ಗಂಡು ಕರು ಸಾಕಿದರೆ ತಿಂಗಳಿಗೆ 1500 ರೂ. ಆದಾಯ.

ಗಂಡು ಕರು ಸಾಕಿದರೆ ತಿಂಗಳಿಗೆ 1500 ರೂ. ಆದಾಯ.

ಹಸು ಗಂಡು ಕರು ಹಾಕಿತೆಂದರೆ ತಲೆಬಿಸಿ ಮಾಡಿಕೊಂಡು ಅದನ್ನು ತರಾತುರಿಯಲ್ಲಿ ಕಸಾಯಿಗೆ 500-1000ರೂ. ಗಳಿಗೆ ಮಾರಬೇಡಿ. ಅದರಿಂದ ತಿಂಗಳಿಗೆ 1500 ರೂ. ಆದಾಯ ಇದೆ ಎಂದರೆ ನಂಬುತ್ತೀರಾ? ನಿಜವಾಗಿಯೂ ಇದೆ. ಒಂದು ಗಂಡು ಕರು ದಿನಕ್ಕೆ ಒಂದು ಬುಟ್ಟಿ ಗೊಬ್ಬರ ತಯಾರಿಸುತ್ತದೆ. ಇಷ್ಟು ಗೊಬ್ಬರವನ್ನು ನಾವು ಖರೀದಿಸುವುದೇ ಆದರೆ ಅದಕ್ಕೆ ರೂ.50 ಕೊಡಬೇಕು. ನಾವೇ ಅದನ್ನು ಸಾಕಿದರೆ ಕೊಡುವ ರೂ.50 ಉಳಿಯುತ್ತದೆ. ವಾರ್ಷಿಕ 18,000 ರೂ. ಗಳ ಗೊಬ್ಬರ ನಮ್ಮಲ್ಲೇ ಉತ್ಪಾದಿಸಬಹುದು. ಬಹಳ ಜನ ಗಂಡು ಕರು…

Read more
ಅಡಿಕೆ ಸಿಪ್ಪೆ ತೋಟಕ್ಕೆ ಹಾಕಿದರೆ ರೋಗ ಬರುತ್ತದೆಯೇ

ಅಡಿಕೆ ಸಿಪ್ಪೆ ತೋಟಕ್ಕೆ ಹಾಕಿದರೆ ರೋಗ ಬರುತ್ತದೆಯೇ?

ಅಡಿಕೆ ಬೆಳೆಗಾರರಲ್ಲಿ ಸಿಗುವ ತ್ಯಾಜ್ಯಗಳಾದ ಸುಲಿದ ಅಡಿಕೆ ಸಿಪ್ಪೆ, ಅದರ ಗರಿ, ಹಾಳೆ ಎಲ್ಲವನ್ನೂ ಒಟ್ಟು ಸೇರಿದರೆ ಅದರ ಪ್ರಮಾಣ, ಆ ಅಡಿಕೆ ತೋಟಕ್ಕೆ ಬೇಕಾಗುವ ಎಲ್ಲಾ ಸಾವಯವ ಅಂಶವನ್ನು  ಪೂರೈಸುವಷ್ಟು. ಆದರೆ ನಮ್ಮಲ್ಲಿ  ಅವುಗಳ ಸದುಪಯೋಗ ಆಗುತ್ತಿಲ್ಲ. ಹೆಚ್ಚಿನ ರೈತರು ಅಡಿಕೆ ತೋಟದಲ್ಲಿ ಸಿಗುವ ತ್ಯಾಜ್ಯಗಳನ್ನು  ಸಮರ್ಪಕವಾಗಿ ಬಳಕೆ ಮಾಡದೆ ನಷ್ಟ ಮಾಡಿಕೊಳ್ಳುತ್ತಾರೆ. ಇದನ್ನು ಸ್ವಲ್ಪವೂ ನಷ್ಟವಾಗದಂತೆ ಬಳಸಿ ರಕ್ಷಿಸಿದರೆ ಮಣ್ಣು ಫಲವತ್ತಾಗುತ್ತದೆ.ಬೆಳೆ ನಳನಳಿಸುತ್ತದೆ. ನೀವೆಂದಾದರೂ ಉತ್ತರ ಕರ್ನಾಟಕ, ಮಲೆನಾಡಿನ ಕಡೆ ಹೋಗಿದ್ದರೆ ಒಮ್ಮೆ ಅಲ್ಲಿನ…

Read more
ಹೊಲದಲ್ಲಿ ಎರೆಹುಳ

ಹೊಲದಲ್ಲಿ ಎರೆಹುಳಗಳು ಕಡಿಮೆಯೇ ? ಕಾರಣ ಏನು?

ಮಣ್ಣು  ಅಥವಾ ಹೊಲ ಅನೇಕ ತರಹದ ಕಶೇರುಕ ಮತ್ತು ಅಕಶೇರುಕ ಜೀವಿಗಳಿಗೆ ಆಶ್ರಯತಾಣ. ಇಲಿ ಹೆಗ್ಗಣ ,ಅಳಿಲುಗಳಿಂದ ಹಿಡಿದು, ಇರುವೆ ಗೆದ್ದಲು, ಜೇಡ, ನುಶಿ, ಮೈಟ್, ಬಸವನ ಹುಳು ಎರೆಹುಳು, ಕಪ್ಪೆ ಚಿಪ್ಪಿನ ಹುಳು, ಶತಪದಿಗಳು, ಸಹಸ್ರಪದಿಗಳು,  ಎರೆಹುಳುಗಳು ಹಾಗೆಯೇ ಹಲವಾರು ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ಎಲ್ಲವೂ ಮಣ್ಣಿನಲ್ಲಿಯೇ ಬದುಕುವ ಜೀವಿಗಳು. ಮಣ್ಣು ಇಲ್ಲದಿದ್ದರೆ ಅವು ಇಲ್ಲ. ಅವು ಇಲ್ಲದಿದ್ದರೆ ಮಣ್ಣಿಗೆ ಜೀವಂತಿಕೆ ಇಲ್ಲ. ಹೊಲ ಎರೆಹುಳಗಳಿಗೆ ಆಹಾರ ಕೊಡದ ಸ್ಥಿತಿಯಲ್ಲಿ ಇದ್ದರೆ ಅಲ್ಲಿ ಅವುಗಳ…

Read more
ಎರೆಹುಳು ಬಗ್ಗೆ ನಾವು ತಿಳಿಯಬೇಕಾದ ವಾಸ್ತವ

ಎರೆಹುಳು ಬಗ್ಗೆ ನಾವು ತಿಳಿಯಬೇಕಾದ ವಾಸ್ತವ ಸಂಗತಿ.

ಎರೆಗೊಬ್ಬರ ಎಂದರೆ ಅದು ಸಂಪಧ್ಭರಿತ ಗೊಬ್ಬರ ಅಲ್ಲ. ಅದು ಒಂದು ಸಾವಯವ ವಸ್ತುಗಳನ್ನು ಹುಡಿ ಮಾಡಿದ ಮಿಶ್ರಣ ಅಷ್ಟೇ. ಇದು ಬೆಳೆಗೆ ದೊರೆಯಬೇಕಾದರೆ ಮಣ್ಣಿನಲ್ಲಿರುವ ಸ್ಥಳೀಯ ಎರೆಹುಳುಗಳು ಕೆಲಸ  ಮಾಡಲೇ ಬೇಕು. ಎರೆಹುಳ ಏನು? ಎರೆಹುಳು ಎಂಬ ದುಂಡು ಹುಳ (ಅನೆಲಿಡಾ) ಜಾತಿಗೆ ಸೇರಿದ ಜೀವಿಯು  ಸಾವಯವ ತ್ಯಾಜ್ಯಗಳನ್ನು  ರೂಪಾಂತರಿಸಿ ಕೊಡುತ್ತದೆ. ಇದನ್ನು  ಬೆಳೆಗಳಿಗೆ ಗೊಬ್ಬರವಾಗಿ ಬಳಕೆ ಮಾಡಿದಾಗ ಅಧ್ಬುತ ಇಳುವರಿ ಬರುತ್ತದೆ, ಮಣ್ಣು  ಶ್ರೀಮಂತವಾಗುತ್ತದೆ. ಸಾವಯವ ಕೃಷಿ ಎಂಬ ಅಹಿಂಸಾತ್ಮಕ  ಕೃಷಿ ವಿಧಾನಕ್ಕೆ ಇದು ಒಂದು ಸರಳ…

Read more
ಮರ ಹಾವಸೆ

ಈ ಸಸ್ಯಗಳಲ್ಲಿದೆ ಉತ್ತಮ ಪೋಷಕಾಂಶ.

ನಮ್ಮ ಸುತ್ತಮುತ್ತ ಅದೆಷ್ಟೋ  ವೈವಿಧ್ಯಮಯ ಸಸ್ಯಗಳು ಇವೆ. ಇವುಗಳ ಬಗ್ಗೆ ನಮಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ಕೆಲವು ತಿಳಿದವರು ಇದನ್ನು ಬಳಸುತ್ತಾರೆ. ಇಂತದ್ದರಲ್ಲಿ ಒಂದು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಒಂದು ಸಸ್ಯ ವರ್ಗ ಮೋಸ್ (moss) ಅಥವಾ ಮರ ಹಾವಸೆ. ಇದು Bryophytes ಪ್ರಬೇಧಕ್ಕೆ ಸೇರಿದ ಸಸ್ಯ ವರ್ಗ.  ಇದು ಮರ ಹಾವಸೆ: ಮರ ಹಾವಸೆಯಲ್ಲಿ ನೂರಾರು (129) ವಿಧಗಳಿವೆ. ಇವುಗಳಲ್ಲಿ ಕೆಲವು ಮಳೆ ಕಾಡುಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಪಶ್ಚಿಮ ಘಟ್ಟ…

Read more
ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ ಎಂದರೆ ಅದು ರಾಸಾಯನಿಕ ಗೊಬ್ಬರಗಳಿಗೆ ಸಮನಾದ ಫಲಿತಾಂಶವನ್ನು ಕೊಡುವಂತಹ ಸಾವಯವ ಮೂಲವಸ್ತುಗಳನ್ನು ಸೇರಿಸಿ ತಯಾರಿಸಿದ ಗೊಬ್ಬರ. ರಸ ಗೊಬ್ಬರ, ರಾಸಾಯನಿಕ ಗೊಬ್ಬರ ಬೇರೆ ಬೇರೆ. ರಸ ಗೊಬ್ಬರ ಎಂಬುದು ಹೆಚ್ಚು ಸಾತ್ವಾಂಶಗಳ ಯಾವುದೇ ಮೂಲವಸ್ತುಗಳ ಮೂಲಕ ತಯಾರಿಸಬಹುದು. ‘ರಸ’ ಎಂದರೆ ಹೆಚ್ಚು ಸತ್ವ ಉಳ್ಳ ತಯಾರಿಕೆ.   ರಾಸಾಯನಿಕ ಮಾತ್ರವಲ್ಲ, ಸಾವಯವ ಮೂಲದಲ್ಲೂ ರಸಗೊಬ್ಬರ ತಯಾರಿಸಬಾರದು ಎಂದಿಲ್ಲ. ತಯಾರಿಸಬಹುದು. ಇದು ಹೊಸ ತಂತ್ರಜ್ಞಾನವಂತೂ ಅಲ್ಲ. ಮರೆತು ಹೋಗಿರಬಹುದು ಅಥವಾ ಕಷ್ಟ ಎಂದು ಬಿಟ್ಟಿರಬಹುದು. ಸಾವಯವ…

Read more

ಕೀಟಗಳ ನಿಯಂತ್ರಣಕ್ಕೆ ಹೀಗೆ ಮಾಡಿದರೆ ತುಂಬಾ ಅನುಕೂಲ.

 ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಬಂಧಿಸುವುದು. ಕೀಟಗಳಿಗೆ ಬೇಕಾದಷ್ಟು ಅಹಾರ ಕೊಟ್ಟು ಅವುಗಳನ್ನು ಅಲ್ಲೇ ಬಂಧಿಸುವುದು ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ. ನಾವು ಕೈಯಿಂದ ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ. ಹುಳ ಬಿದ್ದಿದೆ ಯಾವ ಕೀಟ ನಾಶಕ ಸಿಂಪಡಿಸಬೇಕು ಎಂದು ಕೇಳುತ್ತೇವೆಯೇ ವಿನಹ ಏನು ಮಾಡಬೇಕು ಎಂದು ಕೇಳುತ್ತಿಲ್ಲ. ತಜ್ಞರ ಬಳಿಗೆ ರೈತರು ಹೋಗುವುದಿಲ್ಲ….

Read more

ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more
ಸಾವಯವ ತ್ಯಾಜ್ಯಗಳನ್ನು ಮಧ್ಯದಲ್ಲಿ ಹಾಕಬೇಕು.

ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವ ವೈಜ್ಞಾನಿಕ ವಿಧಾನ.

ಹಸಿ ಸಾವಯವ ಗೊಬ್ಬರಗಳನ್ನು ಹಾಕಿದ ಸ್ಥಳದಲ್ಲಿ ನೆಲದ ಹುಲ್ಲು ಇತ್ಯಾದಿ ಸತ್ತು ಹೋಗುತ್ತದೆ.  ಕಳಿಯುವ ಕ್ರಿಯೆಯಲ್ಲಿ ಕೆಲವು ಆಮ್ಲಗಳು ಮತ್ತು ಶಾಖ ಬಿಡುಗಡೆಯಾಗಿ ನೆಲಕ್ಕೆ ಅದು ಸ್ವಲ್ಪ ಮಟ್ಟಿಗೆ ಪ್ರಸಾರವಾಗುತ್ತದೆ. ಒಂದು ವೇಳೆ ನೀವು ಹಸಿ ಸಾವಯವ ಗೊಬ್ಬರಗಳನ್ನು ಮರದ – ಸಸಿಯ ಬುಡಕ್ಕೆ ಹಾಕಿದರೆ ಅದರ ಕಾಂಡದ ಭಾಗಕ್ಕೆ ಘಾಸಿ ಉಂಟಾಗುತ್ತದೆ. ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ ಆಗಬೇಕಿದ್ದರೆ ಅದರ ಜೊತೆಗೆ ತೇವಾಂಶ ( ನೀರು) ಅಗತ್ಯ….

Read more
ಬಳಕೆಗೆ ಸಿದ್ದವಾದ ಸುಡುಮಣ್ಣು – Sudumannu ready to use.

ಸುಡುಮಣ್ಣು – ಇದು ಮಣ್ಣಿನ ಆರೋಗ್ಯ ರಕ್ಷಕ ಡಾಕ್ಟರ್.

ಎಲ್ಲಾ  ತರಹದ ಮಣ್ಣು ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಮಣ್ಣಿನಲ್ಲಿ ಬೆಳೆಗಳಿಗೆ  ಹಾನಿಕಾರಕ ರೋಗಾಣುಗಳು ಮತ್ತು ಕೀಟದ ಮೊಟ್ಟೆಗಳು ಇರಬಹುದು. ಅಂತಹ ಸಂಶಯ ಇರುವ ಮಣ್ಣನ್ನು ಸ್ವಲ್ಪ ಬಿಸಿ ಪ್ರಕ್ರಿಯೆಗೆ ಒಳಪಡಿಸಿ ಸುಡುಮಣ್ಣಾಗಿ ಪರಿವರ್ತಿಸಿದರೆ,  ಅದು ಪೂರ್ಣ ಸ್ಟೆರಿಲೈಸ್ ಮಾಡಿದ  ಸ್ವಚ್ಚ ಶುದ್ಧ ಮಣ್ಣಾಗುತ್ತದೆ. ಮಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಅದಕ್ಕೆ ಕರಕಲು ಸಾವಯವ ತ್ಯಾಜ್ಯ ಸೇರಿದಾಗ ಅದು ಸಾವಯವ ಇಂಗಾಲವನ್ನು (Carbon – bio char ) ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಸಾವಯವ ತ್ಯಾಜ್ಯಗಳು ಮಣ್ಣನ್ನು ಜೈವಿಕವಾಗಿ ಶ್ರೀಮಂತಿಕೆಗೆ…

Read more
error: Content is protected !!