ಸಕ್ಕರೆ ಕಾಯಿಲೆಗೆ ಇದು ರಾಮಬಾಣ- ಖರ್ಚು ಇಲ್ಲದ ಚಿಕಿತ್ಸೆ.

ಸಕ್ಕರೆ ಕಾಯಿಲೆಗೆ ಇದು ರಾಮಬಾಣ- ಖರ್ಚು ಇಲ್ಲದ ಚಿಕಿತ್ಸೆ.

ಸಕ್ಕರೆ ಖಾಯಿಲೆ, ಮಧುಮೇಹ, ಡಯಾಬಿಟಿಸ್ ಗೆ ರಾಮಬಾಣದಂತೆ ಕೆಲವು ಮನೆಮದ್ದುಗಳು ಕೆಲಸಮಾಡುತ್ತವೆ. ವೈದ್ಯರಿಗೆ  ಖರ್ಚು ಮಾಡಿ ಚಿಕಿತ್ಸೆ ಮಾಡಿದರೂ ತಾತ್ಕಾಲಿಕ ಉಪಶಮನ ಮಾತ್ರ ಆಗುವ ಈ ಖಾಯಿಲೆಗೆ ಶಾಶ್ವತ ಪರಿಹಾರ ಕೊಡುವಲ್ಲಿ ಈ ಔಷಧಿ ಸಹಾಯಕ. ಇದಕ್ಕೆ ಖರ್ಚು ಇಲ್ಲ. ಮನೆಯಲ್ಲಿ  ನಾವೇ ತಯಾರಿಸಿಕೊಳ್ಳಬಹುದು.

ಸಕ್ಕರೆ ಖಾಯಿಲೆ ಬರುವುದು ರಕ್ತದಲ್ಲಿ ಇನ್ಸುಲಿನ್ ಎಂಬ ಹಾರ್ಮೋನ್ ನ ಉತ್ಪಾದನೆ ಕಡಿಮೆಯಾಗಿ. ಕೆಲವರಿಗೆ ಎಳೆ ಪ್ರಾಯದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಹೆಚ್ಚಿನವರಿಗೆ 50 ವಯಸ್ಸು ದಾಟಿದ ನಂತರ ಪ್ರಾರಂಭವಾಗುತ್ತದೆ. ಅಪರೂಪವಾಗಿ ಕೆಲವರಿಗೆ ಜೀವಮಾನ ಪರ್ಯಂತ ಈ ಖಾಯಿಲೆ ಬರುವುದಿಲ್ಲ. ಯಾರೂ ಇದನ್ನು ಕರೆಯುವುದಲ್ಲ. ಅವರವರ ಆಹಾರಾಭ್ಯಾಸ, ತಲೆಮಾರಿನಿಂದ ಬಂದ ಬಳುವಳಿ, ಮೂಂತಾದ ಕಾರಣಗಳಿಂದ  ಬರುತ್ತದೆ. ಮಧುಮೇಹ ಹೆಚ್ಚಾದಾಗ  ಕೆಲವು ಆನಾರೋಗ್ಯ  ಸಮಸ್ಯೆ  ಉಂಟಾಗುತ್ತದೆ. ಕಡಿಮೆಯಾದರೂ ಸಹ ಅಪಾಯಕಾರಿ. ಸಣ್ಣ ಪ್ರಮಾಣದಲ್ಲಿ ಸಕ್ಕರೆ ಖಾಯಿಲೆ ಇದ್ದರೂ ಅಂತಹ ಸಮಸ್ಯೆ ಆಗಲಾರದು.ಮಿತಿ ಮೀರದಂತೆ ಜಾಗರೂಕತೆ ವಹಿಸಬೇಕು.

ಆಯುರ್ವೇದ ಔಷದೋಪಚಾರಗಳು:

  • ಮಧುಮೇಹವನ್ನು ಪ್ರಾರಂಭಿಕ ಹಂತದಲ್ಲಿ  ಹದ್ದುಬಸ್ತಿನಲ್ಲಿಡುವುದು ಸುಲಭ.
  • ಇದಕ್ಕೆ ಅಲೋಪತಿ ಔಷದೋಪಚಾರದೊಂದಿಗೆ ಆಯುರ್ವೇದೀಯ ಔಷದೋಪಚಾರವೂ   ಸಾಕಷ್ಟು ಇದೆ.
  • ವಿಪರೀತವಾದಾಗ ನಿತ್ಯ ಮಾತ್ರೆಗಳು, ಚುಚ್ಚು ಮದ್ದು ಬೇಕಾಗಬಹುದು. 
  • ಮಿತಿಗಿಂತ ತುಂಬಾ ಹೆಚ್ಚಾದಾಗ  ಆಹಾರ ಪಥ್ಯಗಳನ್ನೂ ಪಾಲಿಸಬೇಕಾಗುತ್ತದೆ.
  • ಈ ಹಂತದ ವರೆಗೆ ಅದನ್ನು ತಲುಪಿಸದಿರುವುದೇ ಉತ್ತಮ. ಪ್ರಾರಂಭಿಕ ಹಂತದಲ್ಲಿ ಶ್ರೀಗಂಧವನ್ನು ನಿತ್ಯ ಸೇವನೆ ಮಾಡುವುದರಿಂದ ಅದು ಹೆಚ್ಚಾಗದಂತೆ ತಡೆಯಬಹುದು.
  • ಈ ಬಗ್ಗೆ ವಿಸ್ತೃತ ಸಂಶೋಧನೆಗಳೂ ನಡೆದಿವೆ.
  • ಶ್ರೀ ಗಂಧಕ್ಕೆ  ವೈರಾಣು ನಿರೋಧಕ, ಶಿಲೀಂದ್ರ ನಿರೋಧಕ ಔಷಧೀಯ ಗುಣ ಇದೆ. 
  • ಉರಿ ಶಮನ ಮಾಡುವ ಬಾವು ಶಮನ ಮಾಡುವ, ನಂಜು ನಿವಾರರಕ ಗುಣವೂ ಇದೆ.
  • ಅದಕ್ಕಾಗಿಯೇ ನಮ್ಮ ಹಿರಿಯರು ಏನಾದರೂ ಕಚ್ಚಿದರೆ ಗಂಧ ತೆಯ್ದು ಅದರ ಲೇಪನವನ್ನು ಮಾಡಬೇಕೆಂದು ಹೇಳುತ್ತಿದ್ದುದು.
  • ಈಗ ಇದೆಲ್ಲವನ್ನೂ ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಶ್ರೀಗಂಧಕ್ಕೆ, ಅದರ ಬೀಜಕ್ಕೆ, ಎಲೆಗೆ ಬೇರೆ ಬೇರೆ ಔಷಧೀಯ ಗುಣ ಇರುವುದು ನಿಜವೆಂದು ಕಂಡುಕೊಳ್ಳಲಾಗಿದೆ.
  • ಬೆಂಗಳೂರು ಮಲ್ಲೇಶ್ವರಂ ಇಲ್ಲಿರುವ ಮರವಿಜ್ಞಾನ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಶ್ರೀಗಂಧದ ಔಷಧೀಯ ಗುಣಗಳನ್ನು ಅಭ್ಯಸಿರುತ್ತಾರೆ.
ಮನೆಯಲ್ಲಿ ದೇವರ ಪೂಜೆಗೆ ತೆಯ್ಯುವ ಗಂಧ

ಹೇಗೆ ಬಳಸಬೇಕು?

ನೇರಳೆ ಹಣ್ಣನ್ನು ಹೋಲುವ ಗಂಧದ ಹಣ್ಣು
  • ಶ್ರೀಗಂಧಕ್ಕೆ ಬರೇ ಮಧುಮೇಹ ರೋಗವನ್ನೊಂದೇ ಗುಣಪಡಿಸುವ ಶಕ್ತಿ ಇರುವುದಲ್ಲ.
  • ಶ್ರೀಗಂಧದ  ಮರದ ಎಣ್ಣೆಯೂ ಔಷಧೀಯ ಬಳಕೆಗೇ ಹೋಗುವತದ್ದು.
  • ಹಲವಾರು ಆಯುರ್ವೇದ ಔಷಧಿಗಳಲ್ಲಿ (ಆಸವ, ಅರಿಷ್ಟ, ತೈಲ, ಮುಲಾಮು, ಗುಳಿಗೆ) ಶ್ರೀಗಂಧ ಬಳಸಲ್ಪಡುತ್ತದೆ.
  • ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ನಿತ್ಯ ಯೌವನದಂತೆ ಕಾಣಲು ಶ್ರೀಗಂಧ ಸಹಾಯಕ.
  • ಹಣೆಗೆ ತಿಲಕವಾಗಿ ಶ್ರಿಗಂಧ ಹಚ್ಚಿದರೂ ತೇಜಸ್ಸು ವೃದ್ದಿಸುತ್ತದೆ ಎನ್ನುತ್ತಾರೆ. 
  • ಮಧುಮೇಹ ರೋಗ ಉಳ್ಳವರು ತಮ್ಮ ಮನೆಯಲ್ಲಿ ದೇವರ ಪೂಜೆಗೆ ತೆಯ್ಯುವ ಗಂಧವನ್ನು ಸುಮಾರು ಒಂದು ಎರಡೂ ಕಾಳುಮೆಣಸಿನ ಗಾತ್ರದಷ್ಟು  ದಿನಾ ಸೇವಿಸುತ್ತಾ ಬಂದರೆ ಸಕ್ಕರೆ ಕಾಯಿಲೆ ಅಂಕ ಮುಂದೆ ಹೋಗುವುದನ್ನು ತಡೆಯಬಹುದು.  
  • ನಿತ್ಯವೂ  ನಿರಂತರವಾಗಿ ಸೇವಿಸುತ್ತಾ ಇದ್ದರೆ ಮಧುಮೇಹ  ಕಡಿಮೆಯಾಗುತ್ತದೆ.
  • ಹಾಗೆಂದು ಹೆಚ್ಚು ಪ್ರಮಾಣ ಸೇವಿಸಬಾರದು.
  • ಎಲ್ಲಾ ಆಯುರ್ವೇದ ಔಷಧಿಗಳನ್ನು ಹಿತ ಮಿತವಾಗಿ ಹೇಳಿದಷ್ಟೇ ಸೇವಿಸಿದರೆ ಅಡ್ಡ ಪರಿಣಾಮ ಇರಲಾರದು.
  • ಹೆಚ್ಚಾಗಿ ಎಲ್ಲರ ಮೆನೆಯಲ್ಲೂ ದೇವರ  ಪೂಜೆ ಸಮಯದಲ್ಲಿ ಗಂಧದ ಕೊರಡನ್ನು ತೆಯ್ದು ಅದನ್ನು ಸ್ವಲ್ಪ ದೇವರಿಗೆ ಹಚ್ಚಿ, ಉಳಿದದ್ದನ್ನು ಸ್ವಲ್ಪ ಹಣೆಗೆ ತಿಲಕವಾಗಿ ಹಚ್ಚಿಕೊಳ್ಳುತ್ತಾರೆ.
  • ಹೆಚ್ಚಿನ ಪ್ರಮಾಣವು ತಟ್ಟೆಯಲ್ಲಿ ಹಾಗೇ ಉಳಿದದ್ದು  ಮರುದಿನ ತೊಳೆಯುವಾಗ ನೀರಿನ ಜೊತೆಗೆ  ಹೋಗುತ್ತದೆ.
  • ಇದನ್ನು ಅನವಶ್ಯಕವಾಗಿ ಹಾಳು ಮಾಡಬೇಡಿ.
  • ಅದನ್ನು ಪೂರ್ತಿಯಾಗಿ  ಸೇವನೆ ಮಾಡಿದರೆ  ಬರೇ ಮಧುಮೇಹ ಮಾತ್ರವಲ್ಲ.
  • ದೇಹದ ಕಾಂತಿ, ಶಕ್ತಿ ವರ್ಧನೆಗೂ ಸಹಾಯಕ.
ಗಂಧದ ಸಿಪ್ಪೆ ತೆಗೆದು ಒಣಗಿಸಿಟ್ಟ ಕಾಯಿಗಳು

ಶುದ್ಧ ಗಂಧ  ಮಾತ್ರ ಬಳಕೆ ಮಾಡಿ:

ಹಿಂದುಗಳು ತಮ್ಮ ದೇವಾಲಯಗಳಲ್ಲಿ ಗಂಧವನ್ನು ಪ್ರಸಾದವಾಗಿ  ಮಾನ್ಯಮಾಡುತ್ತಾರೆ. ಸಾವಿರಾರು ಜನರಿಗೆ ಶ್ರೀಗಂಧ ತೆಯ್ದು ಅದನ್ನು ಪ್ರಸಾದವಾಗಿ ಕೊಡಲು ಅಸಾಧ್ಯವಾದ ಕಾರಣ ಸಿದ್ದ ರೂಪದ  ಹುಡಿಯನ್ನು ತಂದು ನೀರಿನಲ್ಲಿ ಕರಗಿಸಿ ಗಂಧವಾಗಿ ನೀಡಲಾಗುತ್ತದೆ. ಇದರಲ್ಲಿ ಸುವಾಸನೆ ಇರಬಹುದು. ಆದರೆ ಅದು ಶುದ್ಧ ಶ್ರೀಗಂಧ ಅಲ್ಲ. ಹಾಗಾಗಿ ಅದನ್ನು ಸೇವನೆ ಮಾಡುವುದು ಸೂಕ್ತವಲ್ಲ. ತಿರುಳು ಉಳ್ಳ ಗಂಧದ ಕೊರಡನ್ನು ಕಲ್ಲಿನಲ್ಲಿ  ತೆಯ್ದು ಬಳಕೆ ಮಾಡಿ.

ಶ್ರೀಗಂಧದ ಗಿಡ ಇರುವವರು ಅದರಲ್ಲಿ ಸಿಗುವ  ಹಣ್ಣನ್ನು ಸೇವಿಸುವುದರಿಂದಲೂ ಡಯಾಬಿಟಿಸ್ ಕಾಯಿಲೆ ವಾಸಿಯಾಗುತ್ತದೆ. ಹಣ್ಣನ್ನು ನೀರಿನಲ್ಲಿ ತೊಳೆದು ಅದರ ಬೀಜವನ್ನು ಒಣಗಿಸಿ ಇಟ್ಟುಕೊಂಡು ದಿನಾ 1-2 ಜಗಿದು ತಿನ್ನಬಹುದು. ಒಟ್ಟಿನಲ್ಲಿ ಶ್ರೀಗಂಧಕ್ಕೆ  ಭಾರೀ ಔಷಧೀಯ ಗುಣ ಇರುವ ಕಾರಣ ಇದನ್ನು ಸ್ವಲ್ಪ ಸ್ವಲ್ಪ ಸೇವನೆ ಮಾಡುವುದು ಉತ್ತಮ.  

Leave a Reply

Your email address will not be published. Required fields are marked *

error: Content is protected !!