ಕೆಂಪಡಿಕೆ ಮಾಡಲು ಹೊಂದಿಕೆಯಾಗುವ ಹೊಸ ತಳಿ ಮಧುರ ಮಂಗಳ

ಕೆಂಪಡಿಕೆ ಮಾಡಲು ಸೂಕ್ತವಾದ ವಿವಿಧ ತಳಿಗಳು.

ಅಡಿಕೆ ಬೆಳೆಯುವ ಕೆಲವು ಪ್ರದೇಶಗಳಲ್ಲಿ ಬೇಯಿಸಿ ಕೆಂಪಡಿಕೆ ಮಾಡುವುದು ಅಲ್ಲಿನ ಪರಂಪರಾಗತ ಕ್ರಮ. ಬೇಯಿಸಲು ಅದಕ್ಕೆಂದೇ ಸೂಕ್ತವಾದ ತಳಿಗಳನ್ನು ಮಾತ್ರ ಬೆಳೆಸಬೇಕು. ಕೆಂಪಡಿಕೆ  ಮಾಡಲು ಹೊಂದುವ ಅಡಿಕೆ ಬಿಸಿಲಿನಲ್ಲಿ ಒಣಗಿಸಿ ಮಾಡುವ ಚಾಲಿ ಅಡಿಕೆಗೆ ಸೂಕ್ತವಲ್ಲ. ಚಾಲಿ ಮಾಡುವ ಅಡಿಕೆ ಕೆಂಪಡಿಕೆ ಮಾಡಲೂ ಸೂಕ್ತವಲ್ಲ. ಆಯಾಯಾ ಪ್ರದೇಶಕ್ಕೆ ಹೊಂದಿಕೆಯಾಗುವ ರೂಡಿಯ ತಳಿಗಳನ್ನು ಬೆಳೆಸುವುದು ಎಲ್ಲದಕ್ಕಿಂತ ಉತ್ತಮ. ಕರಾವಳಿಯ ಪ್ರದೇಶವನ್ನು  ಹೊರತಾಗಿಸಿ ರಾಜ್ಯದ ಉಳಿದ 6  ಜಿಲ್ಲೆಗಳಲ್ಲಿ ಅಡಿಕೆಯನ್ನು ಬೇಯಿಸುತ್ತಾರೆ. ಇದನ್ನು ಕೆಂಪಡಿಕೆ ಎನ್ನುತ್ತಾರೆ. ಈ ಉದ್ದೇಶಕ್ಕೆ  ಎಲ್ಲಾ…

Read more
ಸಿಹಿಯಾದ ಕಲ್ಲಂಗಡಿ

ಹಣ್ಣು ಹಂಪಲಿನಲ್ಲಿ ಸಿಹಿ ಅಂಶ ಹೆಚ್ಚಿಸುವಿಕೆ.

ಯಾವುದೇ ಹಣ್ಣು ಹಂಪಲುಗಳಿದ್ದರೂ ಅದರ ಸಹಜವಾದ ರುಚಿ ಇದ್ದರೆ ಅದು ತಿನ್ನಲು ಇಷ್ಟವಾಗುತ್ತದೆ. ಬಹುತೇಕ ಹಣ್ಣು ಹಂಪಲುಗಳ ರುಚಿ ಸಿಹಿ. ಸಿಹಿ ಸಾಕಷ್ಟು ಇಲ್ಲದಿದ್ದರೆ ಇದನ್ನು ತಿನ್ನುವವರಿಗೆ ಅದು ರುಚಿ ಎನಿಸದು. ಸಿಹಿ ಅಂಶ ಹಣ್ಣು ಹಂಪಲಿಗೆ ಹೇಗೆ ಸೇರಿಕೊಳ್ಳುತ್ತದೆ. ಹೆಚ್ಚು ಸಿಹಿ ಬರಲು ಯಾವ ಪೋಷಕ ಹೆಚ್ಚು ಕೊಡಬೇಕು, ಯಾವುದನ್ನು ಕಡಿಮೆ ಮಾಡಬೇಕು ಈ ಬಗ್ಗೆ  ಇಲ್ಲಿದೆ ಮಾಹಿತಿ. ಸಮರ್ಪಕ ಬಿಸಿಲು, ವಾತಾವರಣ, ಹಾಗೂ ಸಾಂದರ್ಭಿಕ ಪೋಷಕಾಂಶ ನಿರ್ವಹಣೆಯಿಂದ ಹಣ್ಣು ಹಂಪಲುಗಳಲ್ಲಿ ಸಿಹಿ ಅಂಶ ಹೆಚ್ಚುತ್ತದೆ….

Read more
arecanut

ನಿಮ್ಮ ಹೊಲದ ಮಣ್ಣಿಗೆ ಯಾವಾಗ ಎಷ್ಟು ನೀರಾವರಿ ಮಾಡಬೇಕು.

ನಿಮ್ಮಲ್ಲಿ ನೀರು ಎಷ್ಟೇ ಇರಲಿ. ಬೆಳೆಗಳಿಗೆ ಎಷ್ಟೇ ನೀರುಣಿಸಿರಿ. ಆದರೆ ಸಸ್ಯಕ್ಕೆ ಅದು ಲಭ್ಯವಾಗುವುದು ಮಣ್ಣಿನ ಗುಣದ ಮೇಲೆ.ಯಾವುದೇ ಬೆಳೆ ಇರಲಿ, ಅದಕ್ಕೆ ಬೇಕಾದಷ್ಟೇ ನೀರಾವರಿ ಮಾಡಬೇಕು. ಅದರಲ್ಲೂ ಅಡಿಕೆ, ತೆಂಗು ಮುಂತಾದ ಬೆಳೆಗಳಿಗೆ ನೀರು ಬೇಕಾಗುವುದು ಕಡಿಮೆ. ಹೆಚ್ಚಾದರೆ ಅದು ಎಲೆಗಳ ಮೂಲಕ ಬಾಷ್ಪೀಭವನ ಕ್ರಿಯೆಯಲ್ಲಿ  ಹೊರ ಹಾಕುತ್ತವೆ. ಕೆಲವರು ತಮ್ಮ ಹೊಲಕ್ಕೆ ಎಷ್ಟೇ ನೀರುಣಿಸಿದರೂ ಮರುದಿನ ಒಣಗುತ್ತದೆ ಎನ್ನುತ್ತಾರೆ. ಕೆಲವರಲ್ಲಿ  ನೀರಾವರಿ ಮಾಡಿದ ನಂತರ ತೇವಾಂಶ  ಹೆಚ್ಚು ಸಮಯದ ತನಕ ಉಳಿಯುತ್ತದೆ. ಬೆಳೆಗಳಿಗೆ ನೀರು…

Read more
ರತ್ನಗಿರಿ ಅಲ್ಫೊನ್ಸ್ ಹಣ್ಣು

ರತ್ನಗಿರಿ ಅಲ್ಫೋನ್ಸ್ ಮಾವು – ಹೇಗೆ ಬೆಳೆಯುತ್ತಾರೆ? ಯಾಕೆ ರುಚಿ?

ನಾವೆಲ್ಲಾ ರತ್ನಗಿರಿ ಅಲ್ಫೋನ್ಸ್ ಮಾವಿನ ಹಣ್ಣು ಕೇಳಿದ್ದೇವೆ. ಇದರ ರುಚಿಗೆ ಸರಿಸಟಿಯಾದ ಮಾವು ಬೇರೊಂದಿಲ್ಲ ಎಂಬ ಹೆಗ್ಗಳಿಕೆಯೂ ಇದೆ. ಭಾರತದಿಂದ ರಪ್ತು ಆಗುವ ಮಾವುಗಳ ಸಾಲಿನಲ್ಲಿ ಈ ಅಲ್ಫೋನ್ಸ್ ಹಣ್ಣೇ ಅತ್ಯಧಿಕ. ಮಹಾರಾಷ್ಟ್ರದಲ್ಲಿ ರತ್ನಗಿರಿ ಅಲ್ಫೋನ್ಸ್ ಬೆಳೆಯುವ ಜಾಗ ಹೇಗಿದೆ? ಹೇಗೆ ಬೆಳೆಯುತ್ತಾರೆ. ಯಾಕೆ ಅದು ರುಚಿಯಾಗಿರುತ್ತದೆ ಎಂಬುದರ ಎಲ್ಲಾ ಮಾಹಿತಿ ಇಲ್ಲಿ ಇದೆ. ಭೌಗೋಳಿಕ ಸ್ಥಿತಿಯು ಪ್ರತಿಯೊಂದು ಬೆಳೆಯ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಭೌಗೋಳಿಕ ಸ್ಥಿತಿಗತಿಗೆ ಸಮನಾಗಿರುವ ಇನ್ನೊಂದು ಪ್ರದೇಶದಲ್ಲಿ ಅದನ್ನು  ಬೆಳೆಸಿದರೆ…

Read more
ಹೆಬ್ಬಲಸಿನ ಹಣ್ಣು

ಹೆಬ್ಬಲಸಿನ ಕಾಯಿ- ಹಣ್ಣಿಗೂ ಭಾರೀ ಬೆಲೆ ಬಂದಿದೆ.

ಹೆಬ್ಬಲಸಿನ ಕಾಯಿ- ಹಣ್ಣು ಎರಡಕ್ಕೂ ಬೆಲೆ ಇದೆ. ಇದನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವವರಿದ್ದಾರೆ. ಇದರ ಮರ ಬೆಲೆಬಾಳುವ ನಾಟ ಸಹ. ಮನುಷ್ಯ ಪಶು ಪಕ್ಷಿ ಎಲ್ಲದಕ್ಕೂ ಆಹಾರ ಕೊಡುವ ವೃಕ್ಷ. ಯಾವಾಗಲೂ ಒಂದು ವಸ್ತು ಅಳಿಯುತ್ತಾ ಬಂದಾಗ ಅದಕ್ಕ್ಕೆ ಬೇಡಿಕೆ ಬರುತ್ತದೆ. ಹಾಗಾಗಿದೆ ಈ ಹೆಬ್ಬಲಸಿನ ಕಾಯಿಯ ಕಥೆ. ಹೆಬ್ಬಲಸಿನ ಹಣ್ಣು,ಅಳಿದು ಹೋಗುತ್ತಿರುವ ಒಂದು ಅಮೂಲ್ಯ ಹಣ್ಣಿನ ಕಥೆ ಇಲ್ಲಿದೆ. ಹೆಬ್ಬಲಸಿನ ಹಣ್ಣಿನ ಕಥೆ:   ಆಗ ಕೊನೇ  ಪರೀಕ್ಷೆ ನಡೆಯುವುದು ಎಪ್ರೀಲ್ ತಿಂಗಳ ತರುವಾಯ. ನಾವು…

Read more
ಹಣ್ಣು ಆದ ಕರಿಮೆಣಸು

ಕರಿಮೆಣಸು- 25% ಅಧಿಕ ಇಳುವರಿ ಪಡೆಯಲು ಏನು ಮಾಡಬೇಕು?

ನಾವು ಹೆಚ್ಚಾಗಿ ಕರಿಮೆಣಸು ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತೇವೆ. ಇನ್ನೇನು ಜನವರಿ ಬಂದಿದೆ. ಕರಿಮೆಣಸು ಬೆಳೆದು ಹಣ್ಣಾದರೆ ಹಕ್ಕಿಗಳು ತಿಂದು ನಷ್ಟವಾಗುತ್ತದೆ ಎಂದು ಬಲಿಯುವ ಮುನ್ನ ಕೊಯಿಲಿಗೆ ಪ್ರಾರಂಭಿಸುತ್ತೇವೆ. ಇದರಿಂದ ನಾವು 25 % ಕ್ಕೂ ಹೆಚ್ಚು ತೂಕ ನಷ್ಟ ಮಾಡಿಕೊಳ್ಳುತ್ತೇವೆ. ಈ ನಷ್ಟವನ್ನು ಕಡಿಮೆ ಮಾಡಿಕೊಂಡರೆ 1 ಕ್ವಿಂಟಾಲು ಇಳುವರಿ ಪಡೆಯುವ ಬದಲು ಇನ್ನೂ 25 ಕಿಲೋ ಹೆಚ್ಚು ಪಡೆಯಬಹುದು ಎಂಬುದು ಕೆಲವು ಉತ್ತಮ ಮೆಣಸು ಬೆಳೆಗಾರರ ಅಭಿಪ್ರಾಯ. ಮೆಣಸಿನ ಬಳ್ಳಿಯಲ್ಲಿ ಕೆಲವು ಕರೆಗಳು ಹಣ್ಣಾದ…

Read more
coffee berri

ಕಾಫೀ ಬೆಳೆಗೆ ಬಾಧಿಸಿಗೆ ಕಪ್ಪು ಕೊಳೆ ರೋಗ.

ಕಾಫೀ ಬೆಳೆಗೆ ಎರಡನೇ ಅತೀ ದೊಡ್ಡ ನಷ್ಟ ತಂದೊಡ್ಡುವ ರೋಗ ಕಪ್ಪು ಕೊಳೆ.  ಇದನ್ನು  Black rot  disease ಎಂದು ಕರೆಯುತ್ತಾರೆ. ಮಳೆಗಾಗದಲ್ಲಿ ಯಾವಾಗಲೂ ಬರಬಹುದು. ಆದರೆ ಮುಂಗಾರು ಮಳೆ ಮಧ್ಯಭಾಗ ಮತ್ತು ಕೊನೆ ಭಾಗದಲ್ಲಿ ಇದರ ತೊಂದರೆ ಹೆಚ್ಚು. ಇದು ಅರೇಬಿಕಾ ಕಾಫಿಗೆ ಹೆಚ್ಚಾಗಿಯೂ ರೋಬಸ್ಟಾಕ್ಕೆ ಸ್ವಲ್ಪ ಕಡಿಮೆ. ಈ ರೋಗ ಬಂದರೆ 10-30% ಫಸಲು ಕಡಿಮೆಯಾಗುತ್ತದೆ.   ಆಷಾಢ ಕಳೆದು ಶ್ರಾವಣ ಬಂತೆಂದರೆ ಒಮ್ಮೊಮ್ಮೆ ಮಳೆ ಮತ್ತು ಬಿಸಿಲು ಇರುತ್ತದೆ.  ಆಗಲೇ  ಹೆಚ್ಚಾಗಿ ವಾಯುಭಾರ ಕುಸಿತವೇ…

Read more
snail

ಅಡಿಕೆ ಮರದ ಸಿಂಗಾರ ತಿನ್ನುವ ಸಿಂಬಳದಹುಳು ನಿಯಂತ್ರಣ

ಸಿಂಬಳದ ಹುಳುವಿನ ಉಪಟಳ ಇಬ್ಬನಿ ಬೀಳುವ ಚಳಿಗಾಲದಲ್ಲಿ ಹೆಚ್ಚು. ಈ ಹುಳುಗಳು ನೆಲದಲ್ಲಿ ಇರುತ್ತವೆ. ಅವು ಆಹಾರ ಹುಡುಕುತ್ತಾ ಮರವನ್ನು ಏರಿ ಅಲ್ಲಿ ಎಳೆ ಹೂ ಗೊಂಚಲನ್ನು ತಿನ್ನುತ್ತವೆ. ಬರೇ ಅಡಿಕೆ ಹೂ ಗೊಂಚಲು ಮಾತ್ರವಲ್ಲ ಇವು ಆಹಾರವಾಗಿ ಹಣ್ಣು ತರಕಾರಿಗಳನ್ನೂ ತಿನ್ನುತ್ತವೆ. ಇದನ್ನು ನಿಯಂತ್ರಿಸದೆ ಇದ್ದರೆ  ಒಂದೆರಡು ಸಿಂಗಾರ ಹಾಳಾಗುತ್ತದೆ. ಇಳುವರಿ ನಷ್ಟವಾಗುತ್ತದೆ. ಬಸವನ ಹುಳುಗಳು, ಸಿಂಬಳದ ಹುಳುಗಳು , ಮಳೆಗಾಲದಲ್ಲಿ ನೆಲದಲ್ಲಿ ಅಲ್ಲಲ್ಲಿ ಸಂಚರಿಸುತ್ತಾ ಇರುತ್ತವೆ. ಹಾವಸೆ ಇತ್ಯಾದಿಗಳು ಇದರ ಆಹಾರ. ಅದನ್ನು ತಿನ್ನುತ್ತಾ…

Read more
pendal grown vegitable

ಕಡಿಮೆ ಖರ್ಚಿನಲ್ಲಿ ದಿಡೀರ್ ತರಕಾರಿ ಚಪ್ಪರ.

 ಬೇಸಿಗೆಯಲ್ಲಿ  ತರಕಾರಿ ಬೆಳೆದರೆ ಲಾಭವಿದೆ.  ಈ ಸಮಯದಲ್ಲಿ  ಮದುವೆ, ಗ್ರಹಪ್ರವೇಶ, ಜಾತ್ರೆ, ಮುಂತಾದ ಕಾರ್ಯಕ್ರಮಗಳು ಅಧಿಕ. ಬಳ್ಳಿ ತರಕಾರಿಗಳನ್ನು ಚಪ್ಪರ ಹಾಕಿ  ಬೆಳೆದರೆ ಗುಣಮಟ್ಟದ ತರಕಾರಿ ಸಿಗುತ್ತದೆ. ಸಾಂಪ್ರದಾಯಿಕ ಚಪ್ಪರ ಮಾಡುವ ವಿಧಾನ ಲಾಭದಾಯಕವಲ್ಲ. ಅದರ ಬದಲು ಚಪ್ಪರಕ್ಕಾಗಿಯೇ ಇರುವ ಬಲೆಗಳು ಅಥವಾ ಪ್ಯಾಕಿಂಗ್ ಹಗ್ಗ ಬಳಸಿದರೆ ಮರದ ಅಗತ್ಯ ತುಂಬಾ ಕಡಿಮೆ. ಬೇಸಿಗೆಯ ತರಕಾರಿ ಲಾಭದಾಯಕ: ಮಳೆಗಾಲಕ್ಕಿಂತ ಬೇಸಿಗೆ ಕಾಲದಲ್ಲಿ ಇಳುವರಿ ಹೆಚ್ಚು ಬರುತ್ತದೆ.  ಬೇಗ ಇಳುವರಿ ಬರುತ್ತದೆ. ಬಿಸಿಲು ಚೆನ್ನಾಗಿ ಇರುವ ಕಾರಣ ರೋಗ,…

Read more
ಸುಳಿ ಮುರುಟಿದ ಅಡಿಕೆ ಗಿಡ

ಅಡಿಕೆ ಸಸ್ಯಗಳು ಮುರುಟಿಕೊಳ್ಳುವುದೇಕೆ? ಪರಿಹಾರ ಏನು?

ಅಡಿಕೆ ಸಸ್ಯಗಳ ಸುಳಿ ಮುರುಟಿಕೊಳ್ಳುವಿಕೆ ಮತ್ತು ಶಿರಭಾಗ ಬಾಗಿ ತಿರುಗುವಿಕೆ, ಗರಗಸ ಗಂಟು ಇವೆಲ್ಲಾ ಒಂದು ಶಾರೀರಿಕ ಸಮಸ್ಯೆಗಳು.ಕೆಲವು ಪ್ರಾಥಮಿಕ ಹಂತದಲ್ಲಿರುವವುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಆದರೆ ಇದು ಸ್ವಲ್ಪ ನಿಧಾನ ಪ್ರಕ್ರಿಯೆ. ಗೊಬ್ಬರ ನಿರ್ವಹಣೆ ಮತ್ತು ಅಗತ್ಯ ಬೇಸಾಯ ಕ್ರಮದಲ್ಲೇ ಇದನ್ನು  ಸರಿಪಡಿಸಿಕೊಳ್ಳಲು ಸಾಧ್ಯ. ನೂರು ಅಡಿಕೆ ಮರಗಳಲ್ಲಿ ಕನಿಷ್ಟ 10 ಆದರೂ ಈ ತರಹ ಸುಳಿ ಮುರುಟುವುದು, ಗರಿ ಬಿಡಿಸಿಕೊಳ್ಳದೆ ಅಲ್ಲಿಗೆ ಗುಛ್ಛವಾಗುವುದು ಇರುತ್ತದೆ. ಇದಕ್ಕೆ ಪ್ರಾದೇಶಿಕ ಇತಿ ಮಿತಿ ಇಲ್ಲ. ಇದನ್ನು ಕೆಲವರು ಹಿಡಿ…

Read more
error: Content is protected !!