ಅಡಿಕೆ ಮಾರುಕಟ್ಟೆ ಕುಸಿಯುತ್ತಿದೆ ! ಮತ್ತೆ ಯಾವಾಗ ಚೇತರಿಕೆ ಆಗಬಹುದು?   

ಅಡಿಕೆ ಮಾರುಕಟ್ಟೆ ಕುಸಿಯುತ್ತಿದೆ ! ಮತ್ತೆ ಯಾವಾಗ ಚೇತರಿಕೆ ಆಗಬಹುದು?

ಅಡಿಕೆ ಮಾರುಕಟ್ಟೆ ಅನಿರೀಕ್ಷಿತವಾಗಿ ಕುಸಿಯಲಾರಂಭಿಸಿದೆ. 45000 ದಿಂದ 40500 ಕ್ಕೆ ಕುಸಿಯಿತು. ಮುಂದಿನ ವಾರ ಮತ್ತೆ ಕುಸಿತವಾಗುವ ಸೂಚನೆ  ಇದೆ. ಈ ಕುಸಿತ ತಾತ್ಕಾಲಿಕವೇ ಅಥವಾ ಮತ್ತೆ ಏತರಿಕೆ ಆಗಹುದುದೇ ಎಂಬ ಕುತೂಹಲ ನಮ್ಮೆಲ್ಲರದ್ದು. ಒಂದು ತಿಂಗಳ ತನಕ ಈ ಅಸ್ತಿರತೆ ಮುಂದುವರಿಯಲಿದ್ದು, ಮತ್ತೆ ಚೇತರಿಕೆ ಆಗುವ ಸಾಧ್ಯತೆ  ಇದೆ. ಬೆಳೆಗಾರರು ನಿರಾಶರಾಗಬೇಕಾಗಿಲ್ಲ.

ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣುವ ಸೂಚನೆ ಇಲ್ಲ ಎಂಬುದಾಗಿ ಸುದ್ದಿಗಳು ಹರಡುತ್ತಿವೆ. ಆದರೆ ಕೆಲವು ಮೂಲಗಳ ಪ್ರಕಾರ ಮತ್ತೆ ಚೇತರಿಕೆ ಆಗುವ ಸಾಧ್ಯತೆ  ಇದೆ ಎನ್ನುತ್ತಾರೆ. ಒಂದೆಡೆ ಅಡಿಕೆ ಬೆಳೆ ಭಾರೀ ಕಡಿಮೆ ಇದೆ. ಮತ್ತೊಂದೆಡೆ ಮತ್ತೆ ಕೊರೋನಾ ಭೀತಿ ಎದುರಾಗಿದೆ. ಬೇಯಿಸುವ ಹಸಿ ಅಡಿಕೆ ಖರೀದಿ ದರ ಏರಿಕೆಯಾಗುತ್ತಿದೆ. ಕೆಂಪಡಿಕೆ ಮಾರುಕಟ್ಟೆಯಲ್ಲಿ ಖರೀದಿದಾರರು ಉತ್ಸಾಹದಲ್ಲಿದ್ದಾರೆ. ಇವೆಲ್ಲಾ ವಿದ್ಯಮಾನಗಳು  ಮೊದಲು ಕೆಂಪಡಿಕೆ ದರವನ್ನು ಎತ್ತಲಿದೆ. ನಂತರ ಚಾಲಿಯೂ ಚೇತರಿಸಲಿದೆ.

ಕುಸಿತ ಕಂಡ ಮಾರುಕಟ್ಟೆ ಇನ್ನು ಮುಂದಿನ ಒಂದು ತಿಂಗಳ ತನಕ ಇದೇ ಸ್ಥಿತಿಯಲ್ಲಿ ಅಥವಾ ಇನ್ನೂ ಸ್ವಲ್ಪ ಕೆಳಕ್ಕೆ ಇಳಿಯುವ ಸಂಭವ ಇದೆ. ಇದು ವ್ಯಾಪಾರಿ ತಂತ್ರಗಾರಿಕೆ. ಕಳೆದ ಎರಡು ಮೂರು ತಿಂಗಳಿಂದ ನಡೆಯುತ್ತಿರುವ ವಿಧ್ಯಮಾನಗಳು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಇನ್ನು ಧಾರಣೆ ಏರಿಕೆ ಆಗುವ ಸಂಭವ ಇಲ್ಲ ಎಂಬ ದುಗುಡ ಪ್ರಾರಂಭವಾಗಿದೆ. ಅಡಿಕೆ ಆಮದಾಗುತ್ತಿರುವ ಸುದ್ದಿಗಳು ಪ್ರಕಟವಾಗುತ್ತಿವೆ.  ಬಹಳಷ್ಟು ಬೆಳೆಗಾರರು ಹಳೆ ದಾಸ್ತಾನನ್ನು ವಿಲೇವಾರಿ ಮಾಡಿ ಮುಗಿಸಿದ್ದಾರೆ. ಇನ್ನೇನಿದ್ದರೂ ಚೆಂಡು ವ್ಯಾಪಾರಿಗಳ ಅಂಗಳದಲ್ಲಿದೆ. ಹಾಗಾಗಿ ಆಟ ಆಡುವ ಕೆಲಸ ಮಾಡಿದರೂ ಮಾಡಬಹುದು. ಅಡಿಕೆಯ ಬೇಡಿಕೆ ಸ್ಥಿರವಾಗಿದ್ದು, ಬೆಲೆ ಏರಿಕೆ ಆಗಲು ಅಡ್ಡಿ ಇಲ್ಲ.

ಏನೇನು ವಿದ್ಯಮಾನಗಳು ನಡೆಯುತ್ತಿವೆ?

 • ಕಳೆದ ಎರಡು ತಿಂಗಳಿಂದ ಅಡಿಕೆ ಮಾರುಕಟ್ಟೆ ಕುಸಿತವಾಗುತ್ತಿರುವುದನ್ನು ಕಂಡು ಬೆಳೆಗಾರರು  ಅದರಲ್ಲೂ ಹೆಚ್ಚಾಗಿ ಚೇಣಿಗೆ ವಹಿಸಿಕೊಳ್ಳುವವರು ಮಾರಾಟವನ್ನು ಮಾಡುತ್ತಾ ಬಂದಿದ್ದಾರೆ.  
 • ಚೆನ್ನಗಿರಿ, ಹೊಸನಗರ, ದಾವಣಗೆರೆ ಮುಂತಾದ ಕಡೆ  ಕಳೆದ ಒಂದು ತಿಂಗಳಿನಿಂದ  ಎಲ್ಲಾ ಕಡೆಯಲ್ಲೂ ಸರಾಸರಿ ವಾರಕ್ಕೆ 1500 ಚೀಲದಷ್ಟು ಅಢಿಕೆ ಮಾರಾಟವಾದ  ವರದಿ ಇದೆ.
 • ಇದರಲ್ಲಿ ಹೊಸ ವ್ಯವಹಾರಕ್ಕೆ ಹಣ ಹೊಂದಾಣಿಕೆ ಮಾಡುವ ಸಲುವಾಗಿ ಮಾರಾಟ ಮಾಡಿರುವಂತದ್ದೇ ಹೆಚ್ಚು.
 • ಬೆಳೆಗಾರರು ಅದರಲ್ಲೂ ಸ್ವಲ್ಪ ಸ್ವಲ್ಪ ತಾವೇ ಬೇಯಿಸಿ ಅಡಿಕೆ ತಯಾರು ಮಾಡುವವರು ಮಾತ್ರ ದಾಸ್ತಾನು ಇಟ್ಟುಕೊಂಡಿದ್ದಾರೆ.
 • ನಿಖರವಾದ ಲೆಕ್ಕಾಚಾರ ಅಲ್ಲದಿದ್ದರೂ ಕೆಲವು ಮಂದಿ ಹೇಳುವಂತೆ 50% ಕ್ಕೂ ಹೆಚ್ಚಿನ ಬೆಳೆಗಾರರು ಈಗ ಚೇಣಿಗೆ ಕೊಡುವವರೇ ಆಗಿದ್ದಾರೆ.
 • ಕೆಲಸದವರ ಸಮಸ್ಯೆ  ಮತ್ತು ಮನೆಯಲ್ಲಿ ವಯೋವೃದ್ಧರೇ ಹೆಚ್ಚಾಗಿರುವ ಕಾರಣ ಚೇಣಿ ಹೆಚ್ಚಾಗುತ್ತಿದೆ. 
 • ಚೇಣಿಗೆ ವಹಿಸಿಕೊಳ್ಳುವವರು  ಮಾತುಕತೆ ಸಮಯದಲ್ಲಿ ಅರ್ಧ ಮತ್ತು ಕೊಯಿಲಿನ ಸಮಯದಲ್ಲಿ ಉಳಿದರ್ಧ ಕೊಟ್ಟು ವ್ಯವಹಾರ ಮುಗಿಸಬೇಕಾಗುತ್ತದೆ.
 • ಚೆನ್ನಗಿರಿ, ದಾವಣಗೆರೆ, ಚಿತ್ರದುರ್ಗ, ಅರಕಲಗೂಡು, ಸಿರಾ, ಚಿತ್ರದುರ್ಗ ಇಲ್ಲೆಕ್ಕಾ ಬಹುತೇಕ ಕೊಯಿಲು ಮುಗಿಯುತ್ತಾ ಬಂದಿದೆ.
 • ಸಾಗರ, ತೀರ್ಥಹಳ್ಳಿ, ಹೊಸನಗರ, ಶಿರಸಿ, ಸೊರಬ, ಆನವಟ್ಟಿ ಇಲ್ಲೆಲ್ಲಾ ಕೊಯಿಲು ಪ್ರಾರಂಭವಾಗಿದೆ.
 • ಹಾಗಾಗಿ ಚೇಣಿ ವಹಿಸಿಕೊಳ್ಳುವವರಿಗೆ ಹಣದ ಅಗತ್ಯ ಹೆಚ್ಚಾಗಿರುವ ಕಾರಣ ಅಡಿಕೆ ಮಾರಾಟ ಮಾಡುವವರು ಹೆಚ್ಚು.
 • ಮಾರಾಟದ ಒತ್ತಡ ಹೆಚ್ಚಾದಂತೆ ದರ ಇಳಿಕೆ ಸಹಜ. ಇನ್ನು ಕೊಯಿಲು ಪೂರ್ತಿ ಮುಗಿಯುವ ಸಮಯಕ್ಕೆ ಬಹುತೇಕ ಚೇಣಿಯವರ ಅಡಿಕೆ ಮಾರುಕಟ್ಟೆಗೆ ಬರುತ್ತದೆ.
 • ಆ ನಂತರ ನಿಧಾನವಾಗಿ ಬೆಲೆ ಏರಲು ಪ್ರಾರಂಭವಾಗುತ್ತದೆ.
 • ಈ ವಿಚಾರ ತಿಳಿದಿರುವ ಕಾರಣವೇ ಈಗ ಹಸಿ ಅಡಿಕೆಯ ದರ ಕ್ವಿಂಟಾಲಿಗೆ 6400 ಇದ್ದುದು, 6600-6700  ತನಕ ಏರಿಕೆಯಾಗಿದೆ.
 • ಮುಂದಿನ ವಾರ ಇನ್ನೂ ರೂ.100 ಹೆಚ್ಚಳವಾಗುವ ಸುದ್ದಿ ಇದೆ.

ಈ ವಾರವೇ ಮುಹೂರ್ತ ಆಗಿದೆ:

ಕೆಂಪಡಿಕೆ ಮಾರುಕಟ್ಟೆಯ ಡಿಸೆಂಬರ್ ಎರಡನೇ ವಾರ ತುಸು ಚೇತರಿಕೆ ಕಂಡಿದೆ
 • ಕುಸಿದ ಕೆಂಪಡಿಕೆ ಮಾರುಕಟ್ಟೆ ಡಿಸೆಂಬರ್ ಎರಡನೇ ವಾರ ತುಸು ಚೇತರಿಕೆ ಕಂಡಿದೆ.
 • ಚೆನ್ನಗಿರಿ ಮಾರುಕಟ್ಟೆಯಲ್ಲಿ  ಕಳೆದ ಎರಡು ವಾರಕ್ಕೆ ಹಿಂದೆ ರಾಶಿ ಸರಾಸರಿ ದರ 43,000-44,500 ರಲ್ಲಿ ಖರೀದಿಯಾಗುತ್ತಿದ್ದುದು, ಈಗ 47,000-48,000 ತನಕ ಏರಿಕೆಯಾಗಿದೆ.
 • ದಾವಣಗೆರೆಯಲ್ಲಿ 47,000 ಸಮೀಪ ಬಂದಿದೆ. ಹಾಗೆಯೇ ಚಿತ್ರದುರ್ಗ 46,500-47,600 ತನಕ ಸರಾಸರಿ ಖರೀದಿ ದರ ಇದೆ.
 • ಇಲ್ಲೆಲ್ಲಾ ಒಂದು ತಿಂಗಳ ಹಿಂದಿನಿಂದಲೂ ರೂ.2000 ದಷ್ಟು ಕಡಿಮೆ ಇತ್ತು.  
 • ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ, ಸಾಗರ ಇಲ್ಲಿಯೂ ಸರಾಸರಿ ದರ ರೂ.2000 ದಷ್ಟು ಏರಿಕೆಯಾಗಿದೆ. 
 • ಎಲ್ಲದಕ್ಕಿಂತ ಮುಖ್ಯವಾಗಿ  ಸರಾಸರಿ ದರಕ್ಕೂ  ಗರಿಷ್ಟ ದರಕ್ಕೂ ವ್ಯತ್ಯಾಸ ತುಂಬಾ ಕಡಿಮೆಯಾಗಿರುವುದು ದರ ಏರಿಕೆಯ ಮುನ್ಸೂಚನೆ.
 • ಕೆಂಪು ಅಡಿಕೆ ಮಾರುಕಟ್ಟೆ ಇನ್ನು ಒಂದು ತಿಂಗಳ ಅವಧಿಯಲ್ಲಿ ಕ್ವಿಂಟಾಲಿಗೆ 1000-1500 ರೂ. ಏರಿಕೆಯಾಗಬಹುದು.
 • ಮುಂದೆ ಇನ್ನೂ ಹೆಚ್ಚಳವಾಗಿ ಸರಾಸರಿ ದರ 50,000 ದಾಟಬಹುದು ಎಂಬುದಾಗಿ  ಹೇಳುತ್ತಿದ್ದಾರೆ.
 • ಈ ವರ್ಷ ಬೆಳೆ ಕಡಿಮೆ ಇದೆ ಎಂಬ ವರದಿ ಇದೆ. ಹಾಗಾಗಿ ಸ್ಥಿರ ಬೇಡಿಕೆ ಉಳ್ಳ ಕೆಂಪಡಿಕೆಗೆ ದರ ಏರಿಕೆ ಆಗಬಹುದು.

ಚಾಲಿ ಅಡಿಕೆ ಸ್ಥಿತಿ:

ಚಾಲಿ ಯಾಕೋ ಬಹಳ ಚಿಂತಾಜನಕ ಸ್ಥಿತಿಯಲ್ಲಿ
 • ಚಾಲಿ ಯಾಕೋ ಬಹಳ ಚಿಂತಾಜನಕ ಸ್ಥಿತಿಯಲ್ಲಿರುವಂತೆ ಕಾಣಿಸುತ್ತಿದೆ.
 • ಚಾಲಿಗೆ ದರ ಎರಿಕೆ ಆಗುವ ಎಲ್ಲಾ ಸಾಧ್ಯತೆಗಳು ಇದ್ದರೂ ಸಹ ದರ ದಿನ ದಿನಕ್ಕೆ ಒಂದೊಂದು ರೀತಿಯಲ್ಲಿ ಬದಲಾವಣೆ ಆಗುತ್ತಿದೆ.
 • ಒಮ್ಮೆ ದರ ಏರುವ ಮುನ್ಸೂಚನೆ ಕಂಡು ಬಂದರೂ ಮತ್ತೆ ಒಂದೆರಡು ದಿನದಲ್ಲಿ ನಿರಾಸೆಯಾಗುತ್ತಿದೆ.
 • ಹಳೆ ಚಾಲಿ (ಡಬ್ಬಲ್ ಚೋಳ್ ಬಹುತೇಕ ಮುಗಿಯುತ್ತಾ ಬಂದಿದೆ.  ಚೋಳ್ ಹೆಚ್ಚಿನ ಬೆಳೆಗಾರರಲ್ಲಿ ದಾಸ್ತಾನು ಇದೆ.
 • ಇದರ ಮಾಹಿತಿ ತಿಳಿದೋ ಏನೋ ದಿನದಿಂದ ದಿನಕ್ಕೆ ದರ ಇಳಿಕೆಯಾಗುತ್ತಿದೆ.
 • ಕಳೆದ ವಾರ ಸಿಂಗಲ್ ಚೋಲ್ ದರ 42500-43000 ಸುಮಾರಿನಲ್ಲಿ ಇದ್ದುದು ಈ ವಾರಾಂತ್ಯಕ್ಕೆ 40500-41000 ಕ್ಕೆ ಇಳಿಕೆಯಾಗಿದೆ.
 • ಮುಂದಿನ ವಾರ 40000 ಕ್ಕೆ ಇಳಿಯುವ  ಸೂಚನೆಯೂ ಇದೆ. ಇದಕ್ಕೆಲ್ಲಾ ಕಾರಣ ಅಡಿಕೆ ಆಮದು ಎಂಬುದಾಗಿ ಹೇಳಲಾಗುತ್ತಿದೆಯಾದರೂ
 • ವಾಸ್ತವ ಕಾರಣ ಮಂಗಳೂರು ಅಡಿಕೆಯ ಗುಣಮಟ್ಟ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ. 
 • ಒಂದಷ್ಟು ವ್ಯಾಪಾರಿಗಳು ಭಾರೀ ನಷ್ಟವನ್ನು ಅನುಭವಿಸಿದ್ದಾರೆ.
 • ಹಾಗೆಯೇ ನಷ್ಟದ ಹೊಂದಾಣಿಕೆಗಾಗಿ ದರ ಇಳಿಸಿರಲೂ ಬಹುದು ಎನ್ನಲಾಗುತ್ತಿದೆ.
 • ಮಂಗಳೂರು ಚಾಲಿ (MAN SUPARI) ಉತ್ತರ ಭಾರತದ ಮಾರುಕಟ್ಟೆಯಲ್ಲಿ ಅದರದ್ಡೇ ಆದ ಮೌಲ್ಯ ಇದ್ದು, ಯಾಕೋ ಗುಣಮಟ್ಟದ  ಕಾರಣದಿಂದ ಸ್ವಲ್ಪ ಹಿನ್ನಡೇಯಾಗಿಯಷ್ಟೇ.
 • ಇದೆಲ್ಲವೂ ದರ ಇಳಿಕೆಯಲ್ಲಿ  ಹೊಂದಾಣಿಕೆ ಮಾಡಿಕೊಂಡು ಮುಂದೆ ಮಾರುಕಟ್ಟೆ ಚೇತರಿಕೆ ಆಗುವ ಸಾಧ್ಯತೆ ಇದೆ.

ಕೆಂಪಡಿಕೆ ದರ ಏರಿಕೆಯಾದಂತೆ ಪಟೋರಾ ದರ ಏರುತ್ತದೆ. ಉಳ್ಳಿ ಬೇಡಿಕೆ ಬರುತ್ತದೆ. ಕೋಕಾದ ದರವೂ ಏರಿಕೆಯಾಗುತ್ತದೆ. ಈಗ ಇದು ನಡೆಯುತ್ತಿದೆ. ಪಟೋರಾ ಬೇಕು. ಕರಿ ಬೇಕು. ಸುಪಾರಿ ಸ್ವಲ್ಪ ಹಿಂದೆ ಎನ್ನುತ್ತಾರೆ.  ಕೆಂಪಡಿಕೆ ದರ ಏರಿಕೆಯಾದಾಗ ಚಾಲಿ ದರ ಅದರ ಜೊತೆಗೆ ಎರಲೇ ಬೇಕು. ಸ್ವಲ್ಪ ಹಿಂದೆ ಮುಂದೆ ಆಗಬಹುದಾದರೂ ಏರಿಕೆ ಸೂಚನೆ ಹಸಿ ಅಡಿಕೆಯ ದರ ಎರಿಕೆಯಿಂದ ತಿಳಿಯುತ್ತದೆ.ಕೆಂಪಡಿಕೆ ದರ ಏರಿದಾಗ ಚಾಲಿ ಅದಕ್ಕೆ ಮಿಶ್ರಣಮಾಡಲು ಬಳಕೆಯಾಗುತ್ತದೆ. ಹಾಗಾಗಿ ಚಾಲಿಗೆ ಬೇಡಿಕೆ ಹೆಚ್ಚಾಗುತ್ತದೆ.

ಕೆಂಪಡಿಕೆ ಮಾರುಕಟ್ಟೆಯಲ್ಲಿ ಇಂದಿನ ದರ:

 • ಶಿವಮೊಗ್ಗ:  ಗರಿಷ್ಟ.48359, ಸರಾಸರಿ. 47269
 • ಶಿರಸಿ: ಗರಿಷ್ಟ.47589, ಸರಾಸರಿ. 46712
 • ಚೆನ್ನಗಿರಿ: ಗರಿಷ್ಟ. 48399, ಸರಾಸರಿ. 48071
 • ಸಿದ್ದಾಪುರ: ಗರಿಷ್ಟ.47599, ಸರಾಸರಿ. 47299
 • ಸಾಗರ: ಗರಿಷ್ಟ.48470, ಸರಾಸರಿ. 47939
 • ದಾವಣಗೆರೆ: ಗರಿಷ್ಟ.47150, ಸರಾಸರಿ. 46800
 • ಹೊಸನಗರ: ಗರಿಷ್ಟ. 48879, ಸರಾಸರಿ. 48139
 • ಹೊನ್ನಾಳಿ: ಗರಿಷ್ಟ.47685, ಸರಾಸರಿ. 47599
 • ಚಿತ್ರದುರ್ಗ: ಗರಿಷ್ಟ.47889, ಸರಾಸರಿ. 47699
 • ಸೊರಬ: ಗರಿಷ್ಟ.47721, ಸರಾಸರಿ. 47160
 • ಶಿಕಾರಿಪುರ: ಗರಿಷ್ಟ.46369, ಸರಾಸರಿ.  44275
 • ತೀರ್ಥಹಳ್ಳಿ: ಗರಿಷ್ಟ.48000, ಸರಾಸರಿ. 47800
 • ತರೀಕೆರೆ: ಗರಿಷ್ಟ.45000, ಸರಾಸರಿ. 34406
 • ಸಿರಾ: ಗರಿಷ್ಟ.45000, ಸರಾಸರಿ.  43517
 • ಕೊಪ್ಪ: ಗರಿಷ್ಟ.47500, ಸರಾಸರಿ. 43500
 • ಯಲ್ಲಾಪುರ: ಗರಿಷ್ಟ.55100, ಸರಾಸರಿ. 51309
 • ತುಮಕೂರು: ಗರಿಷ್ಟ.47600, ಸರಾಸರಿ. 46500
 • ಬದ್ರಾವತಿ: ಗರಿಷ್ಟ.48179, ಸರಾಸರಿ. 46784

ಚಾಲಿ ಮಾರುಕಟ್ಟೆ ಸ್ಥಿತಿ:

 • ಮಂಗಳೂರು: ಸಿಂಗಲ್: 41000-40500  ಡಬ್ಬಲ್: 42500-43500 ಹೊಸತು:30000-36000
 • ಪುತ್ತೂರು: ಸಿಂಗಲ್:41000-40500  ಡಬ್ಬಲ್:44000-42500 ಹೊಸತು:30000-35000
 • ವಿಟ್ಲ: ಸಿಂಗಲ್:41800-41000  ಡಬ್ಬಲ್:44000-43000 ಹೊಸತು:30000-36000
 • ಬೆಳ್ತಂಗಡಿ: ಸಿಂಗಲ್:41000-40500  ಡಬ್ಬಲ್:43000-42500 ಹೊಸತು:30000-35000
 • ಸುಳ್ಯ: ಸಿಂಗಲ್:41500-41000  ಡಬ್ಬಲ್:42500-43000 ಹೊಸತು:30000-35000
 • ಕಾರ್ಕಳ: ಸಿಂಗಲ್:41000-40500  ಡಬ್ಬಲ್:42500-43500 ಹೊಸತು:30000-35000
 • ಕುಂದಾಪುರ: ಸಿಂಗಲ್:40500-40000  ಡಬ್ಬಲ್:42500-43000 ಹೊಸತು:30000-35000
 • ಹೊನ್ನಾವರ: ಸಿಂಗಲ್. ಗರಿಷ್ಟ 38000, ಸರಾಸರಿ. 37500
 • ಕುಮಟಾ: ಗರಿಷ್ಟ 34500, ಸರಾಸರಿ. 33469 ( ಹೊಸ) 42500, 42000 (ಹಳೆ)
 • ಶಿರಶಿ: ಗರಿಷ್ಟ 39008, ಸರಾಸರಿ.  37704
 • ಸಿದ್ದಾಪುರ: ಗರಿಷ್ಟ 38249, ಸರಾಸರಿ.  37739
 • ಯಲ್ಲಾಪುರ: ಗರಿಷ್ಟ 38920, ಸರಾಸರಿ.  37609
 • ಸಾಗರ: ಗರಿಷ್ಟ. 38299, ಸರಾಸರಿ. 37899

ಬೆಳೆಗಾರರು ಬೆಲೆ ಕುಸಿದಾಗ ಹತಾಶೆಯಲ್ಲಿ ಮಾರಾಟಕ್ಕೆ ಮುಂದಾಗಬೇಡಿ. ಈಗಲೂ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಸಹಕರಿಸಿದವರು ಬೆಳೆಗಾರರೇ. ದರ ಕಡಿಮೆಯಾದರೆ ಮಾಲು ಕೊಡದಿದ್ದರೆ ಆಯಿತು ಎಂಬ ಧೋರಣೆಯಿಂದ ಮಾರುಕಟ್ಟೆಯ ಹಿಡಿತ ಸಾಧಿಸಬಹುದು.  ಎಷ್ಟು ಸಮಯದ ತನಕ ವಹಿವಾಟು ರಹಿತವಾಗಿ ವ್ಯಾಪಾರ ಮುಂಗಟ್ಟು ತೆರೆದಿರಲು ಸಾದ್ಯ? ಅಡಿಕೆ ಬಾರದಿದ್ದರೆ ಬೆಲೆ ಏರಿಕೆ ಆಗಿಯೇ ಆಗುತ್ತದೆ. ಹಾಗೆಂದು ಈ ವರ್ಷ ಚಾಲಿ ಬೆಳೆಗಾರರು 45000 ದ ಗರಿಷ್ಟ ಬೆಲೆಯನ್ನು ನಿರೀಕ್ಷಿಸಬಹುದೇ ಹೊರತು ಹೆಚ್ಚಿನ ದರ ಕಷ್ಟ. ಕೆಲವು ಬೆಳವಣಿಗೆಗಳು ದರವನ್ನು ಮತ್ತೆ 50000 ಕ್ಕೆ ಏರಿಕೆಯಾಗಲೂಬಹುದು. ಅದು ಅದೃಷ್ಟ.

Leave a Reply

Your email address will not be published. Required fields are marked *

error: Content is protected !!