ಅಧಿಕಇಳುವರಿಗೆ ನೆರವಾಗುವ ರಾಸಾಯನಿಕ ಇಲ್ಲದ NPK ಪೋಷಕ.

ಕೆಲವು ರೈತರು ಬೆಳೆಗಳಿಗೆ ಎಲ್ಲಾ ರೀತಿಯ ಗೊಬ್ಬರಗಳನ್ನು ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ಗೊಬ್ಬರ ಕೊಡುವ ಪ್ರಮಾಣವನ್ನೂ ಹೆಚ್ಚಿಸುತ್ತಾರೆ. ಆದರೆ ವರ್ಷದಿಂದ ವರ್ಷಕ್ಕೆ ಫಸಲು ಕಡಿಮೆಯಾಗುತ್ತದೆ. ಸಸ್ಯ ದ ಆರೋಗ್ಯವೂ ಹಾಳಾಗುತ್ತದೆ. ಇದಕ್ಕೆ ಕಾರಣ ಮಣ್ಣಿನ ಜೈವಿಕತೆ ಕ್ಷೀಣಿಸುವುದು. ಪರಿಸ್ಥಿತಿಗೆ ಸಹಜವಾಗಿ ಮಣ್ಣಿಗೆ ಸಾವಯವ ವಸ್ತುಗಳನ್ನು ಹೇರಳವಾಗಿ ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಮಣ್ಣಿನ ಜೈವಿಕ ಗುಣ ಕ್ಷೀಣವಾಗುತ್ತಾ ಬರುತ್ತದೆ. ಹಾಕಿದ ಗೊಬ್ಬರವನ್ನು ಲಭ್ಯಸ್ಥಿತಿಗೆ ತಂದು ಅಧಿಕಇಳುವರಿ ಪಡೆಯಲು ಈ ಜೈವಿಕ ಸಮ್ಮಿಶ್ರಣ ನೆರವಾಗುತ್ತದೆ.

Pepper maintained by microbial manure

 • ನಾವು ತಿನ್ನುವ ಆಹಾರ ದೇಹದಲ್ಲಿ ರಕ್ತಕ್ಕೆ ಸೇರಿ ಶಕ್ತಿ ಯಾಗಿ ಮಾರ್ಪಡಲು ಕಿಣ್ವಗಳ ಸಹಾಯ ಬೇಕು.
 • ಜೀರ್ಣ ಕ್ರಿಯೆಗೆ ಸಹಕರಿಸುವ ಕಿಣ್ವಗಳು , ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆಯಾದರೆ, ನಾವು ತಿನ್ನುವ ಆಹಾರವು ಸಮರ್ಪಕವಾಗಿ ಜೀರ್ಣವಾಗದೆ ಅಥವಾ  ಶಕ್ತಿಯಾಗಿ ಪರಿವರ್ತನೆಯಾಗದೆ ನಷ್ಟವಾಗುತ್ತದೆ.
 • ಇದೇ ತತ್ವದಲ್ಲಿ ಕೃಷಿಯಲ್ಲಿ ಪೋಷಕಾಂಶಗಳನ್ನು ಜೀರ್ಣಿಸಿ ಕೊಡುವ ಜೀವಾಣುಗಳೂ ಕೆಲಸ ಮಾಡುತ್ತವೆ.
 • ಕೆಲವು ಫಲವತ್ತತೆ ಉಳ್ಳ( ಸಾವಯವ ಸಂಮೃದ್ಧ ಮಣ್ಣು) ಮಣ್ಣಿನಲ್ಲಿ ಬೆಳೆ ಪೋಷಕಗಳನ್ನು ಬೇಕಾದಂತೆ ಜೀರ್ಣಿಸಿ ಕೊಡಬಲ್ಲ ಜೀವಾಣುಗಳು ಹೇರಳವಾಗಿರುತ್ತದೆ.
 • ಅವು ಹೇರಳವಾಗಿರುವಷ್ಟು ಸಮಯ ಬೆಳೆ ಉತ್ಪಾದಕತೆ ಚೆನ್ನಾಗಿರುತ್ತದೆ.
 • ಅದಕ್ಕೇ ಹೇಳುವುದು , ಹೊಸ ಮಣ್ಣಿನಲ್ಲಿ ಮೊದ ಮೊದಲು ಬೆಳೆ ಚೆನ್ನಾಗಿ ಬಂದು ಕ್ರಮೇಣ ಅದು ಕಡಿಮೆಯಾಗುತ್ತಾ ಬರುತ್ತದೆ.
 • ಇದು ಜೀವಾಣುಗಳ ಸಂಖ್ಯೆ ಕಡಿಮೆಯಾದ ಕಾರಣದಿಂದ.
 • ಜೀವಾಣುಗಳು ನಮ್ಮ ಬೇಸಾಯ ಕ್ರಮ, ಮತ್ತು ನಾವು ಕೊಡುವ ನೈಸರ್ಗಿಕ ಬೆಳೆ ಪೋಷಕಗಳಿಂದ ಸಂಖ್ಯಾಭಿವೃದ್ದಿಯಾಗುತ್ತಾ ಇರುತ್ತದೆ.
 • ಅವುಗಳು ಬದುಕಲೂ ಸಹ ಆಹಾರ ಬೇಕು.

Banana crop and microbial fertilisers

ಮೈಕ್ರೋಬಿಯಲ್ ಕನ್ಸೋರ್ಶಿಯಾ ಎಂದರೇನು:

ಮಣ್ಣಿನಲ್ಲಿ ಎಲ್ಲಾ ರೀತಿಯ ಜೀವಾಣುಗಳೂ ಇರುತ್ತವೆ. ಕೆಲವು ಪ್ರದೇಶಗಳಲ್ಲಿ ಕೆಲವು ಹೆಚ್ಚು ಇರಬಹುದು. ಕೆಲವು ಕಡಿಮೆ ಇರಬಹುದು. ಮಣ್ಣು ಮೂಲದಲ್ಲಿ ಇರುವ ಜೀವಾಣುಗಳು ಮಾಡುವ ಕೆಲಸವನ್ನು ಅದ್ಯಯನ ಮಾಡಿ ಅದನ್ನು ಪ್ರತ್ಯೇಕಿಸಿ ಅದನ್ನು ಕೃತಕ ಮಾಧ್ಯಮದಲ್ಲಿ ಅಭಿವೃದ್ದಿ ಮಾಡಿರುವುದೇ ಮೈಕ್ರೋಬಿಯಲ್ ಕನ್ಸೋರ್ಶಿಯಾ.

 • ಮಣ್ಣಿಗೆ ನಾವು ಬೆಳೆ ಪೋಷಣೆಗೆ  ಬಳಕೆ ಮಾಡುವ ರಾಸಾಯನಿಕ ಮೂಲದ ಗೊಬ್ಬರಗಳನ್ನು ಸಸ್ಯಗಳು ಬಳಸಿಕೊಳ್ಳಲು ಅಗತ್ಯವಾಗಿ ಬೇಕಾಗುವ ಮಧ್ಯವರ್ತಿಗಳು ಜೀವಾಣುಗಳು.
 • ಬೇರೆ ಬೇರೆ ಪೋಷಕಗಳಿಗೆ ಬೇರೆ ಬೇರೆ ಜೀವಾಣುಗಳ ಸಹಕಾರ ಬೇಕಾಗುತ್ತದೆ.
 • ಸಾರಜನಕವನ್ನು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡಲು ಬೇಕಾಗುವ ಜೀವಾಣುಗಳು  ಒಂದಾದರೆ ,
 • ರಂಜಕಕ್ಕೆ, ಬೇರೆ, ಪೊಟ್ಯಾಶಿಯಂ ಗೆ ಬೇರೆ ಹಾಗೆಯೇ ಸತು, ಗಂಧಕ,  ಮೆಗ್ನೀಶಿಯಂ, ಸಸ್ಯ ಪ್ರಚೋದಕಗಳು
 •  ಹೀಗೆಲ್ಲಾ ಪೋಷಕಾಂಶಗಳನ್ನು ಸಸ್ಯಕ್ಕೆ  ದೊರಕಿಸಿಕೊಡಲು ನೆರವಾಗುವ ಜೀವಾಣುಗಳಿವೆ.
 • ಅವುಗಳನ್ನು ಸಂಸ್ಲೇಶಿಸಿ  ಕೆಲವು ಆಹಾರ ಮಾಧ್ಯಮದಲ್ಲಿ ಬೆಳೆಸಿ ಕೃಷಿ ಭೂಮಿಗೆ ಬಳಸುವರೇ  ಸಿದ್ದ ರೂಪದಲ್ಲಿ ದೊರೆಯುವಂತೆ ಮಾಡಲಾಗಿದೆ.

ಒಂದಕ್ಕಿತ ಹೆಚ್ಚು ಜೀವಾಣುಗಳನ್ನು ಒಟ್ಟು ಸೇರಿಸಿ ಅದನ್ನು ದ್ರವ ಅಥವಾ ಇನ್ಯಾವುದೇ ಪುಡಿ ರೂಪದಲ್ಲಿ ರೈತರು ಬಳಸಲು ನೆರವಾಗುವಂತೆ ಕೊಡುವುದೇ ಮೈಕ್ರೋಬಿಯಲ್ ಕನ್ಸೋರ್ಶಿಯಾ.  ಇದರ ಸಂಖ್ಯಾಭಿವೃದ್ದಿಯನ್ನು ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ಕಾರಣ  ಇದನ್ನು ತಯಾರಿಸುವಾಗ ಯಾವುದೇ ರೀತಿಯಲ್ಲಿ ಕಲಬೆರಕೆ ಆಗಬಾರದು. ಅದನ್ನು ತಜ್ಞರೇ ಮಾಡುವುದು ಉತ್ತಮ.

 • ಈಗ ಮಾರುಕಟ್ಟೆಯಲ್ಲಿ ಭಾರೀ ಪ್ರಚಾರದಲ್ಲಿರುವ —ಸರ್ಪ್”, —-ಸಾಯಿಲ್, ಹಾಗೂ ಇನ್ನಿತರ ತಯಾರಿಕೆಗಳಲ್ಲಿ ಇರುವುದು ಇದೇ ಜೀವಾಣು ಮಿಶ್ರಣವಾಗಿರುತ್ತದೆ. effective micro organisms  EM ಎಂದರೆ ಇದೇ.

ಯಾಕೆ ಕನ್ಸೋರ್ಶಿಯಾ ಉತ್ತಮ:

vagarious growth of coout

 • ಸಾರಜನಕ, ರಂಜಕ ,ಮತ್ತು  ಪೊಟ್ಯಾಶ್ ಹಾಗೆಯೇ ಇನ್ನಿತರ ಪೋಷಕಗಳನ್ನು ಒಟ್ಟು ಸೇರಿಸಿ ಮಣ್ಣಿಗೆ ಬಳಕೆ ಮಾಡಿದರೆ ಅದರ ಫಲಿತಾಂಶ ಉತ್ತಮವಾಗಿರುತ್ತದೆ.
 • ಇದರಲ್ಲಿ ಯಾವುದೇ ರೀತಿಯಲ್ಲಿ ಬಾಂಡಿಂಗ್ ಅಥವ ತದ್ವಿರುದ್ಧ ಕ್ರಿಯೆ ನಡೆಯಲು ಅವಕಾಶ ಇರುವುದಿಲ್ಲ.
 • ಇವು ದ್ರವರೂಪದಲ್ಲಿದ್ದರೆ ಅದರಲ್ಲಿ ಜೀವಾಣುಗಳ ಸಂಖ್ಯೆ ಹೆಚ್ಚಾಗಿರುತ್ತದೆ.
 • ಪುಡಿ ರೂಪದಲ್ಲಿದ್ದರೆ ಹೆಚ್ಚು ಇರಲಾರದು.
 • ಇದನ್ನು ಬಳಸಿದಾಕ್ಷಣ  ಮಣ್ಣಿನಲ್ಲಿ ಇದು ಸೇರಿಕೊಂಡು ತಮ್ಮ ಕೆಲಸವನು ಮಾಡುತ್ತವೆ.
 • ಮಣ್ಣಿನಲ್ಲಿ ಸಸ್ಯಗಳು ಬಳಕೆ ಮಾಡದ ಸ್ಥಿತಿಯಲ್ಲಿದ್ದ ಪೋಷಕಗಳನ್ನು ಲಭ್ಯವಾಗುವಂತೆ ಮಾಡುತ್ತವೆ.
 • ಇವುಗಳು ಮಣ್ಣಿನಲ್ಲಿ ಅವುಗಳ ಬೆಳವಣಿಗೆಗೆ ಬೇಕಾದ ಆಹಾರ ಲಭ್ಯವಿರುವ ತನಕ ಕ್ರಿಯಾತ್ಮಕವಾಗಿರುತ್ತದೆ.
 • ನಂತರ ಅವು ಸಾಯುವುದು ಅಥವಾ ಸಂಖ್ಯಾ ಕ್ಷೀಣವಾಗುತ್ತವೆ.

ಹೇಗೆ ಬಳಕೆ ಮಾಡಬೇಕು:

 • ಮೈಕ್ರೋಬಿಯಲ್ ಕನ್ಸೋರ್ಶಿಯಾವು ನಾವು ಯಾವ ರೀತಿ ಬಳಕೆ ಮಾಡುತ್ತೇವೆ ಅದಕ್ಕನುಗುಣವಾಗಿ ಲಭ್ಯವಿರುತ್ತದೆ.
 • ದ್ರವರೂಪದ ಮಿಶ್ರಣವನ್ನು ಹನಿ ನೀರಾವರಿಯ ಮೂಲಕ , ಮಣ್ಣಿಗೆ ಸಿಂಪರಣೆ ಮಾಡುವ ಮೂಲಕ ಬಳಕೆ ಮಾಡಬೇಕು.
 • ಪುಡಿ ರೂಪದ  ಮಿಶ್ರಣವನ್ನು ಕಾಂಪೋಸ್ಟು ಮುಂತಾದ ಸಾವಯವ ಗೊಬ್ಬರಗಳ ಜೊತೆಗೆ ಮಿಶ್ರಣ ಮಾಡಿ ಕೊಡಬೇಕು.
 • ತರಕಾರಿ, ಭತ್ತ ಹಾಗೆಯೇ ಇನ್ನಿತರ ಬೆಳೆಗಳಿಗೆ ಬೀಜೋಪಚಾರ ಮಾಡಿ ಬಳಕೆ  ಮಾಡಬಹುದು. ಮಣ್ಣಿಗೆ ಸಿಂಪರಣೆ ಮಾಡಿ ಮರುದಿನ ಹದವಾಗಿ ನೀರುಣಿಸಿ ಅದು ಮಣ್ಣಿನಲ್ಲಿ ಸೇರಿಕೊಳ್ಳುವಂತೆ ಮಾಡಬೇಕು.
 •  ಬಳಕೆ ಮಾಡಿದ ನಂತರ ಮಣ್ಣಿನಲ್ಲಿ ತೇವಾಂಶ ಆರಿ ಒಣಗಲು ಬಿಡಬಾರದು.

ಹಿಂದಿನ ನಮ್ಮ ಹಿರಿಯರು ಕೃಷಿ ಮಾಡುತ್ತಿದ್ದ ಕ್ರಮದಲ್ಲಿ ಹೇರಳ ಸಾವಯವ ಸೊಪ್ಪು ಸದೆ ಬಳಸುತ್ತಿದ್ದರೆ ಇದನ್ನು ಬಳಸಬೇಕೆಂದೇನೂ ಇಲ್ಲ. ಅವು ಅಲ್ಲೇ ಇರುತ್ತವೆ. ಇವೆಲ್ಲಾ ಸೂಕ್ಷ್ಮಾಣು ಜೀವಿಗಳೂ ಮಣ್ಣು ಮೂಲದವುಗಳೇ ಆಗಿರುತ್ತವೆ.
ಮೈಕ್ರೋಬಿಯಲ್ ಕನ್ಸೋರ್ಶಿಯಾ ವನ್ನು ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರಗಳು ತಯಾರಿಸಿ ಕೊಡುತ್ತವೆ. ಕೃಷಿ ವಿಶ್ವ ವಿಧ್ಯಾನಿಲಯ, ಕೇಂದ್ರೀಯ ಸಂಶೋಧನಾ ಸಂಸ್ಥೆಗಳು ಹಾಗೆಯೇ ಕೆಲವು ಸರಕಾರೀ ಸ್ವಾಮ್ಯದ ಸಂಸ್ಥೆಗಳು ತಯಾರಿಸಿ ಕೊಡುತ್ತವೆ.  ಇದನ್ನು ಬಳಕೆ ಮಾಡಲು ಎಕ್ರೆ ಹೊಲಕ್ಕೆ 1-2 ಸಾವಿರ ಆಸು ಪಾಸಿನಲ್ಲಿ ಖರ್ಚು ಇರುವ ಕಾರಣ ಸಾವಯವ ಕೃಷಿಕರೂ ಸೇರಿದಂತೆ ಎಲ್ಲಾ ಸ್ಥರದ ಕೃಷಿಕರೂ ಇದನ್ನು ಬಳಕೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!