ಅನನಾಸು – ಹಣ್ಣಿನ ಬೆಳೆಗಳಲ್ಲಿ ಇದು ಸುಲಭದ್ದು.

ಅನನಾಸು ತೋಟ

ಪರಂಗಿ ಹಣ್ಣು ಎಂಬ ಹೆಸರಿನ ಅನನಾಸು ಕರಾವಳಿ ಒಳನಾಡು ಪ್ರದೇಶದ ಬೌಗೋಳಿಕತೆಗೆ ಹೊಂದಿಕೆಯಾಗುವ ಹಣ್ಣಿನ ಬೆಳೆ. ಜನ ಪರಂಗಿ ಹಣ್ಣು ಬೆಳೆಯಲು ರೈತರು ಅದುಹಾಕುತ್ತಾರೆ , ಇದು ಹಾಕುತ್ತಾರೆ, ರಾಸಾಯನಿಕ ಎಂಬಿತ್ಯಾದಿ ಹೇಳುತ್ತಾರೆ. ಇದೆಲ್ಲಾ ಸುಳ್ಳು. ಈ ಗಿಡದ ಎಲ್ಲಾ ಶರೀರ ಪ್ರಕೃತಿ ಬರ ಸಹಿಷ್ಣು. ಇದಕ್ಕೆ ಬೇರೆ ಬೆಳೆಗೆ ಗೊಬ್ಬರ ಕೊಟ್ಟಂತೆ ಕೊಡಲಿಕ್ಕೆ ಕಷ್ಟ.ಅಷ್ಟು ಪ್ರಮಾಣದಲ್ಲಿ ಗೊಬ್ಬರವೂ ಬೇಡ. ಅದಕ್ಕಾಗಿ ಬೆಳೆಯುವವರು ಸದಾ ಪೋಶಕಾಂಶಗಳನ್ನು ಕಡಿಮೆ ತೀರಾ ಕಡಿಮೆ ಸಾಂದ್ರತೆಯಲ್ಲಿ ಎಲೆಗಳಿಗೆ ಸಿಂಪಡಿಸುತ್ತಾರೆ. ಇದನ್ನೇ ದೂರದಿಂದ ನೋಡಿದ ನಮ್ಮ ಟೀಕಾಕಾರರು ರಾಸಾಯನಿಕ ಬಳಸಿದ ಹಣ್ಣು ಎಂದು ದೂರುತ್ತಾರೆ.

  •  ಹಿಂದೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕರಾವಳಿಯಲ್ಲಿ ಅನನಾಸು ಬೆಳೆಸುತ್ತಿದ್ದರು.
  • ನಂತರ ಶ್ರೀಯುತ  ರಾಮಕೃಷ್ಣ ಹೆಗ್ಗಡೆಯವರ ಆಸಕ್ತಿಯಲ್ಲಿ ಮಲೆನಾಡಿನಲ್ಲಿ ಇದರ ಪರಿಚಯವಾಯಿತು.
  • ಈಗ  ಕೇರಳದಿಂದ ಬಂದವರು ರಬ್ಬರ್ ಜೊತೆ ಮಿಶ್ರ ಬೆಳೆಯಾಗಿ ಅನನಾಸು ಬೆಳೆಯನ್ನು ಬೆಳೆಸಿ ಕರಾವಳಿ ಮಲೆನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಅನನಾಸಿನ ಬೆಳೆಪ್ರದೇಶವನ್ನು ಹೆಚ್ಚಿಸಲು ನೆರವಾಗಿದ್ದಾರೆ.
  • ಕರಾವಳಿ, ಮಲೆನಾಡು, ಅರೆ ಮಲೆನಾಡು ಪ್ರದೇಶಗಳ ಎಲ್ಲಾ ಹವಾಮಾನಕ್ಕೂ ಈ ಬೆಳೆ ಹೊಂದಿಕೆಯಾಗುತ್ತದೆ.
  • ಉತ್ತಮ ಆದಾಯದ ಬೆಳೆ

ಮೇಲ್ಮಣ್ಣು ರಕ್ಷಣೆ ಮಾಡಿ ಬೆಳೆದ ಅನನಾಸು ತೋಟ

 ಅನಾನಾಸು ಸುಲಭ ಬೆಳೆ  ಹೇಗೆ ?

ನೆಡಲು ಬಳಸುವ ಸಕ್ಕರುಗಳು (ಕಂದುಗಳು)

  • ನೆಟ್ಟು ಒಂದೇ ವರ್ಷದಲ್ಲಿ ಎಕ್ರೆಯೊಂದರ ಸುಮಾರು 1 ರಿಂದ 1.5 ಲಕ್ಷದಷ್ಟು ನಿವ್ವಳ ಆದಾಯ ಕೊಡುತ್ತದೆ. 
  • ಸಸಿ 8-9 ನೇ ತಿಂಗಳಿಗೆ ಹೂ ಬಿಡಲು ಶಕ್ತವಾಗುತ್ತದೆ.
  • ಏಕ ಕಾಲದಲ್ಲಿ  ಹೂ ಬರಿಸಲು ಪ್ರಚೋದಕ ಬಳಸಸಿದರೆ ಒಮ್ಮೆಲೇ ಹೂ ಬಿಟ್ಟು 120 ದಿನಕ್ಕೆ  ಕಠಾವಿಗೆ ಸಿಗುತ್ತದೆ.
  • ಬಳಸದೆಯೂ ಸಸ್ಯ ಬೆಳವಣಿಗೆ ಆಗುವಾಗ ಹೂ ಬಿಡುತ್ತದೆ.
  • ಒಂದು ಸಸಿಯಲ್ಲಿ ತಳಿ ಹೊಂದಿ ಸರಾಸರಿ 1.5 ಕಿಲೋ ದಿಂದ 2 ಕಿಲೋ ತನಕದ ತೂಕದ ಕಾಯಿಗಳು ಬರುತ್ತವೆ.
  • ಮಾರುಕಟ್ಟೆಯಲ್ಲಿ ಕಿಲೋಗೆ ಸರಾಸರಿ 14 ರೂ. ಧಾರಣೆ ಇರುತ್ತದೆ.
  • ಏಕ ಬೆಳೆಯಾಗಿ ಎಕ್ರೆಯೊಂದರ 15000 ಗಿಡ ಹಿಡಿಸಿದರೆ ಒಟ್ಟು ಎಕ್ರೆಗೆ 18000 ಕಿಲೋ ದಿಂದ 30000 ಕಿಲೋ ತನಕ ಅನಾನಾಸು ಹಣ್ಣು ದೊರೆಯುತ್ತದೆ.
  • ಒಂದು ಗಿಡದಲ್ಲಿ 2-3 ನೆಡುವ ಸಸಿ ಸಿಗುತ್ತದೆ. ಇದನ್ನು ತಲಾ 7 ರೂ ದರದಲ್ಲಿ ಮಾರಾಟ  ಮಾಡಬಹುದು.

ನೆಡುವ ಸರಳ ವಿಧಾನ

ತಳಿಗಳು:

ಕಿವ್  (ರಾಜ) ಜಾತಿಯ (Kew) ಅನನಾಸು

  • ಅನಾನಾಸಿನಲ್ಲಿ  ಪ್ರಾದೇಶಿಕತೆಯ ಆಧಾರದಲ್ಲಿ ಮೂರು ಗುಂಪುಗಳಾದ ಕ್ಯೇನ್, ಕ್ವೀನ್ ಮತ್ತು ಸ್ಪಾನಿಶ್‍ಗಳ (Cayenne,Queen and Spanish) ಅಡಿಯಲ್ಲಿ  ಸುಮಾರು 20 ಜಾತಿಯ ತಳಿಗಳನ್ನು ಗುರುತಿಸಲಾಗಿದೆ.
  • ಸಾಮಾನ್ಯವಾಗಿ ಕೇರಳ, ಕರ್ನಾಟಕದ ಭಾಗಗಳಲ್ಲಿ ಬೆಳೆಯುವಂತವು ಕಿವ್,(ರಾಜ) (king)  ಜೈಂಟ್ ಕಿವ್, ಕಾಮನ್ ಕಿವ್, ಮತ್ತು  ಮಾರೀಶಿಯಶ್ ತಳಿಗಳು.
  • ಇದರಲ್ಲಿ ಕಿವ್,ಜೈಂಟ್‍ಕಿವ್, ಕಾಮನ್ ಕ್ವೀನ್ (ರಾಣಿ) ತಳಿಗಳಿಗೆ ಹೆಚ್ಚಿನ ಮಾರುಕಟ್ಟೆ ಮೌಲ್ಯವಿದೆ.
  • ಮಾರೀಶಿಯಸ್ ತಳಿಗಳಲ್ಲಿ  ಹಳದಿ ಮತ್ತು ಕೆಂಪು ಬಣ್ಣದ ಎರಡು ಬಗೆಗಳಿವೆ.
  • ಇವು ಸ್ಠಳೀಯವಾಗಿ ಕೇರಳ, ಕರ್ನಾಟಕದಾದ್ಯಂತ ಇವೆಯಾದರೂ ಮಾರುಕಟ್ಟೆ ಮೌಲ್ಯವಿಲ್ಲ.
  • ಬೆಳೆಸುವುದು ಸುಲಭ, ರುಚಿ-ಸುವಾಸನೆ ಉತ್ತಮವಾಗಿದೆ ಆದರೆ ಬೇಡಿಕೆ ಕಡಿಮೆ.
  • ಕೇರಳ ಮತ್ತು ಗೋವಾಗಳಲ್ಲಿ ರೂಥ್‍ಚೈಲ್ಡ್ .( Rothschild)ಎಂಬ ಕಿವ್‍ತಳಿಯ ಬೇಸಾಯವೂ ಇದೆ.

ಕ್ವೀನ್ (ರಾಣಿ) ಜಾತಿಯ (Queen) ಅನನಾಸು

ಆಂದ್ರದ ವಿಶಾಖಪಟ್ಟಣಂ ಸುತ್ತಮುತ್ತ ಸಿಂಹಾಚಲಂ ತಳಿ  ಬೆಳೆಯುತ್ತಿದೆ. ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸಾಂ, ಮಿಜೋರಾಂ, ದಾರ್ಜಿಲಿಂಗ್,ಪಶ್ಚಿಮ ಬಂಗಾಲ ಮುಂತಾದೆಡೆ ಜಲ್‍ದೂಪ್, ಲಕ್ಹಾಟ್,  ಬರೀಪೂರ್ ಲೋಕಲ್, ಹರಿಚರಣ್‍ವಿಟಾ ಮುಂತಾದ ತಳಿಗಳನ್ನು ಸ್ಥಳೀಯವಾಗಿ ಬೆಳೆಸುತ್ತಾರೆ.

ಮಾರೀಶಿಯಸ್ ವರ್ಗದ ಅನನಾಸು

ಮಾರೀಶಿಯಸ್ ವರ್ಗದ ಬೇರೆ ಬಣ್ಣದ ಅನನಾಸು

ನೆಡುವ ಸಸಿಗಳು:

  • ಅನಾನಾಸು ನೆಡಲು ಹಣ್ಣಿನ ಜುಟ್ಟು,(Crown) ಕಾಯಿಯ ಬುಡದಲ್ಲಿ  ಬರುವ ಮೊಗ್ಗು,(slips), ಮತ್ತು ಗುಡದ ಬುಡದಲ್ಲಿ ಬರುವ ಮೊಳಕೆಯನ್ನು,(sucker ) ಬಳಸಲಾಗುತ್ತದೆ.
  • ಜುಟ್ಟು ಬೆಳೆಯಲು ಸುಮಾರು 6 ತಿಂಗಳು ಹೆಚ್ಚು ಸಮಯ ಬೇಕು.
  • ಆದರೆ ಉಳಿದ ಎರಡು ನೆಡು ಸಮಾಗ್ರಿಗಳು ನಾಟಿ ಮಾಡಿ 8 ತಿಂಗಳಿಗೇ ಬೆಳವಣಿಗೆ ಹೊಂದುತ್ತವೆ.

ನೆಡುವ ವಿಧಾನ:

  •  ಅನನಾಸನ್ನು ಕಾಲುವೆ ಪದ್ದತಿ ಮತ್ತು ಏರಿ ಪದ್ದತಿಯಲ್ಲಿ ನಾಟಿ ಮಾಡಲಾಗುತ್ತದೆ.
  • ಕಾಲುವೆ ಪದ್ದತಿಯಲ್ಲಿ ಸುಮಾರು 1.5 ರಿಂದ 2 ಅಡಿ ಆಳ ಮತ್ತು ಅಗಲದ ಕಾಲುವೆ ಮಾಡಿ ಅದರಲ್ಲಿ ಏಕ ಸಾಲಿನಲ್ಲಿ ನಾಟಿ ಮಾಡಲಾಗುತ್ತದೆ.
  • ವರ್ಷವೂ ಬದಿಯ ಮಣ್ಣನ್ನು ಜಾರಿಸಿ ಮೂರು ನಾಲ್ಕು ವರ್ಷ ಬೆಳೆ ಉಳಿಸಿಕೊಳ್ಳಬಹುದು.  
  • ಏರಿ ಪದ್ದತಿಯಲ್ಲಿ ನೆಲಮಟ್ಟದಲ್ಲೇ 1/2 ಅಡಿ ಆಳದ ಸಾಲು ಮಾಡಿ ನಾಟಿ ಮಾಡಲಾಗುತ್ತದೆ.
  • ಏರಿ ಪದ್ದತಿಯಲ್ಲಿ ಎರಡನೇ ವರ್ಷಕ್ಕೇ ಸಸಿ ಪುನರ್ ನಾಟಿ ಮಾಡಬೇಕು.

 ಅನನಾಸನ್ನು ಜೋಡಿ ಸಾಲು ಪದ್ದತಿಯಲ್ಲಿ ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರವಿಟ್ಟು ನಾಟಿ ಮಾಡಲಾಗುತ್ತದೆ. ಸಾಲಿನಿಂದ ಸಾಲಿಗೆ ಕನಿಷ್ಟ 4 ಅಡಿ ಅಂತರ ನೀಡಲಾಗುತ್ತದೆ. ಈ ಪ್ರಕಾರ ಎಕ್ರೆಯೊಂದರ 20000 ಗಿಡಗಳ ತನಕವೂ ಸಸಿ ಹಿಡಿಸಲಾಗುತ್ತದೆ.

ನೆಡಲು ಸೂಕ್ತ ಕಾಲ;

ಟ್ರೆಂಚ್ ಮಾಡಿ ನೆಟ್ಟ ಅನನಾಸು

  •  ಮಳೆಗಾಲ ಮುಗಿಯುವ ಸಮಯ ಸಪ್ಟೆಂಬರ್ –ಅಕ್ಟೋಬರ್  ಅಥವಾ ಎಪ್ರೀಲ್- ಮೇ ತಿಂಗಳಲ್ಲಿ ನಾಟಿ ಮಾಡಬೇಕು.
  • ಮಳೆಗಾಲದಲ್ಲಿ  ನೆಟ್ಟರೆ ಸಸಿ ಕೊಳೆಯುವ ಕೊಳೆ ರೋಗ ಬರುತ್ತದೆ. 
  • ಏಕ ಪ್ರಕಾರದ ಸಸಿಯನ್ನು ಆಯ್ಕೆ ಮಾಡಿ ನಾಟಿ  ಮಾಡಬೇಕು.
  • ನಾಟಿ ಮಾಡಿದ ನಂತರ ಪ್ರತೀ ಸಸಿಯ ಬುಡಕ್ಕೆ 100-200 ಮಿಲಿಯಂತೆ  ಶಿಲೀಂದ್ರ ನಾಶಕ ಮತ್ತು ದುಂಡಾಣು ನಾಶಕ ಎರೆಯಬೇಕು.
  • ಎಂಡೋಮೈಕೋರೈಝಾವನ್ನು ಮಣ್ಣಿಗೆ ಕೊಡುವುದರಿಂದ ಸಸಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ.
  • ಮೇಲು ಗೊಬ್ಬರವಾಗಿ ಸಾರಜನಕ ಮತ್ತು ರಂಜಕ  ಯುಕ್ತ  ಡಿ ಎ ಪಿ ಗೊಬ್ಬರ ನೀಡಬೇಕು.
  • ಕೊಟ್ಟಿಗೆ ಗೊಬ್ಬರವನ್ನೇ ಅಧಿಕ ಪ್ರಮಾಣದಲ್ಲಿ ಕೊಟ್ಟು ಬೆಳೆಸಬಹುದು.
  • ಸಸಿ ಬೆಳೆವಣಿಗೆ ಅನುಸಾರ ಗೊಬ್ಬರ ನೀಡುತ್ತಾ ಹೂ ಬಿಟ್ಟು ಕಾಯಿ ಬೆಳೆಯುವ  ಸಮಯದಲ್ಲಿ  ಪೊಟ್ಯಾಶಿಯಂ ಯುಕ್ತ ಗೊಬ್ಬರ ಕೊಡುವುದರಿಂದ ಸಿಹಿ, ತೂಕ ಹಾಗೂ ಕಾಪಿಡುವ ಶಕ್ತಿ ಹೆಚ್ಚುತ್ತದೆ.
  • ನೀರಿನಲ್ಲಿ ಕರಗುವ ಗೊಬ್ಬರಗಳಿಗೆ  ಅನನಾಸು ಬೆಳೆ ಚೆನ್ನಾಗಿ ಒಗ್ಗಿಕೊಳ್ಳುತ್ತದೆ.

ಅನನಾಸಿಗೆ ಕರಾವಳಿ ಪ್ರದೇಶದಲ್ಲಿ ಭಾರೀ ನೀರಾವರಿ ಬೇಡ. 15 ದಿನಕ್ಕೊಮ್ಮೆ 1 ತಾಸು ಸ್ಪ್ರಿಂಕ್ಲರ್ ನೀರಾವರಿ ಮಾಡಿದರೆ ಸಾಕು. ಹನಿ ನೀರಾವರಿಯಾದರೆ ಇನ್‍ಲೈನ್ ಡ್ರಿಪ್ಪರ್ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಇದರಲ್ಲೇ ರಸಾವರಿ ಮೂಲಕ ಗೊಬ್ಬರ ಕೊಡಬಹುದು. ಮೈಕ್ರೋ ಸ್ಪ್ರಿಂಕ್ಲರ್ ನೀರಾವರಿ ಉತ್ತಮ. ಕರಾವಳಿಯ  ಹವೆಯಲ್ಲೇ ತೇವಾಂಶ ಇರುವ ಕಾರಣ ನೀರಿಲ್ಲದೆಯೂ ಬೆಳೆಸಲು ಸಾದ್ಯವಿದೆ.  ಪಾಲಿಥೀನ್ ಮಲ್ಚಿಂಗ್ ಮಾಡಿಯೂ ಬೆಳೆಸಬಹುದು.
end of the article:—————————————————————–
search words: Pineapple cultivation# Fruit crop# Horticulture crop# pineapple planting # Pineapple   Suckers # Pineapple slips #  Organic pineapple cultivation#  High income fruit crop# easy fruit crop#

Leave a Reply

Your email address will not be published. Required fields are marked *

error: Content is protected !!