ಬೀಜ ಜನ್ಯ ರೋಗಗಳು ಬಾರದಂತೆ ತಡೆಯುವ ವಿಧಾನ.

ಎಲ್ಲದಕ್ಕೂ ಮೂಲ ಬೀಜ. ಉತ್ತಮ ಗುಣದ ಬೀಜಗಳನ್ನು ಆಯ್ಕೆ ಮಾಡಿ, ಅದನ್ನು ಬೆಳೆಸಿದರೆ ಅದರ ಪೀಳಿಗೆಯೂ ಆರೋಗ್ಯವಾಗಿರುತ್ತದೆ. ಬಹಳಷ್ಟು ರೋಗಗಳಿಗೆ ನಾವು ಬಳಸುವ ಬೀಜಗಳೇ ಕಾರಣ. ಬೀಜದಲ್ಲಿ ರೋಗದ ಗುಣ ಸೇರಿಕೊಂಡಿದ್ದು, ಅದು ಸಸಿಯಾದಾಗ ಯಾವಾಗಲಾದರೂ ತೋರಿಕೆಗೆ ಬರಬಹುದು. ಇಂಥಹ ವೈಪರೀತ್ಯಗಳು ಈಗೀಗ ಹೆಚ್ಚಲಾರಂಭಿಸಿದೆ. ರೈತರು ಇದಕ್ಕೆ  ಔಷಧಿ ಹೊಡೆಯುವುದು ಅಷ್ಟು ಫಲಕಾರಿ ಅಲ್ಲ.

 • ನೀವು ಯಾವುದೋ ಬೀಜ ಕಂಪೆನಿಯಿಂದ ಉತ್ತಮ ಸೌತೇ ಕಾಯಿ ಬೀಜ ತಂದು ಬಿತ್ತಿ, ಬೆಳೆಸಿ.
 • ಸಸಿ ಚೆನ್ನಾಗಿ ಬೆಳೆಯುತ್ತದೆ. ಇನ್ನೇನು ಹೂ ಬಿಡುವ ಹಂತಕ್ಕಾಗುವಾಗ ಎಲ್ಲಾ ಆರೈಕೆಗಳೂ ಸಮರ್ಪಕವಾಗಿದ್ದಾಗ್ಯೂ, ಎಲೆಗಳು, ಹಳದಿಯಾಗುವುದು.
 • ಮುರುಟಿಕೊಳ್ಳುವುದು, ಬುಡ ಕೊಳೆಯುವುದು (Damping off) ಮುಂತಾದ ಸಮಸ್ಯೆ ಉಂಟಾಗುತ್ತದೆ.
 • ಇದರ ಮೂಲ ವಾತಾವರಣ ಅಲ್ಲ. ಬೀಜ.

ಎಲೆಯ ಈ ಸಮಸ್ಯೆ ಬೀಜ ಜನ್ಯವಾದುದು.

ಬೀಜದ ಆಯ್ಕೆ ವಿಧಾನ:

 • ಸ್ಥಳೀಯ ತಳಿಗಳ ಬೀಜಗಳು ಸ್ವಲ್ಪ ಗಡಸು (resistance) ಗುಣವನ್ನು ಹೊಂದಿರುತ್ತವೆ.
 • ಇದರಲ್ಲಿ ಬೀಜ ಜನ್ಯವಾದ ಖಾಯಿಲೆಗಳು ಅಪರೂಪವಾಗಿರುತ್ತವೆ.
 • ಆದರೆ ಕ್ರಾಸಿಂಗ್ ಮಾಡಿ ಪಡೆಯಲಾದ ಹೈಬ್ರೀಡ್ ತಳಿಗಳಲ್ಲಿ  ಇದು ಹೆಚ್ಚಾಗಿ ಕಂಡು ಬರುತ್ತವೆ.
 • ಅದು ಯಾವಾಗಲೂ ಗೋಚರಕ್ಕೆ ( expose) ಆಗಬಹುದು.
 •  ಹಾಗೆಂದು ಸ್ಥಳೀಯ ತಳಿಗಳೂ ಪದೇ ಪದೇ ಬೆಳೆದಾಗ ಹೀಗೆ ಆಗುವ ಸಾಧ್ಯತೆ ಇಲ್ಲದಿಲ್ಲ.

ಬೀಜೋತ್ಪಾದನೆ ಎಂಬ ವಿಷಯದಲ್ಲಿ  ತುಂಬಾ ಕೆಲಸ ಇರುತ್ತದೆ. ಹೈಬ್ರೀಡೀಕರಣ ಎಂಬುದು ಎಲ್ಲರಿಗೂ ಗೊತ್ತಿರಬಹುದು. ಯಾವುದೋ ಒಂದು ಅಧಿಕ ಇಳುವರಿ ಕೊಡಬಲ್ಲ ಗುಣದ ಮೂಲ ಮತ್ತು ಇನ್ನೇನಾದರೂ ವಿಶೇಷ ಗುಣ ಹೊಂದಿದ (ರೋಗ ನಿರೋಧಕ ಶಕ್ತಿಯನೇ ಆಯ್ಕೆ ಮಾಡಲಾಗುತ್ತದೆ) ಮೂಲಗಳಿಂದ ಕ್ರಾಸಿಂಗ್ ಮಾಡಿ (ಕೃತಕ ಪರಾಗ ಸ್ಪರ್ಶ ಮಾಡಿ) ಹೊಸ ತಲೆಮಾರಿನ ಬೀಜಗಳನ್ನು ಪಡೆಯಲಾಗುತ್ತದೆ. 

ಹಾಗಲ ಕಾಯಿಯ ಎಲೆ ಮಚ್ಚೆ ರೋಗ

 • ಆ ಬೀಜಗಳನ್ನು ಹೈಬ್ರೀಡ್ ಬೀಜಗಳೆಂದು ತಕ್ಷಣ  ಮಾರುಕಟ್ಟೆಗೆ ಬಿಡುಗಡೆ ಮಾಡುವ ಕ್ರಮ ಇಲ್ಲ.
 • ಒಂದು ಹಾಗಲಕಾಯಿ ಅಥವಾ ಸೌತೇ ಕಾಯಿಗೆ ಪ್ರಥಮ ಕ್ರಾಸಿಂಗ್ ಮಾಡಿ ಪಡೆದ ಕಾಯಿಯಲ್ಲಿ ಹಲವು ಬೀಜಗಳಿರುತ್ತವೆ.
 • ಈ ಬೀಜಗಳನ್ನೆಲ್ಲಾ ಬಿತ್ತನೆ ಮಾಡಿ, ಅದರಲ್ಲಿ  ಯಾವುದಕ್ಕೆ  ಅಪೇಕ್ಷಿತ ಗುಣ ಬಂದಿದೆಯೋ ಅದನ್ನು ಮಾತ್ರ ಆಯ್ಕೆ ಮಾಡಿ ಮತ್ತೆ ಬಿತ್ತನೆ ಮಾಡಿ ಎರಡನೇ ತಲೆಮಾರಿನ ಬೀಜಗಳನ್ನು ಆಯ್ಕೆ ಮಾಡಲಾಗುತ್ತದೆ.
 • ಆ ನಂತರ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.
 • ಈ ಸಮಯದಲ್ಲೂ ಅದರಲ್ಲಿ ಕೆಲವು ಬೀಜ ಜನ್ಯ ರೋಗಗಳು ( ಸೊರಗು ರೋಗ ಇತ್ಯಾದಿ) ಉಳಿಯುವ ಸಾಧ್ಯತೆ ಇರುತ್ತದೆ.
 • ಅದು ರೈತರ ಹೊಲದಲ್ಲಿ ಬೆಳೆಯುವಾಗ ಗೋಚರವಾಗುವ ಸಾದ್ಯತೆ ಇರುತ್ತದೆ.
 • ಕೆಲವೊಮ್ಮೆ ಈ ಹಂತಗಳಲ್ಲಿ ಕೆಲವು ಅವಸರವನ್ನು ಮಾಡಿದರೂ ಸಹ ಈ ಸಮಸ್ಯೆಗಳು ಬರಬಹುದು.

ಬೀಜಗಳನ್ನು ಕೊಳ್ಳುವಾಗ ಅದು ಪ್ರಮಾಣಿಕೃತ ಬೀಜಗಳಾಗಿರಬೇಕು. ಸ್ಥಳೀಯವಾಗಿ ಅವರವರೇ ಬೀಜೋತ್ಪಾದನೆ ಮಾಡುವುದಿದ್ದರೆ ಆ ಸಸಿಗೆ ಯಾವ ರೋಗವೂ ಬಂದಿರಬಾರದು. ಬೀಜದ ಕಾಯಿಗೂ ಬಂದಿರಬಾರದು. ಬೀಜದ ಮೂಲಕ ರೋಗಗಳು ಪ್ರಸಾರವಾಗುತ್ತದೆ. ಆದ ಕಾರಣ ವಾಣಿಜ್ಯ ಉದ್ದೇಶಕ್ಕೆ ಬೆಳೆ ಬೆಳೆಸುವವರು ಉತ್ತಮ ಬೀಜೋಪಚಾರ ಮಾಡಿದ ಬೀಜಗಳನ್ನೇ ಆಯ್ಕೆ ಮಾಡುವುದು ಸೂಕ್ತ.

ಇದಕ್ಕೆ ಪರಿಹಾರ ಇದೆಯೇ:

 • ಬೀಜ ಜನ್ಯವಾದ ಹೆಚ್ಚಿನ ರೋಗಗಳಿಗೆ ಪರಿಹಾರ ಇಲ್ಲ.
 • ಬೆಳೆ ಬೆಳೆಸುವಾಗ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನೂ, ಕೀಟ, ರೋಗ ಮುನ್ನೆಚ್ಚರಿಕೆ ಕ್ರಮಗಳನ್ನೂ ಅನುಸರಿಸಿದರೆ, ಸಸ್ಯಾರೋಗ್ಯ  ಚೆನ್ನಾಗಿ ಕಾಯ್ದುಕೊಂಡರೆ ಸ್ವಲ್ಪ ತಡವಾಗಿ ರೋಗ ಗೋಚರವಾಗಬಹುದು.
 • ಅಗ ಫಸಲು ಮುಗಿದು ಅಂತಿಮ ಹಂತವಾದ ಕಾರಣ ನಷ್ಟ ಕಡಿಮೆ ಆಗಬಹುದು.
 • ಆದರೆ ಬಾರದೆ ಇರುವ ಸಾಧ್ಯತೆ ಕಡಿಮೆ.ಇದಕ್ಕೆ ಕೀಟ ನಾಶಕ ಸಿಂಪರಣೆಯಿಂದ  ಪ್ರಯೋಜನ ಇಲ್ಲ.
 • ರೋಗ ನಾಶಕಗಳೂ ಹೆಚ್ಚಿನ ಸಂದರ್ಭಗಳಲ್ಲಿ ಫಲಕಾರಿಯಾಗಲಾರವು.
 • ಎಲೆ ಮಡಚಿದ್ದರೆ, ಹುಳ ಇದ್ದರೆ, ಅಥವಾ ಯಾವುದಾದರೂ ರಸ ಹೀರುವ ಕಿಟ ಇದ್ದರೆ ಮಾತ್ರ ಕೀಟನಾಶಕ ಸಿಂಪರಣೆ ಮಾಡಿ.
 • ಬೀಜ ಜನ್ಯ ರೋಗಗಳಿಗೆ ಪರಿಣಾಮಕಾರೀ ಔಷದೋಪಚಾರ ಇಲ್ಲ. ಬೀಜೋಪಚಾರಗಳು ಸ್ವಲ್ಪ ಫಲ ಕೊಡಬಲ್ಲವು.

ಎಲೆ ರೋಗ

ಸರಕಾರೀ ವ್ಯವಸ್ಥೆಯಲ್ಲಿ ಇದು ಕಡಿಮೆ:

 • ಸರಕಾರದ ವ್ಯವಸ್ಥೆಯಲ್ಲಿ ಒಂದು ಬೀಜ ಮಾರುಕಟ್ಟೆಗೆ ಬಿಡುಗಡೆಯಾಗುವ ಹಂತಕ್ಕೆ ಬರಬೇಕಾದರೆ ಅದಕ್ಕೆ ಎಷ್ಟೆಲ್ಲಾ ಫಿಲ್ಡ್ ಟ್ರಯಲ್ ಗಳು ಆಗಬೇಕೋ  ಅದು ಮುಗಿದ ನಂತರವೇ ಅದಕ್ಕೆ ಬಿಡುಗಡೆಗೆ ಅನುಮೋದನೆ ಸಿಗುತ್ತದೆ.
 • ಇದಕ್ಕೆಂದೇ ಕಮಿಟಿಗಳೂ ಇರುತ್ತವೆ. Central Variety Release Committee (CVRC) at the Central level and State Variety Release Committee at State level.
ಇದು ರೋಗ ಅಲ್ಲ. ಎಲೆಯ ಅಡಿಯಲ್ಲಿ ಹೇನುಗಳು ಹಾನಿ ಮಾಡಿ ಆದದ್ದು.
ಇದು ರೋಗ ಅಲ್ಲ. ಎಲೆಯ ಅಡಿಯಲ್ಲಿ ಹೇನುಗಳು ಹಾನಿ ಮಾಡಿ ಆದದ್ದು.
 • ಸರಕಾರೀ ವ್ಯವಸ್ಥೆಯಲ್ಲಿ  ಬಂಡವಾಳ ಸರಕಾರದ್ದು.
 • ಬಂಡವಾಳ ಹಿಂದೆಗೆಯುವ ತರಾತುರಿ ಇರುವುದಿಲ್ಲ.
 • ಆದ ಕಾರಣ ಎಲ್ಲಾ ಹಂತಗಳನ್ನೂ ಮುಗಿಸಿ ಬಿಡುಗಡೆ ಆಗುವ  ಕಾರಣ ಅಂತಹ ಸಮಸ್ಯೆ ಕಡಿಮೆ ಇರುತ್ತದೆ.
 • ಖಾಸಗಿಯವರಲ್ಲಿ ಸಹಜವಾಗಿ ಸ್ವಲ್ಪ ತರಾತುರಿ ಇದ್ದೇ ಇರುತ್ತದೆ.

ರೈತರು ಸಾಧ್ಯವಾದಷ್ಟು ವಿಶ್ವಾಸಾರ್ಹ ಕಂಪೆನಿಯ ಬೀಜಗಳನ್ನೇ ಖರೀದಿ ಮಾಡಬೇಕು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಥವಾ ಕೆಲವು ಸಂಶೋಧನಾ ಕೇಂದ್ರಗಳಲ್ಲಿ ದೊರೆಯುವ ಬೀಜಗಳನ್ನು ಆಯ್ಕೆ ಮಾಡಬಹುದು. ಇಂಥ ರೋಗಗಳು ಹೆಚ್ಚಾಗಿ ಗೋಚರಕ್ಕೆ ಬಂದರೆ ಸರಕಾರದ ಸಂಬಂಧಿಸಿದ ಅಭಿವೃದ್ದಿ ಇಲಾಖೆಗೆ ಲಿಖಿತ ದೂರು ಕೊಡಿ.
end of the article:—————————————————————————–
search words: seeds# seed selection # seed born diseases # seeds and diseases# vegetables # vegetable seeds # hybrid seeds#

Leave a Reply

Your email address will not be published. Required fields are marked *

error: Content is protected !!