ಏಲಕ್ಕಿ ಬೆಳೆಯುತ್ತೀರಾ – ಇಲ್ಲಿದೆ ತಳಿಗಳ ಬಗ್ಗೆ ಮಾಹಿತಿ.

by | Oct 9, 2020 | Spice Crop (ಸಾಂಬಾರ ಬೆಳೆ), Cardamom (ಏಲಕ್ಕಿ) | 0 comments

ಮಲೆನಾಡು, ಅರೆಮಲೆನಾಡಿನ ರೈತರು ಅಡಿಕೆ ತೋಟದಲ್ಲಿ ಲಾಭದಾಯಕ ಮಿಶ್ರ ಬೆಳೆಯ ಹುಡುಕಾಟದಲ್ಲಿದ್ದಾರೆ. ಇವರಿಗೆ ಯಾವ ತಳಿಯನ್ನು ಬೆಳೆದರ ಉತ್ತಮ , ಯಾವ ಯಾವ ಉತ್ತಮ ತಳಿಗಳಿವೆ ಎಂಬ ಬಗ್ಗೆ ಮಡಿಕೇರಿಯ ಅಪ್ಪಂಗಳದ ಸಾಂಬಾರ  ಬೆಳೆಗಳ ಪ್ರಾದೇಶಿಕ ಸಂಶೋಧನಾ ಸಂಸ್ಥೆಯ  ಮೂಲಕ ಈ ಮಾಹಿತಿ ಲಭ್ಯವಿದೆ.
Cardamom yield

 • ಬೆಳೆಯುವ ಪ್ರದೇಶ, ಪುಷ್ಪಗೊಚ್ಚಲುಗಳ ಸ್ವಭಾವ, ಗಿಡಗಳ ಗಾತ್ರ ಮತ್ತು ಇತರ ಗುಣಗಳನ್ನು ನೋಡಿ ಏಲಕ್ಕಿಯ ಪ್ರಭೇಧಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
 • ಮಲಬಾರ್ ಪ್ರಭೇದದ ಗಿಡಗಳ ಕೊತ್ತುಗಳು ನೆಲದ ಮೇಲೆ ಹರಡಿರುತ್ತವೆ.
 • ಪ್ರಭೇದವನ್ನು ಕರ್ನಾಟಕದಲ್ಲಿ ಬೆಳೆಯುತ್ತಾರೆ.
 • ಮೈಸೂರು ಪ್ರಭೇದ ಗಿಡಗಳ ಕೊತ್ತುಗಳು ನೇರವಾಗಿ ನಿಂತಿದ್ದು ಕೇರಳ ಮತ್ತು ತಮಿಳುನಾಡಿನಲ್ಲಿ ಬೆಳೆಯುತ್ತಾರೆ.
 • ವಜುಕ್ಕಾ ಏಲಕ್ಕಿಯು ಮಲಬಾರ್ ಮತ್ತು ಮೈಸೂರು ಪ್ರಭೇದದ ನೈರ್ಸಗಿಕ ಸಂಕೀರ್ಣ ಪ್ರಭೇದವಾಗಿದ್ದು ಕೊತ್ತುಗಳು ತೂಗು ಹಾಕಿದ ಸರದಂತೆ ಇರುತ್ತವೆ.

ಹವಾಗುಣ ಮತ್ತು ಮಣ್ಣು:

 •  ಏಲಕ್ಕಿ ಗೆ ಚೆನ್ನಾಗಿ ಹಂಚಿ   ಬೀಳುವ 1500-2500 ಮಿ. ಮೀ. ಮಳೆ, ಸರಾಸರಿ ಉಷ್ಣತೆ 15 ರಿಂದ 25 ಡಿಗ್ರಿ ಸೆ. ಮತ್ತು 600 ರಿಂದ 1200 ಮೀಟರ್ ಎತ್ತರವಿರುವ ಪ್ರದೇಶಗಳಲ್ಲಿ ಬೆಳೆಯಬಹುದು.
 •  ಆಮ್ಲೀಯ ರಸಸಾರ (5.5-6.5) ಹೊಂದಿರುವ ಕಾಡಿನ ಗೋಡು ಮಣ್ಣುಗಳಿರುವಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ.

ಅಧಿಕ ಇಳುವರಿ ಕೊಡುವ ತಳಿಗಳು:

nallani gold cardamum
1 .   ಅಪ್ಪಂಗಳ-1: (ಸಿಸಿಎಸ್-1)   ಶೀಘ್ರ ಪಕ್ವಕ್ಕೆ ಬರುವ, ಹೆಚ್ಚು ಸಾಂಧ್ರ ನಾಟಿಗೆ ಸೂಕ್ತ ತಳಿ, ಉದ್ದನೆಯ ಸಂಕೀರ್ಣ ಪುಷ್ಪಗುಚ್ಛ, ಅಂಡಾಕಾರದ, ದೊಡ್ಡ ಗಾತ್ರದ ಗಿಳಿ ಹಸಿರು ಬಣ್ಣದ ಕಾಯಿಗಳನ್ನು ಹೊಂದಿರುವ ತಳಿ       ಕರ್ನಾಟಕದಲ್ಲಿನ ಏಲಕ್ಕಿ ಬೆಳೆಯುವ ಎಲ್ಲಾ ಪ್ರದೇಶಗಳಿಗೂ ಆಗುತ್ತದೆ.ಸರಾಸರಿ  ಇಳುವರಿ 745 ಕಿಲೋ ಗಳು
2 .  ಐಐಎಸ್ಆರ್ IISR ಅವಿನಾಶ್ (RR-1): ಬೇರು ಕಾಂಡದ ಕೊಳೆ ರೋಗಕ್ಕೆ ರೋಗ ನಿರೋಧಕ ಶಕ್ತಿ ಹೊಂದಿರುವ, ಬೇರು ಕಾಂಡದ ಕೊಳೆರೋಗ ಮತ್ತು ಎಲೆ ಬ್ಲೈಟ್ ರೋಗಗಳು ಹೆಚ್ಚಾಗಿರುವ ಪ್ರದೇಶಗಳಿಗೆ  ತಳಿ ಆಯ್ಕೆ ಮಾಡಿದರೆ ಉತ್ತಮ.ಕರ್ನಾಟಕದ ಕೊಡಗು, ಉತ್ತರ ವೈನಾಡ್, ಹಾಸನ ಮತ್ತು ಚಿಕ್ಕಮಗಳೂರು ಪ್ರದೇಶಗಳಲ್ಲಿ ಬೆಳೆಯಬಹುದು. ಸರಾಸರಿ  ಇಳುವರಿ 847 ಕಿಲೋ ಗಳು

ಐಐಎಸ್‍ಆರ್ IISR ಅವಿನಾಶ್ (RR-1
3 .  ಐಐಎಸ್ಆರ್ ವಿಜೇತಾ : ಕಟ್ಟೆ ರೋಗವನ್ನು ಸಹಿಸುವ ಶಕ್ತಿ ಹೊಂದಿದೆ. ಕೊಡಗು, ಉತ್ತರ ಕನ್ನಡ, ಹಾಸನ ಮತ್ತು ಚಿಕ್ಕಮಗಳೂರು ಪ್ರದೇಶಗಳಲ್ಲಿ  ಬೆಳೆಯಬಹುದು.          ಸರಾಸರಿ  ಇಳುವರಿ 643 ಕಿಲೋ ಗಳು
4 . ಐಸಿಆರ್-1  :  ಶೀಘ್ರ ಪಕ್ವಕ್ಕೆ ಬರುವ ಬೀಜಕೋಶಗಳನ್ನು ಹೊಂದಿದೆ. ಕೇರಳದ ದಕ್ಷಿಣ ಇಡುಕ್ಕಿ ವಲಯಕ್ಕೆ ಹೊಂದುತ್ತದೆ. ಸರಾಸರಿ  ಇಳುವರಿ 656 ಕಿಲೋ ಗಳು
5.  ಐಸಿಆರ್-2:      ಶೀಘ್ರ ಪಕ್ವಕ್ಕೆ ಬರುವ ಬೀಜಕೋಶಗಳನ್ನು ಹೊಂದಿದೆ. ಕೇರಳ ಮತ್ತು ತಮಿಳು ನಾಡಿನ  ಭಾಗಗಳಿಗೆ ಸೂಕ್ತ.           ಸರಾಸರಿ  ಇಳುವರಿ 766 ಕಿಲೋ ಗಳು
6.  ಐಸಿಆರ್-3:    ಕೊಳೆ ರೋಗಕ್ಕೆ, ರೋಗ ನಿರೋಧಕ ಶಕ್ತಿ ಹೊಂದಿದೆ.ಕರ್ನಾಟಕದ ಏಲಕ್ಕಿ ಬೆಳೆಯುವ ಪ್ರದೇಶಗಳಿಗೆಲ್ಲಾ ಹೊಂದುತ್ತದೆ. ಸರಾಸರಿ  ಇಳುವರಿ 599 ಕಿಲೊ ಗಳು.
cardamom yield
7 .  ಐಸಿಆರ್-4 (ಟಿಡಿಕೆ-4):   ಕಡಿಮೆ ಮಳೆ ಬೀಳುವ  ಅರೆಮಲೆನಾಡು ಭಾಗಕ್ಕೆ  ಹೊಂದಿಕೆಯಾಗುತ್ತದೆ. ಸರಾಸರಿ  ಇಳುವರಿ 961 ಕಿಲೋ ಗಳು       
8 .  ಐಸಿಆರ್-5 :     ಸಂಕರಣ ತಳಿ     ಕೇರಳ ರಾಜ್ಯ ಮತ್ತು ತಮಿಳು ನಾಡಿನ ಕೆಲವು ಭಾಗಗಳು ಸರಾಸರಿ ಇಳುವರಿ 1543 ಕಿಲೋಗಳು.
 9 .   ಐಸಿಆರ್-6:      ಕೊಳೆ ರೋಗ ಥ್ರಿಪ್ಸ್ಗಳು, ಕಾಂಡಕೊರಕ ಕೀಟಗಳಿಗೆ ಮತ್ತು ಬರಗಾಲಕ್ಕೆ ಸಾಧಾರಣ ಸಹಿಷ್ಣುತೆ ಹೊಂದಿರುವ ತಳಿ.          ಕೇರಳ ರಾಜ್ಯ ಮತ್ತು ತಮಿಳು ನಾಡಿನ ಕೆಲವು ಭಾಗಗಳು.         ಸರಾಸರಿ ಇಳುವರಿ 1900 ಕಿಲೋಗಳು.
10.   ಪಿವಿ – 1:  ಶೀಘ್ರ ಪಕ್ವಕ್ಕೆ ಬರುವ, ಉದ್ದನೆಯ ಕಾಯಿಗಳನ್ನು ಹೊಂದಿರುವ ತಳಿ.    ಕೇರಳ ರಾಜ್ಯ ಮತ್ತು ತಮಿಳು ನಾಡಿನ ಕೆಲವು ಭಾಗಗಳು. ಸರಾಸರಿ ಇಳುವರಿ 500 ಕಿಲೋಗಳು.
11.  ಪಿವಿ – 2 : ಕಡು ಹಸಿರು ಬಣ್ಣ         ಕೇರಳ ಬೆಳೆಯಲಾಗುತ್ತದೆ ಸರಾಸರಿ ಇಳುವರಿ 982 ಕಿಲೋಗಳು.
12      :    ಥ್ರಿಪ್ಸ್, ಕಾಂಡಕೊರಕಕ್ಕೆ ಮತ್ತು ಸಹಿಷ್ಣುತೆ ಹೊಂದಿದೆ.           ಕರ್ನಾಟಕದಲ್ಲಿನ ಏಲಕ್ಕಿ ಬೆಳೆಯುವ  ಎಲ್ಲಾ ಮಲೆನಾಡಿನ ಪ್ರದೇಶಗಳಿಗೂ ಆಗುತ್ತದೆ. ಸರಾಸರಿ ಇಳುವರಿ 275 ಕಿಲೋಗಳು.
13      ಮೂಡಿಗೆರೆ-2:    ಕರ್ನಾಟಕದ ಕಣಿವೆ ಪ್ರದೇಶಗಳಲ್ಲಿ ಸಾಗುವಳಿ ಮಾಡಲು ಸೂಕ್ತ ತಳಿ. ಕರ್ನಾಟಕದಲ್ಲಿನ ಏಲಕ್ಕಿ ಬೆಳೆಯುವ ಮಲೆನಾಡಿನ  ಎಲ್ಲಾ ಪ್ರದೇಶಗಳಿಗೂ ಸೂಕ್ತವಾಗಿದೆ.ಸರಾಸರಿ ಇಳುವರಿ 475 ಕಿಲೋಗಳು.
 14      ಮೂಡಿಗೆರೆ-3 :   ಥ್ರಿಪ್ಸ್, ಕಾಂಡಕೊರಕಕ್ಕೆ ಮತ್ತು ಸಹಿಷ್ಣುತೆ ಹೊಂದಿದೆ. ಕರ್ನಾಟಕದಲ್ಲಿನ ಏಲಕ್ಕಿ ಬೆಳೆಯುವ ಮಲೆನಾಡಿನ ಪ್ರದೇಶಗಳಿಗೆ ಸೂಕ್ತ.  ಸರಾಸರಿ ಇಳುವರಿ 400 ಕಿಲೋಗಳು.
15      ನೆಲಯನಿ ಗ್ರೀನ್ ಗೋಲ್ಟ್  : ಆರ್ಥಿಕ ಉತ್ಪಾದನಾ ಕ್ರಮಗಳಿಗೆ ಸೂಕ್ತ ಕೇರಳ ಮತ್ತು ಕರ್ನಾಟಕ ಬೆಳೆಯಲಾಗುತ್ತದೆ. ಸರಾಸರಿ ಇಳುವರಿ 1000 ಕಿಲೋಗಳು. 

ಮೂಡಿಗೆರೆ-1

ಕಂದುಗಳ ಮೂಲಕ ಸಸ್ಯಾಭಿವೃದ್ಧಿ :

 •  ಏಲಕ್ಕಿಯನ್ನು ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವುದು ಉತ್ತಮ ವಿಧಾನ.
 • ಉತ್ತಮ ಇಳುವರಿ ಕೊಡುವ ತಳಿಗಳನ್ನು ಚೆನ್ನಾಗಿ ಬೆಳೆದಿರುವ ಕಂದು ಗೆಡ್ಡೆ ಮತ್ತು ಸಣ್ಣ ಕಂದನ್ನು ಹೊಂದಿರಬೇಕು.
 • ಕಂದುಗಳ ನರ್ಸರಿಯನ್ನು ಮಾರ್ಚ್ ತಿಂಗಳ ಮೊದಲನೇ ವಾರದಿಂದ ಸೆಪ್ಟೆಂಬರ್ ತಿಂಗಳವರೆಗೆ ನೆಡಬಹುದು.
 • ಸಸಿ ಬೆಳೆಸಲು ಸ್ಥಳದ ಆಯ್ಕೆ ಮಾಡುವಾಗ ನೀರಿನ ಸೌಲಭ್ಯವಿರಬೇಕು.

ಏಲಕ್ಕಿ ಬೆಳೆಗಾರರಿಗೆ ಬೇಕಾಗುವ ಬೆಳೆ ಮಾಹಿತಿ ಮತ್ತು ತಳಿ ಅಯ್ಕೆಗೆ ಸಂಬಂಧಿಸಿದಂತೆ ಭಾರತ ಕೃಷಿ ಅನುಸಂಧಾನ ಪರಿಷತ್ತಿನ ಅಧೀನದಲ್ಲಿ  ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆಯು  ಮಡಿಕೇರಿಯ ಅಪ್ಪಂಗಳದಲ್ಲಿ ಇದ್ದು, ಇದು ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ.
 ಲೇಖಕರು; ಅಂಕೇಗೌಡ ಎಸ್. ಜೆ., ಹೊನ್ನಪ್ಪ ಆಸಂಗಿ, ಶಿವಕುಮಾರ್ ಎಂ. ಎಸ್, ಅಕ್ಷಿತಾ ಎಚ್. ಜೆ., ಬಾಲಾಜಿ ರಾಜ್‍ಕುಮಾರ್ ಎಂ. ಮತ್ತು ಮೊಹಮ್ಮದ್ ಫೈಸಲ್ ಪಿ.ಸಿ..ಆರ್.- ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ, ಕೊಡಗು– 571 201
 end of the article: ——————————————————————————-
search words:  Cardamom varieties# cardamom cultivation methods# Cardamom  research# Nalyani  Gold#  ICRR -6 Cardamom#  Appangala -1 cardamom# Avinash Cardamom #

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!