ಬದನೆಯ ಕಾಯಿ ಕೊಳೆತ

ಬದನೆಯ ಕಾಯಿಗಳು ಯಾಕೆ ಕೊಳೆಯುತ್ತವೆ.

ಬದನೆ  ಪ್ರಮುಖ ತರಕಾರಿ ಬೆಳೆಯಾಗಿದ್ದು, ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಇದನ್ನು ಬೆಳೆಸುತ್ತಾರೆ. ಹೆಚ್ಚಿನ ಕೃಷಿಕರು ಅಧಿಕ ಬೇಡಿಕೆ –ಬೆಲೆ ಕಾರಣಕ್ಕೆ ನಾಟಿ ತಳಿಯನ್ನೇ ಬೆಳೆಸುತ್ತಿದ್ದು, ಇತ್ತೀಚಿಗಿನ ಬೇಸಾಯ ಕ್ರಮ, ಹವಾಮಾನದಿಂದಾಗಿ ಬೆಳೆಗೆ ಸೊರಗು ರೋಗದ ಬಾಧೆ ಅಧಿಕವಾಗಿದೆ. ಇದರಿಂದ ಕಾಯಿ ಕೊಳೆಯುವಿಕೆ ಹಚ್ಚಾಗುತ್ತದೆ. ಹೆಚ್ಚಿನ ಬೆಳೆಗಾರರು ಸಣ್ಣ  ಮತ್ತು ಅತೀ ಸಣ್ಣ ಬೆಳೆಗಾರರಾಗಿದ್ದು ಇದು ರೋಗವೋ – ಕೀಟವೂ ಎಂಬುದರ ಜ್ಞಾನ ಹೊಂದಿರುವುದಿಲ್ಲ.   ಸಮೀಪದ  ಗೊಬ್ಬರ– ಕೀಟನಾಶಕ ಮಾರಾಟ ಅಂಗಡಿಯವರ ಸಲಹೆಯ ಮೇರೆಗೆ  ಅದಕ್ಕೆ ಉಪಚಾರ …

Read more
ಹುಳ ಇರುವ ಬದನೆಕಾಯಿ

ಬದನೆಯಲ್ಲಿ ಹುಳ ಹೇಗೆ ಆಗುತ್ತದೆ.

ತರಕಾರಿ ಬೆಳೆಗಳಲ್ಲಿ ಬದನೆ, ಬೆಂಡೆ ಮುಂತಾದವುಗಳಿಗೆ  ಕಾಯಿ ಕೊರಕ ಎಂಬ ಹುಳು ತೊಂದರೆ ಮಾಡುತ್ತದೆ. ಒಂದು ಪತಂಗ ಕಾಯಿಯ ಮೇಲೆ  ಮೊಟ್ಟೆ ಇಟ್ಟು, ಅದು ಮರಿಯಾಗಿ ಹುಳವಾಗುವುದು. ಬದನೆ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಕಾಯಿ ಮತ್ತು ಚಿಗುರು ಕೊರಕ ಹುಳು. ಇದರ ಹೆಸರು Leucinodes orbonalis ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ. ಒಂದು ಗಿಡಕ್ಕೆ ಪ್ರಾರಂಭವಾದರೆ  ಮತ್ತೆ ಹೆಚ್ಚುತ್ತಾ  ಹೋಗುತ್ತದೆ. ಕಾಯಿ ಕೊರಕವೂ ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು…

Read more
Wilt damage

ಬದನೆಯ ಕಾಯಿ ಕೊಳೆಯಲು ಕಾರಣ ಮತ್ತು ಪರಿಹಾರ.

ಬದನೆ ಬೆಳೆಯುವವರು ಎದುರಿಸುತ್ತಿರುವ ಕಾಯಿ ಕೊಳೆಯುವ ಸಮಸ್ಯೆ ಒಂದು ರೋಗವಾಗಿದ್ದು, ಇದಕ್ಕೆ ಸಮರ್ಪಕ ಪರಿಹಾರ ನೈರ್ಮಲ್ಯ ಮಾತ್ರ. ಬದನೆ ಬೆಳೆಗಾರರ ಹೊಲದಲ್ಲಿ ನೋಡಿದರೆ ಕೊಯಿದ ಬದನೆಯ ಅರ್ಧ ಪಾಲು ಹೊಲದ ಮೂಲೆಯಲ್ಲಿ ಬಿಸಾಡಿದ್ದು ಸಿಗುತ್ತದೆ. ಬದನೆ ಎಲ್ಲಿ ಬೆಳೆದರೂ ಪರಿಸ್ಥಿತಿ ಹೀಗೆಯೇ. ಇದು ಒಂದು ಸೊರಗು ರೋಗ.  ಇದಕ್ಕೆ ಬೇಸಾಯ ಪದ್ದತಿಯಲ್ಲಿ ಮಾರ್ಪಾಡು ಮತ್ತು ನೈರ್ಮಲ್ಯ ಮಾತ್ರ ಸೂಕ್ತ ಪರಿಹಾರ. ಬದನೆ  ಬೆಳೆ ಎಷ್ಟು ಇಳುವರಿ ಬಂದರೂ  ಬೆಳೆಗಾರರಿಗೆ ಸಿಗುವುದು ಅರ್ಧ ಮಾತ್ರ. ಉಳಿದವು ಕೊಳೆಯುತ್ತದೆ. ಇತ್ತೀಚಿನ…

Read more
brinjal grower

ಇದು ಭಾರೀ ಬೇಡಿಕೆಯ ಗುಳ್ಳ ಬದನೆ.

ಕರಾವಳಿಯ ಬದನೆ ತಳಿಗಳಲ್ಲಿ ಹೆಸರುವಾಸಿಯಾದ ಮಟ್ಟು ಗುಳ್ಳಕ್ಕೆ ಸರಿಸಾಟಿಯಾದ ಮತ್ತೊಂದು ಗುಳ್ಳ ,ಇದೇ ಉಡುಪಿ ಜಿಲ್ಲೆಯ ಮತ್ತೊಂದೆಡೆಯೂ ಬೆಳೆಯುತ್ತಿದೆ. ಇದರ ಆಕಾರ ಬಣ್ಣ ಎಲ್ಲವೂ ಏಕಪ್ರಕಾರ. ಒಂದೇ ಒಂದು ವ್ಯತ್ಯಾಸ ಎಂದರೆ ಮಟ್ಟು ಗುಳ್ಳಕ್ಕೆ ತೊಟ್ಟಿನಲ್ಲಿ ಮುಳ್ಳು ಇದೆ. ಇದಕ್ಕೆ ಇಲ್ಲ.  ಕರಾವಳಿಯ ಜನರ ಬಲು ಅಚ್ಚುಮೆಚ್ಚಿನ  ಗುಳ್ಳ ಬದನೆಯ ಆಸೆಯನ್ನು ಪೂರೈಸಿದ ಬದನೆಯಲ್ಲಿ ಈ ಊರಿನ ಬದನೆ ಒಂದು. ಕರಾವಳಿಯ ಜನ ಎಲ್ಲೇ ಹೋಗಲಿ ಗುಳ್ಳ ಬದನೆ ಸಿಕ್ಕರೆ ಎಷ್ಟೇ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಾರೆ….

Read more

ಗುಳ್ಳಕ್ಕೆ ಇದು ಬದಲಿ ತಳಿ.

ಬದನೆ ಬೆಳೆಸುವ ರೈತರು ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಮಾಡುವ ಖರ್ಚು ಅತೀ ಹೆಚ್ಚು. ಸಾಕಷ್ಟು ಕೀಟನಾಶಕ – ರೋಗ ನಾಶಕ ಬಳಸಿ  ಬೆಳೆ ಉಳಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿದಾಗ ರೈತರಿಗೆ ಉಳಿಯುವುದು ಅಷ್ಟಕ್ಕಷ್ಟೇ.  ಖರ್ಚು ಕಡಿಮೆ ಮಾಡಿ ಬೆಳೆ ಬೆಳೆಸಬೇಕಿದ್ದರೆ ಇರುವುದು ರೋಗ ನಿರೋಧಕ ಶಕ್ತಿ ಪಡೆದ ತಳಿಯನ್ನು ಆಯ್ಕೆ ಮಾಡುವುದು ಒಂದೇ. ಗುಳ್ಳ ಬದನೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಆದರೆ ಈಗಿತ್ತಲಾಗಿ ಗುಳ್ಳ ಬದನೆ ಬೆಳೆಸುವುದೇ ಕಷ್ಟವಾಗುತ್ತಿದೆ. ಬೆಳೆಸು ರೈತರು ಗುಳ್ಳ ತಿನ್ನುವುದನ್ನೇ ಕಡಿಮೆ ಮಾಡಿದ್ದೂ ಇದೆ….

Read more
error: Content is protected !!