ಬಾಳೆ ಹೀಗೆ ಬೆಳೆದರೆ ಖರ್ಚು ಕಡಿಮೆ

ನೀರು, ಗೊಬ್ಬರ  ಉಳಿತಾಯದ ಬಾಳೆ ಬೇಸಾಯ ವಿಧಾನ

ಸಾಂಪ್ರದಾಯಿಕ ವಿಧಾನದ ಬಾಳೆ ಬೇಸಾಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಬೆಳೆ ಬೆಳೆದರೆ ನೀರು, ಗೊಬ್ಬರ  ಉಳಿಸಿ ಖರ್ಚು ಕಡಿಮೆ ಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು. ಅಷ್ಟೇ ಸ್ಥಳಾವಕಾಶದಲ್ಲಿ ಒಳಸುರಿಗಳ ಬಳಕೆಯಲ್ಲಿ, ಮಿತವ್ಯಯ ಮಾಡಿ ಅಧಿಕ ಉತ್ಪಾದನೆ ಪಡೆಯುವುದು ಈ ವಿಧಾನದಲ್ಲಿ ಸಾಧ್ಯ.  ಬಾಳೆಯ ಸಾಂಪ್ರದಾಯಿಕ ನಾಟಿ ವಿಧಾನದಲ್ಲಿ ಪರಸ್ಪರ 6  ಅಡಿ ಅಂತರದಲ್ಲಿ ನಾಟಿ ಮಾಡಲಾಗುತ್ತದೆ. ಈ ವಿಧಾನದಲ್ಲಿ ಎಕ್ರೆಗೆ ಸುಮಾರು  750 ರಷ್ಟು ಬಾಳೆ ಸಸಿ ಹಿಡಿಸಬಹುದು. ಅಧಿಕ ಸಾಂದ್ರದಲ್ಲಿ ನಾಟಿ ಮಾಡುವುದಿದ್ದರೆ ಎಕ್ರೆಗೆ 2500-3000…

Read more
banana plants

ಮಳೆಗಾಲದಲ್ಲಿ ಬಾಳೆ ಸಸ್ಯ ಮಗುಚಿ ಬೀಳುವುದಕ್ಕೆ ಕಾರಣ- ಪರಿಹಾರ.

ಮಳೆಗಾಲದಲ್ಲಿ ಬಾಳೆ ದಂಟು ಮುರಿದು ಬೀಳುವ ಸಮಸ್ಯೆ ಎಲ್ಲಾ ಕಡೆಯಲ್ಲೂ ಕಂಡು ಬರುತ್ತದೆ. ಅಂತಹ ಬಾಳೆಯ ಕಾಂಡವನ್ನು ಸ್ವಲ್ಪ ಕಡಿದು ನೋಡಿದರೆ ಕಾಂಡ ಹಾಳಾಗಿರುತ್ತದೆ. ಬಾಳೆಯ ಸಸ್ಯಗಳು ಇನ್ನೇನೋ ಗೊನೆ ಹಾಕಬೇಕು ಎಂಬ ಹಂತದಲ್ಲಿ, ಅಥವಾ ಗೊನೆ ಹಾಕಿ ಬೆಳೆಯುತ್ತಿರುವ ಹಂತದಲ್ಲಿ ಇದಕ್ಕೆ ಇಂದು ಕೀಟ ತೊಂದರೆ  (Pseudostem borer,and Rhizome weevil)ಮಾಡುತ್ತದೆ. ಈ ಕೀಟದ ಚಟುವಟಿಕೆ ಮಳೆಗಾಲ ಪ್ರಾರಂಭದಲ್ಲಿ ಮತ್ತು ಕೊನೆಗೆ ಹೆಚ್ಚು. ಇದರಿಂದ ಇಡೀ  ಗೊನೆ ಹಾಳಾಗುತ್ತದೆ. ಉಳಿದ ಬಾಳೆಗೂ ಪ್ರಸಾರವಾಗುತ್ತದೆ. ಬಾಳೆ ಗೊನೆ…

Read more
ನೇಂದ್ರ ಬಾಳೆ

ನೇಂದ್ರ ಬಾಳೆ – ಕೈಹಿಡಿದರೆ ಭಾರೀ ಲಾಭದ ಬೆಳೆ.

ಒಂದು  ಬಾಳೆಗೊನೆಯಲ್ಲಿ ಸರಾಸರಿ 30  ಕಾಯಿಗಳು ಸರಾಸರಿ 20  ಕಿಲೋ ತೂಕ, ಸರಾಸರಿ  ಕಿಲೊ 30 ರೂ. ಬೆಲೆ ಇರುವ ಬಹು ಉಪಯೋಗಿ ಬಾಳೆ ಎಂಬುದು ಇದ್ದರೆ ಅದು ನೇಂದ್ರ ಬಾಳೆ ಒಂದೇ. ಇದನ್ನು ಹಣ್ಣಾಗಿಯೂ ತಿನ್ನಬಹುದು.  ಕರಿದು ಚಿಪ್ಸ್  ತಯಾರಿಸಬಹುದು.  ಹಣ್ಣಿನ ಹಲ್ವಾ, ಪಾಯಸ, ಹೀಗೆ ಹಲವಾರು ಅಡುಗೆ ಗಳಲ್ಲೂ ಇದರ ಬಳಕೆ ಇದೆ. ಇದು ಕೇರಳ ಅಲ್ಲದೆ ಕರ್ನಾಟಕ,ಮಹಾರಾಷ್ಟ್ರದ ಬಹುತೇಕ ಪ್ರದೇಶಗಳಲ್ಲಿ ಬೆಳೆಯಲ್ಪಡುತ್ತದೆ. ನೇಂದ್ರದ ಮೂಲ: ನೇಂದ್ರ ಬಾಳೆ ಅಥವಾ ನೇಂದ್ರನ್ ಇದು ಕೇರಳ…

Read more
ಅತೀ ದೊಡ್ಡ ಗಾತ್ರದ ನೇಂದ್ರ ಬಾಳೆ ಕಾಯಿ

ಅತೀ ದೊಡ್ಡ ಗಾತ್ರದ ನೇಂದ್ರ ಬಾಳೆ ಕಾಯಿ

ನೇಂದ್ರ   ಬಾಳೆಯ ಬಹು ಉಪಯೋಗದ ಕಾರಣ ಇದಕ್ಕೆ ಉಳಿದೆಲ್ಲಾ ಬಾಳೆಗಳಿಗಿಂತ ಅಧಿಕ ಬೆಲೆ. ಮತ್ತು ನಿರಂತರ ಬೇಡಿಕೆ. ಇದರಲ್ಲಿ ಒಂದು ಕಾಯಿ ¾ ಕಿಲೋಗೂ ಹೆಚ್ಚು ತೂಗುವ ಅತೀ ದೊಡ್ಡ ಗಾತ್ರದ  ಬಾಳೆ ಕಾಯಿ ಇದೆ.ಇದನ್ನು ಎಲ್ಲರೂ ಬೆಳೆಸಬಹುದು. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಒಂದು  ಬಾಳೆಗೊನೆಯಲ್ಲಿ ಸರಾಸರಿ 3 ಹೆಣಿಗೆಗಳು, 30  ಕಾಯಿಗಳು ಸರಾಸರಿ 15  ಕಿಲೋ ತೂಕ, (20 ಕಿಲೋ ತನಕವೂ ಬರುತ್ತದೆ)ಇರುವ ಬಹು ಉಪಯೋಗಿ ಬಾಳೆ ಎಂಬುದು ಇದ್ದರೆ ಅದು ನೇಂದ್ರ ಬಾಳೆಯಲ್ಲಿ….

Read more
ಗಡ್ದೆಯ ಬಾಳೆ ಗೊನೆ

ಬಾಳೆ- ಗಡ್ಡೆ ಒಳ್ಳೆಯದೇ? ಅಂಗಾಶ ಕಸಿಯೇ?

ಬಾಳೆ ನೆಡುವ ಸಾಂಪ್ರದಾಯಿಕ ಪದ್ದತಿ ಗಡ್ಡೆ ಅಥವಾ ಕಂದು ನಾಟಿ. ಇತ್ತೀಚೆಗೆ ಹೆಚ್ಚು ಸಂಖ್ಯೆಯ ಸಸಿಗಳ ಅಗತ್ಯಕ್ಕಾಗಿ ಅಂಗಾಂಶ ಕಸಿಯಲ್ಲಿ ಸಸ್ಯೋತ್ಪಾದನೆ ಪ್ರಾರಂಭಿಸಲಾಯಿತು. ಅಂಗಾಂಶ ಕಸಿಗೂ, ಗಡ್ಡೆ ನೆಟ್ಟು ಬಾಳೆ ಗೊನೆ ಪಡೆಯುವುದಕ್ಕೂ ವ್ಯತ್ಯಾಸ ಹೆಚ್ಚು ಏನೂ ಇಲ್ಲ. ಗಡ್ಡೆ ಸ್ವಲ್ಪ ಬೇಗ ಇಳುವರಿ ಕೊಡುತ್ತದೆ. ತೆರೆದ ವಾತಾವರಣದಲ್ಲಿ ಎರಡಕ್ಕೂ ರೋಗ ಬರಬಹುದು. ಬಾಳೆಯ ಸಸ್ಯಾಭಿವೃದ್ದಿ  ಅದರ ಜೀವ ಕೋಶಗಳ ಮೂಲಕ ಆಗುತ್ತದೆ ಇದೇ ತತ್ವದಲ್ಲಿ ಅಂಗಾಂಶ ಕಸಿಯ ಸಸ್ಯವನ್ನು  ಉತ್ಪಾದಿಸಲಾಗುತ್ತದೆ. ಅಂಗಾಂಶ ಕಸಿ ಮಾನವ ಮಾಡುವಂತದ್ದು….

Read more
ಬಾಳೆ ಸುಳಿ ಕೊಳೆಯುವಿಕೆ

ಬಾಳೆಯಲ್ಲಿ ಸುಳಿ ಹೀಗೆ ಆಗುವುದು ಯಾವ ಕಾರಣಕ್ಕೆ?.

ಚೆನ್ನಾಗಿ ಬೆಳೆಯುತ್ತಿರುವ ಬಾಳೆಯಲ್ಲಿ ಇದ್ದಕ್ಕಿದ್ದಂತೆ ಸುಳಿ ಭಾಗ ಕಪ್ಪಗಾಗುತ್ತದೆ, ಮುರಿದು ಬೀಳುತ್ತದೆ. ನಂತರ ಅದು ಕೊಳೆತು ಹೋಗುತ್ತದೆ. ಇದು ಎಲ್ಲಾ ಕಡೆ ಕಂಡುಬರುವ ಸಮಸ್ಯೆಯಾಗಿದ್ದು, ಇಂತಹ ಬಾಳೆ ಸರಿ ಮಾಡಲಾಗದಿದ್ದರೂ ಅದರ ಕಂದನ್ನು ಸರಿಮಾಡಬಹುದು. ಕೆಳಸ್ಥರದ ಎಲೆಗಳೆಲ್ಲಾ ಸರಿಯಾಗಿದ್ದು, ತುದಿ ಭಾಗದ ಸುಳಿ ಎಲೆ, ಗಿಡ್ಡವಾಗಿ ಕೊಳೆಯುವ ಒಂದು ಸಮಸ್ಯೆ ಎಲ್ಲಾ ಬಾಳೆ  ಬೆಳೆಗಾರರೂ ಗಮನಿಸಿದ್ದು. ಇದು ಮಳೆಗಾಲದಲ್ಲಿ ಮತ್ತು ಇಬ್ಬನಿ ಬೀಳುವ ಸಮಯದಲ್ಲಿ  ಹೆಚ್ಚು. ಇದರ ನಿಯಂತ್ರಣ ಹೀಗೆ.  ಬಾಳೆ ಬೆಳೆಸುವವರ ಹಿಡಿತದಲ್ಲಿಲ್ಲದ ಸಮಸ್ಯೆ ಎಂದರೆ…

Read more
ಉತ್ತಮ ಪೋಷಕಾಂಶಗಳಿಂದ ಬಂದ ಬಾಳೆ ಗೊನೆ

ಉತ್ತಮ ಬಾಳೆಗೊನೆಗೆ ಎಷ್ಟು ಪೋಷಕಾಂಶ ಕೊಡಬೇಕು?

ಯಾವುದೇ ಬೆಳೆಗೆ ಅದರ ಬೆಳೆ ಅವಧಿಗನುಗುಣವಾಗಿ ಪೋಷಕಾಂಶಗಳನ್ನು  ಬಳಸಿಕೊಳ್ಳುತ್ತದೆ. ಬಾಳೆ ಅಲ್ಪಾವಧಿ ಬೆಳೆಯಾಗಿದ್ದು ಅಧಿಕ ಪೋಷಕಾಂಶ ವನ್ನು ಬಯಸುತ್ತದೆ. ಧೀರ್ಘಾವಧಿ ಬೆಳೆಗಳು  ನಿಧಾನ ಗತಿಯಲ್ಲಿ ಪೋಷಕಗಳನ್ನು ಬಳಕೆ ಮಾಡಿಕೊಂಡರೆ ಅಲ್ಪಾವಧಿ ಬೆಳೆಗಳು ಅಧಿಕ ಪೋಷಕಗಳನ್ನು ಬಳಸಿಕೊಳ್ಳುತ್ತವೆ. ಬಾಳೆ ಬೆಳೆ ಅಲ್ಪಾವಧಿ ಬೆಳೆ ಎಂದರೆ ತಪ್ಪಾಗಲಾರದು. ಇದು ನಾಟಿ ಮಾಡಿ 6 ರಿಂದ10  ತಿಂಗಳ ಒಳಗೆ ಫಸಲನ್ನು ಕೊಡುತ್ತದೆ. ಇಷ್ಟು ಕನಿಷ್ಟ ಅವಧಿಯಲ್ಲಿ  ಅದು ತನ್ನ ಶರೀರ ಸುಮಾರು ಕ್ವಿಂಟಾಲಿಗೂ ಹೆಚ್ಚು ಬೆಳೆಯುತ್ತದೆ. ಗೊನೆ ಹೊರ ಬೀಳುವ ಸಮಯದಲ್ಲಿ …

Read more
ಫುಷ್ಟಿಕರ ಬಾಳೆ ಗೊನೆ

ಬಾಳೆ ಗೊನೆ ಪುಷ್ಟಿಯಾಗಬೇಕೇ? ಹೀಗೆ ಗೊಬ್ಬರ ಕೊಡಿ.

ಬಾಳೆ ಎಂಬ ಅಲ್ಪ ಕಾಲದಲ್ಲೇ (9-10 ತಿಂಗಳು) ಭಾರೀ ಬೆಳೆದು ಫಲಕೊಡುವ ಸಸ್ಯ. ಅದು ಚೆನ್ನಾಗಿರಬೇಕಾದರೆ ದಿನ ದಿನಕ್ಕ್ಕೆ ಅಥವಾ ವಾರಕ್ಕೊಂದಾವರ್ತಿಯಾದರೂ ತಪ್ಪದೆ ಪೋಷಕಾಂಶಗಲನ್ನು ಕೊಡಲೇ ಬೇಕು. ಇಲ್ಲವಾದರೆ ಬಾಳೆ ಗೊನೆ ಕೃಶವಾಗಿ ಬೆಳೆಯಲ್ಲಿ ಲಾಭವಾಗುವುದಿಲ್ಲ. ನೆಟ್ಟು ಗೊನೆ ಕಠಾವಿನ ವರೆಗೆ ಯಾವ ಗೊಬ್ಬರ ಕೊಡಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ. ಬಾಳೆಯ ಬೆಳೆಯಲ್ಲಿ ನಾಟಿ ಮಾಡುವ ಹಂತದಿಂದ ಕಠಾವಿನ  ಹಂತದವರೆಗೆ ಪೋಷಕಾಂಶ ನಿರ್ವಹಣೆ ಎಂಬುದು ಅತೀ ಪ್ರಾಮುಖ್ಯ.  ಗೊನೆಯ ನೋಟದ ಮೇಲೆ ಅದಕ್ಕೆ ಬೇಡಿಕೆ ಮತ್ತು…

Read more
ಅಧಿಕ ಮೊಳಕೆಗಳು ಇದರ ವಿಶೇಷ

ಮಂಗ ಮುಟ್ಟದ ಈ ಬಾಳೆ ಬೆಳೆದರೆ ಎಲೆ ಮಾರಾಟದಿಂದ ಲಾಭಗಳಿಸಬಹುದು.

ನಾವು ನೆಟ್ಟು ಬೆಳೆಸುವ ಎಲ್ಲಾ ತರಾವಳಿಯ ಬಾಳೆಗೂ ಒಂದಿಲ್ಲೊಂದು ದಿನ ರೋಗ ಬರಬಹುದು. ಆದರೆ ಇದಕ್ಕೆ ರೋಗ ಎಂಬುದೇ ಇಲ್ಲ. ಹಾಗೆಂದು ಇದು ಹಣ್ಣಿಗೆ ಹೊಂದುವ ಬಾಳೆ ಅಲ್ಲ. ಬಾಳೆ ಗೊನೆ ಬಿಟ್ಟರೂ ಒಳಗೆ ಬೀಜಗಳೇ ಇರುತ್ತವೆ.ಈ ಬಾಳೆ ಹಣ್ಣನ್ನು ಮಂಗ ತಿನ್ನಲಿ. ಎಲೆ ಮಾತ್ರ ನಾವು ಕೊಯ್ದು ಮಾರಾಟ ಮಾಡಬಹುದು. ಇದು ಎಲೆಗಾಗಿಯೇ ಇರುವ ಬಾಳೆ. ಬಾಳೆ ಎಲೆ ಎಂಬುದು ಪರಿಸರ  ಸ್ನೇಹೀ ಅಗತ್ಯ ವಸ್ತು. ಹೋಟೇಲುಗಳು , ಸಭೆ ಸಮಾರಂಭಗಳಲ್ಲಿ ಬಾಳೆ ಹಣ್ಣಿಗಿಂತ ಹೆಚ್ಚಿನ…

Read more
ಬಾಳೆಯ ನಂಜಾಣು ರೋಗ

ಬಾಳೆ- ಈ ರೀತಿ ಆದರೆ ಆ ಬಾಳೆಯನ್ನು ತೆಗೆದು ಬಿಡಿ

ಬಾಳೆಯನ್ನು ಎಲ್ಲರೂ ಬೆಳೆಯುತ್ತಾರೆ.ಕೆಲವರು ಮನೆ ಹಿತ್ತಲಿನ ಬೆಳೆಯಾಗಿ ಬೆಳೆದರೆ ಮತ್ತೆ ಕೆಲವರು ವಾಣಿಜ್ಯಿಕವಾಗಿ ತೋಟ ಮಾಡಿ ಬೆಳೆಯುತ್ತಾರೆ. ಇವರೆಲ್ಲರಿಗೂ ಅತೀ ದೊಡ್ದ ಸಮಸ್ಯೆ ಎಂದರೆ ಬಾಳೆ ಸಸ್ಯದ ಎಲೆ ಗುಛ್ಛವಾಗುವಿಕೆ. ಇದರ ಪ್ರಾರಂಭಿಕ ಚಿನ್ಹೆ ಮತ್ತು ಪತ್ತೆ ಹೀಗೆ. ನಮ್ಮಲ್ಲಿ ಬಹಳಷ್ಟು ಜನ ಕೇಳುವುದುಂಟು. ಈ ರೀತಿ ಗುಚ್ಚ ತಲೆ ಅದದ್ದಕ್ಕೆ  ಏನು ಪರಿಹಾರ ಎಂದು? ಇದಕ್ಕೆ  ಪರಿಹಾರ ಇಲ್ಲ. ಇದು ಒಂದು ವೈರಾಣು ರೋಗವಾಗಿದೆ. ಇದು ಬಂದರೆ ತಕ್ಷಣ ಗುರುತಿಸಿ ಆ ಬಾಳೆಯ ಎಲ್ಲಾ ಬಾಗಗಳನ್ನೂ…

Read more
error: Content is protected !!