ಗುಳ್ಳಕ್ಕೆ ಇದು ಬದಲಿ ತಳಿ.
ಬದನೆ ಬೆಳೆಸುವ ರೈತರು ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಮಾಡುವ ಖರ್ಚು ಅತೀ ಹೆಚ್ಚು. ಸಾಕಷ್ಟು ಕೀಟನಾಶಕ – ರೋಗ ನಾಶಕ ಬಳಸಿ ಬೆಳೆ ಉಳಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿದಾಗ ರೈತರಿಗೆ ಉಳಿಯುವುದು ಅಷ್ಟಕ್ಕಷ್ಟೇ. ಖರ್ಚು ಕಡಿಮೆ ಮಾಡಿ ಬೆಳೆ ಬೆಳೆಸಬೇಕಿದ್ದರೆ ಇರುವುದು ರೋಗ ನಿರೋಧಕ ಶಕ್ತಿ ಪಡೆದ ತಳಿಯನ್ನು ಆಯ್ಕೆ ಮಾಡುವುದು ಒಂದೇ. ಗುಳ್ಳ ಬದನೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಆದರೆ ಈಗಿತ್ತಲಾಗಿ ಗುಳ್ಳ ಬದನೆ ಬೆಳೆಸುವುದೇ ಕಷ್ಟವಾಗುತ್ತಿದೆ. ಬೆಳೆಸು ರೈತರು ಗುಳ್ಳ ತಿನ್ನುವುದನ್ನೇ ಕಡಿಮೆ ಮಾಡಿದ್ದೂ ಇದೆ….