ಮಾನವ ಮತ್ತು ಪಶುಗಳ ಅಸ್ವಾಸ್ತ್ಯಕ್ಕೆ ಕಾರಣವಾಗುವ ಆಹಾರ ವಸ್ತುಗಳು..

ಹತ್ತಿ ಹಿಂಡಿಯಲ್ಲಿ ಶಿಲೀಂದ್ರ ಬೆಳೆದಿರುವುದು

ನಾವು ಮತ್ತು ಪಶುಗಳಿಗೆ ತಿನ್ನಿಸುವ ಆಹಾರದಲ್ಲಿ ಕೆಲವೊಮ್ಮೆ ಶಿಲೀಂದ್ರ ಬೆಳೆದಿರುತ್ತದೆ. ಇದು ಒಂದು ವಿಷ.ಇದನ್ನು ಅಪ್ಲೋಟಾಕ್ಸಿನ್ ಎನ್ನುತ್ತಾರೆ. ಅಫ್ಲಾಟಾಕ್ಸಿನ್  ಎಂಬುದು ಒಂದು ವಿಧದ ಶಿಲೀಂದ್ರ ಉತ್ಪತ್ತಿ ಮಾಡುವ ವಿಷಕಾರಿ ಅಂಶ.  ನಾವು ಬಳಕೆ ಮಾಡುವ ಬೇರೆ ಬೇರೆ ವಸ್ತುಗಳ ಮೂಲಕ  ಅದು ನಮ್ಮ ಶರೀರವನ್ನು ಪ್ರವೇಶಿಸಿ ನಮ್ಮಲ್ಲಿ  ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ.  ಈ ಶಿಲೀಂದ್ರದ  ಹೆಸರು : Aspergillus flavus.ಮತ್ತು  Aspergillus Parasiticus ಇದು ಬೀಜಾಣು ರೂಪದಲ್ಲಿ ಮನುಷ್ಯ  ಹಾಗೂ ಪ್ರಾಣಿಗಳ ಶರೀರಕ್ಕೆ ಸೇರಿದಾಗ, ಅದರ ವಿಷ ಜೀವ ಕೋಶಗಳ ಮೇಲೆ ತೊಂದರೆ ಮಾಡುತ್ತವೆ. ಮಾನವ ಮತ್ತು ಪಶುಗಳ ಅಸ್ವಾಸ್ತ್ಯಕ್ಕೆ ಇದು ಪ್ರಮುಖ ಕಾರಣವಾಗುತ್ತದೆ

  • ಇದು ಬಹುತೇಕ ಕೃಷಿ ಉತ್ಪನ್ನಗಳಲ್ಲಿ ತೇವಾಂಶ ಸಮರ್ಪಕವಾಗಿ ಆರದೆ ಇದ್ದಾಗ, ಸರಿಯಾಗಿ ದಾಸ್ತಾನು ಮಾಡದೇ ಇದ್ದರೆ ಅದರಲ್ಲಿ ಬೆಳೆಯುತ್ತದೆ.
  • ಅಲ್ಲಿ  ವೃದ್ದಿಯಾಗುತ್ತದೆ. ರೈತರು ಬೆಳೆಯುವ ಹಲವಾರು ಪ್ರಮುಖ ಉತ್ಪನ್ನಗಳಲ್ಲಿ ಈ ಶಿಲೀಂದ್ರ  ಬೆಳೆಯುತ್ತದೆ.
  • ಪ್ರಪಂಚದಾದ್ಯಂತ ಈ ಒಂದು ಶಿಲೀಂದ್ರ ವಿಷ, ಆರೋಗ್ಯ ದೃಷ್ಟಿಯಲ್ಲಿ ತೊಂದರೆದಾಯಕವೆಂದು ಪರಿಗಣಿಸಲ್ಪಟ್ಟಿದೆ.
ಪಶುಗಳು ತಿನ್ನುವ ಹಿಂಡಿಯಲ್ಲಿ ಬೆಳೆದ ಶಿಲೀಂದ್ರ

ಎಲ್ಲೆಲ್ಲಿ ಈ ಶಿಲೀಂದ್ರ ಬೆಳೆಯುತ್ತದೆ:

  • ಪ್ರಮುಖ ವಾಣಿಜ್ಯ ಬೆಳೆಗಳಾದ ಅಕ್ಕಿ, ಮೆಕ್ಕೇ ಜೋಳ, ಕಡಲೆ, ನೆಲಕಡ್ಲೆ, ತೊಗರಿ,  ಹತ್ತಿ, ಭತ್ತ , ಕೊಬ್ಬರಿ, ಮುಂತಾದ ಬಹುತೇಕ ಬೆಳೆಗಳಿಗೆ ಇದರ ತೊಂದರೆ ಇದೆ.
  • ಇದು ಬಾಧಿಸಿದಾಗ  ಧಾನ್ಯದ ಕಾಳುಗಳು ಕಪ್ಪು ವರ್ಣಕ್ಕೆ ತಿರುಗುತ್ತದೆ.
  • ಇದರಲ್ಲಿ ಶಿಲೀಂದ್ರಗಳು ವೃದ್ದಿಯಾಗುತ್ತಾ ಹೋಗುತ್ತದೆ.
  • ಬರೇ ರೈತರು ಬೆಳೆಯುವ ಬೆಳೆ ಮಾತ್ರವಲ್ಲ, ಕೆಲವು ಸಿದ್ದವಸ್ತುಗಳಲ್ಲೂ ಇದು ಬೆಳೆಯುತ್ತದೆ.
  • ಎಣ್ಣೆ, ಮಾಂಸ,  ತರಕಾರಿ, ಹಣ್ಣು ಹಂಪಲುಗಳಲ್ಲಿ , ಮಸಾಲೆ ಹುಡಿಗಳಲ್ಲಿ, ಮಸಾಲೆ ಪದಾರ್ಥಗಳಲ್ಲಿ, ಹಾಲಿನ ಉತ್ಪನ್ನಗಳಲ್ಲೂ ಇದು ಬೆಳೆಯುತ್ತದೆ.
  • ನಮ್ಮ ಹಿರಿಯರು ತಾಜಾ ಆಹಾರ ವಸ್ತುಗಳನ್ನೇ ಬಳಸಬೇಕು ಎಂದು ಹೇಳುತ್ತಿದ್ದರು.
  • ಇದಕ್ಕೆ ಕಾರಣ ಮತ್ತೇನಲ್ಲ, ಅದರಲ್ಲಿ ಈ ಶಿಲೀಂದ್ರ ಬೆಳೆದರೆ ಅದು ರೋಗ ತರಬಹುದು.
ಪಶುಗಳ ಅಹಾರಕ್ಕೆ ಬಳಸುವ ಜೋಳದಲ್ಲಿ ಶಿಲೀಂದ್ರ


ಕೆಲವೊಮ್ಮೆ ನಾವು ಏನಾದರೂ ತಿಂದಾಗ ಗಂಟಲು ನೋವು ಮುಂತಾದ ಅಸ್ವಾಸ್ತ್ಯ್ಹ ಉಂಟಾದರೆ ಅದು ಕಲುಷಿತವಾಗಿದೆ ಎಂದರ್ಥ. ಬಹುತೇಕ ಶಿಲೀಂದ್ರ ಬೆಳೆದ ವಸ್ತುವನ್ನು ಸೇವಿಸಿದಾಗ ಅಸ್ವಾಸ್ತ್ಯ್ಹ ಖಾತ್ರಿ.

ಅಪ್ಲೋಟಾಕ್ಸಿನ್ ಎಂದರೇನು:

  • ಅಪ್ಲೋಟಾಕ್ಸಿನ್ ಎಂಬುದು  ಶಿಲೀಂದ್ರ ವಿಷ. ಇದು ಸಾಧಾರಣ ಬಿಸಿಯಲ್ಲಿ ನಾಶವಾಗದು.
  • ಸುಮಾರು 160 ಡಿಗ್ರಿಗಿಂತ ಹೆಚ್ಚಿನ ಶಾಖದಲ್ಲಿ ಬಿಸಿಮಾಡಿದಾಗ ಮಾತ್ರ ಸಾಯುತ್ತದೆ.
  • ಇದು ಕ್ಯಾನ್ಸರ್ ಕಾರಕ (carcinogenic) ಶಿಲೀಂದ್ರ ವಿಷ. ಇಂಟರ್ ನ್ಯಾಶನಲ್ ಏಜೆನ್ಸೀ  ರೀಸರ್ಚ್ ಓನ್ ಕ್ಯಾನ್ಸರ್ (IARC) ಕೆಲವೊಂದು ಶಿಲೀಂದ್ರಗಳನ್ನು ಕ್ಯಾನ್ಸರ್ ಕಾರಕ ಎಂದು ಗುರುತಿಸಿದೆ.
  • ಅದರಲ್ಲಿ ಅಪ್ಲೋಟಾಕ್ಸಿನ್  ಉತ್ಪತ್ತಿ ಮಾಡುವ ಶಿಲೀಂದ್ರ ಕೂಡ ಒಂದು. ಪ್ರಪಂಚದ ಬಹುತೇಕ ಒಣಗಿಸಿ ಸಂಸ್ಕ್ರರಿಸುವ ಆಹಾರ ಧಾನ್ಯಗಳಲ್ಲಿ ಇದು ಬೆಳೆಯುತ್ತದೆ.
  • ನಾವು ಅಂಗಡಿಯಿಂದ ದನ ಕರುಗಳಿಗೆ ತಿನ್ನುಸುವುದಕ್ಕಾಗಿ ಹಿಂಡಿಗಳನ್ನು ( ನೆಲಕಡ್ಲೆ, ಹತ್ತಿ, ತೆಂಗಿನ ಹಿಂಡಿ, ಮೆಕ್ಕೆಜೋಳ) ಮುಂತಾದವುಗಳನ್ನು ತರುತ್ತೇವೆ.
  • ಇದರಲ್ಲಿ ಅಲ್ಲಲ್ಲಿ ಕಪ್ಪು ಇರುವ ( ಸಾಮಾನ್ಯವಾಗಿ ಇದು ಹಸುರು ಮಿಶ್ರ ಕಪ್ಪು ಬಣ್ಣದಲ್ಲಿ ಗೋಚರವಾಗುತ್ತದೆ) ಬೂಸ್ಟ್ ಬಂದದ್ದಿದ್ದರೆ ಅದರಲ್ಲಿ ಅಪ್ಲೋಟಾಕ್ಸಿನ್ ಬೆಳೆದಿದೆ ಎಂದರ್ಥ.
  • ಅದೇ ರೀತಿಯಲ್ಲಿ  ಮೆಕ್ಕೆ ಜೋಳ, ಅಥವಾ ಅದರ ಹುಡಿ ತಂದಾಗ ಅದರಲ್ಲಿ ಈ ಶಿಲೀಂದ್ರ ಬೆಳೆದಿರಬಹುದು.
  • ಇವೆಲ್ಲಾ ದನಗಳು ತಿನ್ನುವ ಆಹಾರವಾಗಿರುತ್ತವೆ.
  • ಇದನ್ನು ದನಗಳಿಗೆ  ತಿನ್ನಿಸಿದಾಗ ಈ ವಿಷ  ಪಶುವಿನ ಶರೀರದಲ್ಲಿ ಸೇರಿ ಅದರ ಹಾಲು ಕುಡಿದ ನಮಗೆ ವರ್ಗಾವಣೆ ಆಗುತ್ತದೆ.
  • ತಿಂದ ದನಕ್ಕೆ  ಆಹಾರ ವಿಷ ( ಫ಼್ಹುಡ್ ಪಾಯಿಸನ್) ಉಂಟಾಗುತ್ತದೆ.
ಎಣ್ಣೆ ಕೊಬ್ಬರಿಯಲ್ಲಿ ಶಿಲೀಂದ್ರ


ಮಾನವನ ಬಳಕೆಗಾಗಿ  ಬಳಸುವ ಅಕ್ಕಿ, ಗೋಧಿ, ಕಡ್ಲೆ, ನೆಲಕಡ್ಲೆ, ಗೋಡಂಬಿ, ಇದರಲ್ಲೂ ನೀಲಿ ಮಿಶ್ರ ಶಿಲೀಂದ್ರ ಬೆಳೆದಿದ್ದರೆ ಅದರಲ್ಲಿ ಈ ವಿಷ ಇರುತ್ತದೆ. ಪೇಡಾ, ಮುಂತಾದ ಹಾಲಿನ ಉತ್ಪನ್ನ, ಸರಿಯಾಗಿ ಒಣಗದೇ ಇರುವ ಮತ್ತು ತಯಾರಿಸಿ ಒಂದೆರಡು ದಿನ ಕಳೆದ ಸಿಹಿ ತಿಂಡಿಗಳು ಸರಿಯಾಗಿ ಒಣಗದ ಕೊಬ್ಬರಿಯಿಂದ ತೆಗೆದ ಎಣ್ಣೆಯಲ್ಲೂ ಈ ವಿಷ  ಸೇರಿಕೊಂಡು ಬಳಸುವ ಮಾನವನಿಗೆ ವರ್ಗಾವಣೆಯಾಗುತ್ತದೆ. ನಾವು ಉತ್ಪಾದಿಸುವ ಅಡಿಕೆಯಲ್ಲಿ ಸರಿಯಾಗಿ ಒಣಗದೇ ಇದ್ದರೆ ಅಥವಾ ಹೊರ ವಾತಾವರಣದ ತೇವಾಂಶ ಹೀರಿಕೊಂಡು ಈ ಶಿಲೀಂದ್ರ ಬೆಳೆಯುತ್ತದೆ.

ಮಾನವ- ಪ್ರಾಣಿಗಳ ಮೇಲೆ ಅಪ್ಲೋಟಾಕ್ಸಿನ್ ಪರಿಣಾಮ:

ಸರಿಯಾಗಿ ಒಣಗಿರದ ಅಡಿಕೆಯಲ್ಲಿ ಶಿಲೀಂದ್ರ
  • ಅಫ್ಲಾಟಾಕ್ಸಿನ್ ಸೇವನೆಯಿಂದಾಗಿ ಉಂಟಾಗುವ ವಿಷದ ತೀವ್ರತೆಯು ವರ್ಗ, ವಯಸ್ಸು, ಲಿಂಗ ಮತ್ತು ಪೌಷ್ಠಿಕಾಂಶದ ಸ್ಥಿತಿಯನ್ನು ಅವಲಂಬಿಸಿರುತ್ತದೆ.
  • ಯಕೃತ್ತಿನ ಮೇಲೆ ವಿಷದ ಪ್ರಮುಖ ಪರಿಣಾಮ ಉಂಟಾಗುತ್ತದೆ. ಯಕೃತ್ತಿಗೆ ಹಾನಿ ಉಂಟಾಗುತ್ತದೆ.
  • ಪಶುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಪ್ರಾಣಿಗಳಲ್ಲಿ ಜಠರ ಕರುಳಿನ ಅಸಾಮಾನ್ಯ ಕ್ರಿಯೆ, ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ.
  • ದೇಹಕ್ಕೆ ಆಹಾರದ ಬಳಕೆ  ಮತ್ತು ದಕ್ಷತೆ ಕಡಿಮೆಯಾಗುತ್ತದೆ.
  • ರಕ್ತಹೀನತೆ ಮತ್ತು ಕಾಮಾಲೆ ರೋಗಲಕ್ಷಣಗಳು ಉಂಟಾಗುತ್ತದೆ.
  • ಅಫ್ಲಾಟಾಕ್ಸಿನ್ ಬಾಧಿತ  ಫೀಡ್ ಬಳಸಿದಾಗ ಇದು ಡೈರಿ ದನಗಳ ಹಾಲಿನಲ್ಲಿ ಹೊರಹಾಕಲ್ಪಡುತ್ತದೆ.
  • ಇದರ ಕಾರ್ಸಿನೋಜೆನಿಕ್ ಪರಿಣಾಮವು ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತವೆ.
  • ಎಎಫ್‌ಬಿ 1, ಕ್ಯಾನ್ಸರ್ ಎಂದು ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ಗುರುತಿಸಿದ ಏಕೈಕ ವಿಷವಾಗಿದೆ.
ನೆಲಕಡ್ಲೆ ಬೀಜದಲ್ಲಿ ಶಿಲೀಂದ್ರ


ಮಾನವ ಆರೋಗ್ಯ ಅಫ್ಲಾಟಾಕ್ಸಿನ್ ವಿಷದ ಹಲವಾರು ಪರಿಣಾಮಗಳನ್ನು ಅಧ್ಯಯನ ಮಾಡಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಹೆಚ್ಚಿನ  ಪ್ರಮಾಣದಲ್ಲಿ ಅಫ್ಲಾಟಾಕ್ಸಿಕೋಸಿಸ್ ವಿಷ ಸೇರಿರುವ ವರದಿಯಾಗಿದೆ. ರಕ್ತಸ್ರಾವ, ತೀವ್ರವಾದ ಪಿತ್ತಜನಕಾಂಗದ ಹಾನಿ, ಎಡಿಮಾ, ಕ್ಯಾನ್ಸರ್ ,ಜೀರ್ಣಕ್ರಿಯೆಯ ತೊಂದರೆಗಳು ಮತ್ತು ಸಾವು ಇದರ ಲಕ್ಷಣಗಳಾಗಿವೆ.

  • ಪ್ರಾರಂಭದ ಹಂತದಲ್ಲಿ  ಅಫ್ಲಾಟಾಕ್ಸಿನ್ ವಿಷವು ಕೆಲವು ಲಕ್ಷಣಗಳ ಮೂಲಕ ಗೊತ್ತಾಗುತ್ತದೆ.
  • ಕ್ರಮೇಣ ಅದು ಹೆಚ್ಚಾಗುತ್ತಾ ಬರುತ್ತದೆ.
  • ಜೀರ್ಣಕ್ರಿಯೆ ಸರಿಯಾಗಿ ನಡೆಯದೆ ಇರುವುದು, ಇದರ ಪ್ರಮುಖ ಪ್ರಾಥಮಿಕ ಲಕ್ಷಣವಾಗಿರುತ್ತದೆ.
  • ಪ್ರಾರಂಭದಲ್ಲೇ ಇಂತಹ ಅನಾರೋಗ್ಯ ಸಮಸ್ಯೆಗಳು ಆಗಾಗ ಕಾಣಿಸುತ್ತಿದ್ದರೆ ನಿರ್ಲಕ್ಷ್ಯ ಮಾಡಬಾರದು.
  • ಪಶುಗಳಿಗೆ ಕೊಡುವ ಆಹಾರದಲ್ಲಿ ತುಂಬಾ ಎಚ್ಚರಿಕೆ ವಹಿಸಿ, ಸಾಧ್ಯವಾದಶ್ಟು ನಾವೇ ಕಚ್ಚಾ ಸಾಮಾಗ್ರಿಗಳನ್ನು ಒಟ್ಟು ಸೇರಿಸಿ ಪಶು ಆಹಾರ ಸಿದ್ದಪಡಿಸುವುದು ಶ್ರೇಯಸ್ಕರ.
  • ಹಾಲಿನ ಮೂಲಕ ಅದು ಮನುಷ್ಯರಿಗೆ ವರ್ಗಾವಣೆ ಆಗುವುದು ತಡೆಯಲ್ಪಡುತ್ತದೆ.

ನಾವು ಸಾಧ್ಯವಾದಷ್ಟು ತಾಜಾ ಧವಸ ಧಾನ್ಯಗಳನ್ನು ಬಳಕೆ ಮಾಡಬೇಕು. ಯಾವುದೇ ಶಿಲೀಂದ್ರ ಬೆಳೆದ ಬೇಳೆ ಕಾಳುಗಳನ್ನು ಬಳಸಬಾರದು.ಸಾಧ್ಯವಾದಷ್ಟು ಮಜ್ಜಿಗೆಯನ್ನು ಸೇವಿಸಬೇಕು. ಮಜ್ಜಿಗೆ ಜಠರ ಹಾಗೂ ಕರುಳಿಗೆ ಸಂಬಂಧ ಪಟ್ಟಂತೆ ಒಂದು ರಕ್ಷಕವಾಗಿರುತ್ತದೆ. ಅದರಲ್ಲಿರುವ ಉಪಕಾರೀ lactic acid bacteria  Lactobacillus  ಬ್ಯಾಕ್ಟೀರಿಯಾ ಇಂಥಹ ವಿಷವನ್ನು ಸಾಯಿಸುತ್ತದೆ.

end of the articleL:———————————————————————-
search words: Aflatoxins # Food poison# Food contamination#  human health# animal health # pulses# Storage  defect of food item#
 
 
 
 

Leave a Reply

Your email address will not be published. Required fields are marked *

error: Content is protected !!