ಸಾಲ್ಯುಬಲ್ ಗೊಬ್ಬರ ಬಳಸುವವರು ಇದನ್ನು ಮೊದಲು ತಿಳಿದುಕೊಳ್ಳಿ

by | Jun 18, 2022 | Manure (ಫೋಷಕಾಂಶ), Water Soluble Fertilisers | 0 comments

ಹಸಿರು ಕ್ರಾಂತಿಯ ಪರಿಣಾಮದಿಂದ ನಮ್ಮ ಕೃಷಿಗೆ  ರಾಸಾಯನಿಕ ಗೊಬ್ಬರಗಳ ಪರಿಚಯವಾಯಿತು. ಇದರಲ್ಲಿ ಸಾಂಪ್ರದಾಯಿಕ ಗೊಬ್ಬರಗಳಿಗಿಂತ ಹೆಚ್ಚು ಸಾರಾಂಶಗಳು ಇರುವುದಕ್ಕೆ ಅದನ್ನು ರಸ ಗೊಬ್ಬರ ಎಂಬ ಹೆಸರಿನೊಂದಿಗೆ  ಕರೆಯಲಾಯಿತು. ಇದಕ್ಕೆ ನಂತರದ ಸೇರ್ಪಡೆ ಸಾಲ್ಯುಬಲ್ ಗೊಬ್ಬರಗಳು.(Water soluble fertilizers)

ಏನಿದು ರಸಗೊಬ್ಬರ:

 • ರಸ ಗೊಬ್ಬರಗಳಲ್ಲಿ ಮೂರು ಮುಖ್ಯವಾದವುಗಳು.
 • ಅದು ಸಾರಜನಕ , ರಂಜಕ ಮತ್ತು ಪೊಟ್ಯಾಶಿಯಂ. ಇದನ್ನು ಯೂರಿಯಾ , ಸೂಪರ್ ಫೋಸ್ಪೇಟ್ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ಗಳು.
 • ಅದನ್ನು ಉತ್ಪಾದಿಸಿಕೊಡುವವರು ಅದರಲ್ಲಿ ಬೇರೆ ಬೇರೆ ಸಂಯುಕ್ತ ಗೊಬ್ಬರಗಳನ್ನು  ತಯಾರಿಸುವುದರ ಮೂಲಕ ತಮ್ಮ ಮಾರಾಟ ಬ್ರಾಂಡ್ ಗಳನ್ನು ಹೆಚ್ಚಿಸಿಕೊಂಡರು.
 • ಯೂರಿಯಾ ಒಂದು ಆವಿಯ ರೂಪದ ಮೂಲ ಗೊಬ್ಬರ. ಸೂಪರ್ ಫೋಸ್ಫೇಟ್, ಡೈ ಅಮೋನಿಯಂ ಫೋಸ್ಪೇಟ್  ಇವು ಫೋಸ್ಫೋರಿಕ್ ಎಸಿಡ್ , ಡಿ ಎ ಪಿ  ಎರಡು ಅಮೋನಿಯಂ ಸಾಲ್ಟ್ ಗಳ ಮೂಲಕ ಉಪಚರಿಸಿದ್ದು.
 • ಹಾಗೆಯೇ ಮ್ಯುರೇಟ್ ಆಫ್ ಪೊಟ್ಯಾಶ್ ಪೊಟ್ಯಾಶಿಯಂ ಕ್ಲೋರೈಡ್  ಹರಳುಗಳ ಮೇಲೆ ಕೊಟಿಂಗ್ ಮಾಡಿದ  ಹರಳು.

ಸಾಂಪ್ರದಾಯಿಕ ಗೊಬ್ಬರಗಳು ಮಣ್ಣಿಗೆ ಸೇರಲ್ಪಟ್ಟು ಅವು ಮಣ್ಣಿನ ಜೀವಾಣುಗಳಿಗೆ ಆಹಾರವಾಗಿ ಆ ನಂತರ ಸಸ್ಯಗಳಿಗೆ  ಲಭ್ಯವಾಗುವ ಗುಣದವು. ಈ ಸಿದ್ದಾಂತಕ್ಕಿಂತ ಸ್ವಲ್ಪ ಭಿನ್ನವಾಗಿ ಬಂದವುಗಳೇ ವಾಟರ್ ಸೋಲ್ಯುಬಲ್ ಗೊಬ್ಬರಗಳು.

 • ನಮ್ಮ ದೇಶದಲ್ಲಿ ಇದು ಮಹಾರಾಷ್ಟ್ರದಲ್ಲಿ ದ್ರಾಕ್ಷಿ, ದಾಳಿಂಬೆ, ಮುಂತಾದ  ಬೆಳೆಗಳಿಗೆ ಮೊದಲು ಪರಿಚಯಿಸಲ್ಪಟ್ಟು, ಈಗ ದೇಶದ  ಬಹುತೇಕ ಕಡೆ ಪ್ರಚಾರದಲ್ಲಿದೆ.
 • ಅಲ್ಪಾವಧಿ ಬೆಳೆಗಳು, ಅಧಿಕ ವರಮಾನದ ತೋಟಗಾರಿಕಾ ಬೆಳೆಗಳಿಗೆ ಇದರ ಬಳಕೆ ಹೆಚ್ಚಾಗಿದ್ದುದು ಈಗ ಧೀರ್ಘಾವಧಿ ಬೆಳೆಗಳಿಗೂ ಬಳಸಲ್ಪಡುತ್ತಿದೆ.
 • ಇದು ಅತೀ ದೊಡ್ಡ ಕೃಷಿ ಒಳಸುರಿ ವ್ಯವಹಾರವಾಗಿದ್ದು, ಇದರ  ಮಾರಾಟದ ವ್ಯವಹಾರದಲ್ಲಿ  ಹಲವು ಕಂಪೆನಿಗಳು ತೊಡಗಿಸಿಕೊಂಡಿವೆ.
 • ಬಹುತೇಕ ಎಲ್ಲರೂ ಚೀನಾ ದೇಶದಿಂದ ಆಮದು ಮಾಡಿ ಇಲ್ಲಿ ಪುನರ್ ಪ್ಯಾಕಿಂಗ್ ಮಾಡಿ ನಮ್ಮ ರೈತರಿಗೆ  ಕೊಡುತ್ತಿದ್ದಾರೆ.
 • ಸಮರ್ಪಕ ಗೊಬ್ಬರ ನಿರ್ವಹಣಾ ಕ್ರಮವನ್ನು ಪಾಲಿಸಿದರೆ ಈ ಗೊಬ್ಬರಗಳಿಂದ ಕಲ್ಪನೆಗೂ ಮಿಕ್ಕಿದ ಇಳುವರಿ ಪಡೆಯಲು ಸಾಧ್ಯ.

ಸಾಲ್ಯುಬಲ್ ಎಂದರೆ  ಏನು?

ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಕ್ಕೆ  ಇದನ್ನು ಸ್ಸಾಲ್ಯುಬಲ್ ಗೊಬ್ಬರ ಎಂದು ಕರೆಯಲಾಗಿದೆ. ಇದನ್ನು ನೀರಾವರಿಯೊಂದಿಗೆ ಮಿಶ್ರಣ ಮಾಡಿ ಬೆಳೆಗಳಿಗೆ  ಪೂರೈಸುವುದು ಕ್ರಮ.

 • ಈಗ ಚಾಲ್ತಿಯಲ್ಲಿರುವ ಸಾಲ್ಯುಬಲ್ ಗೊಬ್ಬರಗಳ ಕುರಿತಾಗಿ ಹೇಳುವುದಾದರೆ  ಇದು  ಲವಣ ( salt)ಆಧಾರಿತ ಉತ್ಪನ್ನ.
 • ಇದನ್ನು ಇನ್ಸ್ಟಂಟ್ ಕಾಫೀ ತರಹ ಎನ್ನಬಹುದು.
 • ಇದರಲ್ಲಿ ಒಂದೇ ಆಗಿ ಯಾವುದೂ ಇರುವುದಿಲ್ಲ.
 • ಉದಾಹರಣೆಗೆ ಪೊಟ್ಯಾಶಿಯಂ ನೈಟ್ರೇಟ್ ತೆಗೆದುಕೊಂಡರೆ, ಪೊಟಾಶಿಯಂ ಕ್ಲೋರೈಡ್  ಮತ್ತು  ಅಮೋನಿಯಂ ನೈಟ್ರೇಟ್ ಮಿಕ್ಸ್ ಮಾಡಿದಾಗ, ಅಮೋನಿಯಂ  ಕ್ಲೋರೈಡ್  ಸೇರಿಕೊಂಡ ಪೊಟ್ಯಾಶಿಯಂ ನೈಟ್ರೇಟ್ ತಯಾರಾಗುತ್ತದೆ.
 • ಅದರಲ್ಲಿ ಅಮೋನಿಯಂ ಕ್ಲೋರೈಡ್ ಅನ್ನು ಆವೀಕರಣಕ್ಕೊಳಪಡಿಸಿ ಪೊಟ್ಯಾಶಿಯಂ ನೈಟ್ರೇಟ್  ಹುಡಿ  ರೂಪದಲ್ಲಿ ತಯಾರಿಸಲಾಗುತ್ತದೆ.
 • ಇದೇ ರೀತಿಯಲ್ಲಿ ಮೋನೋ ಅಮೋನಿಯಂ ಫೋಸ್ಫೇಟ್,  ಮೊನೋ ಪೊಟ್ಯಾಶಿಯಂ ಫೋಸ್ಫೇಟ್ , ಪೊಟ್ಯಾಶಿಯಂ ಸಲ್ಫೇಟನ್ನು  ತಯಾರಿಸಲಾಗುತ್ತದೆ.

 ಆಮದಾಗುವ ಸಾಲ್ಯುಬಲ್ ಗೊಬ್ಬರ:

 • ಸಾಲ್ಯುಬಲ್ ಗೊಬ್ಬರಗಳಲ್ಲಿ ನಾಲ್ಕು ಬಗೆಯವು ಮಾತ್ರ ಮೂಲ ಉತ್ಪನ್ನಗಳು.
 • ಉಳಿದವುಗಳು ಅದರಲ್ಲೇ ಬೇರೆ ಬೇರೆ ಮಿಶ್ರಣ ಮಾಡಿ ತಯಾರಿಸಲ್ಪಟ್ಟವುಗಳು.
 • ಇದನ್ನು ಟೈಲರ್ ಮೇಡ್ ಪ್ರಿಪರೇಶನ್ ಎನ್ನುತ್ತಾರೆ.
 • ಇವುಗಳಲ್ಲಿ ಹಲವಾರು ತಯಾರಿಕೆಗಳಿದ್ದು,
 • ಒಬ್ಬೊಬ್ಬರು ಒಂದೊಂದು ಕಾಂಬಿನೇಶನ್ ನಲ್ಲಿ  ಉತ್ಪಾದಿಸುತ್ತಾರೆ.
 • ಸಾಮಾನ್ಯವಾಗಿ ಎಲ್ಲರೂ  ತಯಾರಿಸುವುದು 19:19:19    ಮತ್ತು 20:20:20. ಮೂಲ  ತಯಾರಿಕೆ  ಹೊರತಾಗಿ ಉಳಿದವುಗಳಿಗೆ  ಬಣ್ಣವನ್ನು  ಹಾಕಿರುತ್ತಾರೆ.

ಮೂಲ ಗೊಬ್ಬರಗಳು:

 • ಮೂಲ ಗೊಬ್ಬರಗಳಲ್ಲಿ ಏಕೈಕ Single nutrient) ಗೊಬ್ಬರಗಳು ಮತ್ತು ಬಹು ಗೊಬ್ಬರಗಳು (multi nutrient) ಎಂದು ಎರಡು ವಿಧ.
 • ಪೊಟ್ಯಾಶಿಯಂ ನೈಟ್ರೇಟ್ ಇದು ಸಾರಜನಕ ಮತ್ತು ಪೊಟ್ಯಾಶಿಯಂ ಯುಕ್ತ ಗೊಬ್ಬರ.
 • ಇದನ್ನು ಸರಳವಾಗಿ13:00:45  ಕರೆಯುತ್ತಾರೆ.
 • ಇದರಲ್ಲಿ13%  ಸಾರಜನಕ  ಮತ್ತು 45% ಪೊಟ್ಯಾಶಿಯಂ ಇರುತ್ತದೆ. ರಂಜಕ ಇರುವುದಿಲ್ಲ.
 • ಮೊನೋ ಅಮೋನಿಯಂ ಫೋಸ್ಫೇಟ್: ಇದು ಸಾರಜನಕ ಮತ್ತು ರಂಜಕ ಒಳಗೊಂಡ ಗೊಬ್ಬರ.
 • ಇದನ್ನು ಸರಳವಾಗಿ 12:61:00 ಅಥವಾ MAP ಎಂದು ಕೆರೆಯುತ್ತಾರೆ.
 • ಇದರಲ್ಲಿ 12% ಸಾರಜನಕ ಮತ್ತು61% ರಂಜಕ ಇರುತ್ತದೆ.
 • ಮೋನೋ ಪೊಟ್ಯಾಶಿಯಂ ಫೋಸ್ಫೇಟ್  ಇದರಲ್ಲಿ 52% ರಂಜಕ ಮತ್ತು34% ಪೊಟ್ಯಾಶಿಯಂ  ಮಾತ್ರ ಇರುತ್ತದೆ.
 • ಇದನ್ನು ಸರಳ ಭಾಷೆಯಲ್ಲಿ MKP ಎಂದು ಕೆರೆಯುತ್ತಾರೆ.
 • ಇದರಲ್ಲಿ  ರಂಜಕ ಮತ್ತು ಪೊಟ್ಯಾಶಿಯಂ ಇದೆ.
 • ಸಲ್ಫೇಟ್ ಆಫ್ ಪೊಟಾಶ್  ಇದನ್ನು SOP ಎಂದು  ಎನ್ನುತ್ತಾರೆ.
 • ಇದರಲ್ಲಿ 50% ಪೊಟ್ಯಾಶಿಯಂ ಅಂಶ   ಮತ್ತು 17% ಗಂಧಕದ ಅಂಶ ಇರುತ್ತದೆ.
 •  ಕ್ಯಾಲ್ಸಿಯಂ ನೈಟ್ರೇಟ್  ಕ್ಯಾಲ್ಸಿಯಂ ಮತ್ತು ಸಾರಜನಕ ಉಳ್ಳ ಗೊಬ್ಬರ. ಇದು ಸಹ ಆಮದಾಗುವ ಮೂಲ ಗೊಬ್ಬರ.

 ಈ ಗೊಬ್ಬರಗಳು ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಇದನ್ನು ಮೊದಲಾಗಿ ಅಮೇರಿಕಾ ದೇಶದವರು ತಯಾರಿಸಿದರು. ನಂತರ ಅದೇ ತಂತ್ರಜ್ಞಾನದಲ್ಲಿ ಇಸ್ರೇಲ್, ಚೀನಾ ಮುಂತಾದ  ದೇಶಗಳು ತಯಾರಿಸಲು ಪ್ರಾರಂಭಿಸಿದವು.

ಈ ಗೊಬ್ಬರವನ್ನು ಹನಿ ನೀರಾವರಿಯ ಜೊತೆಗೆ ದಿನಂಪ್ರತಿ ಆಥವಾ ಎರಡು ದಿನಕೊಮ್ಮೆ ಬೆಳೆಗಳಿಗೆ ಕೊಡಲಾಗುತ್ತದೆ. ಇದರಲ್ಲಿ ಬೆಳೆಗಳ ಬೆಳವಣಿಗೆಯ ಹಂತಕ್ಕನುಗುಣವಾಗಿ ಆಯ್ಕೆ ಮಾಡಿ  ಸಸ್ಯಗಳಿಗೆ ಪೋಷಕಗಳನ್ನು ಒದಗಿಸಲು ಸಾಧ್ಯ.

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!