ಸಾವಯವ ಅನನಾಸು ಬೆಳೆ- ಸುಲಭ. ಹೇಗೆ?

ಅನನಾಸು ಹಣ್ಣು

ಸಾವಯವ ಅನನಾಸು ಬೆಳೆ ಏನೂ ಕಷ್ಟದ್ದಲ್ಲ. ಇದು  ಬರಸಹಿಷ್ಣು ಸಸ್ಯ. ಆದುದರಿಂದ ಇದನ್ನು ನೀರು ಗೊಬ್ಬರ ಇಲ್ಲದೆ ಸಾವಯವ ವಿಧಾನದಲ್ಲೇ ಬೆಳೆಯಬಹುದು.  ಆದರೆ ಕೆಲವು ಜನ ಇದಕ್ಕೆ ಒಂದಷ್ಟು ರಾಸಾಯನಿಕ ಬಳಕೆ ಮಾಡುತ್ತಾರೆ, ಕಾರಣ ಇಷ್ಟೇ  ಗ್ರಾಹಕರಿಗೆ ನೋಟ ಚೆನ್ನಾಗಿರುವ, ದೊಡ್ದದಾದ ಹಣ್ಣು ಬೇಕು. ಗ್ರಾಹಕರ ಓಲೈಕೆಗಾಗಿ ಬೆಳೆಗಾರರು ರಾಸಾಯನಿಕ ಬಳಸುತ್ತಾರೆ. ಇದನ್ನು ಬಳಸದೆ ಬೆಳೆಯಲು ಯಾವುದೇ ಕಷ್ಟ ಇಲ್ಲ.

  • ಅನನಾಸು ಬೆಳೆಗೆ ಪ್ರಮುಖವಾಗಿ ಬೇಕಾಗುವುದು, ಉತ್ತಮ ಬೆಳಕು. ನೀರು ಹೆಚ್ಚು ಬೇಡ.
  • ಇಬ್ಬನಿಯ ನೀರಿನಲ್ಲೂ ಬದುಕುತ್ತದೆ. ಇದರ ಎಲೆ ರಚನೆ ಅದಕ್ಕೆ ಅನುಗುಣವಾಗಿ ಇದೆ.
  • ಮಣ್ಣು ಫಲವತ್ತಾಗಿದ್ದರೆ,ಅದಕ್ಕೆ ಯಾವ ಗೊಬ್ಬರವೂ ಬೇಡ. ನೆಲದ ತೇವಾಂಶ ಆರದ ರೀತಿಯಲ್ಲಿ ಒತ್ತೊತ್ತಾಗಿ ಗಿಡಗಳನ್ನು ಬೆಳೆಸಿದರೆ ಇದರಿಂದ ನಾಲ್ಕೈದು ವರ್ಷ ಫಸಲು ಪಡೆಯುತ್ತಿರಬಹುದು.
  • ಅಂಥಹ ಬಿರು ಬೇಸಿಗೆಯಲ್ಲಿ  ಪೈಪ್ ಮೂಲಕ ನೀರನ್ನು ಚಿಮುಕಿಸಿದರೂ ವಾರಗಳ ತನಕ ತೇವಾಂಶವನ್ನು ಇದು ಉಳಿಸಿಕೊಳ್ಳುತ್ತದೆ.
  • ಅಕಾಲಿಕ ತುಂತುರು ಮಳೆ ಬಂದರೆ ಅದೂ ಬೇಕಾಗಿಲ್ಲ.
ಸಾವಯವ ಮತ್ತು ನೀರಾವರಿ ರಹಿತವಾಗಿ ಬೆಳೆದ ಅನನಾಸು
ಸಾವಯವ ಮತ್ತು ನೀರಾವರಿ ರಹಿತವಾಗಿ ಬೆಳೆದ ಅನನಾಸು

ಹೇಗೆ ಬೆಳೆಯುವುದು:

  •  ಅನನಾಸು ನಾಟಿಗೆ ಸೂಕ್ತ ಕಾಲ ಮುಂಗಾರು ಮಳೆ ಪ್ರಾರಂಭವಾಗುವ ಸಮಯ, ಮತ್ತು ಸಂಪೂರ್ಣ ಮಳೆ ನಿಂತ ನಂತರದ ದಿನಗಳು.
  • ಮಳೆಬರುವ ಸಮಯದಲ್ಲಿ ನಾಟಿ ಮಾಡಿದರೆ ಶಿಲೀಂದ್ರ ಸೋಂಕು ಉಂಟಾಗಿ ಗಿಡ ಸಾಯುತ್ತದೆ. ಅನನಾಸಿಗೆ ಕೊಳೆ ಬರುವುದು ಬೇಗ.
  • ಬರೇ ಸಸಿಯನ್ನು ಒಂದೆಡೆ ಇಟ್ಟರೂ ಬದುಕಿಕೊಂಡು ಹಣ್ಣು ಕೊಡುವ ಬೆಳೆ ಎಂದರೆ ಇದೊಂದೆ ಎನ್ನಬಹುದು.
  • ಮನೆ ಬಳಕೆಯ ಉದ್ಡೇಶಕ್ಕೆ  ಕೊಂಡು ತಂದ ಅನನಾಸಿನ ಜುಟ್ಟುಗಳನ್ನು ಬಿಸಿಲು ಬೀಳುವ ಜಾಗದಲ್ಲಿ ಇಟ್ಟು ಸಸಿ ಮಾಡಿಕೊಳ್ಳಬಹುದು.
  • ವಾಣಿಜ್ಯಿಕ  ಉದ್ದೇಶಕ್ಕೆ  ಬೆಳೆಯುವಾಗ   ವ್ಯವಸ್ಥಿತವಾಗಿ ಬೆಳೆ ಬೆಳೆಯಬೇಕು.
  • ಗಿಡ ಬೇಗ ಬೆಳೆದು ಫಲ ಕೊಡಲು ಕಂದುಗಳನ್ನು (Suckker ,http://nhb.gov.in/pdf/fruits/pineapple/pin011.pdf  )   ಅಥವಾ ಕಾಯಿಯ ಬುಡದಲ್ಲಿ ಬರುವ ಮೊಳಕೆಗಳನ್ನು (Slips,https://www.houzz.com/discussions/4883432/pineapple-slips  ) ನೆಟ್ಟು ಬೆಳೆಸಬೇಕು.
  • ಅನನಾಸಿನಲ್ಲಿ ಜುಟ್ಟುಗಳಿಂದಲೂ (Crown https://empressofdirt.net/grow-pineapple-indoors/ ) ಸಸ್ಯಾಭಿವೃದ್ದಿ ಸಾಧ್ಯ.
  • ನೆಡುವ ಯಾವ ಕೆಲಸವಿದ್ದರೂ ಸಹ ಮಳೆ ಇರುವಾಗ ಮಾಡಬೇಡಿ.
  • ಮಣ್ಣನ್ನು ಯಾವುದೇ ಗಾಯ ಮಾಡದೆ ಮೇಲ್ಭಾಗದಲ್ಲೆ ಸಸ್ಯವನ್ನು ಊರುವುದಾದರೆ ಯಾವಾಗಲೂ ನಾಟಿ ಮಾಡಬಹುದು.

ಸಾವಯವ ರೀತಿಯಲ್ಲಿ ಬೆಳೆ ಬೆಳೆಸುವವರು ಸಣ್ಣ ಸಣ್ಣ ಬ್ಲಾಕುಗಳಾಗಿ ಒತ್ತೊತ್ತಾಗಿ ಗಿಡಗಳನ್ನು ನೆಡಬೇಕು. ಆಗ ನೆಲ ಒಣಗದೇ ಇರುತ್ತದೆ. ನೀರಾವರಿ ಬೇಕಾಗುವುದಿಲ್ಲ. ನೆಲ ಒಣಗದಿದ್ದರೆ ಸೂಕ್ಷ್ಮಾಣು  ಜೀವಿಗಳ ಮೂಲಕ ಗೊಬ್ಬರ ಅಲ್ಲೇ ತಯಾರಾಗುತ್ತಿರುತ್ತದೆ.

ಕೇರಳದ ಮೂವತ್ತುಪ್ಜೈ ಇಲ್ಲಿ ಬಹಳಷ್ಟು ರೈತರು ಸಾವಯವ ವಿಧಾನದಲ್ಲಿ ಅನನಾಸು ಬೆಳೆಯುತ್ತಾರೆ.
ಕೇರಳದ ಮೂವತ್ತುಪ್ಜೈ ಇಲ್ಲಿ ಬಹಳಷ್ಟು ರೈತರು ಸಾವಯವ ವಿಧಾನದಲ್ಲಿ ಅನನಾಸು ಬೆಳೆಯುತ್ತಾರೆ.
  • ನೆಲವನ್ನು ಉಳುಮೆ ಮಾಡಿ ನೆಲಮಟ್ಟದಲ್ಲೇ ಗಿಡಗಳನ್ನು ಮೇಲ್ಭಾಗದಲ್ಲಿ ಊರಬೇಕು.
  • ಇದಕ್ಕೆ  ತಾಯಿ ಬೇರು ಇಲ್ಲದ ಕಾರಣ ಬೇರು ಆಳಕ್ಕೆ ಹೋಗುವುದೇ ಇಲ್ಲ.
  • ಹತ್ತಿರ ಹತ್ತಿರ ಪರಸ್ಪರ 1 ಅಡಿ ಅಂತರದಲ್ಲಿ ನೆಟ್ಟಾಗ ಗಿಡಗಳೇ ಪರಸ್ಪರ ಆಧರಿಸಿಕೊಂಡು  ಬೆಳೆಯುತ್ತದೆ.
  • ಕಳೆಗಳೂ  ಬೆಳೆಯುವುದಿಲ್ಲ. ಹುಲ್ಲು ಜಾತಿಯ ಕಳೆಗಳು ಬಂದರೆ ಅದನ್ನು ಉಳಿಸಿದರೆ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ.
  • ಇದು ಬೇಸಿಗೆಯ ಸಮಯ ಕಾಯಿ ಆಗುವಾಗ  ಹಣ್ಣುಗಳಿಗೆ ಬಿಸಿಲಿನ ಗಾಯ ಆಗದಂತೆ ತಡೆಯುತ್ತದೆ.
  • ಮಳೆಗಾಲ ಪೂರ್ವದಲ್ಲಿ ನೆಟ್ಟ ಸಸಿಗಳಾದರೆ ಬೇಸಿಗೆಯಲ್ಲಿ ನೀರಾವರಿ ಮಾಡಬೇಕಾಗಿಲ್ಲ.
  • ಚಳಿಗಾಲದಲ್ಲಿ ನಾಟಿ ಮಾಡಿದ ಸಸಿಗಳಿಗೆ ಮೊದಲ ವರ್ಷ ಒಂದೆರಡು ಬಾರಿ ನೀರಾವರಿ  ಮಾಡಬೇಕು.
  • ನೆಡುವಾಗ ಮಣ್ಣಿಗೆ ಕೊಟ್ಟಿಗೆ ಗೊಬ್ಬರ ಕೊಟ್ಟು ಬೆಳೆಸಬೇಕು. ಮುಂದಿನ ಬೆಳೆಗೆ ಅದರ ಒಣ ತ್ಯಾಜ್ಯಗಳೇ ಗೊಬ್ಬರವಾಗುತ್ತದೆ.
  • ಕೆಲವು ಬೆಳೆಗಾರರು ರಾಸಾಯನಿಕ ಗೊಬ್ಬರ, ಹಾರ್ಮೋನು ಬಳಸುವುದು ಕೇವಲ ಗ್ರಾಹಕರ ಓಲೈಕೆಗಾಗಿ. ಎಲ್ಲಾ ಅನನಾಸು ಬೆಳೆಗಾರರಿಗೂ ಈ ಬೆಳೆಯನ್ನು ಸಾವಯವದಲ್ಲಿ ಬೆಳೆಸಲು ಸಾಧ್ಯ ಎಂಬುದು ಗೊತ್ತಿದೆ.
  • ಆದರೆ  ಗ್ರಾಹಕರು ದೊಡ್ದ ಮತ್ತು ಆಕರ್ಷಕ ನೋಟದ ಹಣ್ಣು ಬಯಸುವ ಕಾರಣ ಇದನ್ನು ಅನಿವಾರ್ಯವಾಗಿ ಮಾಡುತ್ತಾರೆ.
ನೆರಳು ಮತ್ತು  ಬೇಸಿಗೆಗೆ ಮುಂಚೆ ಇಳುವರಿ ಬರುವಂತೆ ಮಾಡಿದರೆ ನೀರೂ ಬೇಡ. ರಾಸಾಯನಿಕವೂ ಬೇಡ.
ನೆರಳು ಮತ್ತು ಬೇಸಿಗೆಗೆ ಮುಂಚೆ ಇಳುವರಿ ಬರುವಂತೆ ಮಾಡಿದರೆ ನೀರೂ ಬೇಡ. ರಾಸಾಯನಿಕವೂ ಬೇಡ.

ಅನನಾಸು ಗಾತ್ರ:

  • ರಾಣಿ Queen  ಮತ್ತು ರಾಜ Kew ಎಂಬ ಎರಡು ವಿಧದ ಅನನಾಸನ್ನು ವಾಣಿಜ್ಯಿಕವಾಗಿ ಬೆಳೆಸಲಾಗುತ್ತದೆ.
  • ರಾಣಿ ವಿಧದ ತಳಿಯ ಸಾಮಾನ್ಯ ಹಣ್ಣಿನ ತೂಕ1.250  ಗ್ರಾಂ.  ಈ ತೂಕ ಬರಲು ರಾಸಾಯನಿಕ ಬೇಕಾಗಿಲ್ಲ.
  • ದೊಡ್ಡದಾಗಬೇಕಿದ್ದರೆ ಬೇಕಾಗುತ್ತದೆ. ರಾಜ ತಳಿಯ ಅನನಾಸಿನ ನೈಜ ತೂಕ ಗರಿಷ್ಟ 750 ಗ್ರಾಂ. ಇದಕ್ಕಿಂತ ದೊಡ್ಡದಾಗಲು  ರಾಸಾಯನಿಕ ಬಳಕೆ ಮಾಡಬೇಕು.
  • ಅದರೆ ಮಾರುಕಟ್ಟೆಯಲ್ಲಿ ಈ ಗಾತ್ರದ ಹಣ್ಣಿಗೆ ಬೇಡಿಕೆ ಇಲ್ಲ. ಇದ್ದರೂ ಬೆಲೆ ತುಂಬಾ ಕಡಿಮೆ.
  • ಅದಕ್ಕಾಗಿ ಬೆಳೆಗಾರರು ರಾಸಾಯನಿಕ  ಬಳಸುತ್ತಾರೆ.
  • ಅನನಾಸಿನಲ್ಲಿ ಜುಟ್ಟು ದೊಡ್ಡದಾಗಿ ಬರುವುದು ಬೆಳೆಕು ಕಡಿಮೆಯಾದ ಕಾರಣ.
  • ಹಾಗೆಯೇ ನೀರಾವರಿ ಮತ್ತು ರಸ ಗೊಬ್ಬರಗಳನ್ನು ಅತಿಯಾಗಿ ಬಳಸಿದಾಗ.  ಜುಟ್ಟು ಹಿಚುಕುವ ವಿಧಾನದಲ್ಲಿ  ಅದರ ಬೆಳವಣಿಗೆಯನ್ನು  ಕಡಿಮೆ ಮಾಡಬಹುದು. ಇದು ವಾಣಿಜ್ಯ  ಉದೇಶದಲ್ಲಿ ಕಷ್ಟ ಸಾಧ್ಯ.
ನೀರಾವರಿ ಗೊಬ್ಬರ ರಹಿತವಾಗಿ ಬೆಳೆಯುವ ಮಾರೀಶಿಯಸ್ ರೆಡ್ ತಳಿ.
ನೀರಾವರಿ ಗೊಬ್ಬರ ರಹಿತವಾಗಿ ಬೆಳೆಯುವ ಮಾರೀಶಿಯಸ್ ರೆಡ್ ತಳಿ.

ಮಾರೀಶಿಯಸ್ (Mauritius http://nhb.gov.in/pdf/fruits/pineapple/pin013.pdf ) ಎಂಬ ತಳಿಯ ಅನನಾಸನ್ನು ನಾವೆಲ್ಲಾ ಯಾವ ರಾಸಾಯನಿಕ ಹಾಕದೆಯೂ ಬೆಳೆಯುವುದಿಲ್ಲವೇ?ಅದೇ ರೀತಿಯಲ್ಲಿ ವಾಣಿಜ್ಯ ತಳಿಗಳನ್ನೂ   ಕಷ್ಟ ಇಲ್ಲದೆ ಬೆಳೆಯಬಹುದು. ಕೇರಳದ ಪಾಲ( PALA) ಊರಿನಲ್ಲಿ ಸಾವಯವ ರೀತಿಯಲ್ಲೇ ಕೆಲವರು ಅನನಾಸು ಬೆಳೆದು ಕೇರಳ ಸಾವಯವ ಉತ್ಪನ್ನ ಎಂದು ಮಾರಾಟ ಮಾಡುತ್ತಾರೆ.

ನೀರಾವರಿ ಗೊಬ್ಬರ ರಹಿತವಾಗಿ ಬೆಳೆಯುವ ಮಾರೀಶಿಯಸ್ ಹಳದಿ ತಳಿ.
ನೀರಾವರಿ ಗೊಬ್ಬರ ರಹಿತವಾಗಿ ಬೆಳೆಯುವ ಮಾರೀಶಿಯಸ್ ಹಳದಿ ತಳಿ.

ಹಾರ್ಮೋನು ಬೇಕಾಗಿಲ್ಲ:

  • ಅನನಾಸು ಹೂ ಬಿಡಲು ಎಥ್ರೆಲ್ ದ್ರಾವಣವನ್ನು ಸುಳಿಗೆ ಹಾಕಲಾಗುತ್ತದೆ.
  • ಕೆಲವರು ವೆಲ್ಡಿಂಗ್ ರಾಡ್ ಹಾಕುತ್ತಾರೆ ಎಂಬ ಹೇಳಿಕೆಗಳೂ ಇವೆ.
  • ಇದರ ಅಗತ್ಯವೇ ಇಲ್ಲ. ಸಸಿಗಳು 30 ಎಲೆಗಿಂತ ಹೆಚ್ಚು ಎಲೆ ಬಿಟ್ಟು ಆರೋಗ್ಯವಾಗಿದ್ದರೆ ಯಾವಾಗಲೂ ಹೂ ಬಿಡಬಹುದು.
  • ಚಳಿ ಮತ್ತು ಒಣ ವಾತಾವರಣದಲ್ಲಿ  ನೈಸರ್ಗಿಕವಾಗಿ ಹೂ ಬಿಡುತ್ತದೆ.
  • ಸಹಜ ಬೆಳೆವಣಿಗೆಗೆ ಯಾವ ಹಾರ್ಮೋನು ಹಾಗೂ ರಸ ಗೊಬ್ಬರ ಅಗತ್ಯ ಇಲ್ಲ.
  • ಬರೇ ಗೋಬರ್ ಗ್ಯಾಸ್ ಬಗ್ಗಡ ಮತ್ತು ಕೊಟ್ಟಿಗೆ ಗೊಬ್ಬರವನ್ನು ಕೊಟ್ಟೇ ಬೆಳೆಯಬಹುದು.
ನೆಡುವ ಕಂದುಗಳು
ನೆಡುವ ಕಂದುಗಳು

ರಾಸಾಯನಿಕ ಬಳಸುವ ಉದ್ದೇಶ:

  • ಬಹಳಷ್ಟು ಅನನಾಸು ಬೆಳೆಗಾರರು ಬರೇ ಹಣ್ಣಿನ ಗಾತ್ರ ಹೆಚ್ಚಿಸಲು ರಾಸಾಯನಿಕ ಪೋಷಕಗಳನ್ನು ಬಳಸುವುದಲ್ಲ.
  • ಇವರು ಸಸಿ ಮಾರಾಟವನ್ನು ಇದರೊಂದಿಗೆ ಒಂದು ವ್ಯಾಪಾರವನ್ನಾಗಿಸಿಕೊಂಡಿರುತ್ತಾರೆ.
  • ಸಾಮಾನ್ಯವಾಗಿ ಒಂದು ಗಿಡದಲ್ಲಿ ಒಂದು ಮೊಳಕೆ ಬರುತ್ತದೆ.
  • ಅಪರೂಪಕ್ಕೆ  ಸ್ಲಿಪ್ ಗಳು ಬರುತ್ತವೆ. ರಸಗೊಬ್ಬರ – ಹಾರ್ಮೋನು ಕೊಟ್ಟು ಹೆಚ್ಚು ಕಂದುಗಳನ್ನು  ಪಡೆಯುತ್ತಾರೆ.
  • ಒಂದು ಕಂದಿಗೆ 7 ರೂ. ದರ ಇರುತ್ತದೆ. ಗಿಡದಲ್ಲಿ 2-3  ಕಂದುಗಳು 2-3 ಸ್ಲಿಪ್ ಗಳು ಬಂದರೆ ಕಾಯಿಗಿಂತ ಹೆಚ್ಚಿನ ಆದಾಯ ದೊರೆಯುತ್ತದೆ.
  • ಇದಕ್ಕಾಗಿ ರಾಸಾಯನಿಕ ಬಳಕೆ ಮಾಡುತ್ತಾರೆ.

ಈ ಲೇಖನದ ಉದ್ದೇಶ, ಸಾಮಾಜಿಕ ಆರೋಗ್ಯ ದೃಷ್ಟಿಯಿಂದ ರಾಸಾಯನಿಕ ರಹಿತ ಆಹಾರ ಉತ್ತಮ. ರಾಸಾಯನಿಕ ಬಳಕೆ ತಿನ್ನುವವರಿಗೆ ಮಾತ್ರವಲ್ಲ. ಅದನ್ನು ಬಳಸುವವರಿಗೂ ಭಾರೀ ತೊಂದರೆ ಉಂಟು ಮಾಡುತ್ತದೆ. ಅಲರ್ಜಿ, ಮುಂತಾದ ಜೀವಮಾನ ಪರ್ಯಂತ ಅನುಭವಿಸಬೇಕಾದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತವೆ. ಇದನ್ನು ಕಡಿಮೆ ಮಾಡುವುದು ಅಗತ್ಯ. ಅದೇ ರೀತಿಯಲ್ಲಿ ಗ್ರಾಹಕರಿಗೆ ರಾಸಾಯನಿಕ ಮತ್ತು ರಾಸಾಯನಿಕ ಮುಕ್ತ ಉತ್ಪನ್ನಗಳ ತಿಳುವಳಿಕೆ ಮೂಡಿಸುವುದು ಅತೀ ಅಗತ್ಯ.
end of the article:
Search words: pineapple planting # Organic pineapple planting #Pineapple suckers planting # Pineapple crown planting # Pineapple slip planting # Hints to grow pineapple in organic way#

2 thoughts on “ಸಾವಯವ ಅನನಾಸು ಬೆಳೆ- ಸುಲಭ. ಹೇಗೆ?

Leave a Reply

Your email address will not be published. Required fields are marked *

error: Content is protected !!