ಯಾವುದೇ ಸಸ್ಯವಿರಲಿ, ಬೇರು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಸಸ್ಯಕ್ಕೆ ಬೇರು ಮುಖ್ಯ ಆಧಾರ ಸ್ಥಂಭ. ಇದು ಮಣ್ಣು, ನೀರು, ಕೀಟಗಳು ಮತ್ತು ಪೋಷಕಗಳ ಅಸಮತೋಲನದಿಂದ ತೊಂದರೆಗೆ ಒಳಗಾಗುತ್ತದೆ. ಇದನ್ನು ಪ್ರತೀಯೊಬ್ಬ ರೈತರೂ ಗಮನಿಸಿ ಅದನ್ನು ಸರಿಪಡಿಸಿದರೆ ಮರ ಆರೋಗ್ಯವಾಗಿರುತ್ತದೆ.
- ಅಡಿಕೆ ಮರ, ತೆಂಗಿನ ಮರ ಮುಂತಾದ ಎಲ್ಲಾ ಏಕದಳ ಸಸ್ಯಗಳ ಬೇರುಗಳು ತಳಕ್ಕೆ ಇಳಿಯದೇ ಮೇಲ್ಭಾಗದಲ್ಲೇ ಪೋಷಕಗಳನ್ನು ಹುಡುಕುತ್ತಾ ಪಸರಿಸುತ್ತಿರುತ್ತವೆ.
- ಇವು ಸಸ್ಯದ ಕಾಂಡದಿಂದ ಹುಟ್ಟಿಕೊಂಡು ಬೆಳವಣಿಗೆಯಾಗುತ್ತದೆ.
- ಸಸ್ಯದ ಸುತ್ತಲೂ ಇದು ಪಸರಿಸಿರುತ್ತದೆ. Monocot roots are fibrous, meaning they form a wide network of thin roots that originate from the stem and stay close to the surface of the soil.
- ಈ ಬೇರುಗಳು ಹೆಚ್ಚು ದಪ್ಪ ಇರುವುದಿಲ್ಲ. ಮುಖ್ಯ ಬೇರುಗಳು ಗರಿಷ್ಟ ಹೆಬ್ಬರಳಿನಷ್ಟು ದಪ್ಪ ಇರುತ್ತದೆ.
- ಅದರಿಂದ ಕವಲು ಬೇರುಗಳಾಗಿ ಬೆಳೆಯುವ ಬೇರುಗಳು ಸ್ವಲ್ಪ ಸಪುರವಾಗಿ ಇರುತ್ತವೆ.
- ಈ ಬೇರುಗಳು ತುಂಬಾ ಕೋಮಲ ಬೇರುಗಳಾಗಿದ್ದು, ಯಾವುದೇ ಬಾಹ್ಯ ಗಾಯಗಳನ್ನು ಸಹಿಸಲಾರವು.
- ಗಾಯಗಳು ಮತ್ತು ಊನಗಳು ಗುಣಮುಖವಾಗಲಾರದು.
- ಉಸಿರು ಕಟ್ಟಿದ ಸ್ಥಿತಿಯಲ್ಲಿ ಬೇರುಗಳ ಜೀವ ಕೋಶಗಳಿಗೆ ಘಾಸಿಯುಂಟಾಗುತ್ತದೆ.
ಇವು ಆರೋಗ್ಯ ಸೂಚಕಗಳು ;
- ಆರೋಗ್ಯವಂತ ಅಡಿಕೆ ಮರಕ್ಕೆ ಹಚ್ಚ ಹಸುರಾದ 10 ಗರಿಗಳು ಇರಬೇಕು. ಆ ಗರಿಗಳ ಉದ್ದ ಕನಿಷ್ಟ 2 ಮೀ. ಆದರೂ ಇರಬೇಕು.
- ಒಂದು ತೆಂಗಿನ ಮರದಲ್ಲಿ ಸುಮಾರು 40 ಗರಿಗಳು ಇರಬೇಕು.
- ಅವು ಹಚ್ಚ ಹಸುರಾಗಿದ್ದು, ಉದ್ದ 5 ಮೀ. ಗಿಂತ ಹೆಚ್ಚು ಇರಬೇಕು.
- ಗರಿಯಲ್ಲಿ ಎಲೆಗಳು ಸುಮಾರು 1 ಮೀ. ಉದ್ದ ಇರಬೇಕು.
- ಅಡಿಕೆ ಮರದ ಕಾಂಡದ ದಪ್ಪ 45-50 ಸೆಂ, ಮೀ. ಇರಬೇಕು.
- ತೆಂಗಿನದ್ದು, 2 ಅಡಿ ಸುತ್ತಳತೆ ಇರಬೇಕು. ಗರಿಗಳು ಹಳದಿಯಾಗಿ, ಅಥವಾ ತಿಳಿ ಹಸುರು ಬಣ್ಣದಲ್ಲಿ ಇರಬಾರದು.
ಬಿಳಿ ಬೇರುಗಳು ಮಾತ್ರ ಆರೋಗ್ಯವಂತ ಬೇರುಗಳು:
- ಯಾವುದೇ ಸಸ್ಯದ ಬೇರುಗಳ ಮೇಲ್ಮೈ ಬಣ್ಣ (White roots, or Fine roots) ಬಿಳಿಯಾಗಿರುತ್ತದೆ.
- ಬಿಳಿ ಬೇರುಗಳಿದ್ದರೆ ಅದು ಆರೋಗ್ಯವಾಗಿದೆ ಎಂದರ್ಥ. ಎಲ್ಲಾ ಸನ್ನಿವೇಶಗಳೂ ಸಮರ್ಪಕವಾಗಿದ್ದರೆ ಅದು ಬಿಳಿಯಾಗಿರುತ್ತದೆ.
- ಕೆಳ ಸ್ಥರದ ಬೇರುಗಳ ಬಣ್ಣ ಬೆಳೆದಂತೆ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತದೆ.
- ಬಿಳಿ ಬಣ್ಣದ ಬೇರುಗಳು ಆಹಾರ ಅರಸುವ ಮತ್ತು ಅದನ್ನು ಸಸ್ಯಕ್ಕೆ ಪೂರೈಕೆ ಮಾಡುವ ಬೇರುಗಳಾಗಿರುತ್ತವೆ.
- ಕೆಳ ಭಾಗದ ಬೇರುಗಳು ಮರಕ್ಕೆ ಆಧಾರ ಕೊಡುವ ಬೇರುಗಳಾಗಿದ್ದು, ಎರಡೂ ಪ್ರಕಾರದ ಬೇರುಗಳೂ ಸಸ್ಯಕ್ಕೆ ಅವಶ್ಯಕ.
- ದ್ವಿದಳ ಸಸ್ಯಗಳ ಬೇರುಗಳು ಇದರಿಂದ ಸ್ವಲ್ಪ ಭಿನ್ನವಾಗಿರುತ್ತವೆ.
ಬೇರುಗಳ ಮೇಲ್ಮೈಯಲ್ಲಿ ಉಬ್ಬುಗಳು ಇರುತ್ತವೆ. ಈ ಉಬ್ಬುಗಳು ಶ್ವಾಸೋಚ್ವಾಸ ನಡೆಸುವವುಗಳಾಗಿರುತ್ತವೆ, ಇದೇ ಬೇರುಗಳಲ್ಲಿ ಕವಲು ಬೇರುಗಳು ಹುಟ್ಟಿ ಬೆಳೆಯುತ್ತಿರುತ್ತದೆ. ಅಡಿಕೆ ಮರದ ಬುಡದಲ್ಲಿ ಎಲ್ಲಿಯಾದರೂ ಒಂದು ಕಡೆ ಸ್ವಲ್ಪ ಅಗೆದು ಬೇರನ್ನು ಗಮನಿಸಿ. ಸುಮಾರು 9 ರಿಂದ ಹೆಚ್ಚು ಎಲೆಗಳು ಇರುವ ಮರದ ಬೇರುಗಳು ಆರೋಗ್ಯವಾಗಿಯೇ ಇರುತ್ತವೆ. ಅದಕ್ಕಿಂತ ಕಡಿಮೆ ಎಲೆಗಳು ಇರುವ ಅಥವಾ ಶಿರ ಭಾಗ ಸಪುರವಾಗಿರುವ ಮರದ ಬೇರುಗಳನ್ನು ಅಗೆದು ನೋಡಿದರೆ ಅಂತಹ ಮರದ ಬೇರುಗಳ ಮೇಲ್ಮೈ ಕಪ್ಪಗಾಗಿರುತ್ತವೆ.ಅಂತಹ ಮರದ ಬೇರು ವ್ಯವಸ್ಥೆಗೆ ಹಾನಿ ಉಂಟಾಗಿದೆ ಎಂದರ್ಥ.
ಬೇರು ಹೇಗೆ ಹಾನಿಯಾಗುತ್ತದೆ?
- ಬೇರುಗಳ ಕೋಮಲ ತೊಗಟೆ ಮತ್ತು ಅದರ ಒಳಭಾಗದ ಅಂಗಗಳು ಬೇರೆ ಬೇರೆ ಕಾರಣಗಳಿಂದ ಹಾನಿಗೊಳಗಾಗುತ್ತವೆ.
- ಕೆಲವೇ ಕೆಲವು ಬೇರುಗಳು ಹಾಳಾಗಿದ್ದರೆ ಅಂತಹ ತೊಂದರೆ ಉಂಟಾಗುವುದಿಲ್ಲ.
- ಕಾರಣ ಅದರಲ್ಲಿ ಹಲವಾರು ಬೇರುಗಳು ಇರುತ್ತವೆ. ಹೆಚ್ಚಿನ ಬೇರುಗಳಿಗೆ ಹಾನಿಯಾದರೆ ಮಾತ್ರ ಮರದ ಬೆಳೆವಣಿಗೆ, ಇಳುವರಿ ಮೇಲೆ ಪರಿಣಾಮ ಉಂಟಾಗುತ್ತದೆ.
- ಬೇರಿನ ಭಾಗಕ್ಕೇ ಸಾವಯವ – ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ಕೋಮಲ ಬೇರುಗಳು ಹಾನಿಗೊಳಗಾಗುತ್ತದೆ.
- ಗಂಟೆಗೂ ಹೆಚ್ಚು ಸಮಯದ ತನಕ ನೀರು ನಿಂತ ಸ್ಥಿತಿ ಇದ್ದರೆ (Water logging)ಬೇರಿನ ಮೇಲ್ಮೈ ಕೊಳೆಯುತ್ತದೆ.
- ನಿರಂತರ ಅಗೆತ ಅಥವಾ,ಉಳುಮೆ ಮಾಡುವುದರಿಂದ ( Cultivation) ಬೇರು ತುಂಡಾಗಿ ಅದಕ್ಕೆ ಸೋಂಕು ತಗಲಬಹುದು.
- ಮಣ್ಣು ತುಂಬಾ ಗಟ್ಟಿಯಾಗಿದ್ದ ಪಕ್ಷದಲ್ಲಿ ಬೇರುಗಳ ಬೆಳವಣಿಗೆಗೆ ಅನನುಕೂಲ ಉಂಟಾಗಿ ಬೇರು ಬೆಳೆಯಲಾರದೆ ತೊಂದರೆಗೆ ಒಳಗಾಗಬಹುದು.
- ಬೇರು ತಿನ್ನುವ ಹುಳಗಳ (Root grub) ಬಾಧೆಯಿಂದಲೂ ಬೇರುಗಳಿಗೆ ಘಾಸಿ ಉಂಟಾಗಬಹುದು.
- ಬೇರನ್ನೇ ಆಶ್ರಯಿಸಿ ಬದುಕುವ ಮಣ್ಣಿನ ಹುಳ ಜಂತು ಹುಳದ (Nematode) ಬಾಧೆಯಿಂದಲೂ ಬೇರು ಹಾನಿಯಾಗಿರಬಹುದು. ಇದನ್ನು ರೈತರು ತಮ್ಮ ತೋಟದ ಸ್ಥಿತಿ ಗತಿ ಮೇಲೆ ತಿಳಿಯಬೇಕು.
ಬೇರಿನ ರಕ್ಷಣೆ ಹೇಗೆ:
- ಬೇರಿಗೆ ಯಾವ ತೊಂದರೆಯೂ ಆಗದಂತೆ ಕಾಪಾಡಿಕೊಳ್ಳಲು, ಕೃಷಿಕರು ಯಾವಾಗಲೂ ಸುತ್ತಲೂ ಬೀಳುವಂತೆ ಗೊಬ್ಬರಗಳನ್ನು ಹಾಕಬೇಕು.
- ಒಂದು ವರ್ಷ ಒಂದು ಬದಿಗೆ, ಮತ್ತೊಂದು ವರ್ಷ ಮತ್ತೊಂದು ಬದಿಗೆ ಹಾಕಬಾರದು.
- ಹೀಗೆ ಮಾಡುವುದರಿಂದ ಕೆಲವು ಕಡೆಗಳಲ್ಲಿ ಬೇರುಗಳಿಗೆ ಒಮ್ಮೆ ಆಹಾರ ದೊರೆಯುವುದು, ನಂತರ ದೊರೆಯದಿರುವುದು ಆಗಿ ಅಲ್ಲಿ ಬೇರುಗಳಿಗೆ ತೊಂದರೆ ಆಗಬಹುದು.
- ವರ್ಷದಲ್ಲಿ ಒಮ್ಮೆಯೇ ಗೊಬ್ಬರ ಕೊಡುವ ಬದಲು ವಿಭಜಿಸಿ ಕಡಿಮೆ ಸಾಂದ್ರತೆಯಲ್ಲಿ ನಾಲ್ಕು ಕಂತುಗಳಲ್ಲಿ ಕೊಡಬೇಕು.
- ಸಾವಯವ ಗೊಬ್ಬರಗಳನ್ನು ಕಾಂಡ ಭಾಗದಿಂದ ಕನಿಷ್ಟ 1 ಅಡಿ ದೂರದಲ್ಲಿ ಹಾಕಬೇಕು.
- ಮೇಲ್ಭಾಗದಲ್ಲಿ ಸಾವಯ ಗೊಬ್ಬರಗಳನ್ನು ಹೆಚ್ಚು ಅಗಲಕ್ಕೆ ಹರಡುವುದರಿಂದ ಮಣ್ಣು ಸಡಿಲವಾಗಿ ಬೇರಿನ ಬೆಳವಣಿಗೆಗೆ ಅನುಕೂಲವಾಗುತ್ತದೆ.
- ಮಳೆಗಾಲದಲ್ಲಿ, ಅಥವಾ ನೀರು ಬಸಿಯದಂತಹ ಮಣ್ಣು ಇರುವಲ್ಲಿ ಬಸಿಯಲು ಅನುಕೂಲ ಮಾಡಿಕೊಡಬೇಕು.
ಬೇರುಗಳು ನೆಲದ ಮೇಲು ಭಾಗದಲ್ಲಿ ತೆರೆದುಕೊಂಡಿರದಂತೆ ಸಾವಯವ ಮುಚ್ಚಿಗೆ ಹಾಕುವುದು ಉತ್ತಮ.ಬೇಸಾಯ ಕ್ರಮಗಳನ್ನು ಸರಿ ಮಾಡುವುದರಿಂದ ಮರದ ಆರೋಗ್ಯ ಸುಧಾರಿಸುತ್ತದೆ. ಕೀಟಗಳ ಸಮಸ್ಯೆ ಕಡಿಮೆಯಾಗುತ್ತದೆ. ಮರದ ಆರೋಗ್ಯ ಸರಿಯಾಗಿದ್ದರೆ ಬೇರಿನ ಬೆಳವಣಿಗೆಗೆ ಅಡ್ದಿ ಉಂಟಾಗುವುದಿಲ್ಲ. ಬೇರುಗಳಿಗೆ ಹಾನಿಯಾಗಿ ಉಂಟಾಗುವ ಮರ ಸಾಯುವ ರೋಗ( foot rot) ಸಹ ಕಡಿಮೆಯಾಗುತ್ತದೆ.
End of the article: ————————————————————————–
search words: Arecanut# Arecanut root system# Arecanut cultivation# Areca disease# Areca pests# Root system of monocot pants# Coconut plant # root damage# white roots# Nematodes#