ಉತ್ತರ ಪ್ರದೇಶದಲ್ಲಿ ಸರಕಾರೀ ಕಚೇರಿಗಳ ಪರಿಸರದಲ್ಲಿ ಗುಟ್ಕಾ ,ಪಾನ್ ಮಸಾಲೆ ತಿನ್ನಬಾರದು ಎಂದು ಅಲ್ಲಿನ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. UP CM Yogi Adityanath bans gutkha, paan masala in all government offices – India today) ಇತರ ರಾಜ್ಯಗಳೂ ಇದನ್ನು ಅನುಸರಿಸಿದರೆ ಅಡಿಕೆ ಬೆಳೆಗಾರರ ಪಾಡು ಹೇಳ ತೀರದು.
- ಸ್ವಚ್ಚ ಪರಿಸರದಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದ ಕೃಷಿಕರು ಮತ್ತು ಕೃಷಿ ವ್ಯವಸ್ಥೆ ಯ ಮೇಲೆ ದೊಡ್ಡ ಹೊಡೆತವೇ ಬಿದ್ದಿದೆ.
- ಎಷ್ಟು ಸಮಯವೋ ತಿಳಿಯದಾಗಿದೆ. ಎಲ್ಲಾ ವರ್ಗದ ಕೃಷಿಕರೂ ತೊಂದರೆಗಳನ್ನು ಅನುಭವಿಸುವಂತಾಗಿದೆ.
- ಅಡಿಕೆ ಬೆಳೆಗಾರರೇ ಬೇರೆ, ಅಡಿಕೆ ತಿನ್ನುವವರೇ ಬೇರೆ.
- ಅಡಿಕೆಯನ್ನು ತಿನ್ನುವಾಗ ಅಲ್ಲಲ್ಲಿ ಉಗುಳಬೇಡಿ.
- ಇದರಿಂದ ಮುಂದೆ ಅಡಿಕೆ ಬೆಳೆಗೇ ತೊಂದರೆ ಎಂದು ಯಾವ ಅಡಿಕೆ ಬಳಕೆದಾರರಿಗೂ ಬಳಕೆದಾರರಿಗೆ ವಿನಂತಿಸುವಂತಿಲ್ಲ.
- ಅಡಿಕೆ ತಿಂದರೆ ಉಗುಳಲೇ ಬೇಕು. ಉಗುಳುವುದಕ್ಕೆ ಯಾವುದೇ ಜಾಗ ಎಂಬುದೇ ಇಲ್ಲ.
ಅಡಿಕೆಯ ಆವಾಂತರ:
- ಮಹಾರಾಷ್ಟ್ರದ ಯಾವುದೇ ಸರಕಾರಿ ಬಸ್ ನಲ್ಲಿ ಪ್ರಯಾಣಿಸಿದರೆ ಅದರ ಕಿಟಕಿ ಬಾಗಿಲಿನಲ್ಲಿ ಕುಳಿತು ಒಮ್ಮೆ ಬದಿಯತ್ತ ದೃಷ್ಟಿ ಹರಿಸಿ.
- ಅಲ್ಲಿ ತಿಂದು ಉಗುಳಿ ಅಂಟಿದ ದಪ್ಪ ಕೆಂಪಾದ ಲೇಪನವೇ ಕಾಣುತ್ತದೆ.
- ಇಂಥಹ ಕೊಳಕು ಅಭ್ಯಾಸವನ್ನು ಯಾರಾದರೂ ಗಂಭೀರವಾಗಿ ಪರಿಗಣಿಸಿದರೆ ಅಡಿಕೆಯ ಗತಿ ಮುಗಿಯಿತು ಎಂದೇ ಅರ್ಥ.
- ಜನ ಮಾಡೂವುದಕ್ಕೂ ಆಗುವುದಕ್ಕೂ ಸರಿಯಾಗಿದೆ.
ತಿಂದು ಉಗುಳುವ ಜೊಲ್ಲಿನಲ್ಲಿ ನಮ್ಮ ದೇಹದ ಎಲ್ಲಾ ರೋಗಕಾರಕ ಜೀವಾಣುಗಳು ಇರುತ್ತವೆ. ಸಾಮಾಜಿಕ ಆರೋಗ್ಯ ಉಳಿಯಬೇಕಿದ್ದರೆ ಇಂತದ್ದು ನಿಶಿದ್ಧ. ಇದಕ್ಕೆ ಪರಿಹಾರ ತಿಂದು ಉಗುಳುವ ವಸ್ತುವಿನ ಲಭ್ಯತೆ ಇಲ್ಲದಿರುವುದು , ಅರ್ಥಾತ್ ಅದನ್ನು ನಿಷೇಧಿಸುವುದು. ಇದು ಆಡಳಿತ ವ್ಯವಸ್ಥೆ ಪ್ರಥಮವಾಗಿ ಕೈಗೊಳ್ಳುವ ಕ್ರಮ.
- ಅಡಿಕೆಗೆ ಯಾವುದೇ ಪರ್ಯಾಯ ಬಳಕೆ ಇಲ್ಲ.
- ನಮ್ಮಲ್ಲಿ ಉತ್ಪಾದನೆಯಾಗುವ ಅಡಿಕೆ ಎಲ್ಲವೂ ತಿಂದು ಉಗುಳುವ ಚಟಕ್ಕಾಗಿಯೇ ಬಳಕೆಯಾಗುತ್ತದೆ.
- ಈ ತಿಂದು ಉಗುಳುವ ಹವ್ಯಾಸವು ಹಲವಾರು ರೋಗ ಪ್ರಸಾರಕ್ಕೆ ಕಾರಣವಾಗುತ್ತದೆ.
- ಸ್ವಚ್ಚತೆಗೆ ಇದು ದೊಡ್ಡ ಹೊಡೆತ.
ಕೊರೋನಾ ಸೋಂಕಿನ ಹಿನ್ನೆಯಲ್ಲಿ ಅಡಿಕೆಯ ಮೇಲೆ ಅತೀ ದೊಡ್ದ ಬರೆ ಬೀಳುವ ಸಾಧ್ಯತೆ ಇಲ್ಲದಿಲ್ಲ. ಇದಕ್ಕೆ ಎಲ್ಲಾ ಗುಟ್ಕಾ ತಯಾರಿಕಾ ಘಟಕಗಳೂ ಸಿದ್ದವಾಗಿವೆ. ಅವರೆಲ್ಲಾ ತಮ್ಮ ಗುಟ್ಕಾ ಬ್ರಾಂಡ್ ಹೆಸರಿನಲ್ಲೇ ಬೇರೆ ಉತ್ಪನ್ನಗಳನ್ನು ಆಗಲೇ ಮಾರುಕಟ್ಟೆಗೆ ಬಿಟ್ಟೂ ಆಗಿದೆ. (ಬಾಟಲಿ ನೀರು, ಮಸಾಲೆ ಪುಡಿ, ಉಪ್ಪು ಮುಂತಾದ ಉತ್ಪನ್ನಗಳು)
- ಗುಟ್ಕಾ ಇಲ್ಲದಿದ್ದರೂ ಅವರು ಆ ವ್ಯವಹಾರದಲ್ಲಿ ಸೋಲಲಾರರು.
- ಆದರೆ ಅಡಿಕೆ ಬೆಳೆಗಾರರು ಮಾತ್ರ ಬೀದಿಗೆ ಬರಬೇಕಾಗುತ್ತದೆ
ಅರ್ಥ ವ್ಯವಸ್ಥೆಯೇ ಕುಸಿಯಬಹುದು;
- ಕರ್ನಾಟಕದಲ್ಲಿ ಪ್ರಮುಖ ಆರ್ಥಿಕ ಬೆಳೆ ಎಂದರೆ ಅಡಿಕೆ.
- ಈಗಾಗಲೇ ಖರೀದಿ ಸ್ಥಗಿತವಾಗಿ ದೊಡ್ದ ತೊಂದರೆ ಆಗಿದೆ.
- ಎಲ್ಲಿ ತನಕ ಲಾಕ್ ಔಟ್ ಜ್ಯಾರಿಯಲ್ಲಿರುತ್ತದೆಯೋ ಅಲ್ಲಿ ತನಕ ಖರೀದಿ ಇರುವುದಿಲ್ಲ.
- ಆ ನಂತರ ಏನಾಗುವುದೋ ಯಾರಿಗೂ ಗೊತ್ತಿಲ್ಲ.
- ಅಡಿಕೆ ಬೆಳೆಗಾರರು, ಅಡಿಕೆ ವ್ಯಾಪಾರಿಗಳು ಇಡೀ ರಾಜ್ಯದ ಕೃಷಿ ಆರ್ಥಿಕ ವ್ಯವಸ್ಥೆಯ ಕೇಂದ್ರ ಬಿಂದುಗಳು.
- ಇವರದಲ್ಲದ ತಪ್ಪಿಗೆ ಇವರು ತೊಂದರೆ ಅನುಭವಿಸುವಂತಾಗಬಹುದು.
ರೈತರ ಸ್ಥಿತಿ ಚಿಂತಾಜನಕ ಆಗಲಿದೆ:
- ಅಡಿಕೆ ಮತ್ತು ಅಡಿಕೆ ಬಳಕೆ ಮಾಡಿ ಸಿದ್ದಗೊಳ್ಳುವ ಯಾವುದೇ ಉತ್ಪನ್ನದ ಮೇಲೆ ತಾತ್ಕಾಲಿಕವಾಗಿ ಏನೇ ಕಾನೂನಾತ್ಮಕ ಕ್ರಮಗಳು ಜರಗಲ್ಪಟ್ಟರೂ ಅಡಿಕೆ ಬೆಳೆಗಾರರು ತೊಂದರೆಗೆ ಒಳಗಾಗುತ್ತಾರೆ.
- ದರ ಕುಸಿಯುತ್ತದೆ, ಬೇಡಿಕೆ ಕಡಿಮೆಯಾಗುತ್ತದೆ.
- ಇದರ ನೇರ ಹೊಡೆತ ಬೆಳೆಗಾರರ ಮೇಲೆ.
- ಇದಕ್ಕೆ ಬೆಳೆಗಾರರು ಯಾವ ರೀತಿಯಲ್ಲೂ ಏನೂ ಮಾಡುವಂತಿಲ್ಲ.
ಸರಕಾರ ಗುಟ್ಕಾ ನಿಷೇಧದಂತಹ ಕಠಿಣ ಕ್ರಮಕ್ಕೆ ಮುಂದಾಗದಿದ್ದರೂ ಗುಟ್ಕಾ ಲಾಭಿ ಮತ್ತು ಅಡಿಕೆ ವ್ಯಾಪಾರದ ಪಟ್ಟಬಧ್ರ ಹಿತಾಸಕ್ತಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಬಹು ಸಮಯದ ತನಕ ಆಡಿಕೆಯ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡಬಹುದು.
ಈ ಸಮಯದಲ್ಲಿ ತಾತ್ಕಾಲಿಕವಾಗಿಯಾದರೂ ಸರಕಾರ ಆರೋಗ್ಯ ಪಾಲನಾ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ ಇದು ಶಾಶ್ವತವಾಗಿ ಮುಂದುವರಿಯಲಿಕ್ಕಿಲ್ಲ. ಸಾಧ್ಯವಾದಷ್ಟು ಜನ ಮನೆಯೊಳಗೇ ಕುಳಿತು ರೋಗ ಹರಡುವಿಕೆಗೆ ಅವಕಾಶ ಮಾಡಿಕೊಡದೇ ಇದ್ದರೆ ಇಂತಹ ಸಮಸ್ಯೆ ಬರಲಾರದು.
ಅನುಮಾನ ಸರಿಇರಬಹುದು,ಆದರೆ….