1 ಎಕ್ರೆಗೆ 1000 ಅಡಿಕೆ ಸಸಿ-ವಿಶಿಷ್ಟ ವಿಧಾನದ ಅಡಿಕೆ ಬೇಸಾಯ.

1 ಎಕ್ರೆಗೆ 1000 ಅಡಿಕೆ ಸಸಿ-ವಿಶಿಷ್ಟ ವಿಧಾನದ ಅಡಿಕೆ ಬೇಸಾಯ.

1 ಎಕ್ರೆ ಅಡಿಕೆ ಬೆಳೆಸುವವರು ಸಾಮಾನ್ಯವಾಗಿ 500 ಅಡಿಕೆ ಸಸಿಗಳನ್ನು ನೆಡುತ್ತಾರೆ. ಅದರ ಬದಲು ಈ ರೀತಿಯ ವಿಶೇಷ ಅಂತರದ ಅಡಿಕೆ ಬೇಸಾಯದಲ್ಲಿ ಹೆಚ್ಚು ವಿಸ್ತೀರ್ಣ ಇಲ್ಲದೆ ಅಡಿಕೆ ಸಸಿಗಳನ್ನು ಹಿಡಿಸಿ ಅಧಿಕ ಫಸಲು ಪಡೆಯಬಹುದು. ಇಲ್ಲಿ ನೀರು, ಗೊಬ್ಬರ, ಶ್ರಮ ಉಳಿತಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಎದುರಾಗುವ ತೋಟ ನಿರ್ವಹಣೆ ಮೇಲ್ವಿಚಾರಣೆ ಸಮಸ್ಯೆಗೆ ಇದು ಉತ್ತಮ ಬೇಸಾಯ ವಿಧಾನ ಎನ್ನಿಸಬಲ್ಲದು. ಅಡಿಕೆ ತೋಟ ಎಂದರೆ ಸಾಲಾಗಿ ಸಸಿಗಳನ್ನು ನೆಡುವುದು, ಪರಸ್ಪರ ನಿರ್ಧಿಷ್ಟ ಅಂತರ. ಅದರಲ್ಲೂ ಚದರ ಚೌಕ…

Read more
ಕೆಂಪಡಿಕೆ ಧಾರಣೆ 49000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49,000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49000 ಸಮೀಪಕ್ಕೆ ತಲುಪಿದೆ. ಇನ್ನೂ ಏರಿಕೆಯಾಗಬಹುದು ಎಂಬ ಸುದ್ದಿಗಳಿವೆ. ಕೆಂಪಡಿಕೆ ಏರಿದರೆ ಸಹಜವಾಗಿ ಚಾಲಿಯೂ ಏರಿಕೆಯಾಗಲೇಬೇಕು. ಈಗಾಗಲೇ ಚಾಲಿ ದಾರಣೆ ತುಸು ಏರಲಾರಂಭಿಸಿದೆ. ಇನ್ನೂ ಸ್ವಲ್ಪ ಏರಿಕೆ ಸಾಧ್ಯತೆಗಳಿವೆ. ಉತ್ಪಾದನಾ ಕ್ಷೇತ್ರದಿಂದ ಬೇಡಿಕೆ ಪ್ರಾರಂಭವಾಗಿದೆ. ಧೀರ್ಘ ಕಾಲದವರೆಗೆ ದರ ಇಳಿಕೆ ಹಾದಿಯಲ್ಲಿದ್ದ ಕಾರಣ ಈ ಬಾರಿ ದರ ಏರಿಕೆ ಸ್ವಲ್ಪ ಹೆಚ್ಚು ಸಮಯದ ತನಕ ಮುಂದುವರಿಯಬಹುದು ಎಂಬ ಲೆಕ್ಕಾಚಾರ ಇದೆ. ಕೆಂಪಡಿಕೆ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಇದೆ. ಹಾಗಾಗಿ ದರ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದೆ….

Read more
ಏರಿಕೆಯತ್ತ ಅಡಿಕೆ – ಕರಿಮೆಣಸು ಧಾರಣೆಯೂ ಏರಿಕೆ.

ಏರಿಕೆಯತ್ತ ಅಡಿಕೆ – ಕರಿಮೆಣಸು ಧಾರಣೆಯೂ ಏರಿಕೆ.   

ಅಡಿಕೆ ಧಾರಣೆ ಇನ್ನೇನು ನೆಗೆದು ಬೀಳುತ್ತದೆಯೋ ಎಂಬ ಅನುಮಾನ ಉಂಟಾಗಿತ್ತು.ಅದರೆ ಕೆಲವೇ ದಿನದಲ್ಲಿ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಜೊತೆಗೆ ಕರಿಮೆಣಸೂ ಸಹ. ನಿನ್ನೆಯೇ ಖಾಸಗಿ ವರ್ತಕರು ಹಳೆ ಅಡಿಕೆ, ಡಬ್ಬಲ್ ಚೋಳ್ ಹಾಗೂ ಹೊಸ ಅಡಿಕೆಗೆ ದರ ಎರಿಸಿದ್ದಾರೆ. ಇಂದು ಕ್ಯಾಂಪ್ಕೋ ಸಹ ಏರಿಕೆ ಮಾಡಿದೆ. ಕೆಂಪಡಿಕೆ ಮಾರುಕಟ್ಟೆ ಸ್ಥಿರವಾಗಿದ್ದು, ಮುಂದಿನ ದಿನಗಳಲ್ಲಿ ಅದೂ ಸ್ವಲ್ಪ ಏರಿಕೆ ಆಗುವ ಸಂಭವ ಇದೆ. ಏರಿಕೆಗೆ ಕಾರಣ ಅಡಿಕೆ ಅವಕ ಕಡಿಮೆಯಾದದ್ದು ಎನ್ನುತ್ತಾರೆ ವರ್ತಕರು. ಅಡಿಕೆ ಧಾರಣೆ ಇಳಿಕೆಯಾದಾಗ …

Read more
ಎಲೆಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ. ಯಾಕೆ ಗೊತ್ತೇ?

ಸಿಂಪರಣೆಯಿಂದ ಎಲೆ ಚುಕ್ಕೆರೋಗ ವಾಸಿ ಅಸಾಧ್ಯ. ಯಾಕೆ?

ಅಡಿಕೆಗೆ ಬಾದಿತವಾದ ಎಲೆ ಚುಕ್ಕೆರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ.  ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು  ಪ್ರಕೃತಿಯೇ ಸಹಕರಿಸಬೇಕು. ಎಲೆ ಚುಕ್ಕೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ …

Read more
ಅಡಿಕೆ ಮಾರುಕಟ್ಟೆ ಕುಸಿಯುತ್ತಿದೆ ! ಮತ್ತೆ ಯಾವಾಗ ಚೇತರಿಕೆ ಆಗಬಹುದು?

ಅಡಿಕೆ ಮಾರುಕಟ್ಟೆ ಕುಸಿಯುತ್ತಿದೆ ! ಮತ್ತೆ ಯಾವಾಗ ಚೇತರಿಕೆ ಆಗಬಹುದು?   

ಅಡಿಕೆ ಮಾರುಕಟ್ಟೆ ಅನಿರೀಕ್ಷಿತವಾಗಿ ಕುಸಿಯಲಾರಂಭಿಸಿದೆ. 45000 ದಿಂದ 40500 ಕ್ಕೆ ಕುಸಿಯಿತು. ಮುಂದಿನ ವಾರ ಮತ್ತೆ ಕುಸಿತವಾಗುವ ಸೂಚನೆ  ಇದೆ. ಈ ಕುಸಿತ ತಾತ್ಕಾಲಿಕವೇ ಅಥವಾ ಮತ್ತೆ ಏತರಿಕೆ ಆಗಹುದುದೇ ಎಂಬ ಕುತೂಹಲ ನಮ್ಮೆಲ್ಲರದ್ದು. ಒಂದು ತಿಂಗಳ ತನಕ ಈ ಅಸ್ತಿರತೆ ಮುಂದುವರಿಯಲಿದ್ದು, ಮತ್ತೆ ಚೇತರಿಕೆ ಆಗುವ ಸಾಧ್ಯತೆ  ಇದೆ. ಬೆಳೆಗಾರರು ನಿರಾಶರಾಗಬೇಕಾಗಿಲ್ಲ. ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣುವ ಸೂಚನೆ ಇಲ್ಲ ಎಂಬುದಾಗಿ ಸುದ್ದಿಗಳು ಹರಡುತ್ತಿವೆ. ಆದರೆ ಕೆಲವು ಮೂಲಗಳ ಪ್ರಕಾರ ಮತ್ತೆ ಚೇತರಿಕೆ ಆಗುವ ಸಾಧ್ಯತೆ …

Read more
Why are areca nut leaves turn yellow

Why are areca nut leaves turn yellow?

Arecanut leaves are the indicators of its health and yield. The greener, vigorous leaves are very important in their all-growth phase. But this year almost all farm become yellow. Why? In this video, we can discuss the reason for the yellowing of areca nut leaves. Everywhere we can see this situation. Now after the rain,…

Read more
ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಈಗ ಇಂತಹ ಕಾಯಿಗಳು ಉದುರಿ ಬೀಳುತ್ತಿವೆ. ಸರಿಯಾಗಿ ಬಲಿತು ಹಣ್ಣಾಗಿರದ, ಮೇಲ್ಮೈಯಲ್ಲಿ ಸುಟ್ಟಂತಹ ಕಲೆ ಇರುವ ಈ ಅಡಿಕೆಗೆ  ಗುಣಮಟ್ಟ ಇರುವುದಿಲ್ಲ. ಸಿಪ್ಪೆ ಅಂಟಿರುವ ಉಳ್ಳಿ ಅಡಿಕೆ ಆಗಬಹುದು.  ಒಡೆದ ಪಟೋರಾವೂ ಆಗಬಹುದು. ಇಲ್ಲವೇ ಕೆಂಪು ಬಣ್ಣದ ಕರಿಗೋಟು ಆಗಬಹುದು. ಹೀಗಾಗುವುದಕ್ಕೆ ಕಾರಣ ಏನು ಎಂಬುದು ಬಹಳಷ್ಟು ಕೃಷಿಕರಿಗೆ ಗೊತ್ತಿಲ್ಲ. ಇದು ಹೊಸ ಸಮಸ್ಯೆ ಅಲ್ಲವಾದರೂ ಈಗೀಗ ಇದರ ತೊಂದರೆ ಹೆಚ್ಚಾಗುತ್ತಿದೆ. ಅಡಿಕೆ ಬೆಳೆಗೆ ಈಗೀಗ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ಇದಕ್ಕೆ ಕಾರಣ…

Read more
ಬೆಳೆಗಾರರೇ ಎಚ್ಚರ! ಅಡಿಕೆ ಬೆಳೆ ಭವಿಷ್ಯ ಭಾರೀ ಅತಂತ್ರವಾಗಿದೆ

ಬೆಳೆಗಾರರೇ ಎಚ್ಚರ! ಅಡಿಕೆ ಬೆಳೆ ಭವಿಷ್ಯ ಭಾರೀ ಅತಂತ್ರವಾಗಿದೆ.

ಅಡಿಕೆ ಬೆಳೆ ಮುಂದಿನ ದಿನಗಳಲ್ಲಿ ಏನಾಬಗಬಹುದು, ಭವಿಷ್ಯದಲ್ಲಿ ಹೀಗೇ ಬೆಲೆ ಉಳಿಯಬಹುದೇ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಎಚ್ಚರ! ಅಡಿಕೆ ಭವಿಷ್ಯ ಭಾರೀ ಅತಂತ್ರವಾಗಿದೆ.ಪ್ರತೀಯೊಬ್ಬ ಕೃಷಿಕನ ಮನಸ್ಸಿನಲ್ಲೂ ಈ ಒಂದು ವಿಚಾರ ಕೊರೆಯುತ್ತಿದೆಯಾದರೂ  ಹೆಚ್ಚಿನವರು ಇನ್ನೂ ಪ್ರದೇಶ ವಿಸ್ತರಣೆ ಮಾಡುತ್ತಲೇ ಇದ್ದಾರೆ. ಆದರೆ ಅಡಿಕೆ ಈಗಾಗಲೇ ಸಂತೃಪ್ತ ಸ್ಥಿತಿಗೆ ಮುಟ್ಟಿದಂತಿದೆ. ಈ ಹಿಂದೆಯೂ ಮುಂದೆ ಅಡಿಕೆಗೆ ಭವಿಷ್ಯವಿಲ್ಲ. ನೆಡಬೇಡಿ ಎಂದು ಹೇಳುತ್ತಿದ್ದರು. ಆದರೆ  ಒಮ್ಮೆ ಬೆಲೆ ಕುಸಿದದ್ದೂ ಮತ್ತೆ ಮೇಲೇರಿತು. ಶ್ರೀಯುತ ಅಶೋಕ್ ಕುಮಾರ್ ಕರಿಕಳ ಅವರ…

Read more
ಅಡಿಕೆ ಸಸಿ ನೆಡುವವರು ಗಮನಿಸಿ- ಇಂತಹ ಅಡಿಕೆ ಸಸಿ ನೆಡಬೇಡಿ.

ಅಡಿಕೆ ಸಸಿ ನೆಡುವವರು ಗಮನಿಸಿ- ಇಂತಹ ಅಡಿಕೆ ಸಸಿ ನೆಡಬೇಡಿ.

ಅಡಿಕೆ ತೋಟ ಮಾಡಿದರೆ ನಮ್ಮ ಆರ್ಥಿಕ ಸ್ಥಿತಿ ಸ್ವಲ್ಪವಾದರೂ ಸುಧಾರಿಸಬಹುದು ಎಂದು ಎಲ್ಲರೂ ಈ ಕೃಷಿ ಮಾಡಲಾರಂಭಿಸಿದ್ದಾರೆ. ಬೆಳೆಯುವವರು ಹೆಚ್ಚಾದಂತೆ ಅದಕ್ಕನುಗುಣವಾಗಿ ಸಸಿಗಳೂ ಲಭ್ಯವಾಗಬೇಕು. ಹಲವಾರು ನರ್ಸರಿಗಳು ಈ ಕೆಲಸವನ್ನು ಮಾಡುತ್ತಿವೆ. ಸಸಿ ನರ್ಸರಿಯದ್ದಿರಲಿ, ಸ್ವಂತ ತಯಾರಿಸಿದ್ದು ಇರಲಿ, ನೀವು ನೆಡಲು ಉದ್ದೇಶಿಸಿರುವ ಗಿಡದಲ್ಲಿ ಈ ಚಿನ್ಹೆಗಳಿದ್ದರೆ ಅಂತಹ ಸಸಿ ನೆಡಬೇಡಿ. ಇದು ಎಲೆ ಚುಕ್ಕೆ ರೋಗ ತಗಲಿದ ಸಸಿಯಾಗಿರುತ್ತದೆ. ಇದನ್ನು ನೆಟ್ಟರೆ ಎಲೆ ಚುಕ್ಕೆ ರೋಗ ನಿಮ್ಮ ತೋಟಕ್ಕೆ ಹೊಸ ಅತಿಥಿ ಬಂತೆಂದೇ ತಿಳಿಯಿರಿ. ಅಡಿಕೆ…

Read more
ಸಧ್ಯವೇ ಅಡಿಕೆ ಮಾರುಕಟ್ಟೆ ಕುಸಿತ ಸಾಧ್ಯತೆ.

ಸಧ್ಯವೇ ಅಡಿಕೆ ಮಾರುಕಟ್ಟೆ ಕುಸಿತ  ಸಾಧ್ಯತೆ.

ಅಡಿಕೆ ಮಾರುಕಟ್ಟೆಯಲ್ಲಿ ದರ ಕುಸಿತದ ಸುದ್ದಿ ಹಬ್ಬುತ್ತಿದೆ. ಕೆಂಪಡಿಕೆ  ಕೊಯಿಲು ಪ್ರಾರಂಭವಾಗಿದೆ. ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲೂ  ಒಂದು ಕೊಯಿಲಿನ ಅಡಿಕೆ  ಹಣ್ಣಾಗಿ ಅಗಿದೆ. ಹೊಸತು ಹಳತಾಗಿದೆ. ಹೊಚ್ಚ ಹೊಸತು ಬರಲಾರಂಭಿಸಿದೆ. ಈ ಮಧ್ಯೆ ಅಡಿಕೆ ಧಾರಣೆ ಏರಿಕೆ ಆಗುವ ಸುಳಿವು ಇಲ್ಲ. ಹೊಸತು ಮಾರುಕಟ್ಟೆಗೆ ಬರುವ ಈ ಸಮಯಕ್ಕೆ  ಹಳೆ ಅಡಿಕೆಗೆ ದರ ಸ್ವಲ್ಪವಾದರೂ ಹೆಚ್ಚಾಗಬೇಕಿತ್ತು. ಆದರೆ  ಹಳೇ (ಡಬ್ಬಲ್) ಅಡಿಕೆಗೆ ಬೇಡಿಕೆಯೇ ಇಲ್ಲದ ಸ್ಥಿತಿ ಉಂಟಾಗಿದೆ. ಎಲ್ಲೋ ಒಂದೆಡೆ ಅಡಿಕೆ ಧಾರಣೆ ಕುಸಿಯುವ ಸುಳಿವು…

Read more
error: Content is protected !!