ಅನನಾಸು ಗಾತ್ರ ದೊಡ್ದದಾಗಬೇಕೇ ಹೀಗೆ ಮಾಡಿ.

ಬಹಳ ಜನ ಅನನಾಸು ದೊಡ್ದದಾಗುವುದಕ್ಕೆ ಅದರ ಜುಟ್ಟಿಗೆ ರಾಸಾಯನಿಕ ಹಾಕಬೇಕು ಎಂದು ತಿಳಿದಿದ್ದಾರೆ. ಅದು ತಪ್ಪು.  ಸರಳ ಕ್ರಮದಲ್ಲಿ ಜುಟ್ಟನ್ನು ಸಣ್ಣದು ಮಾಡಿ, ಕಾಯಿ ದೊಡ್ಡದಾಗುವಂತೆ ಮಾಡಬಹುದು. ಅನನಾಸು ಬೆಳೆದವರು  ಮಾರಾಟ ಮಾಡುವಾಗ ಜುಟ್ಟು ದೊಡ್ದದಿದ್ದರೆ ಕೊಳ್ಳುವವ ಕೇಳುತ್ತಾನೆ, ಕಾಯಿಗೆಷ್ಟು ಬೆಲೆ, ಜುಟ್ಟಿಗೆಷ್ಟು ಬೆಲೆ ಎಂದು. ಜುಟ್ಟು ಸಣ್ಣದಿದ್ದರೆ ಬೆಲೆ ಹೆಚ್ಚು. ಜುಟ್ಟು ದೊಡ್ಡದಾದರೆ ಬೆಲೆ ಕಡಿಮೆ. ಜುಟ್ಟು ದೊಡ್ಡದಾಗುವುದು, ಸಣ್ಣದಾಗುವುದು ಬಿಸಿಲು ಮತ್ತು ನೆರಳಿನ ಕಾರಣದಿಂದ. ದೊಡ್ಡದಾದ ಜುಟ್ಟನ್ನು ಚಿವುಟುವ ಮೂಲಕ ಸಣ್ಣದಾಗುವಂತೆ ಮಾಡಬಹುದು. ಇದಕ್ಕೆ…

Read more
Pineapple Shridhara gowda

ಅನನಾಸು ಬೆಳೆಯಲ್ಲೂ ಕೋಟಿ ಸಂಪಾದನೆ ಸಾಧ್ಯವಿದೆ.

ಕೋಟಿ ಸಂಪಾದನೆಗಾಗಿ ಜೀವಕ್ಕೆ ಅಪಾಯ ಇರುವ , ಅತ್ಯಧಿಕ ತಲೆಬಿಸಿ ಇರುವ  ಬೆಳೆಗಳ ಹಿಂದೆ ಹೋಗಿ ಪಶ್ಚಾತ್ತಾಪ ಪಡಬೇಡಿ. ಶ್ರಮ ಪಟ್ಟು ದುಡಿದರೆ ಕೋಟಿ ಸಂಪಾದನೆಗೆ  ಬೇರೆ ತೋಟಗಾರಿಕಾ ಬೆಳೆಗಳೂ ಇವೆ. ಜನ ಅಧಿಕ ಆದಾಯದ ಬೆಳೆ ಬೇಕು ಎಂದು ಅತ್ಯಂತ ರಿಸ್ಕ್ ಇರುವ ಶ್ರೀ ಗಂಧದಂತಹ ಬೆಳೆಯ ಹಿಂದೆ ಹೋಗುತ್ತಿದ್ದಾರೆ, ಬುದ್ಧಿವಂತ ರೈತರು ಅಷ್ಟು ವರ್ಷ ಕಾಯದೆ, ಕೆಲವೇ ವರ್ಷಗಳಲ್ಲಿ ಸ್ವಂತ ಭೂಮಿ ಇಲ್ಲವೇ ಲೀಸ್ ಗೆ ಪಡೆದ ಭೂಮಿಯಲ್ಲಾದರೂ ಅನನಾಸು ಬೆಳೆದು ಕೋಟಿಯನ್ನು ಕಂಡವರಿದ್ದಾರೆ….

Read more
ಅನನಾಸು ತೋಟ

ಅನನಾಸು – ಹಣ್ಣಿನ ಬೆಳೆಗಳಲ್ಲಿ ಇದು ಸುಲಭದ್ದು.

ಪರಂಗಿ ಹಣ್ಣು ಎಂಬ ಹೆಸರಿನ ಅನನಾಸು ಕರಾವಳಿ ಒಳನಾಡು ಪ್ರದೇಶದ ಬೌಗೋಳಿಕತೆಗೆ ಹೊಂದಿಕೆಯಾಗುವ ಹಣ್ಣಿನ ಬೆಳೆ. ಜನ ಪರಂಗಿ ಹಣ್ಣು ಬೆಳೆಯಲು ರೈತರು ಅದುಹಾಕುತ್ತಾರೆ , ಇದು ಹಾಕುತ್ತಾರೆ, ರಾಸಾಯನಿಕ ಎಂಬಿತ್ಯಾದಿ ಹೇಳುತ್ತಾರೆ. ಇದೆಲ್ಲಾ ಸುಳ್ಳು. ಈ ಗಿಡದ ಎಲ್ಲಾ ಶರೀರ ಪ್ರಕೃತಿ ಬರ ಸಹಿಷ್ಣು. ಇದಕ್ಕೆ ಬೇರೆ ಬೆಳೆಗೆ ಗೊಬ್ಬರ ಕೊಟ್ಟಂತೆ ಕೊಡಲಿಕ್ಕೆ ಕಷ್ಟ.ಅಷ್ಟು ಪ್ರಮಾಣದಲ್ಲಿ ಗೊಬ್ಬರವೂ ಬೇಡ. ಅದಕ್ಕಾಗಿ ಬೆಳೆಯುವವರು ಸದಾ ಪೋಶಕಾಂಶಗಳನ್ನು ಕಡಿಮೆ ತೀರಾ ಕಡಿಮೆ ಸಾಂದ್ರತೆಯಲ್ಲಿ ಎಲೆಗಳಿಗೆ ಸಿಂಪಡಿಸುತ್ತಾರೆ. ಇದನ್ನೇ ದೂರದಿಂದ…

Read more
ಅನನಾಸು ಹಣ್ಣು

ಸಾವಯವ ಅನನಾಸು ಬೆಳೆ- ಸುಲಭ. ಹೇಗೆ?

ಸಾವಯವ ಅನನಾಸು ಬೆಳೆ ಏನೂ ಕಷ್ಟದ್ದಲ್ಲ. ಇದು  ಬರಸಹಿಷ್ಣು ಸಸ್ಯ. ಆದುದರಿಂದ ಇದನ್ನು ನೀರು ಗೊಬ್ಬರ ಇಲ್ಲದೆ ಸಾವಯವ ವಿಧಾನದಲ್ಲೇ ಬೆಳೆಯಬಹುದು.  ಆದರೆ ಕೆಲವು ಜನ ಇದಕ್ಕೆ ಒಂದಷ್ಟು ರಾಸಾಯನಿಕ ಬಳಕೆ ಮಾಡುತ್ತಾರೆ, ಕಾರಣ ಇಷ್ಟೇ  ಗ್ರಾಹಕರಿಗೆ ನೋಟ ಚೆನ್ನಾಗಿರುವ, ದೊಡ್ದದಾದ ಹಣ್ಣು ಬೇಕು. ಗ್ರಾಹಕರ ಓಲೈಕೆಗಾಗಿ ಬೆಳೆಗಾರರು ರಾಸಾಯನಿಕ ಬಳಸುತ್ತಾರೆ. ಇದನ್ನು ಬಳಸದೆ ಬೆಳೆಯಲು ಯಾವುದೇ ಕಷ್ಟ ಇಲ್ಲ. ಅನನಾಸು ಬೆಳೆಗೆ ಪ್ರಮುಖವಾಗಿ ಬೇಕಾಗುವುದು, ಉತ್ತಮ ಬೆಳಕು. ನೀರು ಹೆಚ್ಚು ಬೇಡ. ಇಬ್ಬನಿಯ ನೀರಿನಲ್ಲೂ ಬದುಕುತ್ತದೆ. ಇದರ…

Read more

ಅತೀ ಕಡಿಮೆ ಖರ್ಚಿನ ಹಣ್ಣಿನ ಬೆಳೆ- ಅನನಾಸು

ಅನಾನಾಸು ತೋಟಗಾರಿಕಾ ಬೆಳೆಗಳಲ್ಲಿ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದು ತಾಜಾ ಹಣ್ಣು ಮತ್ತು ಸಂಸ್ಕರಣೆಗೆ ಬಳಕೆಯಾಗುವಂತದ್ದು. ಪ್ರಸ್ತುತ ಗ್ರಾಹಕರ ಅಭಿರುಚಿಗಾಗಿ ಬೆಳೆಗಾರರು  ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟರೆ ಈ ಬೆಳೆಗೆ ಕೀಟ ನಾಶಕ- ರೋಗ ನಾಶಕ ಬಳಕೆಯೇ ಬೇಕಾಗಿಲ್ಲ. ಇದು ಬೇಸಿಗೆ ಕಾಲದ ಪ್ರಮುಖ ಪೌಷ್ಟಿಕ  ಹಣ್ಣಿನ ಬೆಳೆ ಇದು. ಅನನಾಸಿನ  ವಿಶೇಷ ಎಂದರೆ ಉಳಿದ ಹಣ್ಣು ಹಂಪಲಿನಂತೆ ಇದಕ್ಕೆ ಹಣ್ಣು ನೊಣ ಇಲ್ಲ. ಕೀಟ ರೋಗ ಬಾಧೆಗಳು  ತೀರಾ ಕಡಿಮೆ. ಇದನ್ನು ಒಂದು ರಾಸಾಯನಿಕ ಮುಕ್ತ…

Read more
error: Content is protected !!