ನಮ್ಮ ಸುತ್ತಮುತ್ತ ಅದೆಷ್ಟೋ ವೈವಿಧ್ಯಮಯ ಸಸ್ಯಗಳು ಇವೆ. ಇವುಗಳ ಬಗ್ಗೆ ನಮಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ಕೆಲವು ತಿಳಿದವರು ಇದನ್ನು ಬಳಸುತ್ತಾರೆ. ಇಂತದ್ದರಲ್ಲಿ ಒಂದು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಒಂದು ಸಸ್ಯ ವರ್ಗ ಮೋಸ್ (moss) ಅಥವಾ ಮರ ಹಾವಸೆ. ಇದು Bryophytes ಪ್ರಬೇಧಕ್ಕೆ ಸೇರಿದ ಸಸ್ಯ ವರ್ಗ.
ಇದು ಮರ ಹಾವಸೆ:
- ಮರ ಹಾವಸೆಯಲ್ಲಿ ನೂರಾರು (129) ವಿಧಗಳಿವೆ.
- ಇವುಗಳಲ್ಲಿ ಕೆಲವು ಮಳೆ ಕಾಡುಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ.
- ಪಶ್ಚಿಮ ಘಟ್ಟ ಎಂದು ಕರೆಯಲ್ಪಡುವ ಕರ್ನಾಟಕದ ಕೆಲವು ಭಾಗಗಳು, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್ ,ಗುಜರಾತ್ ಹಾಗೆಯೇ ಈಶಾನ್ಯ ರಾಷ್ಟ್ರಗಳ ಕಾಡಿನಲ್ಲಿ ಹೆಚ್ಚು.
- ಮರದ ಕಾಂಡ, ಗೆಲ್ಲು, ಕೆಲವು ಕಡೆ ಮರದ ಬುಡ ಭಾಗದಲ್ಲಿ ಮಳೆಗಾಲ ಹಾಗೂ ಇಬ್ಬನಿ ಬೀಳುವ ಚಳಿಗಾಲದುದ್ದ ಕ್ಕೂ ಒಂದು ಜಾತಿಯ ಹಾವಸೆ ಸಸ್ಯ ಬೆಳೆಯುತ್ತದೆ.
- ಇದನ್ನು ಯಾರೂ ಒಂದು ಗಂಭೀರ ವಿಷಯವಾಗಿ ತೆಗೆದುಕೊಂಡಿಲ್ಲ. ಆದರೆ ಕೆಲವರು ಗೊತ್ತಿರುವವರು ಇದನ್ನು ಬೇರೆ ಬೇರೆ ಉಪಯೋಗಕ್ಕೆ ಬಳಕೆ ಮಾಡುತ್ತಾರೆ.
ಯಾವ ಉಪಯೋಗ ಇದೆ:
- ಇದು ಉತ್ತಮ ತೇವಾಂಶ ಹಿಡಿದಿಟ್ಟುಕೊಳ್ಳುವ ಸಸ್ಯ. ಇದನ್ನು ಸಸ್ಯೋತ್ಪಾದಕರು ಅಧಿಕ ಪ್ರಮಾಣದಲ್ಲಿ ಸಂಗ್ರಹಿಸಿ ಒಯ್ಯುತ್ತಾರೆ.
- ಇದನ್ನು ಬಳಸಿ ಸಸಿ ಬೆಳೆಸಿದಾಗ ಸಸಿಗಳ ಬೇರು ಚೆನ್ನಾಗಿ ಬರುತ್ತದೆ, ಮತ್ತು ಸಸ್ಯ ಶಕ್ತಿಶಾಲಿಯಾಗಿ ಬೆಳೆಯುತ್ತದೆ.
- ಅಧಿಕ ಪ್ರಮಾಣದಲ್ಲಿ ಗೂಟಿ ಸಸಿ ಮಾಡುವವರು ಗೂಟಿ ಮಾಡಲು ಬಳಕೆ ಮಾಡುವ ಮಾಧ್ಯಮವಾಗಿ ಇದನ್ನು ಬಳಸುತ್ತಾರೆ.
- ಅಲಂಕಾರಿಕ ಸಸ್ಯಗಳನ್ನು ಕುಂಡದಲ್ಲಿ ಬೆಳೆಸಿ ಮಾರಾಟ ಮಾಡುವವರು ಬಳಕೆ ಮಾಡುವ ಮಾಧ್ಯಮ ಇದು.
- ತೆಂಗಿನ ನಾರಿನ ಹುಡಿಯ ಜೊತೆಗೆ ಇದನ್ನು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ.
- ಈ ಸಸ್ಯದಲ್ಲಿ ಸಹಜೀವಿಯಾಗಿ ಕೆಲವು ನೀಲಿ ಹಸಿರು ಪಾಚಿಗಳು ವಾಸಿಸುತ್ತವೆ.
- ಇವು ವಾತವರಣದಲ್ಲಿರುವ ಸಾರಜನಕವನ್ನ ಸ್ಥಿರೀಕರಿಸಿ ಸಸ್ಯ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಬೆಳವಣಿಗೆ ಪ್ರಚೋದಕ ಗುಣಗಳು ಸ್ವಲ್ಪ ಮಟ್ಟಿಗೆ ಇರುತ್ತವೆ.
- ಇದನ್ನು ಬೆಳೆಗಳಿಗೆ ಬಳಕೆ ಮಾಡಿದಾಗ ಸಸ್ಯ ಬೆಳವಣಿಗೆಯ ಮೇಲೆ ಇದು ಉತ್ತಮ ಫಲಿತಾಂಶ ಕೊಡುತ್ತದೆ.
- ಇದರಲ್ಲಿ ಲಘು ಪೋಷಕಾಂಶಗಳ ಪ್ರಮಾಣ ಇರುವ ಕಾರಣ ಬೆಳೆವಣಿಗೆಯನ್ನು ಹೆಚ್ಚಿಸುತ್ತದೆ.
ಬಳಕೆ ಹೇಗೆ:
- ಇದನ್ನು ಕಚ್ಚಾ ರೂಪದಲ್ಲಿ ಬಳಕೆ ಮಾಡುವುದೇ ಹೆಚ್ಚು. ಕಸಿ ಮಾಡುವವರು ಟನ್ ಗಟ್ಟಲೆ ಇದನ್ನು ಸಂಗ್ರಹಿಸಿ ದಾಸ್ತಾನು ಇಡುತ್ತಾರೆ.
- ಇದು ಬೇಗ ಕರಗುವುದಿಲ್ಲ. ಮತ್ತೆ ಮತ್ತೆ ಉಪಯೋಗಕ್ಕೆ ದೊರೆಯುತ್ತದೆ.
- ತೇವಾಂಶ ದೊರೆತಾಗ ಅದು ಹಿಗ್ಗಿಕೊಳ್ಳುತ್ತದೆ.
ಇದನ್ನು ನೇರವಾಗಿ ಬೆಳೆಗಳಿಗೆ ಬಳಕೆ ಮಾಡಬಹುದು. ಇದನ್ನು ಬ್ಯಾರಲ್ ನಲ್ಲಿ ಹಾಕಿ ಕೊಳೆಯಿಸಿ ಅದರ ಸಾರವನ್ನು ಬಳಕೆ ಮಾಡಬಹುದು. ಇದು ಸುಲಭದಲ್ಲಿ ಸಿಕ್ಕರೆ ಬೆಳೆಗಳಿಗೆ ಪೋಷಕವಾಗಿ ತೇವಾಂಶ ರಕ್ಷಕವಾಗಿ ಬಳಸಿಕೊಳ್ಳಿ.
Sir namma 5acre hola ide poshakavsha ella adakke enmadabeku Heli