tender arecanut

ಅಡಿಕೆ ಬೆಳೆಗಾರರಿಗೆ ವರ – ಅಡಿಕೆ ಮಿಲ್.

ಅಡಿಕೆ ಬೆಳೆಯಲ್ಲಿ ಎಲ್ಲಾ ಕಡೆ ಒಂದೇ ಸಮಯದಲ್ಲಿ ಅಡಿಕೆ ಕೊಯಿಲು ಆದಾಗ ಸುಲಿಯುವ ಕೆಲಸ ದೊಡ್ಡ ಕಷ್ಟ. ಜನ ಸಿಗುವುದಿಲ್ಲ. ಆ ಸಮಯದಲ್ಲಿ ಒಮ್ಮೆಗೇ ಟನ್ ಗಟ್ಟಲೆ ಅಡಿಕೆ ಸಿಪ್ಪೆ ತೆಗೆಯುವ ವ್ಯವಸ್ಥೆ ಎಂದರೆ ಅಡಿಕೆ ಮಿಲ್ ಗಳು. ಇದು ಬಾಡಿಗೆಯ ಆಧಾರದಲ್ಲಿ ಕೆಲಸ ಮಾಡಿ ಬೆಳೆಗಾರರಿಗೆ ತುಂಬಾ ಸಹಕಾರಿಯಾಗುತ್ತದೆ. ಭತ್ತವನ್ನು ಗದ್ದೆಯಿಂದ ಕೊಯಿಲು ಮಾಡಿ ಮಿಲ್ ಗೆ ಒಯ್ದರೆ ಅಲ್ಲಿ ಅದನ್ನು ಅಕ್ಕಿ ಮಾಡಿಕೊಡುವಂತೆ, ಅಡಿಕೆಗೂ ಇಂತಹ  ಒಂದು ವ್ಯವಸ್ಥೆ ಬಂದಿದೆ. ಈ ಯಾಂತ್ರಿಕ ವ್ಯವಸ್ಥೆಯಲ್ಲಿ…

Read more
ಅಡಿಕೆ ಯಾಕೆ ಸುರಿ ಬೀಳುತ್ತದೆ

ಅಡಿಕೆ ಯಾಕೆ ಸುರಿ ಬೀಳುತ್ತದೆ? – ಪರಿಹಾರ.

ದಾಸ್ತಾನು ಇಟ್ಟ ಧವಸ ಧಾನ್ಯ ಏನೇ ಇದ್ದರೂ ಸಮರ್ಪಕವಾಗಿ ಇಲ್ಲದಿದರೆ ಅದಕ್ಕೆ ದಾಸ್ತಾನು ಕೀಟ (Storage pest) ಬಂದು ಸುರಿ ಬೀಳುವುದು  ಸಾಮಾನ್ಯ. ಈ ಕೀಟಗಳಲ್ಲಿ ಹಲವು ವಿಧಗಳು ಇದ್ದು, ಅಕ್ಕಿಗೆ ಬರುವ ಗುಗ್ಗುರು,ಅಡಿಕೆಗೆ ಬರುವ ಡಂಕಿ ಬೇರೆ ಹೀಗೆ ಬೇರೆ  ಬೇರೆ ಇದೆ. ಸಾಮಾನ್ಯವಾಗಿ ಸುಲಿದು ದಾಸ್ತಾನು ಇಡುವ ಅಡಿಕೆಗೆ ಈ ಸಮಸ್ಯೆ ಹೆಚ್ಚು. ಹಾಗೆಂದು ಸುಲಿಯದೇ ಇಡುವಲ್ಲಿಯೂ ಇಲ್ಲದಿಲ್ಲ. ಇದು ಮಹಾ ಮಾರಿ ಶತೃ ಎಂತಲೇ ಹೇಳಬಹುದು. ಒಮ್ಮೆ ಈ ಕೀಟ ಬಂದರೆ ಅದನ್ನು ಓಡಿಸುವುದೂ…

Read more
error: Content is protected !!