1 ಎಕ್ರೆಗೆ 1000 ಅಡಿಕೆ ಸಸಿ-ವಿಶಿಷ್ಟ ವಿಧಾನದ ಅಡಿಕೆ ಬೇಸಾಯ.
1 ಎಕ್ರೆ ಅಡಿಕೆ ಬೆಳೆಸುವವರು ಸಾಮಾನ್ಯವಾಗಿ 500 ಅಡಿಕೆ ಸಸಿಗಳನ್ನು ನೆಡುತ್ತಾರೆ. ಅದರ ಬದಲು ಈ ರೀತಿಯ ವಿಶೇಷ ಅಂತರದ ಅಡಿಕೆ ಬೇಸಾಯದಲ್ಲಿ ಹೆಚ್ಚು ವಿಸ್ತೀರ್ಣ ಇಲ್ಲದೆ ಅಡಿಕೆ ಸಸಿಗಳನ್ನು ಹಿಡಿಸಿ ಅಧಿಕ ಫಸಲು ಪಡೆಯಬಹುದು. ಇಲ್ಲಿ ನೀರು, ಗೊಬ್ಬರ, ಶ್ರಮ ಉಳಿತಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಎದುರಾಗುವ ತೋಟ ನಿರ್ವಹಣೆ ಮೇಲ್ವಿಚಾರಣೆ ಸಮಸ್ಯೆಗೆ ಇದು ಉತ್ತಮ ಬೇಸಾಯ ವಿಧಾನ ಎನ್ನಿಸಬಲ್ಲದು. ಅಡಿಕೆ ತೋಟ ಎಂದರೆ ಸಾಲಾಗಿ ಸಸಿಗಳನ್ನು ನೆಡುವುದು, ಪರಸ್ಪರ ನಿರ್ಧಿಷ್ಟ ಅಂತರ. ಅದರಲ್ಲೂ ಚದರ ಚೌಕ…