25000, 22500
 • ಬಂಟ್ವಾಳ: ಹೊಸತು, 27500, 45000, 42000
 • ಬಂಟ್ವಾಳ: ಹಳೆಯದು, 46000, 53000, 50000
 • ಬೆಳ್ತಂಗಡಿ: ಕೋಕಾ 27000, 28000, 27500
 • ಬೆಳ್ತಂಗಡಿ: ಹೊಸತು, 35000, 42000, 40000
 • ಬೆಳ್ತಂಗಡಿ: ಹಳತು 40560, 52000, 45000
 • ಕಾರ್ಕಳ: ಹೊಸತು  40000, 45000, 43000
 • ಕಾರ್ಕಳ: ಹಳೆಯದು, 46000, 53000, 50000
 • ಕುಂದಾಪುರ: ಹಳೆಯದು, 51500, 52500, 52000
 • ಕುಂದಾಪುರ: ಹೊಸತು, 43500, 44500, 44000
 • ಮಂಗಳೂರು: ಕೋಕಾ, 25500, 45870, 31500
 • ಪುತ್ತೂರು: ಕೋಕಾ, 11000, 26000, 18500
 • ಪುತ್ತೂರು: ಹೊಸತು, 27500, 45000, 36250
 • ಸುಳ್ಯ: ಹೊಸತು, 27500, 45000, 40900
 • ಸುಳ್ಯ: ಹಳೆಯದು, 46000, 53000, 47400.
 • ಪಟೋರಾ: ಹೊಸತು:30000-32500 ಹಳೆಯದು:35,000-43500
 • ಉಳ್ಳಿಗಡ್ಡೆ: ಹೊಸತು 20000-22500  ಹಳೆಯದು 23000-25600
 • ಕರಿಕೋಕಾ:ಹೊಸತು 24,000-25,000    ಹಳೆಯದು 25,000-26,000

ಕೆಂಪಡಿಕೆ ಮಾರುಕಟ್ಟೆ:

ಕೆಂಪು ಸ್ಥಿರ
 • ಭದ್ರಾವತಿ: ರಾಶಿ, 44099, 45879, 45202
 • ಚೆನ್ನಗಿರಿ: ರಾಶಿ: 44099, 46500, 45327
 • ಚಿತ್ರದುರ್ಗ: ಅಪಿ 45229, 45669, 45449
 • ಚಿತ್ರದುರ್ಗ: ಬೆಟ್ಟೆ , 36219, 36659, 36479
 • ಚಿತ್ರದುರ್ಗ: ಕೆಂಪುಗೋಟು, 31109, 31510, 31300
 • ಚಿತ್ರದುರ್ಗ: ರಾಸಿ, 44739, 45189, 44999
 • ದಾವಣಗೆರೆ: ರಾಸಿ, 38983, 45783, 43333
 • ಹೊನ್ನಾಳಿ; ರಾಶಿ: 45900, 45900, 45900
 • ಕೊಪ್ಪ ಬೆಟ್ಟೆ, 47389, 52799, 48699
 • ಕೊಪ್ಪ ಗೊರಬಲು, 20198, 34419, 34309
 • ಕೊಪ್ಪ ರಾಶಿ, 37009, 45899, 45390
 • ಕೊಪ್ಪ: ಸರಕು, 50108, 72599, 66800
 • ಕುಮಟಾ ಚಿಪ್ಪು, 23509, 27089, 26579
 • ಕುಮಟಾ ಕೋಕಾ, 18019, 26189, 25819
 • ಕುಮಟಾ ಫ್ಯಾಕ್ಟರಿ, 13509, 19100, 18649
 • ಕುಮಟಾ ಹೊಸ ಚಾಲಿ, 34509, 39399, 38819
 • ಕುಮ್ಟಾ ಹಳೆಚಾಲಿ, 47019, 49099, 48769
 • ಸಾಗರ ಬಿಳೇ ಗೋಟು, 18239, 27699, 25132
 • ಸಾಗರ ಚಾಲಿ, 21389, 46359, 45349
 • ಸಾಗರ ಕೋಕಾ, 13189, 28799, 28199
 • ಸಾಗರ ಕೆಂಪುಗೋಟು  21129, 37199, 36692
 • ಸಾಗರ ರಾಶಿ, 37569, 45799, 44699
 • ಸಾಗರ ಸಿಪ್ಪೆಗೋಟು:58, 17389, 17389, 17389
 • ಶಿವಮೊಗ್ಗ ಬೆಟ್ಟೆ , 46010, 51369, 50600
 • ಶಿವಮೊಗ್ಗ ಗೊರಬಲು, 17005, 34399, 33700
 • ಶಿವಮೊಗ್ಗ ರಾಸಿ, 42109, 45822, 45559
 • ಶಿವಮೊಗ್ಗ ಸರಕು, 52869, 75696, 67000
 • ಸಿದ್ದಾಪುರ ಬಿಳೇಗೋಟು, 21899, 35399, 26499
 • ಸಿದ್ದಾಪುರ ಚಾಲಿ, 45311, 47100, 47009
 • ಸಿದ್ದಾಪುರ ಕೋಕಾ, 21299, 29012, 24599
 • ಸಿದ್ದಾಪುರ ಹೊಸ ಚಾಲಿ, 33769, 39399, 38699
 • ಸಿದ್ದಾಪುರ ಕೆಂಪುಗೋಟು, 24499, 36269, 31689
 • ಸಿದ್ದಾಪುರ ರಾಸಿ, 43199, 47699, 45989
 • ಸಿದ್ದಾಪುರ ತಟ್ಟೆ ಬೆಟ್ಟ್ತೆ, 36689, 43099, 37869
 • ಸಿರ್ಸಿ ಬೆಟ್ಟೆ, 31609, 43818, 40418
 • ಸಿರ್ಸಿ ಬಿಳೇ ಗೋಟು, 21599, 38199, 28722
 • ಸಿರ್ಸಿ ಚಾಲಿ, 28296, 40651, 38871
 • ಸಿರ್ಸಿ ರಾಶಿ, 40699, 46909, 45000
 • ತೀರ್ಥಹಳ್ಳಿ ಬೆಟ್ಟೆ, 45099, 52419, 49299
 • ತೀರ್ಥಹಳ್ಳಿ ಇಡಿ, 43209, 45821, 45609
 • ತೀರ್ಥಹಳ್ಳಿ ಗೊರಬಲು, 24009, 34399, 33699
 • ತೀರ್ಥಹಳ್ಳಿ ರಾಸಿ, 30668, 46099, 45799
 • ತೀರ್ಥಹಳ್ಳಿ ಸರಕು, 52019, 76003, 70019
 • ತುಮಕೂರು ರಾಸಿ, 91, 45100, 46400, 45600
 • ಯಲ್ಲಾಪುರ ಅಪಿ, 52969, 54935, 54199
 • ಯಲ್ಲಾಪುರ ಬಿಳೇ ಗೋಟು 24199, 30891, 28699
 • ಯಲ್ಲಾಪುರ ಕೋಕಾ, 18899, 29819, 24899
 • ಯಲ್ಲಾಪುರ ಹಳೇ ಚಾಲಿ, 46850, 47050, 47050
 • ಯಲ್ಲಾಪುರ ಹೊಸ ಚಾಲಿ, 32369, 40580, 38669
 • ಯಲ್ಲಾಪುರ ಕೆಂಪು ಗೋಟು, 27899, 35299, 32623
 • ಯಲ್ಲಾಪುರ ರಾಸಿ, 45670, 51399, 48899
 • ಯಲ್ಲಾಪುರ ತಟ್ಟೆ ಬೆಟ್ಟೆ, 37142, 45050, 42899

ಕೊಬ್ಬರಿ ದರ :

ಕೊಬ್ಬರಿ ದರ ನಿರೀಕ್ಷೆಯಂತೆ ಕಳೆದ ಮಂಗಳವಾರ 18000  ತಲುಪಿತ್ತು. ಈಗ ಸ್ವಲ್ಪ ಇಳಿಕೆಯಾಗಿ 17805 ರಲ್ಲಿ ನಿಂತಿದೆ. ತೆಂಗಿನ ಕಾಯಿಯ ಕೊರತೆ ಇದೆ. ಹಾಗಾಗಿ ಕೊಬ್ಬರಿ ಬೆಲೆ ಇದೇ ರೀತಿ 18000 ಆಸುಪಾಸಿನಲ್ಲಿ ಮುಂದುವರಿಯಬಹುದು.

ಖೊಬ್ಬರಿ ಉಂಡೆ
 • ಮಂಗಳೂರು ಎಣ್ಣೆ ಕೊಬ್ಬರಿ: 7500, 13620, 8500
 • ಪುತ್ತೂರು ಎಣ್ಣೆ ಮತ್ತು ಇತರ:, 4000, 10500, 7250
 • ತುಮಕೂರು ಎಣ್ಣೆ, 11200, 12400, 11500
 • ಅರಸೀಕೆರೆ: ಬಾಲ್  17800, 17800, 17800

ಶುಂಠಿ ದರ :

 • ಬೇಲೂರು;ಹಸಿ 1000, 1000, 1000 (ಕ್ವಿಂಟಾಲು)
 • ಸಾಗರ: ಹಸಿ 1400-1850
 • ಆನಂದಪುರ: ಹಸಿ, 1500-2000
 • ಶಿರಸಿ: ಹಸಿ:1400-1900
 • ಶಿವಮೊಗ್ಗ ಹಸಿ, 1800, 2000, 1900
 • ಚನ್ನರಾಯಪಟ್ನ: 800-950
 • ಎನ್ ಆರ್ ಪುರ:950-1025

ಕಾಫೀ ದಾರಣೆ:

ಕಾಫಿ

ಕಾಫಿ ದಾರಣೆ ಸ್ವಲ್ಪ ಏರಿಕೆ ಆಗಿದೆ. ಬೆಳೆಗೆ ಕಳೆದ 20-25 ವರ್ಷಗಳಿಂದ ಏರದ ಬೆಲೆ ಈ ವರ್ಷ ಏರಿದೆ. ಆದರೆ ಉತ್ಪಾದನೆ ಕಡಿಮೆ.  ಲಾಭವೂ ಇಲ್ಲ. ನಷ್ಟವೂ ಇಲ್ಲ. ಮಾಮೂಲಿನಂತೆ ಎಲ್ಲ. ಅದರೆ ಕಾಫಿಗೆ ಬೆಲೆ ಇದೆ ಇದು ಆಡಿಕೊಳ್ಳುವ ಮಾತು ಎನ್ನುತ್ತಾರೆ ಎಲ್ಲರೂ.

 • ಅರೇಬಿಕಾ ಪಾಚ್ ಮೆಂಟ್:16,100 (50Kg)
 • ಅರೇಬಿಕಾ ಚೆರಿ: 7600(50Kg)
 • ರೋಬಸ್ಟಾ ಪಾರ್ಚ್ ಮೆಂಟ್: 7700(50Kg)
 • ರೋಬಸ್ಟಾ ಚೆರಿ:4250(50Kg)
 • ರೋಬಸ್ಟಾ  ಹಣ್ಣು :32 -33 ಕಿಲೋ

ರಬ್ಬರ್ ಧಾರಣೆ:  

ಇಂದು ರಬ್ಬರ್ ದರ ಸ್ವಲ್ಪ ಇಳಿಕೆಯಾಗಿದೆ. ರಬ್ಬರ್ ಗೆ ದಿನಕ್ಕೊಂದು ದರ ಎಂಬ ಸ್ಥಿತಿ ಉಂಟಾಗಿದೆ. ಒಮ್ಮೆ ಏರಿಕೆಯಾಗಿವುದು ಹಾಗೆಯೇ ಕೆಳಕ್ಕೆ ಬರುವುದು ಆಗುತ್ತಿದೆ. ರಬ್ಬರ್ ಇನ್ನೂ ಒಂದು – ಎರಡು  ವರ್ಷ ಕಳೆದ ತರುವಾಯ  ಬೆಲೆ ಬರಬಹುದೇನೋ. ಈಗಿನ ದರದಲ್ಲಿ ರಬ್ಬರ್ ಕೃಷಿ ಏನೇನೂ ಲಾಭದಾಯಕವಲ್ಲ ಎಂದಾಗಿದೆ.

 • Grade 1X- 175-00 (kg)
 • RSS 3-160.50
 • RSS 4 -160.00
 • RSS 5 -154.00
 • Lot : 151.00
 • Scrap:105.00-113.00

ಕರಿಮೆಣಸು ಮಾರಾಟ ಮಾಡಬೇಡಿ. ಕೊಯಿಲಿನ ಸಮಯದಲ್ಲಿ ದರ ಏರಿಕೆ ಒಳ್ಳೆಯ ಸೂಚನೆ. ಹಳೆ ಅಡಿಕೆ ಮಾರಾಟ ಮಾಡಿ. ಬಿದ್ದ ಅಡಿಕೆ ಗುಣಮಟ್ಟ ಇಲ್ಲದ ಅಡಿಕೆ ಮಾರಾಟ ಮಾಡಿ. ಕಾಫಿಗೆ ಇನ್ನೂ ದರ ಎರಬಹುದು. ಕೆಂಪಡಿಕೆ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಿ.

Leave a Reply

Your email address will not be published. Required fields are marked *

error: Content is protected !!