ಏನು ಮಳೆಯ ಆವಾಂತರವೋ ತಿಳಿಯದು. ಚಳಿಗಾಲ ಬರಬೇಕಾದ ಸಮಯವಾದರೂ ಮಳೆಗಾಲಕ್ಕೆ ನಮ್ಮನ್ನಗಲಲು ಮನಸ್ಸಿಲ್ಲ. ಒಂದಿಲ್ಲೊಂದು ವಾಯುಭಾರ ಕುಸಿತ. ಈ ಭಾರಿ ಅರಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಎರಡರಲ್ಲೂ ವಾಯು ಭಾರ ಕುಸಿತ ಉಂಟಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಇದೆ. ಕರ್ನಾಟಕದಲ್ಲಿ ದಿನಾಂಕ 17/11/21 ರಿಂದ 23/11/2021 ತನಕ ಒಂದು ವಾರದ ಕಾಲ ರಾಜ್ಯದಲ್ಲಿ ಮಳೆ ಬರುವ ಮುನ್ಸೂಚನೆ ಇರುತ್ತದೆ.
ಇನ್ನೊಂದು ವಾರದಲ್ಲಿ ಜನ ತರಕಾರಿ ತಿನ್ನುವುದಕ್ಕೂ ಕಷ್ಟ ಪಡಬೇಕಾಗಬಹುದು.ಗ್ರಾಹಕರು ತರಕಾರೀ ಬೆಳೆಗಾರರಿಗೆ ಬಂಪರ್ ಲಾಭ ಎಂದು ಬಾಯಿ ಬಡಕೊಂಡರೆ, ರೈತರಿಗೆ 25% ವೂ ಬೆಳೆ ಇಲ್ಲದೆ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾನೆ. ತಮಿಳುನಾಡು ಆಂದ್ರ ಹಾಗೂ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಈ ವರ್ಷ ಭತ್ತದ ಬೆಳೆಗೆ ಭಾರೀ ಹಾನಿಯಾಗಿದೆ. ಅಕ್ಕಿಯೂ ಸ್ವಲ್ಪ ದುಬಾರಿ ಆಗಬಹುದು. ಒಟ್ಟಿನಲ್ಲಿ ಈ ವರ್ಷ ವರುಣನ ಮುನಿಸೋ ಏನೋ ಕೃಷಿಗೆ ಭಾರೀ ಹಾನಿ ಆಗಿದೆ.
ಮಳೆ ನಮ್ಮನ್ನು ಬಿಡುವ ಅಂದಾಜು ಕಾಣಿಸುತ್ತಿಲ್ಲ. ಮಾಡುವಷ್ಟು ಹಾನಿ ಮಾಡಿಯಾಗಿದೆ. ಎಲ್ಲೆಲ್ಲಿ ಮಳೆ ಬರುವುದೇ ಅಪರೂಪವೋ ಅಲ್ಲೆಲ್ಲಾ ನಿತ್ಯ ಹಾಜರಾಗುತ್ತಿದೆ. ಕರ್ನಾಟಕದಾದ್ಯಂತ ನವೆಂಬರ್ ತಿಂಗಳು ಪೂರ್ತಿ ಮಳೆ ಬರುವ ಸಾಧ್ಯತೆಯನ್ನು ಹವಾಮಾನ ಮಾಹಿತಿ ಕೊಡುವ ಮೂಲಗಳು ಹೇಳುತ್ತಿವೆ. ಡಿಸೆಂಬರ್ ನಲ್ಲೂ ಕೆಲವು ದಿನ ಮಳೆ ಇರುವ ಮುನ್ಸೂಚನೆ ಇದೆ.
ಎಲ್ಲೆಲ್ಲಿ ಮಳೆ ಬರಲಿದೆ?:
ಚಿಕ್ಕಮಗಳೂರು ಜಿಲ್ಲೆ:
- ಮೂಡಿಗೆರೆ ಆಸುಪಾಸಿನಲ್ಲಿ 18/11/2021 ರಿಂದ 24 /11/2021 ತನಕವೂ ಮಳೆ ಮುನ್ಸೂಚನೆ ಇದೆ.
- ಮೊದಲ ಎರಡು ದಿನ ಸಾಧಾರಣ ನಂತರ ಸ್ವಲ್ಪ ಹೆಚ್ಚು.
- ದಿನಾಂಕ 22/11/2021 ರಂದು ಸ್ವಲ್ಪ ಕಡಿಮೆ ಇದೆ.
- 23-24 ರಂದು ಅರ್ಧ ದಿನ ಬಿಸಿಲು, ಮತ್ತೆ ಅರ್ಧ ದಿನ ಮಳೆ ವಾತಾವರಣ ಇದೆ.
- ಚಿಕ್ಕಮಗಳೂರು ಸುತ್ತಮುತ್ತ 18/11/21 ರಿಂದ 24/11/2021 ರ ತನಕ ಮಳೆ ಇದೆ.
- ಕಡೂರು ಸುತ್ತಮುತ್ತ ಇಂದಿನಿಂದ 24 ತಾರೀಕಿನ ತನಕವೂ ಮಳೆ ಇದೆ.
- ಕೊಪ್ಪ ತಾಲೂಕಿನಲ್ಲಿ 18-19 ಸಾಧಾರಣ ಮಳೆ 20-21 ಹೆಚ್ಚು ಮಳೆ 22 ರಂದು ಬಿಸಿಲು, ಹಾಗೂ 23-24-25 ರಂದು ಮಧ್ಯಾನ್ಹದ ನಂತರ ಬಿಸಿಲು ಮಳೆ ಇದೆ.
- ಶ್ರಿಂಗೇರಿಯಲ್ಲಿ ಇಂದು ನಾಳೆ, ಸಾಧಾರಣ ಮಳೆಯೂ 20-21 ರಂದು ಹೆಚ್ಚು ಮಳೆಯೂ ಇರುತ್ತದೆ.
- ಆಗುಂಬೆಯಲ್ಲೂ ವಾರವಿಡೀ ಮಳೆಯ ಮುನ್ಸೂಚನೆ ಇದೆ. ಇಂದು ನಾಳೆ ಸ್ವಲ್ಪ ಕಡಿಮೆ ನಂತರ 2 ದಿನ ಹೆಚ್ಚು ಮಳೆಯಾಗಲಿದೆ.
ಚಿತ್ರದುರ್ಗ ಜಿಲ್ಲೆ:
- ಚಳ್ಳಕೆರೆ ಯಲ್ಲಿ ಇಂದಿನಿಂದ ಮೂರು ದಿನ ಸಾಧಾರಣ ಮತ್ತು ನಂತರ 2 ದಿನ ಹೆಚ್ಚು ಮಳೆಯ ಮುನ್ಸೂಚನೆ ಇದೆ.
- ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ , ಮೊಳಕಾಲ್ಮೂರು,ಚಿತ್ರದುರ್ಗ ನಗರ, ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಈ ವಾರ ಮಳೆಯ ಮುನ್ಸೂಚನೆ ಇದೆ.
ಶಿವಮೊಗ್ಗ ಜಿಲ್ಲೆ:
- ಸೊರಬ ತಾಲೂಕಿನ ಬೇರೆ ಬೇರೆ ಕಡೆ ಈ ವಾರದಲ್ಲಿ ದಿನಾಂಕ 23/11/2021 ತನಕವೂ ಮಳೆ ಬರುವ ಸಾಧ್ಯತೆ ಇದೆ.
- ಹೊಸನಗರದಲ್ಲಿ ದಿನಾಂಕ 22/11/2021 ರ ತನಕವೂ ಮಳೆ ಮುನ್ಸೂಚನೆ ಇದೆ. ಉತ್ತಮ ಮಳೆ ಆಗಬಹುದು.
- ಸಾಗರದಲ್ಲಿ ಇಂದಿನಿಂದ ಪ್ರತೀ ದಿನ ಮಳೆ ಇದ್ದು, ದಿನಾಂಕ 22/11/2021 ರಂದು ಹೆಚ್ಚು ಮಳೆಯೂ ಉಳಿದ ದಿನಗಳಲ್ಲಿ ಸಾಧಾರಣ ಮಳೆಯೂ ಆಗಲಿದೆ.
- ಭದ್ರಾವತಿ ಸುತ್ತಮುತ್ತ ದಿನಾಂಕ 18-19 ಸಾಧಾರಣ ಮಳೆಯೂ 20-21 ಅಧಿಕ ಮಳೆಯೂ ಆಗುವ ಸಾಧ್ಯತೆ ಇದೆ. 22 ಕ್ಕೆ ಮಳೆ ಇಲ್ಲ. 23 ಕ್ಕೆ ಮತ್ತೆ ತುಂತುರು ಮಳೆ ಸಾಧ್ಯತೆ.
- ಶಿಕಾರಿಪುರದಲ್ಲಿ ನಾಳೆಯಿಂದ ದಿನಾಂಕ 23-23 ತನಕವೂ ಮಳೆ ಸಾದ್ಯತೆ ಇದೆ. 21 ರಂದು ಭಾರೀ ಮಳೆಯಾಗುವ ಸಾದ್ಯತೆ ಇದೆ.
- ಶಿವಮೊಗ್ಗ ಸುತ್ತಮುತ್ತ ಇಂದಿನಿಂದ 2 ದಿನ ಸಾಧಾರಣ ಮಳೆ ಹಾಗೂ ಶನಿವಾರ ಮತ್ತು ಭಾನುವಾರ ಅಧಿಕ ಮಳೆಯಾಗುವ ಸಾಧ್ಯತೆ ಇದೆ.
- ತೀರ್ಥಹಳ್ಳಿಯಲ್ಲಿ ಸುತ್ತಮುತ್ತ ಇಂದಿನಿಂದ 2 ದಿನ ಸಾಧಾರಣ ಮಳೆ ಹಾಗೂ ಶನಿವಾರ ಮತ್ತು ಭಾನುವಾರ ಅಧಿಕ ಮಳೆಯಾಗುವ ಸಾಧ್ಯತೆ ಇದೆ.
ಹಾಸನ ಜಿಲ್ಲೆ:
- ಹಾಸನದ ಅರಕಲಗೂಡು ಸುತ್ತಮುತ್ತ ದಿನಾಂಕ 18 ರಿಂದ 21 ರ ವರೆಗೆ ಸಾಧಾರಣ ಮಳೆಯೂ ನಂತರ ಒಂದು ದಿನ ವಿರಾಮವೂ ನಂತರ ಮತ್ತೆ ತುಂತುರುಮಳೆಯಾಗುವ ಸಾಧ್ಯತೆ ಇದೆ.
- ಹೊಳೆನರಸೀಪುರ ಸುತ್ತಮುತ್ತ ಸುತ್ತಮುತ್ತ ದಿನಾಂಕ 18 ರಿಂದ 21 ರ ವರೆಗೆ ಸಾಧಾರಣ ಮಳೆಯೂ ನಂತರ ಒಂದು ದಿನ ವಿರಾಮವೂ ನಂತರ ಮತ್ತೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
- ಚನ್ನರಾಯಪಟ್ನ ಸುತ್ತಮುತ್ತ ನಾಳೆ ಅಧಿಕ ಮಳೆಯೂ ನಂತರದ ದಿನಗಳಲ್ಲಿ ಸಾಧಾರಣ ಮಳೆಯೂ ಆಗಬಹುದು. ದಿನಾಂಕ 22 ರಂದು ವಿರಾಮ ಇರುವ ಸಾಧ್ಯತೆ ಇದೆ.
- ಸಕಲೇಶಪುರದ ಸುತ್ತಮುತ್ತ ನಾಳೆ 18-19, ನಾಡಿದ್ದು ಸಾಧಾರಣ, 20-21 ಹೆಚ್ಚು ಮಳೆ ಹಾಗೂ 22 ವಿರಾಮ ಮತ್ತು 23 ಮತ್ತೆ ಜಿನುಗು ಮಳೆ ಇದೆ.
- ಹಳೇ ಮೈಸೂರು ಸುತ್ತಮುತ್ತ ನಾಳೆಯಿಂದ 21 ರ ವರೆಗೆ ಸಾಧಾರಣ ಮಳೆಯೂ 22 ವಿರಾಮ ಮತ್ತು 23 ರಂದು ಜಿನುಗು ಮಳೆಯ ಸಾಧ್ಯತೆ ಇದೆ.
- ಬೇಲೂರು ಸುತ್ತಮುತ್ತ ನಾಳೆಯಿಂದ 20 ರ ತನಕ ಸಾಧಾರಣ ಮಳೆ ಹಾಗೂ 21 ಹೆಚ್ಚು ಮಳೆ ಹಾಗೂ 22 ಸ್ವಲ್ಪ ವಿರಾಮವೂ ಇರಲಿದೆ.
ದಕ್ಷಿಣ ಕನ್ನಡ:
- ಮಂಗಳೂರು ಸುತ್ತಮುತ್ತ ಇಂದು ನಾಳೆ ಸಾಧಾರಣ ಮತ್ತು 20-21 ಅಧಿಕ ಹಾಗೂ 22 ಕ್ಕೆ ಸಾಧಾರಣ ಮಳೆ ಮತ್ತು 23 ಕ್ಕೆ ಬಿಸಿಲಿನ ಬಿಸಿಲಿನ ವಾತಾವರಣ ಸಾಧ್ಯತೆ ಇದೆ.
- ಬಂಟ್ವಾಳದಲ್ಲಿ ಇಂದು ಮಧ್ಯಾನ್ಹ ತನಕ ಬಿಸಿಲಿನ ವಾತಾವರಣವೂ ನಂತರ ಮಳೆಯೂ,ನಾಡಿದ್ದು, ಸಾಧಾರಣ ಮಳೆ 20-21 ರಂದು ಅಧಿಕ ಮಳೆಯೂ 22 ಸಾಧಾರಣ ಮಳೆಯೂ 23 ಕ್ಕೆ ಬಿಸಿಲಿನ ವಾತಾವರಣವೂ ಇರುವ ಸಾಧ್ಯತೆ ಇದೆ.
- ಬೆಳ್ತಂಗಡಿಯಲ್ಲಿ ಇಂದು ನಾಳೆ, ಸಾಧಾರಣ ಮಳೆ, ಮೋಡ ಕವಿದ ವಾತಾವರಣ 20-21 ರಂದು ಅಧಿಕ ಮಳೆಯೂ 22 ಸಾಧಾರಣ ಮಳೆಯೂ 23 ಕ್ಕೆ ಮಳೆ ಮತ್ತು ಬಿಸಿಲಿನ ವಾತಾವರಣವೂ ಇರುವ ಸಾಧ್ಯತೆ ಇದೆ.
- ಪುತ್ತೂರಿನಲ್ಲಿ ಇಂದು ನಾಳೆ (18-19) ನಾಡಿದ್ದು, ಸಾಧಾರಣ ಮಳೆ 20-21 ರಂದು ಅಧಿಕ ಮಳೆಯೂ 22 ಸಾಧಾರಣ ಮಳೆಯೂ 23 ಕ್ಕೆ ಮಳೆ ಮತ್ತು ಬಿಸಿಲಿನ ವಾತಾವರಣವೂ ಇರುವ ಸಾಧ್ಯತೆ ಇದೆ.
- ಸುಳ್ಯದಲ್ಲಿ 18-19 ರಂದು, ಸಾಧಾರಣ ಮಳೆ 20-21 ರಂದು ಅಧಿಕ ಮಳೆಯೂ 22 ಬಿಸಿಲಿನ ವಾತಾವರಣವೂ 23 ಕ್ಕೆ ಮಳೆ ಮತ್ತು ಬಿಸಿಲಿನ ವಾತಾವರಣವೂ ಇರುವ ಸಾಧ್ಯತೆ ಇದೆ.
- ಮೂಡಬಿದ್ರೆಯಲ್ಲಿ 18-19 ರಂದು, ಸಾಧಾರಣ ಮಳೆ 20-21 ರಂದು ಅಧಿಕ ಮಳೆಯೂ 22 ಬಿಸಿಲಿನ ಸಾದಾರಣ ಮಳೆ ಹಾಗೂ 23 ಕ್ಕೆ ಬಿಸಿಲಿನ ವಾತಾವರಣವೂ ಇರುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಾಂತರ:
- ದೇವನಹಳ್ಳಿಯಲ್ಲಿ ವಾರಪೂರ್ತಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ದಿನಾಂಕ 23 ರಂದು ಬಿಸಿಲು ಮಳೆಯ ವಾತಾವರಣ ಇರುವ ಸಾಧ್ಯತೆ ಇದೆ.
- ದೊಡ್ಡ ಬಳ್ಳಾಪುರ ದಲ್ಲಿ ನಾಳೆಯಿಂದ ಸಾಧಾರಣ ಮಳೆಯ ಮುನ್ಸೂಚನೆ ಇದೆ. ದಿನಾಂಕ 23 ರಂದು ಬಿಸಿಲು ಮಳೆಯ ವಾತಾವರ ಇರುವ ಸಾಧ್ಯತೆ ಇದೆ.
- ನೆಲಮಂಗಲ ಸುತ್ತಮುತ್ತ ನಾಳೆಯಿಂದ ಸಾಧಾರಣ ಮಳೆಯ ಮುನ್ಸೂಚನೆ ಇದೆ. ದಿನಾಂಕ 19 ಕ್ಕೆ ಮೋಡದ ವಾತಾವರಣ 22 ರಂದು ಹೆಚ್ಚು ಮಳೆ ದಿನಾಂಕ 23 ರಂದು ಬಿಸಿಲು ಮಳೆಯ ವಾತಾವರ ಇರುವ ಸಾಧ್ಯತೆ ಇದೆ.
- ಮಾಲೂರಿನ ಸುತ್ತಮುತ್ತ ವಾರವಿಡೀ ಮೋಡದ ವಾತಾವರಣ ಮತ್ತು ಜೊತೆಗೆ ಚದುರಿದ ಮಳೆಯ ಮುನ್ಸೂಚನೆ ಇರುತ್ತದೆ. ದೊಡ್ದ ಮಳೆ ಅಲ್ಲ. ಸಾಧಾರಣ ಮೆಳೆ.
- ಹೊಸಕೋಟೆ ಸುತ್ತಮುತ್ತ ವಾರವಿಡೀ ಮೋಡದ ವಾತಾವರಣ ಮತ್ತು ಜೊತೆಗೆ ಚದುರಿದ ಮಳೆಯ ಮುನ್ಸೂಚನೆ ಇರುತ್ತದೆ. ದೊಡ್ದ ಮಳೆ ಅಲ್ಲ. ಸಾಧಾರಣ ಮೆಳೆ.
- ಸಿಂಗನಾಯಕನ ಹಳ್ಳಿಯಲ್ಲಿ ವಾರವಿಡೀ ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆ ಮುನ್ಸೂಚನೆ ಇದೆ.
ಉಡುಪಿ ಜಿಲ್ಲೆ:
- ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯೂ ದಿನಾಂಕ 20-21 ರಂದು ಹೆಚ್ಚಿನ ಮಳೆಯೂ 22 ತುಂತುರು ಮಳೆಯೂ 23 ಬಿಸಿಲು ಮತ್ತು ಮಳೆ ಹಾಗೂ 24 ರಂದು ತುಂತುರು ಮಳೆಯೂ ಇರುವ ಸೂಚನೆ ಇದೆ.
- ಕುಂದಾಪುರದಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯೂ ದಿನಾಂಕ 20-21 ರಂದು ಹೆಚ್ಚಿನ ಮಳೆಯೂ 22 ತುಂತುರು ಮಳೆಯೂ 23 ಬಿಸಿಲು ಮತ್ತು ಮಳೆ ಹಾಗೂ 24 ರಂದು ತುಂತುರು ಮಳೆಯೂ ಇರುವ ಸೂಚನೆ ಇದೆ.
- ಉಡುಪಿ ಸುತ್ತಮುತ್ತ ಇಂದು ಮತ್ತು ನಾಳೆ ಸಾಧಾರಣ ಮಳೆಯೂ ದಿನಾಂಕ 20-21 ರಂದು ಹೆಚ್ಚಿನ ಮಳೆಯೂ 22 ತುಂತುರು ಮಳೆಯೂ 23 ಬಿಸಿಲು ಮತ್ತು ಮಳೆ ಹಾಗೂ 24 ರಂದು ಬಿಸಿಲಿನ ವಾತಾವರಣ ಇರುವ ಸೂಚನೆ ಇದೆ.
- ಹೆಬ್ರಿಯಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯೂ ದಿನಾಂಕ 20-21 ರಂದು ಹೆಚ್ಚಿನ ಮಳೆಯೂ 22 ತುಂತುರು ಮಳೆಯೂ 23 ಬಿಸಿಲು ಮತ್ತು ಮಳೆ ಹಾಗೂ 24 ರಂದು ತುಂತುರು ಮಳೆಯೂ ಇರುವ ಸೂಚನೆ ಇದೆ.
ಉತ್ತರ ಕನ್ನಡ ಜಿಲ್ಲೆ:
- ಉತ್ತರ ಕನ್ನಡದ ಶಿರಸಿಯಲ್ಲಿ ವಾರವಿಡೀ ಮೋಡ ಮತ್ತು ತುಂತುರು ಮಳೆಯ ವಾತಾವರಣ ಇದ್ದು ದಿನಾಂಕ 21/11/2021 ರ ಭಾನುವಾರ ಹಚ್ಚಿನ ಮಳೆ ಮುನ್ಸೂಚನೆ ಇದೆ.
- ಯಲ್ಲಾಪುರದಲ್ಲಿ ಇಂದಿನಿಂದ ವಾರ ಇಡೀ ಮಳೆಯ ವಾತಾವರಣ ಇದ್ದು ದಿನಾಂಕ 21/11/2021 ರ ಭಾನುವಾರ ಹೆಚ್ಚಿನ ಮಳೆ ಮುನ್ಸೂಚನೆ ಇದೆ. ದಿನಾಂಕ 24 ರಂದು ಬಿಸಿಲು ಮಳೆಯ ವಾತಾವರಣ ಇರುತ್ತದೆ.
- ಸಿದ್ದಾಪುರದಲ್ಲಿ ಇಂದಿನಿಂದ 20 ನೇ ತಾರೀಕಿನ ವರೆಗೆ ಸಾಧಾರಣ ಮಳೆ ದಿನಾಂಕ 21 ಹೆಚ್ಚು ಮಳೆ ಮತ್ತು 22-23-24 ರಂದು ತುಂತುರು ಮಳೆಯ ಮುನ್ಸೂಚನೆ ಇದೆ.
- ಅಂಕೋಲ ಗೋಕರ್ಣ ಸುತ್ತಮುತ್ತ 18-19-20 ಸಾಧಾರಣ ಮಳೆಯೂ 21-22 ಹೆಚ್ಚಿನ ಮಳೆಯೂ 23-24 ಮೋಡ ಸಹಿತ ಬಿಸಿಲಿನ ವಾತಾವರಣ ಇರುತ್ತದೆ.
- ಹೊನ್ನಾವರ ಸುತ್ತಮುತ್ತ 18-19-20 ಸಾಧಾರಣ ಮಳೆಯೂ 21-22 ಹೆಚ್ಚಿನ ಮಳೆಯೂ 23 ರಂದು ಬಿಸಿಲಿನ ವಾತಾವರಣ ಮತ್ತೆ 24 ತುಂತುರು ಮಳೆಯ ವಾತಾವರಣ ಇರುತ್ತದೆ.
- ಭಟ್ಕಳ ಸುತ್ತಮುತ್ತ 18-19-20 ಸಾಧಾರಣ ಮಳೆಯೂ 21-22 ಹೆಚ್ಚಿನ ಮಳೆಯೂ 23 ರಂದು ಬಿಸಿಲಿನ ವಾತಾವರಣ ಮತ್ತೆ 24 ತುಂತುರು ಮಳೆಯ ವಾತಾವರಣ ಇರುತ್ತದೆ.
- ಮುಂಡಗೋಡ ಸುತ್ತಮುತ್ತ 18-19-20 ಸ್ವಲ್ಪ ಮಳೆ 21 ಹೆಚ್ಚು ಮಳೆ ಹಾಗೂ 22-23 ಬಿಸಿಲು ಮಳೆಯ ವಾತಾವರಣ ಇರುತ್ತದೆ.
- ಹಳಿಯಾಳ ಸುತ್ತಮುತ್ತ 18-19-20 ಸ್ವಲ್ಪ ಮಳೆ 21 ಹೆಚ್ಚು ಮಳೆ ಹಾಗೂ 22 ಬಿಸಿಲು ಮಳೆಯ 23 ಬಿಸಿಲು ವಾತಾವರಣ,24 ಬಿಸಿಲು ಮಳೆ ವಾತಾವರಣ ಇರುತ್ತದೆ.
ದಾವಣಗೆರೆ ಜಿಲ್ಲೆ:
- ಹರಪನಹಳ್ಳಿ ಸುತ್ತಮುತ್ತ ದಿನಾಂಕ 18-19-20 ಸಾಧಾರಣ ಮಳೆ 21 ಹೆಚ್ಚಿನ ಮಳೆ ಮತ್ತು 22 ಬಿಸಿಲು 23-24 ತುಂತುರು ಮಳೆಯ ವಾತಾವರಣ ಇರುತ್ತದೆ.
- ಜಗಳೂರು ಸುತ್ತಮುತ್ತ ಇಂದು ಬಿಸಿಲಿನ ವಾತಾವರಣ ನಾಳೆ ನಾಡಿದ್ದು ತುಂತುರು ಮಳೆ ದಿನಾಂಕ 21 ಹೆಚ್ಚು ಮಳೆ 22-23 ತುಂತುರು ಮಳೆ ಹಾಗೂ 24 ಬಿಸಿಲು ಮತ್ತು ಮೋಡದ ವಾತಾವರಣ ಇರುತ್ತದೆ.
- ದಾವಣಗೆರೆ ಸುತ್ತಮುತ್ತ ಇಂದು ನಾಳೆ ನಾಡಿದ್ದು ತುಂತುರು ಮಳೆ ದಿನಾಂಕ 21 ಹೆಚ್ಚು ಮಳೆ 22 ಬಿಸಿಲು ಮತ್ತು 23-24 ತುಂತುರು ಮಳೆ ವಾತಾವರಣ ಇರುತ್ತದೆ.
- ಹೊನ್ನಾಳಿ ಸುತ್ತಮುತ್ತ ಇಂದು ನಾಳೆ ನಾಡಿದ್ದು ತುಂತುರು ಮಳೆ ದಿನಾಂಕ 21 ಹೆಚ್ಚು ಮಳೆ 22 ಬಿಸಿಲು ಮತ್ತು 23-24 ತುಂತುರು ಮಳೆ ವಾತಾವರಣ ಇರುತ್ತದೆ.
- ಚೆನ್ನಗಿರಿ ಸುತ್ತಮುತ್ತ ಇಂದು ನಾಳೆ ನಾಡಿದ್ದು ತುಂತುರು ಮಳೆ ದಿನಾಂಕ 21 ಹೆಚ್ಚು ಮಳೆ 22 ಬಿಸಿಲು ಮತ್ತು 23-24 ತುಂತುರು ಮಳೆ ವಾತಾವರಣ ಇರುತ್ತದೆ.
ಕೊಡಗು ಜಿಲ್ಲೆ:
- ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಇಂದು ಮತ್ತು ನಾಳೆ ತುಂತುರು ಮಳೆ ದಿನಾಂಕ 20 ಹೆಚ್ಚು ಮಳೆ , 21 ಸಾಧಾರಣ ಮಳೆ, 22 ಬಿಸಿಲು 23-24 ಬಿಸಿಲು ಮತ್ತು ಮಳೆಯ ವಾತಾವರಣ ಇರುತ್ತದೆ.
- ಮಡಿಕೇರಿ ಸುತ್ತಮುತ್ತ ಇಂದು ಮತ್ತು ನಾಳೆ ತುಂತುರು ಮಳೆ, ದಿನಾಂಕ 20 ಸ್ವಲ್ಪ ಹೆಚ್ಚು ಮಳೆ, 21 ಸಾಧಾರಣ ಮಳೆ, 22 23-24 ಬಿಸಿಲು ಮತ್ತು ಮಳೆಯ ವಾತಾವರಣ ಇರುತ್ತದೆ.
- ಸೋಮವಾರ ಪೇಟೆ ಸುತ್ತಮುತ್ತ ಇಂದು ಮತ್ತು ನಾಳೆ, ನಾಡಿದ್ದು ತುಂತುರು ಮಳೆ ದಿನಾಂಕ 21 ಸ್ವಲ್ಪ ಹೆಚ್ಚು ಮಳೆ 22 ಬಿಸಿಲು 23-24 ಬಿಸಿಲು ಮತ್ತು ಮಳೆಯ ವಾತಾವರಣ ಇರುತ್ತದೆ.
ಮೈಸೂರು ಜಿಲ್ಲೆ:
- ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಇಂದು ನಾಳೆ ಸಾಧಾರಣ ಮಳೆಯೂ ಶನಿವಾರ ಹೆಚ್ಚು ಮಳೆಯೂ , ಭಾನುವಾರ ಸಾಧಾರಣ ಮತ್ತು ಸೋಮವಾರ ಬಿಸಿಲು ಹಾಗೂ ಮಂಗಳವಾರ ಮತ್ತು ಬುಧವಾರ ಸಾಧಾರಣ ಮಳೆ ಮುನ್ಸೂಚನೆ ಇದೆ.
- ಮೈಸೂರು ಸುತ್ತಮುತ್ತ ಇಂದು ಮಳೆ ಸಾಧ್ಯತೆ ಇಲ್ಲ.ನಾಳೆ ನಾಡಿದ್ದು ಸಾಧಾರಣ ಮಳೆಯೂ ದಿನಾಂಕ 21 ಬಿಸಿಲು ಮತ್ತು 22-23 ಮಳೆ ಹಾಗೂ 24 ಬಿಸಿಲಿನ ವಾತಾವರಣ ಇದೆ.
- ಪಿರಿಯಾಪಟ್ನ ತಾಲೂಕಿನಲ್ಲಿ ಇಂದು ಮಳೆ ಸಾಧ್ಯತೆ ಕಡಿಮೆ. ನಾಳೆ ನಾಡಿದ್ದು ಸಾಧಾರಣ ಮಳೆಯೂ ಭಾನುವಾರ ಬಿಸಿಲಿನ ವಾತಾವರಣವೂ ಸೋಮವಾರ ಸಾಧಾರಣ ಮಳೆ ಮಂಗಳವಾರ ಹೆಚ್ಚು ಮಳೆ ಹಾಗೂ ಬುಧವಾರ ಜಿನುಗು ಮಳೆ ಮುನ್ಸೂಚನೆ ಇದೆ.
- ಟಿ- ನರಸೀಪುರ ತಾಲೂಕು ಸುತ್ತಮುತ್ತ ಇಂದಿನಿಂದ ಮುಂದಿನ ಬುಧವಾರ ತನಕ ಮಳೆ ಮುನ್ಸೂಚನೆ ಇದೆ. ಮಂಗಳವಾರ ಹೆಚ್ಚು ಮಳೆಯೂ ಬುಧವಾರ ಬಿಸಿಲು ಸಹಿತ ಮಳೆಯೂ ಇರಲಿದೆ.
- ನಂಜನಗೂಡಿನ ಸುತ್ತಮುತ್ತ ಭಾನುವಾರ ಹೊರತಾಗಿ ಉಳಿದೆಲ್ಲಾ ದಿನಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ. ಬುಧವಾರ ಬಿಸಿಲು ಮಳೆ ವಾತಾವರಣ ಇರುತ್ತದೆ.
- ಕೆ ಆರ್ ನಗರ ಸುತ್ತಮುತ್ತ ಇಂದು(18/11/21) ಮಳೆ ಸಾಧ್ಯತೆ ಕಡಿಮೆ. ನಾಳೆ ನಾಡಿದ್ದು ಸಾಧಾರಣ ಮಳೆಯೂ ಭಾನುವಾರ ಬಿಸಿಲಿನ ವಾತಾವರಣ ಮತ್ತೆ ಪುನಹ ಸೋಮವಾರ ದಿಂದ (22,23-11/2021) ತನಕ ಮಳೆ ಇರುತ್ತದೆ.
- ಹೆಗ್ಗಡದೇವನ ಕೋಟೆ ಸುತ್ತಮುತ್ತ ಇಂದು(18/11/21) ಮಳೆ ಸಾಧ್ಯತೆ ಕಡಿಮೆ. ನಾಳೆ ನಾಡಿದ್ದು ಸಾಧಾರಣ ಮಳೆಯೂ ಭಾನುವಾರ ಬಿಸಿಲಿನ ವಾತಾವರಣ ಮತ್ತೆ ಪುನಹ ಸೋಮವಾರ ದಿಂದ (22,23-11/2021) ತನಕ ಮಳೆ ಇರುತ್ತದೆ.
ತುಮಕೂರು ಜಿಲ್ಲೆ:
- ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ಇಂದು ಮೋಡದೊಂದಿಗೆ ಸ್ವಲ್ಪ ಮಳೆಯೂ ನಾಳೆಯಿಂದ ಬುಧವಾರದ ತನಕವೂ ಮಳೆ ಇರುತ್ತದೆ. ಭಾನುವಾರ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
- ಪಾವಗಡ ಸುತ್ತಮುತ್ತ ಇಂದಿನಿಂದ 18/11/2021 ಸೋಮವಾರದ ತನಕವೂ ಮಳೆ ಇರುತ್ತದೆ. ಭಾನುವಾರ ಹೆಚ್ಚಿನ ಮಳೆ ಸಾಧ್ಯತೆ ಇದೆ.ಮಂಗಳವಾರ ಬುಧವಾರ ಬಿಸಿಲು ಮಳೆ ವಾತಾವರಣ ಇರುತ್ತದೆ.
- ಗುಬ್ಬಿ ತಾಲೂಕಿನ ಸುತ್ತಮುತ್ತ ಇಂದಿನಿಂದ 18/11/21 ಬುಧವಾರ 24/11/2021 ತನಕವೂ ಮಳೆ ಸಾಧ್ಯತೆ ಇರುತ್ತದೆ.
- ಕೊರಟಗೆರೆಯಲ್ಲಿ ಇಂದು ನಾಳೆ ಸಾಧಾರಣ ಮಳೆಯೂ ಶನಿವಾರ ಭಾನುವಾರ 20-21/11-21. ಹೆಚ್ಚು ಮಳೆಯೂ ಸೋಮವಾರ ಮಂಗಳವಾರ ಮತ್ತು ಬುಧವಾರದಂದು ಸಾಧಾರಣ ಮಳೆಯೂ ಇರಲಿದೆ.
- ಸಿರಾ ತಾಲೂಕಿನಲ್ಲಿ ಇಂದು ನಾಳೆ ಸಾಧಾರಣ ಮಳೆಯೂ ಶನಿವಾರ ಭಾನುವಾರ 20-21/11/21. ಹೆಚ್ಚು ಮಳೆಯೂ ಸೋಮವಾರ ಮಂಗಳವಾರ ಮತ್ತು ಬುಧವಾರದಂದು ಸಾಧಾರಣ ಮಳೆಯೂ ಇರಲಿದೆ.
- ಕುಣಿಗಲ್ ಸುತ್ತಮುತ್ತ ಇಂದು ನಾಳೆ ಚದುರಿದಂತೆ ಮಳೆಯೂ ಶನಿವಾರ ಹೆಚ್ಚು ಮಳೆಯೂ ಭಾನುವಾರದಿಂದ ಚದುರಿದಂತೆ ಸ್ವಲ್ಪ ಮಳೆಯೂ ಬರಬಹುದು.
- ತಿಪಟೂರು ಸುತ್ತಮುತ್ತ ದಿನಾಂಕ 18/11/2021 ರಿಂದ 24/11/2021 ತನಕವೂ ಮಳೆ ಇದೆ. ಶನಿವಾರ 20/11 ಹೆಚ್ಚು ಮಳೆ ಬರುವ ಸೂಚನೆ ಇದೆ.
- ತುಮಕೂರಿನ ಸುತ್ತಮುತ್ತ 18/11/2021 ರಿಂದ 24/11/2021 ತನಕವೂ ಮಳೆ ಇದೆ.ಮಂಗಳವಾರ ಮತ್ತು ಬುಧವಾರದಂದು ಬಿಸಿಲು ಮತ್ತು ಚದುರಿದಂತೆ ಮಳೆ ಬರಬಹುದು.
- ತುರುವೇಕೆರಯ ಸುತ್ತಮುತ್ತ ದಿನಾಂಕ 18/11/2021 ರಿಂದ 24/11/2021 ತನಕವೂ ಮಳೆಯ ಮುನ್ಸೂಚನೆ ಇರುತ್ತದೆ.
ಗಾಳಿಯ ದಿಕ್ಕು ಸ್ವಲ್ಪ ಬದಲಾದರೂ ಸಹ ಮಳೆ ಹೆಚ್ಚು ಕಡಿಮೆ ಆಗಬಹುದಾದ ಸಾಧ್ಯತೆ ಇದ್ದು, ರೈತರು ಮಳೆ ಮುನ್ಸೂಚನೆ ಇರುವ ಕಾರಣ ತಮ್ಮ ಕೃಷಿ ಕೆಲಸಗಳಲ್ಲಿ ಕೆಲವು ಮುಂಜಾಗ್ರತಾ ಕ್ರಮ ಹೊಂದುವುದು ಸೂಕ್ತ.
ರೈತರು ಕೊಯಿಲು ಇತ್ಯಾದಿಗಳನ್ನು ಮುಂದಿನ ಸೋಮವಾರದ ತನಕ ಮುಂದೂಡುವುದು ಒಳ್ಳೆಯದು. ಆ ತನಕ ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಹೆಚ್ಚು ಕಡಿಮೆ ಮಳೆ ಮುನ್ಸೂಚನೆ ಇದೆ. ತಾಡಪತ್ರೆ ಇತ್ಯಾದಿಗಳ ಮೂಲಕ ತಮ್ಮ ಕೃಷು ಉತ್ಪನ್ನಗಳನ್ನು ಸಂರಕ್ಷಿಸಿಕೊಳ್ಳಬೇಕಾಗಬಹುದು.