ಉತ್ತರ ಭಾರತದ ಚಳಿ – ರಾಶಿ 50,000!- ಚಾಲಿ ಅನುಮಾನ.

ಚಳಿ ಇಳಿಮುಖ – ರಾಶಿ - ಚಾಲಿ 50,000!

ಉತ್ತರ ಭಾರತದಲ್ಲಿ ಚಳಿ ಹೆಚ್ಚಾದಾಗ ಸಂಸ್ಕರಣಾ ಉದ್ದಿಮೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯದ ಕಾರಣ ರಾಶಿ ಮತ್ತು ಚಾಲಿ ಎರಡಕ್ಕೂ ಬೇಡಿಕೆ ಕಡಿಮೆಯಾಗಿತ್ತು. ಈಗ  ಚಳಿ ಕಡಿಮೆಯಾಗಲಿಲ್ಲವಾದರೂ ಕೆಂಪಡಿಕೆ ಮತ್ತೆ ಚೇತರಿಸಿಕೊಳ್ಳಲಾರಂಭಿಸಿದೆ. ಚಾಲಿ ಸ್ಟಾಕು ಹೆಚ್ಚು ಇರುವ ಕಾರಣ ತಕ್ಷಣಕ್ಕೆ ಅನುಮಾನ ಎನ್ನುತ್ತಾರೆ. ಚಳಿ ಇದ್ದರೂ ಅಡಿಕೆಗೆ ಮತ್ತೆ ಬೇಡಿಕೆ ಪ್ರಾರಂಭವಾಗಿದೆ. ಬೆಲೆ ಚೇತರಿಕೆಯ  ಹಾದಿಯಲ್ಲಿದೆ.

ಗುಟ್ಕಾ ಇತ್ಯಾದಿ ಅಡಿಕೆ ಸೇರಿಸಿದ ಉತ್ಪನ್ನ ತಯಾರಿಸುವಾಗ ಅವು ತೇವಾಂಶ ಎಳೆದುಕೊಳ್ಳಬಾರದು.  ವಿಶೇಷ ಚಳಿ, ಇಬ್ಬನಿ ಇದ್ದಾಗ ಅವುಗಳ ಸಂಸ್ಕರಣೆಗೆ ಕಷ್ಟವಾಗುತ್ತದೆ. ಸಿದ್ದ ಉತ್ಪನ್ನ ತಯಾರಕರು ಅಡಿಕೆಯನ್ನು ಬೇಕಾದ ಆಕಾರಕ್ಕೆ ತುಂಡು ಮಾಡಿ ಪಾನ್ ಮಸಾಲೆ ಮಿಶ್ರಣ ಮಾಡುವ ಮುಂಚೆ ಅದನ್ನು ಒಮ್ಮೆ  ಡ್ರೈಯರ್ ನಲ್ಲಿ ಹಾಕಿ ಒಣಗಿಸುತ್ತಾರೆ. ನಂತರ ಮಿಶ್ರಣ ಮಾಡಿದರೆ ಅದು ಯಾವಾಗಲೂ ಹುಡಿಯಾಗಿ ಇರುತ್ತದೆ. ಸ್ಯಾಚೆಗಳಲ್ಲಿ ತುಂಬುವಾಗ ಅದು ಸ್ವಲ್ಪ ತೇವಾಂಶ ಇದ್ದರೂ ಹಾಳಾಗುತ್ತದೆ. ಹಾಗಾಗಿ ಅಂತಹ ವಾತಾವರಣ ಇರುವಾಗ ತಯಾರಿಕೆ ಕಡಿಮೆ ಮಾಡುತ್ತಾರೆ. ಹಾಗೆಂದು ಎಷ್ಟು ದಾಸ್ತಾನು ಇಟ್ಟುಕೊಳ್ಳಲು ಸಾಧ್ಯ. ಕೆಲವು ಸಮಯದಲ್ಲಿ ಅದು ಮುಗಿಯುತ್ತದೆ. ಆಗ ಮತ್ತೆ ಮೂಲವಸ್ತು ಖರೀದಿ ಮಾಡಲೇಬೇಕು. ಉತ್ತರ ಭಾರತದ ಖರೀದಿದಾರರು ಅಡಿಕೆ ಬೇಕು ಎಂದರೆ ಸಾಕು, ಬೆಲೆ ಏರಿಕೆಯಾಗುತ್ತದೆ.

ನಾವು ಈ ಹಿಂದೆ ಹಲವಾರು ಬಾರಿ ಹೇಳಿದ್ದುಂಟು. ಬೆಲೆ ಇಳಿಕೆ ಆದರೆ ಮತ್ತೆ ಏರಿಕೆ ಆಗಿಯೇ ಆಗುತ್ತದೆ ಎಂದು. ಹಾಗೆಯೇ ಏರಿಕೆ ಆದದ್ದು ಹಾಗೆ ಮತ್ತೆ ಮೇಲೇರುತ್ತಾ ಇರುವುದಿಲ್ಲ. ಇಳಿಕೆಯೂ ಆಗುತ್ತದೆ. ಇದೆಲ್ಲಾ 5-10-15 % ಪ್ರಮಾಣದಲ್ಲಿ ಇರುತ್ತದೆ. ಸುಮಾರಾಗಿ 2 ತಿಂಗಳು ಇಳಿಕೆಯಾದರೆ ಮತ್ತೆ 1-2 ತಿಂಗಳು ಏರಿಕೆ ಮತ್ತೆ ಇಳಿಕೆ ಇದು ವ್ಯಾಪಾರದ ಚಕ್ರ. ಎಲ್ಲಾ ಬೆಳೆಗಾರರಿಗೂ ಅತ್ಯಧಿಕ ದರ ಸಿಗುವುದಿಲ್ಲ. ಎಲ್ಲಾ ವ್ಯಾಪಾರಿಗಳೂ ಅತ್ಯಧಿಕ ದರಕ್ಕೆ  ಮಾರಾಟ ಮಾಡಿ ಭಾರೀ  ಲಾಭ ಮಾಡಿಕೊಳ್ಳುವುದಿಲ್ಲ. ಎಲ್ಲರೂ ಸರಾಸರಿ ಲಾಭಮಾಡಿಕೊಳ್ಳುತ್ತಾರೆ. ಹಾಗೆಂದು ಬೆಲೆ ಏರಿಕೆ ಆಗುವಾಗ ಇನ್ನೂ ಇನ್ನೂ ಏರಲಿ ಎಂದು ಕಾಯುವುದಲ್ಲ. ಏರಿಕೆ ಪ್ರಾರಂಭವಾದ ನಂತರ ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಾ ಇರುವುದು ಜಾಣತನ.

ಈಗಿನ ಪರಿಸ್ಥಿತಿ ಹೀಗಿದೆಯಂತೆ:

ಕಳೆದ 2-3 ತಿಂಗಳಿನಿಂದ ಉತ್ತರ ಭಾರತದಿಂದ ಬೇಡಿಕೆ ಕಡಿಮೆಯಂತೆ. ಒತ್ತಾಯದಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಇತ್ತು ಎನ್ನುತ್ತಾರೆ. ನಗದು ಸಹ ಬರುವುದು ನಿಧಾನವಾಗಿತ್ತು. ಆ ಕಾರಣದಿಂದ ಖಾಸಗಿಯವರ  ದರ ಹಿಂದೆ ಇತ್ತು. ಮಾರುಕಟ್ಟೆಯಲ್ಲಿ ಬಿಡ್ಡಿಂಗ್ ಬಹಳ ಕಡಿಮೆಗೆ ಆಗುತ್ತಿತ್ತು. ಇದಕ್ಕೆಲ್ಲಾ ಕಾರಣ   ಒಂದು ದರ ಕಡಿಮೆ ಮಾಡಿ ಖರೀದಿ ಮಾಡುವುದು. ಆದರೆ ಬೆಳೆಗಾರರು ಈಗ ಹಿಂದಿನಂತಲ್ಲ. ಅಂಜಿಕೊಂಡು ಮಾರಾಟ ಮಾಡುವುದಿಲ್ಲ. ಹಾಗಾಗಿ ದರ ಇಳಿಸಿ ಖರೀದಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆ ಬರುವುದಿಲ್ಲ. ಹಾಗಾಗಿ ಮತ್ತೆ ಏರಿಕೆ. ಇದರಲ್ಲಿ ಮಾಲು ತರಿಸುವುದು ಹಾಗೆಯೇ ತಮ್ಮ ಸ್ಟಾಕು ಕ್ಲೀಯರೆನ್ಸ್ ಸಹ ಸೇರಿಕೊಂಡಿದೆ. ಗುಟ್ಕಾ ಕ್ಕೆ ಅಡಿಕೆ ಬೇಕು ಎಂಬ ಸ್ಥಿತಿ ಉಂಟಾಗಿದೆ. ಹಾಗಾಗಿ ದರ ಈ ಸಲ 50,000 ತನಕ ಏರಿಕೆ ಆಗಬಹುದು ಎಂಬ ಆಶಯ ಇದೆ. ಇದಕ್ಕೆ ಪೂರಕವಾಗಿ ಹೊಸನಗರದಲ್ಲಿ ಗರಿಷ್ಟ 47670  ಸರಾಸರಿ 46815 ಕ್ಕೆ ಖರೀದಿ ನಡೆದಿದೆ

ಚಾಲಿ ಅಡಿಕೆ ಸ್ಥಿತಿ:

ಚಾಲಿ ಅಡಿಕೆಗೆ ಸಂಕ್ರಾಂತಿ ನಂತರ ದರ ಏರಿಕೆ ಆಗಬಹುದು

ಚಾಲಿ ಅಡಿಕೆಗೆ ಸಂಕ್ರಾಂತಿ ನಂತರ ದರ ಏರಿಕೆ ಆಗಬಹುದು ಎಂಬ ಸೂಚನೆ ಮುಂಚಿತವಾಗಿ ದೊರೆತ ಕಾರಣ ಜನ ಸಂಕ್ರಾಂತಿಯ ಸಮಯಕ್ಕೆ ಕಾಯುತ್ತಿದ್ದಾರೆ. ಸಂಕ್ರಾಂತಿಗೆ ಇನ್ನು  ಒಂದೇ ವಾರ ಇರುವಾಗ ನಿನ್ನೆಯಿಂದ ಸ್ವಲ್ಪ ದರ ಏರಿಕೆ ಪ್ರಾರಂಭವಾಗಿದೆ. ಈಗ ಏರಿದ ದರ ಶೇ.1 ರಷ್ಟು ಮಾತ್ರ. ಇನ್ನೂ ಇದು ಶೇ.5 ರ ತನಕ ಸಧ್ಯವೇ ಏರಿಕೆ ಆಗಬಹುದು ಎಂಬ ಸುದ್ದಿಗಳಿವೆ.ಕ್ಯಾಂಪ್ಕೋ ಶಾಖೆಗಳಲ್ಲಿ ದಾಸ್ತಾನು ಹಾಗೇ ಇರುವ ಕಾರಣ ಸ್ವಲ್ಪ ಅನುಮಾನವೂ ಇದೆ. ಕೆಂಪಡಿಕೆ ದರ ಏರಿಕೆಯಾಗಿದ್ದರೂ, ಕರಿಗೋಟು, ಪಟೋರ್ ಗಳಿಗೆ ಅದಕ್ಕೆ ಅನುಗುಣವಾಗಿ ದರ ಏರಿಕೆ ಆಗಲಿಲ್ಲ. ಈಗಿನ ಕೆಂಪಡಿಕೆ ದರಕ್ಕೆ ಹೋಲಿಸಿದರೆ ದರ ಏರಿಕೆ ಆಗಬೇಕಿತ್ತು ಚಾಲಿಯಲ್ಲಿ ಹೊಸತಕ್ಕೆ ರೂ. 5 ಏರಿಕೆ (38500 ರಿಂದ 39000) ಮತ್ತು ಹಳೆಯದಕ್ಕೆ ರೂ.5 (49000 ದಿಂದ 49500) ತನಕ ಏರಿಕೆ ಆಗಿದೆ. ಡಬ್ಬಲ್ ಚೋಲ್ ದರ ಸ್ಥಿರವಾಗಿದೆ. ಈ ವಾರದಲ್ಲಿ ಮತ್ತೆ ರೂ. 5  ರಂತೆ ಏರಿಕೆ ಆಗಬಹುದು ಎಂಬ ಸುದ್ದಿ ಇದೆ.ಶಿರಸಿ, ಸಾಗರ, ಸಿದ್ದಾಪುರಗಳಲ್ಲಿ ಚಾಲಿ ದರ ಸ್ವಲ್ಪ ಏರಿದೆ.

ಕೆಂಪಡಿಕೆ ಮಾರುಕಟ್ಟೆ ಸ್ಥಿತಿ:

ಕಳೆದ ಎರಡು ವಾರಗಳಿಂದ ದಿನಕ್ಕೆ 1% ದಂತೆ ದರ ಏರಿಕೆ ಕಾಣುತ್ತಿದೆ.ದರ ಬೀಳುತ್ತದೆ ಎಂಬ ವದಂತಿಯ ನಡುವೆಯೇ 39,000 ಕ್ಕೆ ಇಳಿದಿದ್ದ ಧಾರಣೆ 42,000  ಏರಿತು. ಆ ನಂತರ ಸ್ವಲ್ಪ ಸ್ವಲ್ಪವೇ ಏರುತ್ತಾ ಈಗ ಸರಾಸರಿ 46,000 ಕ್ಕೆ ಏರಿಕೆಯಾಗಿದೆ. ಯಲ್ಲಾಪುರದಲ್ಲಿ 52,500 ತನಕ ಏರಿಕೆಯಾದ ಕಾರಣ ಉಳಿದೆಡೆಯೂ ಎರಡು ಮೂರು ವಾರದ ಒಳಗೆ 50,000 ತನಕ ಏರಿಕೆ ಆಗಬಹುದು. ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣ ಕಡಿಮೆ. ಇಂದು ಶಿವಮೊಗ್ಗ ಮಾರುಕಟ್ಟೆಗೆ 3700 ಚೀಲಗಳಷ್ಟು ಅಡಿಕೆ ಬಂದಿದೆ. ತೀರ್ಥಹಳ್ಳಿಯಲ್ಲಿ ನಿನ್ನೆ ರಾಶಿ ಅಡಿಕೆಗೆ 47290 ಗರಿಷ್ಟ ಬೆಲೆ ದಾಖಲಾಗಿದೆ. ಇಂದು ಬಹುತೇಕ ಎಲ್ಲಾ ಕಡೆ 47,000 ಆಗಿದೆ.ಹಾಗಾಗಿ ರಾಶಿ ಬೆಲೆ ಸದ್ಯವೇ ಮತ್ತೆ 50,000 ತನಕ ತಲುಪುವ ಸೂಚನೆ ಕಾಣಿಸುತ್ತಿದೆ.

ಎಲ್ಲೆಲ್ಲಿ ಯಾವ ದರ ಇತ್ತು:

ಚಾಲಿ ಅಡಿಕೆ:

 • ಬಂಟ್ವಾಳದಲ್ಲಿ ಹೊಸ ಅಡಿಕೆ: 22500, 38500, 38000
 • ಹಳೆ ಅಡಿಕೆ: 48000, 54500, 51500
 • ಬೆಳ್ತಂಗಡಿ: ಹೊಸತು 29500, 38000, 34500
 • ಹಳತು: 41880, 48200, 44000
 • ಕಾರ್ಕಳ ಹೊಸತು: 30000, 39000, 35000
 • ಹಳತು: 40000, 54500, 48000
 • ಕುಂದಾಪುರ ಸಿಂಗಲ್ ಚೋಲ್ 40000, 49500, 49000
 • ಹೊಸತು: 30000, 37500, 37000
 • ಪುತ್ತೂರು ಹೊಸತು: 33000, 39000, 36000
 • ಹಳೆಯದು: 40000, 49500, 49000
 • ಡಬ್ಬಲ್ ಚೋಲ್:50000-54500
 • ಸುಳ್ಯ: ಹೊಸತು 33000, 39000, 36000
 • ಹಳತು: 40000, 49500, 49000
 • ವಿಟ್ಲ: ಹೊಸತು:33000, 39500, 36000
 • ಹಳೆಯದು: 40000, 49500, 49000
 • ಹೊಸನಗರ: 38539, 38539, 38539
 • ಕುಮಟಾ: ಹಳೆ ಚಾಲಿ: 37999, 41799, 40819
 • ಹೊಸ ಚಾಲಿ, 33999, 36669, 35749
 • ಸಾಗರ: 33110, 38701, 37629
 • ಸಿದ್ದಾಪುರ ಹಳೆ ಚಾಲಿ: 38899, 42099, 41899
 • ಹೊಸತು: 32200, 33339, 32200
 • ಸಿರ್ಸಿ: ಹಳೆ ಚಾಲಿ: 39030, 43801, 41839
 • ಯಲ್ಲಾಪುರ ಚಾಲಿ: 35500, 42500, 41499
 • ಹೊಸ ಚಾಲಿ:  31500, 34319, 33299
 • ಸಾಗರ ಸಿಪ್ಪೆ ಗೋಟು: 21399-22050

ಕೆಂಪಡಿಕೆ ಮಾರುಕಟ್ಟೆ:

ತೀರ್ಥಹಳ್ಳಿಯಲ್ಲಿ ಇಂದು ರಾಶಿ ಅಡಿಕೆಗೆ 47290 ಗರಿಷ್ಟ ಬೆಲೆ
 • ಭದ್ರಾವತಿ ರಾಶಿ:44899, 46809, 45886
 • ಚೆನ್ನಗಿರಿ ರಾಶಿ: 45799, 47100, 46467
 • ಚಿತ್ರದುರ್ಗ ಅಪಿ: 46719, 47129, 46949
 • ಬೆಟ್ತೆ:, 33800, 34200, 34000
 • ಕೆಂಪುಗೋಟು: 29579, 29999, 29789
 • ರಾಶಿ:  46239, 46669, 46459
 • ದಾವಣಗೆರೆ: 22100, 46269, 44928
 • ಹಸಿ ಅಡಿಕೆ ಮಡಿಕೇರಿ: 5000, 5000, 5000
 • ಹೊನ್ನಾಳಿ ರಾಶಿ: 46099, 46099, 46099
 • ಹೊಸನಗರ ಕೆಂಪುಗೋಟು:29821, 36849, 35599
 • ರಾಶಿ: 44809, 47670, 46819
 • ಕೊಪ್ಪ ಬೆಟ್ಟೆ: 49399, 51399, 50669
 • ಗೊರಬಲು: 32199, 34415, 33296
 • ರಾಶಿ: 41199, 45709, 44876
 • ಸರಕು:64003, 80053, 72348
 • ಮಡಿಕೇರಿ ಕಚ್ಚಾ: 43805, 43805, 43805
 • ಸಾಗರ ಬಿಳೇ ಗೋಟು:18289, 30110, 29299
 • ಕೆಂಪುಗೋಟು: 23989, 36299, 35699
 • ರಾಶಿ: 40199, 46579, 45699
 • ತೀರ್ಥಹಳ್ಳಿ: ಸರಕು:60000-82,000
 • ರಾಶಿ:45599-47298
 • ಬೆಟ್ಟೆ:49009-54009
 • ಗೊರಬಲು: 34509-36090
 • ಶಿವಮೊಗ್ಗ ಬೆಟ್ಟೆ: 46509, 53839, 52799
 • ಗೊರಬಲು: 16199, 35600, 34779
 • ರಾಶಿ: 42501, 46899, 46299
 • ಸರಕು: 46366, 79050, 70200
 • ಸಿದ್ದಾಪುರ ಬಿಳೇಗೋಟು: 30399, 32929, 32399
 • ಕೆಂಪುಗೋಟು:, 30699, 32109, 31399
 • ರಾಶಿ: 42899, 46199, 45989
 • ತಟ್ಟೆ ಬೆಟ್ಟೆ: 40099, 43899, 40099
 • ಸಿರಾ ಇತರ: 9000, 45000, 32782
 • ಸಿರ್ಸಿ ಬೆಟ್ಟೆ: 37069, 42999, 41273
 • ಬಿಲೇ ಗೋಟು: 24299, 35600, 31399
 • ಕೆಂಪುಗೋಟು:34031, 34900, 34466
 • ರಾಶಿ: 44199, 46399, 45194
 • ಹಸಿ ಅಡಿಕೆ: 4800, 5761, 5599
 • ಸೊರಬ ರಾಶಿ: 44509, 46509, 46111
 • ತುಮಕೂರು ಇತರ:, 44800, 46200
 • ಯಲ್ಲಾಪುರ ಅಪಿ: 56379, 58895, 57165
 • ಬಿಳೇ ಗೋಟು: 24699, 35611, 32619
 • ಕೊಕಾ: 14809, 29199, 24699
 • ಕೆಂಪುಗೋಟು:26899, 35617, 32600
 • ರಾಶಿ: 46089, 52515, 49799
 • ತಟ್ತೆ ಬೆಟ್ಟೆ, 36699, 45799, 43899

ಬೆಳೆಗಾರರು ಏನು ಮಾಡಬೇಕು:

ಈಗಾಗಲೇ ಚಾಲಿ ಅಡಿಕೆಗೆ ಬೇಡಿಕೆ ಇದೆ. ಆಮದು ಸಹ ಹೆಚ್ಚು ಆಗುತ್ತಿಲ್ಲ. ಮಕರ ಸಂಕ್ರಮಣದ ನಂತರ ದರ ಏರಬಹುದು ಎಂಬ ಸುದ್ದಿ ಇರುವ ಕಾರಣ ಆ ತನಕ ಮಾರಾಟ ಮುಂದೂಡಿ. ಹಳೆಯ ಚಾಲಿ ಮಾರಾಟ ಮಾಡಿ. ಹೊಸತನ್ನು ದಾಸ್ತಾನು ಇಟ್ಟುಕೊಳ್ಳಿ. ಈ ವರ್ಷ ಅಡಿಕೆ ಹಾಳಾದ ಪ್ರಮಾಣ ಕಡಿಮೆ ಇರುವ ಕಾರಣ ಹೊಸತಕ್ಕೂ  ಹಳೆಯದಕ್ಕೂ  ಈಗ ಇರುವ ಕ್ವಿಂಟಾಲಿಗೆ ರೂ.10000  ಬೆಲೆ ಅಂತರ ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ.  ಹಾಗಾಗಿ ಹೊಸತನ್ನು ಉಳಿಸಿಕೊಂಡು ಹಳೆಯದನ್ನು ಮಾರಾಟ ಮಾಡಿ.ಮಾರುಕಟ್ಟೆಯಲ್ಲಿ ಖಾಸಗಿಯವರ ದರ ರೂ.10 ಹೆಚ್ಚು ಇದ್ದಾಗ ಬೇಡಿಕೆ ಚೆನ್ನಾಗಿದೆ ಎಂದರ್ಥ. ಆ ಸಮಯದಲ್ಲಿ ಮಾರಾಟಕ್ಕೆ ಪ್ರಾರಂಭಿಸಿ. ಆಗ ಸ್ಪರ್ಧೆ ಇರುವ ಕಾರಣ “ಗುಣಮಟ್ಟ” ದ ಹೆಸರಿನಲ್ಲಿ ದರ ಕಡಿಮೆ ಸಿಗುವ ಸಾಧ್ಯತೆ ಕಡಿಮೆ.

ಸ್ವಲ್ಪ ಸ್ವಲ್ಪವೇ ಮಾರಾಟ ಮಾಡಿ. ಕೆಂಪಡಿಕೆ ಬೆಳೆಗಾರರು 46,000 ಸರಾಸರಿ ಧಾರಣೆ ಬಂದಾಗ ಸ್ವಲ್ಪ ಸ್ವಲ್ಪವೇ ಮಾರಾಟ ಮಾಡಿ. 50,000 ತಲುಪುವ ವರೆಗೂ ಮಾರಾಟಕ್ಕೆ ಉಳಿಸಿಕೊಳ್ಳಿ. ನಂತರವೂ 25%  ದಷ್ಟಾದರೂ ಉಳಿಸಿಕೊಂಡು ಮಾರಾಟ ಮಾಡಿ.  ಈ ವರ್ಷದ ಬೆಳೆ ಸುಮಾರು 15% ಕಡಿಮೆ ಎಂಬ ಸುದ್ದಿ ಇದೆ. ಹಾಗಾಗಿ ಬೆಲೆ ಬರಬಹುದು.

 

Leave a Reply

Your email address will not be published. Required fields are marked *

error: Content is protected !!